
ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 24ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ನಿರ್ಧಾರಗಳ ಬಗ್ಗೆ ನಂಬಿಕೆ ಇರುವುದು ತಪ್ಪಲ್ಲ. ಆದರೆ ಯಾವುದಾದರೂ ಅವಕಾಶ ಸಿಕ್ಕಿದೆ ಎಂಬ ಕಾರಣಕ್ಕೆ ವಿನಾಕಾರಣದ ಉದ್ವೇಗ ಯಾವುದೇ ರೀತಿಯಲ್ಲೂ ಸರಿಯಲ್ಲ. ಆದ್ದರಿಂದ ಸಾವಧಾನದಿಂದ ಆಲೋಚನೆ ಮಾಡಿದ ಮೇಲಷ್ಟೇ ಅಭಿಪ್ರಾಯವನ್ನಾಗಲೀ ಹಣಕಾಸಿನ ವಿಚಾರಗಳ ಬಗ್ಗೆ ಆಗಲೀ ಮಾತನ್ನು ಶುರು ಮಾಡಿ. ಸಹೋದ್ಯೋಗಿಗಳನ್ನು ತಮಾಷೆಗಾದರೂ ಸರಿ, ಹೀಗಳೆಯುವುದೋ ಅಥವಾ ಮೂದಲಿಸುವುದೋ ಮಾಡಬೇಡಿ. ಈಗಿರುವ ಉದ್ಯೋಗ ಬದಲಾವಣೆ ಮಾಡಲೇಬೆಕು ಎಂಬ ಸನ್ನಿವೇಶ ಉದ್ಭವಿಸಲಿದೆ.
ನಿಮಗೆ ಸರಿ ಎಂದು ತಿಳಿದಿದ್ದರೂ ಒಂದಕ್ಕೆ ನಾಲ್ಕು ಬಾರಿ ಎಂಬಂತೆ ನಿರ್ಧಾರವನ್ನು ಅಳೆದು- ತೂಗಿ ನೋಡುವುದು ಉತ್ತಮ. ಅದರಲ್ಲೂ ನೀವೇ ಸರಿ ಎಂಬ ಧೋರಣೆಯಿಂದ ನಿಷ್ಠುರವಾದಿಗಳಂತೆ ನೇರಾನೇರ ಮಾತನಾಡುವುದಕ್ಕೆ ಹೋಗದಿರಿ. ನೀವು ತರ್ಕಬದ್ಧವಾಗಿಯೇ ಮಾತನಾಡಬಹುದು ಹಾಗೂ ನಿರ್ದಿಷ್ಟ ವ್ಯಕ್ತಿಯದೇ ತಪ್ಪು ಸಹ ಇರಬಹುದು. ಆದರೆ ಆ ಕಾರಣಕ್ಕಾಗಿ ಆತ್ಮವಿಶ್ವಾಸವನ್ನು ಕುಗ್ಗಿಸುವ ರೀತಿಯಲ್ಲಿ ಮಾತನಾಡಬೇಡಿ. ಸಾಮಾಜಿಕವಾಗಿ ಹೆಚ್ಚು ತೊಡಗಿಕೊಳ್ಳುತ್ತೀರಿ ಅಂತಾದಲ್ಲಿ ನಿಮ್ಮ ವರ್ಚಸ್ಸಿಗೆ ತಕ್ಕಂತೆ ನಡೆದುಕೊಳ್ಳುವುದು ಉತ್ತಮ.
ಇದನ್ನೂ ಓದಿ: ಜನವರಿ 25 ರಂದು ಕೇತು ಸಂಚಾರ; ಈ ಮೂರು ರಾಶಿಗೆ ಅದೃಷ್ಟವೋ ಅದೃಷ್ಟ
ನಿಮಗೆ ಕೀರ್ತಿ- ಪ್ರತಿಷ್ಠೆಗಳು ಹೆಚ್ಚಾಗುವ ಸಮಯ ಇದು. ನೀವು ಸಮಯಸ್ಫೂರ್ತಿಯಿಂದ ತೆಗೆದುಕೊಂಡ ರಿಸ್ಕ್ ಪರಿಣಾಮವಾಗಿ ಇತರರು ಅಚ್ಚರಿಯಿಂದ ನಿಮ್ಮನ್ನು ನೋಡುವಂತೆ ಆಗುತ್ತದೆ. ಆರ್.ಡಿ., ಎಫ್.ಡಿ., ಇಂಥದ್ದನ್ನು ಮಾಡಿಸುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ರಾಜಕಾರಣದಲ್ಲಿ ಇರುವಂಥವರು ಸಮಯಕ್ಕೆ ತೆಗೆದುಕೊಳ್ಳಬೇಕಾದ ನಾಯಕತ್ವವನ್ನು ತುಂಬ ಧೈರ್ಯವಾಗಿ ವಹಿಸಿಕೊಳ್ಳಲಿದ್ದೀರಿ. ತುಂಬ ಕಠಿಣ ಎಂದು ಇತರರು ನಿರ್ಧಾರ ಮಾಡಿಯೇ ಬಿಟ್ಟಿದ್ದ ಸಂಗತಿಗಳನ್ನು ಬಹಳ ಸರಳವಾಗಿ ವಿವರಿಸುವುದಕ್ಕೆ ನೀವು ಯಶಸ್ವಿಯಾಗಲಿದ್ದೀರಿ.
ಲೇಖನ- ಸ್ವಾತಿ ಎನ್.ಕೆ.
ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ