Horoscope 27 March: ದಿನಭವಿಷ್ಯ; ಈ ರಾಶಿಯವರಿಗೆ ಹಣಕಾಸಿನ ಯೋಜನೆಯಲ್ಲಿ ಆರಂಭದಲ್ಲಿ ಕೆಲವು ತೊಂದರೆಗಳಿದ್ದರೂ ಅನಂತರ ದಾರಿಯು ಸ್ಪಷ್ಟವಾಗುತ್ತದೆ

Rashi Bhavishya: 2024 ಮಾರ್ಚ್​ 27 ಬುಧವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಇಂದಿನ ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.

Horoscope 27 March: ದಿನಭವಿಷ್ಯ; ಈ ರಾಶಿಯವರಿಗೆ ಹಣಕಾಸಿನ ಯೋಜನೆಯಲ್ಲಿ ಆರಂಭದಲ್ಲಿ ಕೆಲವು ತೊಂದರೆಗಳಿದ್ದರೂ ಅನಂತರ ದಾರಿಯು ಸ್ಪಷ್ಟವಾಗುತ್ತದೆ
ರಾಶಿಭವಿಷ್ಯ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: Rakesh Nayak Manchi

Updated on: Mar 27, 2024 | 12:00 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್​​​​ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ : ಉತ್ತರಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಬುಧ, ತಿಥಿ : ದ್ವಿತೀಯಾ, ನಿತ್ಯನಕ್ಷತ್ರ : ಚಿತ್ರಾ, ಯೋಗ : ವ್ಯಾಘಾತ, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 32 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 43 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:38 ರಿಂದ 02:09ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:04 ರಿಂದ 09:35ರ ವರೆಗೆ, ಗುಳಿಕ ಕಾಲ ಬೆಳಗ್ಗೆ 11:07 ರಿಂದ 12:38

ಮೇಷ ರಾಶಿ : ಯಾವುದನ್ನೂ ಮಾತನಾಡಿದಷ್ಟು ಸುಲಭವಾಗಿ ಮಾಡಲಾಗದು. ತಾಳ್ಮೆಯಿಂದ ಕೆಲಸವನ್ನು ಮಾಡುವುದು ಉತ್ತಮ. ದುಡುಕುವ ಸನ್ನಿವೇಶದಲ್ಲಿ ಸುಮ್ಮನಿದ್ದುಬಿಡುವುದು ಉತ್ತಮ. ವಿದ್ಯಾರ್ಥಿಗಳು ತಮ್ಮ ಬುದ್ಧಿವಂತಿಕೆಯನ್ನು ತೋರಿಸಬಹುದು. ಪ್ರಣಯಕ್ಕೆ ಈ ದಿನವು ಒಳ್ಳೆಯದು. ಆದಷ್ಟು ನೀರಿನಿಂದ ದೂರವಿರಿ. ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳುವುದು ಅನಿವಾರ್ಯ. ಯಾರಿಗಾದರೂ ಹಣವನ್ನು ನೀಡಲು ಸಂಗಾತಿಯಿಂದ ಒತ್ತಡ ಬರಬಹುದು. ನಿಮ್ಮ ಚರ ಸ್ವತ್ತನ್ನು ರಕ್ಷಣೆ ಮಾಡಿಕೊಳ್ಳುವ ಅನಿವಾರ್ಯತೆ ಬರಬಹುದು. ಸ್ನೇಹಿತರಿಂದ ಅಲ್ಪ ಆರ್ಥಿಕ ಲಾಭವು ನಿಮಗೆ ಸಿಗುವುದು. ಆರಾಮಾಗಿ ಇರಲು ನೀವು ಹೆಚ್ಚು ಇಷ್ಟಪಡುವಿರಿ. ನಿಮಗೆ ಹೊಂದಿಕೆಯಾಗದ ಕೆಲಸಕ್ಕೆ ಸೇರಿಕೊಂಡು ಕಷ್ಟಪಡುವಿರಿ.

ವೃಷಭ ರಾಶಿ : ನಿಮ್ಮ ಕೆಲಸದ ಸ್ಥಳವನ್ನು ಬಿಡಬೇಕಾಗಿಬರಬಹುದು. ನಿಮಗೆ ತೃಪ್ತಿಯಾಗುವ ಕೆಲಸವನ್ನು ಮಾಡುವಿರಿ. ಹೂಡಿಕೆಯ ಕಾರಣ ಆರ್ಥಿಕವಾಗಿ ಕಷ್ಟವಾಗಬಹುದು. ನಿಮ್ಮ ಕಾರ್ಯದಿಂದ ಖ್ಯಾತಿಯು ಸಿಗಲಿದೆ.‌ ಕುಟುಂಬದ ಜೊತೆಗಿನ ನಿಮ್ಮ ಈ ದಿನವು ಉತ್ತಮವಾಗಿರುತ್ತದೆ. ಮನೆಯಲ್ಲಿ ಸಂತೋಷದ ವಾತಾವರಣ ಇರುತ್ತದೆ. ಕೆಲವು ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಬರುವುದು. ಹಣದಿಂದ ಕೆಲವು ತೊಂದರೆಗಳನ್ನು ದೂರಮಾಡಿಕೊಳ್ಳುವಿರಿ. ನೋವನ್ನು ನುಂಗಿ ಬದುಕುವ ರೀತಿಯು ನಿಮಗೆ ಗೊತ್ತಾಗಲಿದೆ. ಇನ್ನೊಬ್ಬರನ್ನು ನೋವನ್ನು ನೀವು ಅರ್ಥ ಮಾಡಿಕೊಳ್ಳದೇ ವ್ಯವಹತಿಸುವಿರಿ. ನೂತನ ವಸ್ತುಗಳನ್ನು ಖರೀದಿಸುವಿರಿ. ಮಾತಿನಿಂದ ನಿಮ್ಮ ಬಗ್ಗೆ ಇರುವ ಸ್ವಭಾವವು ಬದಲಾಗುವುದು.

ಮಿಥುನ ರಾಶಿ : ನಿಮಗೆ ಇಂದು ವ್ಯವಸಾಯದ ಕುರಿತು ಆಸಕ್ತಿಯು ಬರಬಹುದು. ಆದಾಯದ ನಿಖರತೆಯನ್ನು ಸ್ಪಷ್ಟವಾಗಿಸಿಕೊಂಡು ಏನನ್ನಾದರೂ ಖರೀದಿಸುವಿರಿ. ನಿತ್ಯದ ಕಾರ್ಯವನ್ನು ಬೇರೆ ವಿಧಾನದಲ್ಲಿ ಮಾಡಿ ಯಶಸ್ಸು ಕಾಣುವಿರಿ. ನಿಮ್ಮ ಆಲೋಚನೆಗಳು ಅಸ್ಥಿರ ಮತ್ತು ದ್ವಂದ್ವಗಳಿಂದ ಕೂಡಿರುತ್ತದೆ. ವಾಹನ ಸೌಕರ್ಯವು ಪ್ರಾಪ್ತಿಯಾಗಲಿದೆ. ಹೊಸ ಬಟ್ಟೆ ಖರೀದಿಸಲಾಗುವುದು. ಬೇಕಾದ ವ್ಯಕ್ತಿಯಿಂದ ನಿಮಗೆ ಬೇಕಾದುದನ್ನು ಕೇಳಿಕೊಳ್ಳುವಿರಿ. ಹೊಸ ಉದ್ಯಮವನ್ನು ಆರಂಭಿಸಲು ನಿಮಗೆ ಧೈರ್ಯವು ಸಾಲದು. ಅಪರಿಚಿತರ ಜೊತೆ ಸಲುಗೆ ಅನವಶ್ಯಕ. ಉದ್ಯಮವನ್ನು ನಡೆಸಲು ಇನ್ನೊಬ್ಬರ ಜೊತೆ ಸೇರಿಕೊಳ್ಳುವಿರಿ. ದಾಂಪತ್ಯ ಜೀವನದಲ್ಲಿ ನಿಮ್ಮ ಸ್ಥಾನವು ಮುಖ್ಯವಾದಂತೆ ತೋರುವುದು. ಮಕ್ಕಳ ಬಗ್ಗೆ ಕಾಳಜಿಯ ಅಗತ್ಯ ಇರುವುದು.

ಕಟಕ ರಾಶಿ : ನಿಮ್ಮ ಆಕಾರ್ಷಕ ಸ್ವಭಾವದಿಂದ ಬೇಕಾದುದನ್ನು ಪಡೆಯುವಿರಿ. ವ್ಯಾಪಾರದಲ್ಲಿ ಇಂದು ಗಮನಾರ್ಹ ಬದಲಾವಣೆ ಅಗಲಿದೆ. ಸುಲಭವಾದ ಕಾರ್ಯವನ್ನು ಕಷ್ಟದಿಂದ ಮಾಡಬೇಕಾಗುವುದು. ರೋಗಕ್ಕೆ ಸೂಕ್ತ ಚಿಕಿತ್ಸೆಯನ್ನು ಮಾಡಿಕೊಳ್ಳುವ ಕಡೆ ಗಮನವಿರಲಿ. ಅತಿಯಾದ ನಿಮ್ಮ ಸೂಕ್ಷ್ಮ ಸ್ವಭಾವದಿಂದ ನಿಮಗೇ ತೊಂದರೆಯಾಗುತ್ತದೆ. ಕಾನೂನು ಬಾಹಿರ ಚಟುವಟಿಕೆಗಳನ್ನು ಆದಷ್ಟು ತಪ್ಪಿಸಿ. ಮನಸ್ಸಿನ ಶಾಂತಿಯನ್ನು ಪಡೆಯಲು ಶ್ರಮಿಸಬೇಕು. ನಿಮ್ಮ ಹೊಸ ಕರ್ತವ್ಯವನ್ನು ಮರೆಯಬಹುದು. ಅಲ್ಪದರಲ್ಲಿ ನೀವು ಪಾರಾಗಿ ನೆಮ್ಮದಿ ಪಡೆಯುವಿರಿ. ದುರಭ್ಯಾಸವನ್ನು ಬೆಳೆಸಿಕೊಳ್ಳುವ ಸಾಧ್ಯತೆ ಇದೆ. ಮನೆಗೆ ಬೇಕಾದ ವಸ್ತುಗಳ ಖರೀದಿ ನಡೆಸುವಿರಿ. ಆಗಬೇಕಾದ ಕೆಲಸಗಳ ಬಗ್ಗೆ ನಿಮಗೆ ಆತಂಕ ಇರುವುದು. ಅಗತ್ಯವಾದಷ್ಟನ್ನು ಮಾತ್ರ ಬಳಸಿಕೊಳ್ಳಿ.

ಸಿಂಹ ರಾಶಿ : ನೀವು ವಿವಾದಕ್ಕಾಗಿಯೇ ಇರುವವರಂತೆ ವರ್ತಿಸುವಿರಿ. ಬುದ್ಧಿವಂತಿಕೆಯನ್ನು ಅಭ್ಯಾಸ ಮಾಡಿ ಕಾರ್ಯವನ್ನು ಸಾಧಿಸುವಿರಿ. ಸಂಗಾತಿಯಾಗುವವರ ಬಗ್ಗೆ ವಿವರಗಳನ್ನು ಪಡೆದುಕೊಳ್ಳುವಿರಿ. ಮೇಲಧಿಕಾರಿಗಳ ನಿಮ್ಮ ಬಗ್ಗೆ ಋಣಾತ್ಮಕವಾಗಿ ನೀಡಿದ ಹೇಳಿಕೆಯು ನಿಮಗೆ ನೋವುಂಟು ಮಾಡಬಹುದು. ಈ ದಿನ ನೀವು ಆಲಸ್ಯದಿಂದ ಇರುವಿರಿ. ಸಂತಾನದ ವಿಚಾರದಲ್ಲಿ ಭಿನ್ನಾಭಿಪ್ರಾಯ ಉಂಟಾಗುವ ಸಾಧ್ಯತೆ ಇದೆ. ಪ್ರಯಾಣದ ಬಗ್ಗೆ ಸರಿಯಾದ ನಿರ್ಧಾರವಿರಲಿ. ಕುಟುಂಬದವರ ಜೊತೆ ನಿಮ್ಮ ಸಮಯವನ್ನು ನೀಡಿ. ಉದ್ಯೋಗದ ಸ್ಥಳವು ಇಂದು ನಿಮಗೆ ಖುಷಿಯ ಸ್ಥಳ. ಕೆಲವರ ಸ್ವಭಾವು ಇಷ್ಟವಾಗದೇ ಅವರಿಂದ ದೂರವಿರಲು ಪ್ರಯತ್ನಿಸುವಿರಿ. ಹಳೆಯ ವಸ್ತುಗಳನ್ನು ನೀವು ಮಾರಾಟ ಮಾಡುವಿರಿ. ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಸಂಗಾತಿಯ ನಡವಳಿಕೆಯು ಇಷ್ಟವಾಗದು.

ಕನ್ಯಾ ರಾಶಿ : ಎಲ್ಲವೂ ನಿಮ್ಮ ಅನುಭವಕ್ಕೆ ಬರಲೇಬೇಕೆಂದಿಲ್ಲ. ಇನ್ನೊಬ್ಬರ ಮಾತನ್ನೂ ನೀವು ಕೇಳಿ ಅನುಸರಿಸಬಹುದು. ಇನ್ನೊಬ್ಬರ ಬಗ್ಗೆ ಸಹಾನುಭೂತಿಯಿಂದ ಬೇರೆಯವರಿಗೆ ಇಷ್ಟವಾಗುವುದು. ನಿಮ್ಮ ಸಂಗಾತಿಗೆ ಒತ್ತಡಕ್ಕೆ ಇಂದಿನ ಕಾರ್ಯವನ್ನು ಮಾಡಬೇಕಾಗುವುದು. ಹಿರಿಯರ ಜೊತೆ ಪ್ರಮುಖ ವಿಚಾರಗಳ ಕುರಿತು ಚರ್ಚೆಗಳಲ್ಲಿ ಭಾಗವಹಿಸುವಿರಿ. ನಿಮ್ಮ ಬಗ್ಗೆ ಪ್ರಚಾರದ ಗೀಳು ಇರಬಹುದು. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಯಾರದೋ ಮೂಲಕ ಸರ್ಕಾರಿ ಕೆಲಸದಲ್ಲಿ ಯಶಸ್ಸನ್ನು ಕಾಣುವಿರಿ. ತೆಗೆದುಕೊಂಡ ನಿರ್ಧಾರಗಳು ಕಾರ್ಯಗತಗೊಳ್ಳುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವಿದ್ದು ಶ್ರಮವು ಅಪೇಕ್ಷಿತವಾಗಬಹುದು. ಅಚಾತುರ್ಯದಿಂದ ನಡೆದ ಘಟನೆಯು ನಿಮ್ಮನ್ನು ಕಾಡಬಹುದು. ಅಧ್ಯಯನ ವಿಧಾನವನ್ನು ಬದಲಿಸಿಕೊಳ್ಳಿ. ಯಾರಿಂದಲೋ ಆಗಬೇಕಾದ ಕೆಲಸಕ್ಕೆ ನಿಮ್ಮವರೇ ಅಡ್ಡಗಾಲು ಹಾಕಬಹುದು.

ತುಲಾ ರಾಶಿ : ಅಧಿಕ ಖರ್ಚಿನ ಕಾರಣ ಹೆಚ್ಚಿನ ಆದಾಯದ ಕಡೆ ನಿಮಗೆ ಆಸಕ್ತಿ ಬರುವುದು. ನಿಮ್ಮ ಬಗ್ಗೆ ನೀವೇ ಆಡಿಕೊಳ್ಳುವುದು ಸರಿಯಾಗದು. ಎಲ್ಲವನ್ನೂ ಲಘುವಾಗಿ ತೆಗೆದುಕೊಂಡರೆ ಕಷ್ಟವಾಗಬಹುದು. ಹೆಚ್ಚಿನ ಹೂಡಿಕೆಗೆ ಒತ್ತು ನೀಡುವಿರಿ. ಇಂದು ವಿವಿಧ ಕ್ಷೇತ್ರಗಳಲ್ಲಿ ಲಾಭ ಸಾಧ್ಯ. ಇಂದು ಮಹಿಳೆಯ ಪಾತ್ರ ನಿಮ್ಮ ಜೀವನದಲ್ಲಿ ಪ್ರಮುಖಗಬಹುದು. ಸ್ನೇಹಿತರ ಜೊತೆ ಸುಂದರವಾದ ಸ್ಥಳಗಳಿಗೆ ಹೋಗುವಿರಿ. ಸಂತಾನದಿಂದ ಒಳ್ಳೆಯ ಸುದ್ದಿಯನ್ನು ಪಡೆಯುವಿರಿ. ನಿಮ್ಮನ್ನು ನಿರ್ಲಕ್ಷಿಸುವ ಸಹೋದ್ಯೋಗಿಗಳ ಜೊತೆ ಬೆರೆಯಲು ಪ್ರಯತ್ನಿಸಿ. ವೃತ್ತಿಯಲ್ಲಿ ನಿಮಗೆ ಅನನುಕೂಲತೆಯು ಸೃಷ್ಟಿಯಾಗಬಹುದು. ಹೊರಗಿನಿಂದ ಆಮದು ಮಾಡಿಕೊಳ್ಳುವ ವ್ಯವಹಾರದಲ್ಲಿ ತೊಡಕಾಗಬಹುದು. ದಾಂಪತ್ಯದಲ್ಲಿ ಮುಸುಕಿನ ಸಮರ ನಡೆಯುತ್ತಿರುವುದು. ಸ್ವಾರ್ಥಿಗಳಂತೆ ವರ್ತಿಸಿ, ನಿಮ್ಮವರಿಗೆ ಬೇಸರ ಮಾಡುವಿರಿ.

ವೃಶ್ಚಿಕ ರಾಶಿ: ಯಾವುದೋ ಕಾರಣಕ್ಕೆ ದೂರ ಇಟ್ಟವರು ಇಂದು ನಿಮ್ಮ ಬಳಿ ಬರಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಅನ್ಯರಿಂದ ಪ್ರೋತ್ಸಾಹ ಸಿಗುವುದು. ಆಕಾಂಕ್ಷೆಗಳನ್ನು ಪೂರೈಸುವ ಅವರ ಸಾಧನೆಗಳಿಗೆ ಸಾಕ್ಷಿಯಾಗುತ್ತದೆ. ಮಹಿಳೆಯ ಕಾರಣದಿಂದ ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ವಿವಾದಿತ ಚರ್ಚೆ ಅಥವಾ ವಾದಗಳಿಂದ ದೂರವಿರುವುದು ಸೂಕ್ತ. ಕಾನೂನಿನ ವಿಷಯದಲ್ಲಿ ಎಚ್ಚರಿಕೆ ವಹಿಸಬೇಕು. ನಿಮ್ಮ ನಡವಳಿಕೆಯು ವಿವೇಕಯುತವಾಗಿರಲಿ. ಪೂರ್ವಾಗ್ರಹ ಪೀಡಿತರಾಗಿ ಮಾತನಾಡುವುದು ಬೇಡ. ಆರೋಗ್ಯದ ಸುಧಾರಣೆಗೆ ಖರ್ಚಾಗುವುದು. ಇನ್ಮೊಬ್ಬರನ್ನು ದೂರುವುದರಿಂದ ನೀವು ಸಜ್ಜನರಾಗಲಾರಿರಿ. ಅಸಭ್ಯ ಮಾತುಗಳು ನಿಮಗೆ ಸರಿಯಾಗದು. ಇಂದು ನಿಮಗೆ ಬಂಧನದಂತೆ ಅನ್ನಿಸಬಹುದು.‌ ಭಯದಿಂದ ಕೆಲಸ ಮಾಡಿಸಿಕೊಳ್ಳುವಿರಿ. ಎಲ್ಲರ ಜೊತೆ ಬೆರೆಯುವುದನ್ನು ಇಷ್ಟಪಡುವಿರಿ. ಕೆಲಸವು ನಿಧಾನವಾಗುವುದು.

ಧನು ರಾಶಿ : ನಿಮ್ಮ ಪ್ರಯಾಣದ ಯೋಜನೆಯು ಬದಲಾಗಬಹುದು. ನಿಮ್ಮ ಸಿಟ್ಟಿನ ಸ್ವಭಾವದಿಂದ ಏನನ್ನೂ ಸಾಧಿಸಲಾಗದು. ಸಾಮಾಜಿಕ ಕಾರ್ಯಗಳಿಗೆ ಬೇಕಾದ ತಂಡವನ್ನು ಕಟ್ಟುವ ಆಸೆ ಇರುವುದು. ಯಾರನ್ನೋ ನೋಡಿ ನೀವು ಅಸೂಯೆ ಪಡೆಯುವುದು ಬೇಡ.‌ ಕಾರ್ಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಮಾಡುವ ಪ್ರಯಾಣವು ನಿಷ್ಪ್ರಯೋಜಕವಾದೀತು. ಹೊರಗಿನ ಆಹಾರದಿಂದ ಸಂತೋಷವಾಗಬಹುದು. ಉದ್ವೇಗಕ್ಕೆ ಒಳಗಾಗುವುದು ಬೇಡ, ಉತ್ತಮ ಸಮಯದ ನಿರೀಕ್ಷೆಯಲ್ಲಿ ನೀವು ಇರುವಿರಿ. ದೂರದ ಬಂಧುಗಳ ಸಮಾಗಮವಾಗಬಹುದು. ಜನರ ಜೊತೆ ಬೆರೆಯುವುದು ನಿಮಗೆ ಇಷ್ಟವಾಗದು. ಉನ್ನತ ವಿದ್ಯಾಭ್ಯಾಸಕ್ಕೆ ನಿಮ್ಮವರು ಸಲಹೆ ಕೊಡಬಹುದು. ಅಧಿಕಾರವು ಅಹಂಕಾರವಾಗಿ ಬದಲಾಗುವುದು ಬೇಡ. ನಿಮ್ಮ ವರ್ತನೆಯು ಸಂದರ್ಭಕ್ಕೆ ಸರಿಯಾಗಿ ಇರಲಿ. ಸರಿಯಾಗಿ ಪ್ರತಿಕ್ರಯಿಸಲು ನಿಮಗೆ ಬಾರದೇ ಇರುವುದು.

ಮಕರ ರಾಶಿ : ಇಂದು ರಾಜಕೀಯದಲ್ಲಿ ಆದ ಬೆಳವಣಿಗೆಯು ನಿಮ್ಮ ಪರವಾಗಿ ಇರುವುದು. ಪ್ರಭಾವಿ ವ್ಯಕ್ತಿಗಳಿಂದ ತೊಂದರೆಯು ದೂರಾಗಬಹುದು. ನೀವು ಕಾನೂನು ವಿಷಯದಲ್ಲಿ ನಿಮಗೆ ಜಯವಾಗವುದು. ನಿಮಗೆ ಹಿಡಿಸದ ವಿಚಾರದಲ್ಲಿ ಪ್ರಯತ್ನವನ್ನು ಮುಂದುವರಿಸುವುದು ಯೋಗ್ಯವಾಗದು. ಹಣಕಾಸಿನ ಯೋಜನೆಯಲ್ಲಿ ಆರಂಭದಲ್ಲಿ ಕೆಲವು ತೊಂದರೆಗಳಿದ್ದರೂ ಅನಂತರ ದಾರಿಯು ಸ್ಪಷ್ಟವಾಗುತ್ತದೆ. ಉದ್ಯೋಗದ ಸ್ಥಳದಲ್ಲಿ ನೀವು ಸಹೋದ್ಯೋಗಿಗಳ ಜೊತೆ ಸ್ನೇಹಪರ ವಾತಾವರಣದಲ್ಲಿ ಕೆಲಸ ಮಾಡಲು ಇಂದು ಸಾಧ್ಯವಾಗುತ್ತದೆ. ಹಿತೈಷಿಗಳ ಸಹವಾಸದಿಂದ ಮನಸಿಗೆ ಸಂತಸ ಉಂಟಾಗುವುದು. ಹೊಸ ವ್ಯವಹಾರಕ್ಕೆ ಹಿಂದೇಟು ಹಾಕುವಿರಿ. ಸಂಗಾತಿಯ ಮಾತು ಸಂಕಟವನ್ನು ತರಬಹುದು. ತುರ್ತು ಪ್ರಯಾಣವನ್ನು ನೀವು ಮಾಡಬೇಕಾಗಬಹುದು. ಮಕ್ಕಳಿಗೆ ಪ್ರೀತಿ ತೋರಿಸುವ ಅವಶ್ಯಕತೆ ಇರುವುದು.

ಕುಂಭ ರಾಶಿ : ಇಂದು ಆಸ್ತಿಯ ಸ್ಥಿರಾಸ್ತಿಯ ವಿಚಾರಕ್ಕೆ ತಂದೆ ಮತ್ತು ಮಕ್ಕಳ ನಡುವೆ ವಾಗ್ವಾದ ಆಗಬಹುದು. ಸತತ ಓಡಾಟದಿಂದ ಆರೋಗ್ಯದಲ್ಲಿ ಸಮಸ್ಯೆಯಾಗಬಹುದು. ಬಹಳ ದಿನಗಳಿಂದ ಬಾರದೇ ಇರುವ ಹಣಕ್ಕೆ ಚಿಂತೆ ಮಾಡಿಕೊಳ್ಳುವಿರಿ. ಮೇಲಧಿಕಾರಿಗಳ ಪ್ರಶಂಸೆಯು ನಿಮಗೆ ಮಾಡುವ ಕೆಲಸದಲ್ಲಿ ಉತ್ಸಾಹ ಹೆಚ್ಚಿಸುವುದು. ನೀವು ಕಾಲ್ಪನಿಕ ಪ್ರಪಂಚಕ್ಕೆ ಪ್ರಯಾಣಿಸುವಿರಿ. ಕುಟುಂಬದ ವಿಷಯಗಳಲ್ಲಿ ಆಸಕ್ತಿ ವಹಿಸುತ್ತೀರಿ. ಎಲ್ಲಿಗಾದರೂ ದೂರದ ಊರಿಗೆ ಪ್ರಯಾಣದ ಯೋಜನೆಗಳನ್ನು ಮಾಡಿಕೊಳ್ಳುವಿರಿ. ನೀವು ಹಣಕಾಸಿನ ವ್ಯವಹಾರಗಳಿಗೆ ಹೆಚ್ಚು ಗಮನ ಹರಿಸಬಹುದು. ನೀವು ರುಚಿಕರವಾದ ಆಹಾರದಿಂದ ಸಂತೋಷಿಸುವಿರಿ. ಸಾಮಾಜಿಕ ಕಾರ್ಯಗಳಿಗೆ ಒತ್ತಡಗಳು ಇರಲಿದೆ. ಪ್ರೀತಿಪಾತ್ರರ ಮೇಲೆ ಸುಖಾಸುಮ್ಮನೆ ಅನುಮಾನ ಬೇಡ. ಸಂಗಾತಿಯ ಬಗ್ಗೆ ಸಿಂಪತಿ ಬರುವುದು.

ಮೀನ ರಾಶಿ : ನಿಮ್ಮ ಮೂಲಭೂತ ಅಂಶಗಳನ್ನು ಮರೆಯುವ ಸಾಧ್ಯತೆ ಇದೆ. ನಿಮ್ಮ ಸ್ನೇಹಿತರ ಒತ್ತಾಯಕ್ಕೆ ಅನವಶ್ಯಕ ವಸ್ತುವಾದರೂ ಖರೀದಿಸುವಿರಿ. ವೃತ್ತಿಯಲ್ಲಿ ಬರುವ ಸವಾಲುಗಳು ಬರಬಹುದು. ಎಲ್ಲ ಕಡೆಗಳಿಂದ ಸಕಾರಾತ್ಮಕ ಫಲಿತಾಂಶವನ್ನು ನಿರೀಕ್ಷಿಸುವಿರಿ. ಇಂದು ಬಿಡುವಿಲ್ಲದ ದಿನವಾಗಿರುವುದು. ಕೆಲವು ವಿಚಾರಕ್ಕೆ ತುಂಬಾ ಭಾವುಕರಾಗಬಹುದು. ವ್ಯಾವಹಾರಿಕ ಮಾತುಗಳನ್ನು ಬಿಟ್ಟು ಬೇರೆ ಮಾತನಾಡಲು ಸಂಯಮವಿಲ್ಲದೆ ಇರಬಹುದು. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಆದಷ್ಟು ಸ್ಥಿರಾಸ್ತಿಯ ಬಗ್ಗೆ ಚರ್ಚೆ ಮಾಡುವುದನ್ನು ತಪ್ಪಿಸಿ. ಜಲಮೂಲಗಳಿಂದ ಆದಾಯ ಸಿಗಬಹುದು. ಆಪ್ತರ ಸಹಕಾರವನ್ನು ನೀವು ಅಲ್ಲಗಳೆಯುವಿರಿ. ನಿಮ್ಮ‌ ಕಷ್ಟವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳುವುದೂ ಕಷ್ಟವಾದೀತು. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಿ.

-ಲೋಹಿತ ಹೆಬ್ಬಾರ್-8762924271 (what’s app only)

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್