
6ರೆಸಾರ್ಟ್, ರೆಸ್ಟೋರೆಂಟ್ ಅಥವಾ ಮಾಲ್ ಗಳಿಗೆ ಕುಟುಂಬ ಸಮೇತ ತೆರಳುವಂಥ ಯೋಗ ಇದೆ. ಹೊಸ ರುಚಿ ಖಾದ್ಯಗಳನ್ನು ಸವಿಯಲಿದ್ದೀರಿ. ಬಹಳ ಕಾಲದಿಂದ ತೆರಳಬೇಕು ಎಂದುಕೊಂಡಿದ್ದ ಧಾರ್ಮಿಕ ಕೇಂದ್ರಗಳಿಗೆ ನಿಮ್ಮಲ್ಲಿ ಕೆಲವರು ಭೇಟಿ ನೀಡಲಿದ್ದೀರಿ. ಆರೋಗ್ಯಕರ ಜೀವನಕ್ಕೆ ಸಹಾಯ ಮಾಡುವಂಥ ಕೆಲವು ಹವ್ಯಾಸಗಳನ್ನು ಇಂದಿನಿಂದ ಆರಂಭಿಸಲಿದ್ದೀರಿ. ಸೈಕ್ಲಿಂಗ್, ಜಿಮ್, ಅಥವಾ ಯೋಗಾಭ್ಯಾಸ ಇಂಥವುಗಳಿಗೆ ಸೇರ್ಪಡೆ ಆಗುವಂಥ ಯೋಗ ಇದೆ. ವಿದೇಶಗಳಲ್ಲಿ ಇರುವಂಥವರು ವಾಪಸ್ ತಾಯ್ನಾಡಿಗೆ ಕೆಲವು ಸಮಯದ ಮಟ್ಟಿಗೆ ವಾಪಸ್ ಬರಲಿದ್ದೀರಿ. ಅದು ರಜಾ ದಿನಗಳ ಕಾರಣಕ್ಕೆ ಇರಬಹುದು. ಅಥವಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಕಾರಣಕ್ಕಾದರೂ ಇರಬಹುದು. ಇನ್ನು ಕೃಷಿ ಭೂಮಿ ಅಥವಾ ದೊಡ್ಡ ಅಳತೆಯ ಸೈಟನ್ನು ಹುಡುಕುತ್ತಾ ಇರುವವರು ಈ ದಿನ ಅಂಥ ಕೆಲವು ಆಸ್ತಿಗಳನ್ನು ಖರೀದಿಗಾಗಿ ನೋಡಲಿದ್ದೀರಿ.
ದಾಂಪತ್ಯದಲ್ಲಿ ಒಂದು ಮಾತು ಬರುತ್ತದೆ, ಒಂದು ಮಾತು ಹೋಗುತ್ತದೆ. ಈ ಕಾರಣಕ್ಕೆ ವಿರಸ ವಿಕೋಪಕ್ಕೆ ಹೋಗಿ, ದಂಪತಿ ಮಧ್ಯೆ ಮಾತನಾಡದೆ ಇರುವಂಥ ಸನ್ನಿವೇಶ ನಿಮ್ಮಲ್ಲಿ ಕೆಲವರಿಗೆ ಸೃಷ್ಟಿ ಆಗಲಿದೆ. ದೇಹದಲ್ಲಿ ನೀರಿನ ಅಂಶ ಕಡಿಮೆ ಆಗದಂತೆ ನೋಡಿಕೊಳ್ಳುವುದಕ್ಕೆ ಆದ್ಯತೆ ನೀಡಿ. ಏಕಾಏಕಿ ಉದ್ಯೋಗ ಸ್ಥಳದಲ್ಲಿ ನಿಮ್ಮ ಅಗತ್ಯ ಕಂಡುಬರಲಿದ್ದು, ಅದಕ್ಕಾಗಿ ಸಮಯ ಮೀಸಲಿಡಬೇಕು ಎಂಬ ಸನ್ನಿವೇಶ ಸೃಷ್ಟಿ ಆಗಲಿದೆ. ವರ್ಕ್- ಲೈಫ್ ಸಮತೋಲನ ಕಾಯ್ದುಕೊಳ್ಳುವುದಕ್ಕೆ ನಿಮಗೆ ಬರುವುದಿಲ್ಲ ಎಂಬ ಮಾತನ್ನು ಕುಟುಂಬ ಸದಸ್ಯರಿಂದ ಕೇಳಿಸಿಕೊಳ್ಳುವಂತೆ ಆಗಲಿದೆ. ಯಾವುದೇ ಜವಾಬ್ದಾರಿಯಾದರೂ ವಹಿಸಿಕೊಳ್ಳುತ್ತೇನೆ, ಯಾವ ಶಿಫ್ಟ್ ನಲ್ಲಿ ಬೇಕಾದರೂ ಕೆಲಸ ಮಾಡುತ್ತೇನೆ ಎಂದಿದ್ದ ವ್ಯಕ್ತಿಯೊಬ್ಬರು, ನೀವು ಅವರ ಪರವಾಗಿ ಮಾತನಾಡಿ ಉದ್ಯೋಗ ಕೊಡಿಸಿದ ನಂತರದಲ್ಲಿ, ಅದು ಸಾಧ್ಯವಿಲ್ಲ- ಇದು ಸಾಧ್ಯವಿಲ್ಲ ಎಂದು ಹೇಳುವುದಕ್ಕೆ ಆರಂಭಿಸಲಿದ್ದಾರೆ.
ಪ್ರಶಾಂತವಾದ ಸ್ಥಳದಲ್ಲಿ ಸಮಯ ಕಳೆಯಬೇಕೆಂದು ನಿಮ್ಮಲ್ಲಿ ಕೆಲವರು ಒಬ್ಬರೇ ವಾಹನ ಚಲಾಯಿಸಿಕೊಂಡು ಲಾಂಗ್ ಡ್ರೈವ್ ಹೋಗಲಿದ್ದೀರಿ. ಮಾಸ್ಟರ್ ಚೆಕಪ್ ಮಾಡಿಸಿಕೊಳ್ಳಬೇಕು ಎಂದು ಬಹಳ ಸಮಯದಿಂದ ಅಂದುಕೊಳ್ಳುತ್ತಾ ಇದ್ದವರು ಈ ದಿನ ಮಾಡಿಸಿಕೊಳ್ಳುವ ಯೋಗ ಇದೆ. ಇನ್ನು ಉದ್ಯೋಗ ಅಥವಾ ವೃತ್ತಿಗೆ ಸಂಬಂಧಿಸಿದಂತೆ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಮುಖ್ಯವಾದ ತೀರ್ಮಾನ ಒಂದನ್ನು ಮಾಡುವ ಸಲುವಾಗಿ ನೀವು ಯಾವ ವ್ಯಕ್ತಿಗಳನ್ನು ತುಂಬ ಗೌರವದಿಂದ ಅಂಥವರನ್ನು ಭೇಟಿ ಮಾಡಿ, ಸಲಹೆ- ಮಾರ್ಗದರ್ಶನವನ್ನು ಪಡೆದುಕೊಳ್ಳಲಿದ್ದೀರಿ. ಸರ್ಕಾರಿ ಕೆಲಸದಲ್ಲಿ ಇರುವವರು ಐವತ್ತು ವರ್ಷ ಮೇಲ್ಪಟ್ಟವರು ಆಗಿದ್ದಲ್ಲಿ ವಿಆರ್ಎಸ್ ಪಡೆದುಕೊಂಡು, ಸ್ವಂತ ವ್ಯವಹಾರವನ್ನು ಆರಂಭಿಸುವುದಕ್ಕೋ ಅಥವಾ ಕೃಷಿಯನ್ನು ಆದಾಯಕ್ಕಾಗಿ ಮಾಡುವುದಕ್ಕೋ ತೀರ್ಮಾನ ಮಾಡುವ ಸಾಧ್ಯತೆ ಇದೆ.
ಹೋರಾಟ- ಚಳವಳಿಗಳಲ್ಲಿ ಗುರುತಿಸಿಕೊಂಡವರಿಗೆ ಸನ್ಮಾನ, ಗೌರವ ದೊರೆಯುವಂಥ ಯೋಗ ಇದೆ. ಇನ್ನು ನಿಮ್ಮಲ್ಲಿ ಕೆಲವರು ಪುಸ್ತಕ ಬರೆಯುವುದಕ್ಕೆ ಅಂತಲೇ ಕೆಲವು ಸ್ಥಳಗಳಿಗೆ ಪ್ರವಾಸ ತೆರಳಲಿದ್ದೀರಿ. ಇನ್ನು ವೈದ್ಯಕೀಯ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ಯೂಟ್ಯೂಬ್ ಚಾನೆಲ್ ಒಂದನ್ನು ಶುರು ಮಾಡುವ ಬಗ್ಗೆ ತೀರ್ಮಾನವನ್ನು ಕೈಗೊಳ್ಳಲಿದ್ದೀರಿ. ಈ ನಿಮ್ಮ ನಿರ್ಧಾರಕ್ಕೆ ಸಂಗಾತಿಯ ಬೆಂಬಲ ಇರಲಿದೆ. ಪ್ರೀತಿಯಲ್ಲಿ ಇರುವಂಥವರು ತಮ್ಮ ಮದುವೆ ಬಗ್ಗೆ ಮನೆಯಲ್ಲಿ ಪ್ರಸ್ತಾವ ಮಾಡುವ ಬಗ್ಗೆ ನಿರ್ಧರಿಸಲಿದ್ದೀರಿ. ಒಂದು ವೇಳೆ ನೀವೇನಾದರೂ ಲೆಕ್ಕಪತ್ರ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರಾದಲ್ಲಿ ವರ್ಷಗಳಿಂದ ಗಮನಕ್ಕೆ ಬಾರದೆ ಉಳಿದುಹೋದ ಹಣಕಾಸಿನ ಅವ್ಯವಹಾರವೊಂದು ನಿಮ್ಮ ಗಮನಕ್ಕೆ ಬರಲಿದೆ. ಇದನ್ನು ಮೇಲಧಿಕಾರಿಗಳಿಗೆ ತಿಳಿಸಬಾರದು ಎಂದು ನಿಮ್ಮ ಜೊತೆಗೆ ಕೆಲಸ ಮಾಡುವವರು ಕೇಳಿಕೊಳ್ಳಲಿದ್ದಾರೆ.
ಎಲೆಕ್ಟ್ರಿಕಲ್ ವಸ್ತುಗಳ ಬಳಕೆ ಮಾಡುವಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕು. ವಿದ್ಯುತ್ ಶಾಕ್, ಶಾರ್ಟ್ ಸರ್ಕೀಟ್ ಇಂಥದ್ದೇನಾದರೂ ಈ ದಿನ ಸಂಭವಿಸುವ ಸಾಧ್ಯತೆ ಇದೆ. ಲ್ಯಾಪ್ ಟಾಪ್- ಮೊಬೈಲ್ ಫೋನ್ ಇಂಥವುಗಳನ್ನು ಚಾರ್ಜ್ ಗೆ ಹಾಕುವಾಗ ಸಹ ಮುಂಜಾಗ್ರತೆಯನ್ನು ವಹಿಸಿ. ಈ ಹಿಂದೆ ನಿಮಗೆ ಕೆಲವು ಹುದ್ದೆ- ಸ್ಥಾನಮಾನ ಸಿಗದ ರೀತಿಯಲ್ಲಿ ನೋಡಿಕೊಂಡಿದ್ದ ವ್ಯಕ್ತಿಗಳು ಯಾರು ಹಾಗೂ ನಿಮಗೆ ಅಡ್ಡಗಾಲು ಹಾಕುವುದಕ್ಕೆ ಏನೆಲ್ಲ ಮಾಡಿದರು ಎಂಬ ಬಗ್ಗೆ ವಿಶ್ವಾಸಾರ್ಹ ಆದ ಮೂಲಗಳಿಂದ ಮಾಹಿತಿ ದೊರೆಯಲಿದೆ. ವಾಹನಗಳ ಕಲಿಕೆ ಆರಂಭಿಸಬೇಕು ಅಂದುಕೊಂಡವರು ಅಥವಾ ಈಗ ಡ್ರೈವಿಂಗ್ ಕ್ಲಾಸ್ ಸೇರಿಕೊಂಡಂತಹವರು ಹೆಚ್ಚು ಏಕಾಗ್ರತೆಯಿಂದ ತೊಡಗಿಸಿಕೊಳ್ಳಿ. ಏನೋ ಸ್ವಲ್ಪ ಆದಾಯ ಬರಬಹುದೇನೋ ಎಂದುಕೊಂಡಿದ್ದ ಕೆಲಸದಲ್ಲಿ ಭಾರೀ ದೊಡ್ಡ ಮೊತ್ತವೇ ನಿಮ್ಮ ಕೈ ಸೇರಲಿದೆ.
ನಿಮ್ಮಲ್ಲಿ ಕೆಲವರು ಸೆಕೆಂಡ್ ಹ್ಯಾಂಡ್ ಕಾರು, ಸ್ಕೂಟರ್, ಬೈಕ್ ಅಥವಾ ಆಟೋ ಇಂಥದ್ದನ್ನು ಖರೀದಿ ಮಾಡುವ ಯೋಗ ಈ ದಿನ ಇದೆ. ಜೀವ ವಿಮೆ ಅಥವಾ ಆರೋಗ್ಯ ವಿಮೆಯ ಪಾಲಿಸಿಯನ್ನು ಖರೀದಿ ಮಾಡುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ನಿಮಗೆ ವಿರುದ್ಧವಾದ ಪರಿಸ್ಥಿತಿಯನ್ನು ಅನುಕೂಲವಾಗಿ ಮಾರ್ಪಾಟು ಮಾಡಿಕೊಳ್ಳುವಲ್ಲಿ ಯಶಸ್ಸು ಕಾಣಲಿದ್ದೀರಿ. ಕೃಷಿ ಜಮೀನು ಇರುವವರು ಅಲ್ಲಿನ ಸ್ವಲ್ಪ ಜಾಗವನ್ನು ವಸತಿ ಉದ್ದೇಶಕ್ಕಾಗಿ ಬಳಸಲು ಹಾಗೂ ಕೆಲವಷ್ಟು ಜಾಗವನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಲು ಸರ್ಕಾರಕ್ಕೆ ಅರ್ಜಿ ಹಾಕುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಇದಕ್ಕೆ ನಿಯಮ- ನಿಬಂಧನೆಗಳು ಏನೇನು ಇವೆ ಎಂಬುದನ್ನು ವಿಚಾರಿಸುವುದಕ್ಕೆ ವಕೀಲರು ಹಾಗೂ ಸಂಬಂಧಪಟ್ಟ ಇಲಾಖೆಯಲ್ಲಿ ಕೆಲಸ ಮಾಡುವವರನ್ನು ಭೇಟಿ ಆಗಲಿದ್ದೀರಿ. ನಿಮ್ಮ ಸೋದರಮಾವ ನೀಡುವ ಸಲಹೆ- ಮಾರ್ಗದರ್ಶನವನ್ನು ಗಂಭೀರವಾಗಿ ಪರಿಗಣಿಸಿ.
ಕೆಲವು ವಸ್ತುಗಳನ್ನು ಖರೀದಿ ಮಾಡುವುದಕ್ಕೆ ಭಾರೀ ಚೌಕಾಶಿ ಮಾಡಲಿದ್ದೀರಿ. ಮಕ್ಕಳ ಸಲುವಾಗಿ ಕೆಲವು ಗ್ಯಾಜೆಟ್ ಗಳನ್ನು ಖರೀದಿ ಮಾಡುವುದಕ್ಕೆ ತೀರ್ಮಾನ ಮಾಡಲಿದ್ದೀರಿ. ಅಥವಾ ಮಕ್ಕಳಿಗಾಗಿ ಬ್ರ್ಯಾಂಡೆಡ್ ವಾಚ್, ಶೂ ಇಂಥವುಗಳನ್ನು ಕೊಳ್ಳಲು ಖರ್ಚು ಮಾಡುವಂಥ ಯೋಗ ಇದೆ. ರಹಸ್ಯವಾಗಿ ನೀವು ಮಾಡಬೇಕು ಅಂದುಕೊಂಡಿದ್ದ ಕೆಲವು ವಿಷಯಗಳು ಗೊತ್ತಾಗಿ, ನೀವಾಗಿಯೇ ಎಲ್ಲ ವಿಷಯವನ್ನು ತಿಳಿಸಬೇಕಾದ ಸಂದರ್ಭ ಬರಲಿದೆ. ಬಹಳ ಸಮಯದ ಹಿಂದೆ ನಿಮ್ಮಲ್ಲಿ ಯಾರು ಬಹಳ ಕಡಿಮೆ ಮೊತ್ತದಲ್ಲಿ ಸೈಟು ಅಥವಾ ಕೃಷಿ ಜಮೀನನ್ನು ಗುಂಟೆ ಲೆಕ್ಕದಲ್ಲಿ ಖರೀದಿ ಮಾಡಿದ್ದಿರೋ ಅದಕ್ಕೆ ಬಹಳ ಒಳ್ಳೆ ಬೆಲೆ ಬಂದಿದೆ ಎಂಬ ಮಾಹಿತಿ ಆಪ್ತರ ಮೂಲಕವಾಗಿ ನಿಮಗೆ ಈ ದಿನ ಬರಲಿದೆ. ಪಾರ್ಟಿ- ಗೆಟ್ ಟು ಗೆದರ್ ಗಳಲ್ಲಿ ಪಾಲ್ಗೊಳ್ಳುವಂತೆ ಈ ದಿನ ನಿಮಗೆ ಆಹ್ವಾನ ಬರಲಿದ್ದು, ಬಹಳ ಸಂತೋಷವಾಗಿ ಗೆಳೆಯರೊಂದಿಗೆ ಸಮಯವನ್ನು ಕಳೆಯಲಿದ್ದೀರಿ.
ಈ ಹಿಂದೆ ನೀವೇ ಕೊಟ್ಟಿದ್ದ ಮಾತಿನಿಂದ ಹಿಂದಕ್ಕೆ ಸರಿಯುವಂಥ ಸನ್ನಿವೇಶ ನಿರ್ಮಾಣ ಆಗಲಿದೆ. ಸ್ನೇಹ- ಸಂಬಂಧದಲ್ಲಿ ಮುಂಚೆ ಇದ್ದ ವಿಶ್ವಾಸ, ನಂಬಿಕೆ ಈಗ ಇಲ್ಲದಂತಾಗಿರುವುದು ಇದಕ್ಕೆ ಕಾರಣ ಎಂಬುದನ್ನು ಸಂಬಂಧಪಟ್ಟವರಿಗೆ ನೇರವಾಗಿ ಹೇಳಿಯೂ ಹೇಳುತ್ತೀರಿ. ನೀವು ಬಳಸುವ ಬಾಚಣಿಗೆ, ಸೋಪು ಹಾಗೂ ಟವೆಲ್ ಗಳು ಯಾವುದರಿಂದ ತಯಾರಾದದ್ದು ಇಂಥವುಗಳ ಕಡೆಗೆ ಹೆಚ್ಚು ಲಕ್ಷ್ಯ ನೀಡಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ತಲೆ, ಮುಖ ಹಾಗೂ ದೇಹದ ಕೆಲ ಭಾಗದಲ್ಲಿ ಅಲರ್ಜಿ ಕಾಣಿಸಿಕೊಳ್ಳಬಹುದು. ಇನ್ನು ನಿಮಗೆ ಒತ್ತಡ ಹೆಚ್ಚಾಗಿರುವುದರಿಂದ ಅದರ ಅಡ್ಡ ಪರಿಣಾಮವಾಗಿ ಕೆಲವು ಆರೋಗ್ಯ ಸಮಸ್ಯೆಗಳು ಉದ್ಭವವಾಗಿವೆ ಎಂದು ವೈದ್ಯರು ತಿಳಿಸುವ ಸಾಧ್ಯತೆಯೂ ಇದೆ. ನಿಮ್ಮಲ್ಲಿ ಯಾರು ಸುಬ್ರಹ್ಮಣ್ಯ ಸ್ವಾಮಿಗೆ ಹರಕೆ ಹೊತ್ತುಕೊಂಡು, ಅದನ್ನು ಇನ್ನೂ ಈಡೇರಿಸಿಲ್ಲ ಅಂತಾದಲ್ಲಿ ಆ ಕಡೆಗೆ ಲಕ್ಷ್ಯ ನೀಡುವುದು ಒಳ್ಳೆಯದು.
ಸ್ನೇಹಿತರಿಗೆ ನೀಡಿದ ಸಾಲವನ್ನು ವಸೂಲಿ ಮಾಡುವುದು ಹೇಗೆ ಎಂದು ಆಲೋಚಿಸುವುದಕ್ಕೆ ನಿಮ್ಮ ಹೆಚ್ಚಿನ ಸಮಯ ಹೋಗಿಬಿಡುತ್ತದೆ. ನಿಮ್ಮಲ್ಲಿ ಕೆಲವರಿಗೆ ಮುಖದಲ್ಲಿ ಊತ, ಕೈ- ಕಾಲುಗಳಲ್ಲಿ ಊತ ಕಾಣಿಸಿಕೊಳ್ಳಲಿದೆ. ಮನೆಯಿಂದ ದೂರ ಇದ್ದು, ವ್ಯಾಸಂಗ- ಉದ್ಯೋಗ ಮಾಡುತ್ತಾ ಇರುವವರಿಗೆ, ಈಗಿಂದ ಈಗಲೇ ಮನೆಗೆ ಹೊರಟು ಬರುವಂತೆ ಹೇಳುವ ಸಾಧ್ಯತೆ ಇದೆ. ಭೂಮಿ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳುವುದಕ್ಕೋ ಅಥವಾ ಸೋದರ- ಸೋದರಿಯರ ವಿವಾಹದ ವಿಚಾರವನ್ನು ಮಾತನಾಡುವುದಕ್ಕೋ ನಿಮಗೆ ಈ ರೀತಿ ಹೇಳಲಿದ್ದಾರೆ. ಸ್ವಲ್ಪ ಪ್ರಮಾಣದ ಭೂಮಿಯನ್ನು ಬಾಡಿಗೆ ಆಧಾರದಲ್ಲಿ ಮೇಲೆ ಪಡೆದುಕೊಂಡು, ಅಲ್ಲಿ ಹೋಟೆಲ್ ಅಥವಾ ಗ್ಯಾರೇಜ್ ಶುರು ಮಾಡಬೇಕು ಎಂದು ತೀರ್ಮಾನ ಕೈಗೊಳ್ಳಲಿದ್ದೀರಿ. ಇದಕ್ಕೆ ನಿಮ್ಮ ಕುಟುಂಬದವರಿಂದಲೂ ಬೆಂಬಲ ಉತ್ತಮ ರೀತಿಯಲ್ಲಿ ದೊರೆಯಲಿದೆ.
ಲೇಖನ- ಎನ್.ಕೆ.ಸ್ವಾತಿ