Horoscope: ರಾಶಿಭವಿಷ್ಯ; ಈ ರಾಶಿಯವರು ಇಂದು ವಿವಾದಿತ ಚರ್ಚೆ, ವಾದಗಳಿಂದ ದೂರವಿರುವುದು ಸೂಕ್ತ

| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 27, 2024 | 12:30 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಮಾರ್ಚ್ 27 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ; ಈ ರಾಶಿಯವರು ಇಂದು ವಿವಾದಿತ ಚರ್ಚೆ, ವಾದಗಳಿಂದ ದೂರವಿರುವುದು ಸೂಕ್ತ
ರಾಶಿ ಭವಿಷ್ಯ
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರ ಇಂದಿನ (ಮಾರ್ಚ್​​​​​ 27) ಭವಿಷ್ಯ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಬುಧ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಚಿತ್ರಾ, ಯೋಗ : ವ್ಯಾಘಾತ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 32 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:38 ರಿಂದ 02:09ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:04 ರಿಂದ 09:35ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:07 ರಿಂದ 12:38

ಸಿಂಹ ರಾಶಿ : ನೀವು ವಿವಾದಕ್ಕಾಗಿಯೇ ಇರುವವರಂತೆ ವರ್ತಿಸುವಿರಿ. ಬುದ್ಧಿವಂತಿಕೆಯನ್ನು ಅಭ್ಯಾಸ ಮಾಡಿ ಕಾರ್ಯವನ್ನು ಸಾಧಿಸುವಿರಿ. ಸಂಗಾತಿಯಾಗುವವರ ಬಗ್ಗೆ ವಿವರಗಳನ್ನು ಪಡೆದುಕೊಳ್ಳುವಿರಿ. ಮೇಲಧಿಕಾರಿಗಳ ನಿಮ್ಮ ಬಗ್ಗೆ ಋಣಾತ್ಮಕವಾಗಿ ನೀಡಿದ ಹೇಳಿಕೆಯು ನಿಮಗೆ ನೋವುಂಟು ಮಾಡಬಹುದು. ಈ ದಿನ ನೀವು ಆಲಸ್ಯದಿಂದ ಇರುವಿರಿ. ಸಂತಾನದ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಪ್ರಯಾಣದ ಬಗ್ಗೆ ಸರಿಯಾದ ನಿರ್ಧಾರವಿರಲಿ. ಕುಟುಂಬದವರ ಜೊತೆ ನಿಮ್ಮ ಸಮಯವನ್ನು ನೀಡಿ. ಉದ್ಯೋಗದ ಸ್ಥಳವು ಇಂದು ನಿಮಗೆ ಖುಷಿಯ ಸ್ಥಳ. ಕೆಲವರ ಸ್ವಭಾವು ಇಷ್ಟವಾಗದೇ ಅವರಿಂದ ದೂರವಿರಲು ಪ್ರಯತ್ನಿಸುವಿರಿ. ಹಳೆಯ ವಸ್ತುಗಳನ್ನು ನೀವು ಮಾರಾಟ ಮಾಡುವಿರಿ. ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಸಂಗಾತಿಯ ನಡವಳಿಕೆಯು ಇಷ್ಟವಾಗದು.

ಕನ್ಯಾ ರಾಶಿ : ಎಲ್ಲವೂ ನಿಮ್ಮ ಅನುಭವಕ್ಕೆ ಬರಲೇಬೇಕೆಂದಿಲ್ಲ. ಇನ್ನೊಬ್ಬರ ಮಾತನ್ನೂ ನೀವು ಕೇಳಿ ಅನುಸರಿಸಬಹುದು. ಇನ್ನೊಬ್ಬರ ಬಗ್ಗೆ ಸಹಾನುಭೂತಿಯಿಂದ ಬೇರೆಯವರಿಗೆ ಇಷ್ಟವಾಗುವುದು. ನಿಮ್ಮ ಸಂಗಾತಿಗೆ ಒತ್ತಡಕ್ಕೆ ಇಂದಿನ ಕಾರ್ಯವನ್ನು ಮಾಡಬೇಕಾಗುವುದು. ಹಿರಿಯರ ಜೊತೆ ಪ್ರಮುಖ ವಿಚಾರಗಳ ಕುರಿತು ಚರ್ಚೆಗಳಲ್ಲಿ ಭಾಗವಹಿಸುವಿರಿ. ನಿಮ್ಮ ಬಗ್ಗೆ ಪ್ರಚಾರದ ಗೀಳು ಇರಬಹುದು. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಯಾರದೋ ಮೂಲಕ ಸರ್ಕಾರಿ ಕೆಲಸದಲ್ಲಿ ಯಶಸ್ಸನ್ನು ಕಾಣುವಿರಿ. ತೆಗೆದುಕೊಂಡ ನಿರ್ಧಾರಗಳು ಕಾರ್ಯಗತಗೊಳ್ಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವಿದ್ದು ಶ್ರಮವು ಅಪೇಕ್ಷಿತವಾಗಬಹುದು. ಅಚಾತುರ್ಯದಿಂದ ನಡೆದ ಘಟನೆಯು ನಿಮ್ಮನ್ನು ಕಾಡಬಹುದು. ಅಧ್ಯಯನ ವಿಧಾನವನ್ನು ಬದಲಿಸಿಕೊಳ್ಳಿ. ಯಾರಿಂದಲೋ ಆಗಬೇಕಾದ ಕೆಲಸಕ್ಕೆ ನಿಮ್ಮವರೇ ಅಡ್ಡಗಾಲು ಹಾಕಬಹುದು.

ತುಲಾ ರಾಶಿ : ಅಧಿಕ ಖರ್ಚಿನ ಕಾರಣ ಹೆಚ್ಚಿನ ಆದಾಯದ ಕಡೆ ನಿಮಗೆ ಆಸಕ್ತಿ ಬರುವುದು. ನಿಮ್ಮ ಬಗ್ಗೆ ನೀವೇ ಆಡಿಕೊಳ್ಳುವುದು ಸರಿಯಾಗದು. ಎಲ್ಲವನ್ನೂ ಲಘುವಾಗಿ ತೆಗೆದುಕೊಂಡರೆ ಕಷ್ಟವಾಗಬಹುದು. ಹೆಚ್ಚಿನ ಹೂಡಿಕೆಗೆ ಒತ್ತು ನೀಡುವಿರಿ. ಇಂದು ವಿವಿಧ ಕ್ಷೇತ್ರಗಳಲ್ಲಿ ಲಾಭ ಸಾಧ್ಯ. ಇಂದು ಮಹಿಳೆಯ ಪಾತ್ರ ನಿಮ್ಮ ಜೀವನದಲ್ಲಿ ಪ್ರಮುಖಗಬಹುದು. ಸ್ನೇಹಿತರ ಜೊತೆ ಸುಂದರವಾದ ಸ್ಥಳಗಳಿಗೆ ಹೋಗುವಿರಿ. ಸಂತಾನದಿಂದ ಒಳ್ಳೆಯ ಸುದ್ದಿಯನ್ನು ಪಡೆಯುವಿರಿ. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳ ಜೊತೆ ಬೆರೆಯಲು ಪ್ರಯತ್ನಿಸಿ. ವೃತ್ತಿಯಲ್ಲಿ ನಿಮಗೆ ಅನನುಕೂಲತೆಯು ಸೃಷ್ಟಿಯಾಗಬಹುದು. ಹೊರಗಿನಿಂದ ಆಮದು ಮಾಡಿಕೊಳ್ಳುವ ವ್ಯವಹಾರದಲ್ಲಿ ತೊಡಕಾಗಬಹುದು. ದಾಂಪತ್ಯದಲ್ಲಿ ಮುಸುಕಿನ ಸಮರ ನಡೆಯುತ್ತಿರುವುದು. ಸ್ವಾರ್ಥಿಗಳಂತೆ ವರ್ತಿಸಿ, ನಿಮ್ಮವರಿಗೆ ಬೇಸರ ಮಾಡುವಿರಿ.

ವೃಶ್ಚಿಕ ರಾಶಿ : ಯಾವುದೋ ಕಾರಣಕ್ಕೆ ದೂರ ಇಟ್ಟವರು ಇಂದು ನಿಮ್ಮ ಬಳಿ ಬರಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಅನ್ಯರಿಂದ ಪ್ರೋತ್ಸಾಹ ಸಿಗುವುದು. ಆಕಾಂಕ್ಷೆಗಳನ್ನು ಪೂರೈಸುವ ಅವರ ಸಾಧನೆಗಳಿಗೆ ಸಾಕ್ಷಿಯಾಗುತ್ತದೆ. ಮಹಿಳೆಯ ಕಾರಣದಿಂದ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ವಿವಾದಿತ ಚರ್ಚೆ ಅಥವಾ ವಾದಗಳಿಂದ ದೂರವಿರುವುದು ಸೂಕ್ತ. ಕಾನೂನಿನ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. ನಿಮ್ಮ ನಡವಳಿಕೆಯು ವಿವೇಕಯುತವಾಗಿರಲಿ. ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ಬೇಡ. ಆರೋಗ್ಯದ ಸುಧಾರಣೆಗೆ ಖರ್ಚಾಗುವುದು. ಇನ್ಮೊಬ್ಬರನ್ನು ದೂರುವುದರಿಂದ ನೀವು ಸಜ್ಜನರಾಗಲಾರಿರಿ. ಅಸಭ್ಯ ಮಾತುಗಳು ನಿಮಗೆ ಸರಿಯಾಗದು. ಇಂದು ನಿಮಗೆ ಬಂಧನದಂತೆ ಅನ್ನಿಸಬಹುದು.‌ ಭಯದಿಂದ ಕೆಲಸ ಮಾಡಿಸಿಕೊಳ್ಳುವಿರಿ. ಎಲ್ಲರ ಜೊತೆ ಬೆರೆಯುವುದನ್ನು ಇಷ್ಟಪಡುವಿರಿ. ಕೆಲಸವು ನಿಧಾನವಾಗುವುದು.