
ಟ್ಯಾಟೂ, ಮೆಹೆಂದಿ ಇಂಥವುಗಳನ್ನು ಹಾಕಿಸಿಕೊಳೋಕೆ ಹೆಚ್ಚು ಸಮಯ, ಹಣವನ್ನು ಇಡಲಿದ್ದೀರಿ. ನೀವು ಮನೆಯಲ್ಲಿನ ಸ್ವಚ್ಛತೆಗೆ ಆದ್ಯತೆ ನೀಡಲಿದ್ದು, ಅದಕ್ಕಾಗಿ ಹಣ ಕೊಟ್ಟು ಕೆಲಸದವರನ್ನು ನಿಯಮಿತವಾಗಿ ಬರುವಂತೆ ಹೇಳಲಿದ್ದೀರಿ ಅಥವಾ ಕೆಲವು ಯಂತ್ರಗಳನ್ನು ಖರೀದಿಸುವುದಕ್ಕೆ ಆಲೋಚನೆ ಮಾಡಲಿದ್ದೀರಿ. ಉದ್ಯೋಗ ಬದಲಾವಣೆ ಮಾಡಬೇಕು ಎಂದು ಪ್ರಯತ್ನ ಮಾಡುತ್ತಾ ಇರುವವರಲ್ಲಿ ಕೆಲವರು ಅದಕ್ಕಾಗಿಯೇ ಕೋರ್ಸ್ ಗೆ ಸೇರ್ಪಡೆ ಆಗುವ ಬಗ್ಗೆ ಸ್ನೇಹಿತರ ಜೊತೆಗೆ ಚರ್ಚೆ ನಡೆಸಲಿದ್ದೀರಿ. ತುಂಬ ಸಮಸ್ಯೆಯಲ್ಲಿ ಸಿಲುಕಿದ್ದರು ಎಂಬುದನ್ನು ಗಮನಿಸಿ, ಯಾವ ವ್ಯಕ್ತಿಗೆ ನೀವು ಸಹಾಯ ಮಾಡಿದ್ದಿರೋ ಅವರು ಈ ದಿನ ನಿಮಗೆ ಬೇಕಾದ ಅನುಕೂಲ ಮಾಡಲು ಮುಂದಾಗಲಿದ್ದಾರೆ. ಲೆಕ್ಕಪತ್ರ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರಿಗೆ ಬೇರೆಯವರ ಕಣ್ತಪ್ಪಿನಿಂದ ಆದ ದೊಡ್ಡ ತಪ್ಪೊಂದು ಗಮನಕ್ಕೆ ಬರಲಿದ್ದು, ಇದನ್ನು ಹೇಗೆ ಸರಿಪಡಿಸಬೇಕು ಎಂಬ ವಿಚಾರ ಆತಂಕ ತರಲಿದೆ.
ಹೋಟೆಲ್- ರೆಸ್ಟೋರೆಂಟ್ ಗಳಿಗೆ ಹೆಚ್ಚಿನ ಖರ್ಚು- ವೆಚ್ಚ ಆಗುವ ಯೋಗ ಈ ದಿನ ಇದೆ. ಇನ್ನು ನಿಮ್ಮಲ್ಲಿ ಕೆಲವರು ನಿವೃತ್ತಿ ನಂತರಕ್ಕೆ ಬೇಕಾಗಬಹುದಾದ ತಿಂಗಳಾ ತಿಂಗಳಿನ ವೆಚ್ಚದ ಮೊತ್ತ ಎಷ್ಟು ಹಾಗೂ ಅದಕ್ಕಾಗಿ ಈಗಿಂದ ಎಷ್ಟು ಮೊತ್ತದ ಉಳಿತಾಯ- ಹೂಡಿಕೆ ಮಾಡಬೇಕು ಎಂಬ ಬಗ್ಗೆ ಲೆಕ್ಕಾಚಾರಗಳನ್ನು ಮಾಡಿಕೊಂಡು, ಅದರಂತೆ ಖರ್ಚು- ವೆಚ್ಚದಲ್ಲಿಯೂ ಬದಲಾವಣೆ ಮಾಡಿಕೊಳ್ಳಲಿದ್ದೀರಿ. ಕೆಲ ದಿನಗಳ ಹಿಂದಷ್ಟೇ ತಂದಿದ್ದ ಎಲೆಕ್ಟ್ರಿಕ್ ಅಥವಾ ಎಲೆಕ್ಟ್ರಾನಿಕ್ ವಸ್ತುವನ್ನು ತುಂಬ ಕಡಿಮೆ ಬೆಲೆಗೆ ಅಥವಾ ಉಚಿತವಾಗಿಯೇ ಬೇರೆಯವರಿಗೆ ನೀಡುವಂಥ ಸನ್ನಿವೇಶ ಸೃಷ್ಟಿ ಆಗಬಹುದು. ಭಾವನೆಗಳ ಏರಿಳಿತಕ್ಕೆ ತಕ್ಕಂತೆ ವರ್ತನೆ ಮಾಡುವುದಕ್ಕೆ ಹೋಗಬೇಡಿ. ಏಕೆಂದರೆ ಆ ನಂತರ ನಿಮ್ಮ ತೀರ್ಮಾನಗಳಿಂದ ಪರಿತಪಿಸುವಂತೆ ಆಗಲಿದೆ. ಈ ದಿನ ಸಾಧ್ಯವಾದಷ್ಟೂ ಕೋಪ- ತಾಪ ಕಡಿಮೆ ಮಾಡಿಕೊಳ್ಳುವುದು ಕ್ಷೇಮ.
ವಿದೇಶಕ್ಕೆ ಕೆಲ ದಿನಗಳ ಮಟ್ಟಿಗೆ ಹೋಗಬೇಕು ಎಂಬ ಬಗ್ಗೆ ನಿಮ್ಮ ಮೇಲಧಿಕಾರಿಗಳು ತಿಳಿಸಬಹುದು. ಬ್ಯಾಂಕಿಂಗ್ ವ್ಯವಹಾರಗಳು, ಕ್ರೆಡಿಟ್ ಕಾರ್ಡ್, ಫಾರೆಕ್ಸ್ ಕಾರ್ಡ್ ಇಂಥವುಗಳಿಗೆ ಸಂಬಂಧಿಸಿದ ವ್ಯವಹಾರಗಳ ಓಡಾಟಕ್ಕೆ ಹೆಚ್ಚು ಸಮಯ ಹೋಗಲಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ- ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಆದಾಯ ಮೂಲ ಹೆಚ್ಚಳ ಆಗುವ ದಾರಿ ತೆರೆದುಕೊಳ್ಳಲಿದೆ. ಸಿನಿಮಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಆದಾಯದಲ್ಲಿ ಸ್ಥಿರತೆ ತಂದುಕೊಳ್ಳಲು ಅನುಕೂಲ ಆಗುವಂಥ ಪ್ರಾಜೆಕ್ಟ್ ದೊರೆಯುವ ಸಾಧ್ಯತೆ ಹೆಚ್ಚಿದೆ. ನಿಮಗೆ ಸಿಗುವ ಅವಕಾಶದ ಬಗ್ಗೆ ಇತರರ ಜೊತೆಗೆ ಚರ್ಚೆ ಮಾಡುವುದಕ್ಕೆ ಹೋಗಬೇಡಿ. ಕಾಲಿನ ಪಾದದ ಆರೋಗ್ಯದ ಬಗ್ಗೆ ಹೆಚ್ಚಿನ ಲಕ್ಷ್ಯವನ್ನು ನೀಡಬೇಕು. ಈಗಾಗಲೇ ಏನಾದರೂ ಸಣ್ಣ- ಪುಟ್ಟ ಗಾಯಗಳು ಏನಾದರೂ ಆಗಿದ್ದರೆ ಸೂಕ್ತ ವೈದ್ಯೋಪಚಾರ ಪಡೆಯಲು ಆದ್ಯತೆ ನೀಡಿ.
ಪಶು ಸಾಕಣೆ ಮಾಡುವಂಥವರು ಅದರ ವಿಸ್ತರಣೆಗೆ ಬೇಕಾದಂಥ ಪ್ರಯತ್ನಗಳನ್ನು ಶುರು ಮಾಡಲಿದ್ದೀರಿ. ನಿಮ್ಮಲ್ಲಿ ಕೆಲವರು ಚಿನ್ನ ಅಡ ಇಟ್ಟು ಹಣಕಾಸು ಅಗತ್ಯಗಳನ್ನು ಹೊಂದಾಣಿಕೆ ಮಾಡಲು ನಿರ್ಧಾರ ಮಾಡುವ ಸಾಧ್ಯತೆ ಇದೆ. ಸ್ವಲ್ಪ ಭೂಮಿಯನ್ನಾದರೂ ಭೋಗ್ಯಕ್ಕೋ ಅಥವಾ ಬಾಡಿಗೆಗೋ ಪಡೆದುಕೊಳ್ಳುವ ಬಗ್ಗೆ ಮಾತುಕತೆ ನಡೆಸಲಿದ್ದೀರಿ. ವಿದ್ಯಾರ್ಥಿಗಳಿಗೆ ಬಹಳ ಉತ್ತಮ ದಿನ ಇದಾಗಿರುತ್ತದೆ. ಆಟೋಟ ವಿಚಾರದಲ್ಲಿಯೋ ಅಥವಾ ಇತರ ಸಾಂಸ್ಕೃತಿಕ ಸ್ಪರ್ಧೆಯಲ್ಲಿಯೋ ಭಾಗೀ ಆಗಲು ಬೇಕಾದಂಥ ಸಕಲ ಅನುಕೂಲಗಳನ್ನು ನೀವು ಓದುತ್ತಿರುವ ಶಿಕ್ಷಣ ಸಂಸ್ಥೆಯಿಂದಲೇ ನೀಡಲಾಗುತ್ತದೆ. ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ರಜಾ ತೆಗೆದುಕೊಳ್ಳುವ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಕಿರಿಕಿರಿ ಆಗಬಹುದು. ಆದರೆ ಅದು ನಿವಾರಣೆ ಆಗಲಿದೆ. ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸುವುದು ಉತ್ತಮ ಎಂಬುದು ಗಮನದಲ್ಲಿ ಇರಲಿ.
ಯಾವ ವಿಚಾರವನ್ನು ನಿಮ್ಮ ಕುಟುಂಬ ಸದಸ್ಯರ ಗಮನಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದು ಶತಪ್ರಯತ್ನ ಮಾಡುತ್ತಾ ಬಂದಿದ್ದೀರೋ ಅದು ಈ ದಿನ ಎಲ್ಲರಿಗೂ ತಿಳಿದು ಹೋಗುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೆ ವಿತಂಡ ವಾದ ಮಾಡುತ್ತಲೋ ನಿಮ್ಮನ್ನು ಸಮರ್ಥನೆ ಮಾಡುತ್ತಲೋ ಕೂರಬೇಡಿ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ದೊಡ್ಡ ಸಂಬಳದ- ದೊಡ್ಡ ಹುದ್ದೆಯ ಕೆಲಸ ಹುಡುಕಿಕೊಂಡು ಬರಬಹುದು. ನಿಮ್ಮ ಇಷ್ಟು ಸಮಯದ ಶ್ರಮ ಹಾಗೂ ಕಾಂಟ್ಯಾಕ್ಟ್ ಗಳು ಸಹಾಯಕ್ಕೆ ಬರುವ ಸೂಚನೆ ದೊರೆಯಲಿದೆ. ಈ ಬೆಳವಣಿಗೆ ಬಗ್ಗೆ ಏನೂ ಗೊತ್ತಿಲ್ಲದವರಂತೆಯೇ ಇದ್ದು, ಪೂರ್ತಿ ಪ್ರಕ್ರಿಯೆ ಮುಗಿದ ನಂತರ ಈ ಬಗ್ಗೆ ಇತರರಿಗೆ ಹೇಳುವುದು ಉತ್ತಮ- ಕ್ಷೇಮ. ಸಾಹಿತ್ಯ ಕ್ಷೇತ್ರದಲ್ಲಿ ಇರುವವರಿಗೆ ಸನ್ಮಾನ- ಗೌರವಗಳು ದೊರೆಯುವಂಥ ಯೋಗ ಇದ್ದು, ನಗದು ಬಹುಮಾನ ಸಹ ದೊರೆಯುವ ಸಾಧ್ಯತೆ ಇದೆ. ಈ ಕುರಿತು ನಿಮಗೆ ಮಾಹಿತಿಯಾದರೂ ಸಿಗುತ್ತದೆ.
ಉದ್ಯೋಗಸ್ಥರು ಮೇಲಧಿಕಾರಿಗಳ ಜತೆ ಮಾತನಾಡುವಾಗ ಎಚ್ಚರಿಕೆಯನ್ನು ವಹಿಸಬೇಕು. ನಿಮ್ಮಲ್ಲಿ ಕೆಲವರು ಸಹೋದ್ಯೋಗಿಗಳ ಜತೆಗೆ ಭಿನ್ನಾಭಿಪ್ರಾಯ- ಮನಸ್ತಾಪ ಕಾಣಿಸಿಕೊಳ್ಳಬಹುದು. ಇದರಿಂದ ಒಟ್ಟಾರೆ ವಾತಾವರಣ ಹಾಳಾಗುವಂತೆ ಆಗಲಿದ್ದು, ಈ ಪರಿಸ್ಥಿತಿಗೆ ನೀವೇ ಕಾರಣ ಎಂಬ ಆರೋಪ ಎದುರಿಸುವಂತೆ ಆಗಲಿದೆ. ಬ್ರ್ಯಾಂಡೆಡ್ ವಸ್ತುಗಳಿಗೆ ಹೆಚ್ಚಿನ ಹಣವನ್ನು ಈ ದಿನ ಖರ್ಚು ಮಾಡಲಿದ್ದೀರಿ. ನಿಮ್ಮ ಸ್ನೇಹಿತರು ಅಥವಾ ಸ್ನೇಹಿತೆಯರ ಪೈಕಿ ಇಬ್ಬರ ಮಧ್ಯೆ ವಿರಸ- ಬೇಸರ ಇದ್ದಲ್ಲಿ ಅವರೇನಾದರೂ ನಿಮ್ಮನ್ನು ಮಧ್ಯಸ್ಥಿಕೆ ಮಾಡುವುದಕ್ಕೆ ಕರೆದಲ್ಲಿ ಸಾಧ್ಯವಾದಷ್ಟೂ ಹೋಗದಿರುವುದು ಕ್ಷೇಮ. ಮನೆಯಲ್ಲಿ ದೇವತಾ ಕಾರ್ಯಗಳ ಆಯೋಜನೆ ಮಾಡುವುದರಿಂದ ನಿಮಗೆ ಇರುವ ಹಲವು ಒತ್ತಡಗಳು ಕಡಿಮೆ ಆಗುವುದಕ್ಕೆ ಮಾರ್ಗೋಪಾಯಗಳು ಗೋಚರ ಆಗುತ್ತವೆ. ಈ ದಿನ ಸಾಧ್ಯವಾದಲ್ಲಿ ಹತ್ತು ನಿಮಿಷ ಧ್ಯಾನ ಮಾಡಿ.
ಇದನ್ನೂ ಓದಿ: ವಾರದ ಉದ್ಯೋಗ ಭವಿಷ್ಯ; ಯಾವ ರಾಶಿಗೆ ಶುಭ, ಯಾರಿಗೆ ಅಶುಭ?
ಯಾವ ಕೆಲಸವನ್ನು ನೀವು ಕ್ಲಿಷ್ಟ, ಕಠಿಣ ಅಂದುಕೊಂಡು ಹಿಂಜರಿಯುತ್ತಾ ಬಂದಿರುತ್ತೀರೋ ಅಂಥವುಗಳನ್ನು ಸಲೀಸಾಗಿ ಮಾಡಿ ಮುಗಿಸುವುದಕ್ಕೆ ಬೇಕಾದ ಕೆಲವು ಟೆಕ್ನಿಕ್ ಗಳನ್ನು ನಿಮಗಿಂತ ಹಿರಿಯರು, ಅನುಭವಸ್ಥರು ತಿಳಿಸಿಕೊಡಲಿದ್ದಾರೆ. ಮನೆಯ ಕಾರ್ಯಕ್ರಮವೊಂದನ್ನು ಸರಳವಾಗಿ ಮಾಡಿ ಮುಗಿಸುವ ಆಲೋಚನೆ ಇರುವವರು ಕೊನೆ ಕ್ಷಣದಲ್ಲಿ ಮನಸ್ಸು ಬದಲಾಯಿಸಿ, ಹೆಚ್ಚಿನ ಜನರನ್ನು ಆಹ್ವಾನಿಸಿ, ಮಾಡುವ ಬಗ್ಗೆ ತೀರ್ಮಾನ ಮಾಡಲಿದ್ದೀರಿ. ಉದ್ಯೋಗದಿಂದ ದೀರ್ಘ ಕಾಲದ ಬಿಡುವಿನಲ್ಲಿ ಇರುವವರಿಗೆ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಸ್ನೇಹಿತರ ಮೂಲಕ ನಿಮಗೆ ಬರುವಂಥ ರೆಫರೆನ್ಸ್ ಗಳನ್ನು ಗಂಭೀರವಾಗಿ ತೆಗೆದುಕೊಳ್ಳಿ. ಬಾಯಿ ರುಚಿಯ ಬೆನ್ನ ಹಿಂದೆ ಬೀಳಬೇಡಿ. ಒಂದು ವೇಳೆ ಈಗಾಗಲೇ ವೈದ್ಯರು ಆಹಾರ ಪಥ್ಯ ಸೂಚಿಸಿದ್ದಲ್ಲಿ ಅದನ್ನು ಕಡ್ಡಾಯವಾಗಿ ಪಾಲನೆ ಮಾಡುವ ಕಡೆಗೆ ಗಮನ ನೀಡಿ.
ದೊಡ್ಡ ವ್ಯವಹಾರವನ್ನು ಆರಂಭ ಮಾಡುವ ಇರಾದೆ ಇರುವವರಿಗೆ ತಂದೆ ಅಥವಾ ತಂದೆ ಸಮಾನರಿಂದ ಹಣಕಾಸಿನ ಅನುಕೂಲ ದೊರೆಯುವ ಭರವಸೆ ಸಿಗಲಿದೆ. ಬ್ಯಾಂಕ್ ಅಥವಾ ಬ್ಯಾಂಕೇತರ ಸಂಸ್ಥೆಗಳಿಂದ ಸಾಲಕ್ಕಾಗಿ ಪ್ರಯತ್ನ ಮಾಡುತ್ತಾ ಇರುವವರಿಗೆ ಮಂಜೂರು ಆಗುವ ಬಗ್ಗೆ ಮಾಹಿತಿ ದೊರೆಯಲಿದೆ. ಬಹಳ ಸಮಯದಿಂದ ನಿಮ್ಮನ್ನು ಕಾಡುತ್ತಿದ್ದ ಚಿಂತೆಯಿಂದ ಹೊರ ಬರುವುದಕ್ಕೆ ಅನುಕೂಲಗಳು ಒದಗಿ ಬರಲಿವೆ. ವೃತ್ತಿನಿರತರಾಗಿದ್ದು ಇತರರ ಕೈ ಕೆಳಗೆ ಕಾರ್ಯ ನಿರ್ವಹಿಸುತ್ತಾ ಇದ್ದೀರಿ ಅಂತಾದಲ್ಲಿ ಸ್ವಂತ ಕಚೇರಿಯನ್ನು ಆರಂಭಿಸುವ ಬಗ್ಗೆ ನಿಮ್ಮಲ್ಲಿ ಕೆಲವರು ನಿರ್ಧಾರ ಮಾಡಲಿದ್ದೀರಿ. ಮಾಧ್ಯಮಗಳಲ್ಲಿ ಅಂಕಣಕಾರರಾಗಿ ಇರುವಂಥವರಿಗೆ ಪುಸ್ತಕ ಹೊರತರುವ, ಆಡಿಯೋ ಬುಕ್ ಮಾಡುವ ಆಲೋಚನೆ ಮೂಡಬಹುದು. ಅಧ್ಯಯನಕ್ಕಾಗಿಯೇ ನಿಮ್ಮಲ್ಲಿ ಕೆಲವರು ಪ್ರವಾಸಕ್ಕೆ ತೆರಳುವಂಥ ಯೋಗ ಒದಗಿ ಬರಲಿದೆ.
ಸಣ್ಣ- ಪುಟ್ಟ ಸಂಗತಿಗಳಿಗೂ ವಿಪರೀತ ರಿಯಾಕ್ಟ್ ಮಾಡಲಿದ್ದೀರಿ. ನಿಮ್ಮಿಂದ ಇತರರು ಅನುಕೂಲ ಪಡೆಯುವವರೇ ವಿನಾ ನಿಮಗೆ ನೆರವು ನೀಡುವವರು ಯಾರೂ ಇಲ್ಲ ಎಂದು ನಿಮ್ಮ ಮನಸ್ಸಿಗೆ ಗಟ್ಟಿಯಾಗಿ ನಾಟಲಿದೆ. ನೆನಪಿಡಿ, ಕುಟುಂಬ ಸದಸ್ಯರ ಮೇಲೆ ಸಿಟ್ಟು- ಕೋಪ ಮಾಡಿಕೊಳ್ಳಬೇಡಿ. ಈ ದಿನ ನಿಮ್ಮಿಂದ ಸಾಧ್ಯವಾದಷ್ಟೂ ಮೌನದಿಂದ ಇರುವುದಕ್ಕೆ ಪ್ರಯತ್ನಿಸಿ. ಧಾನ್ಯ ವರ್ತಕರಿಗೆ ಬರಬೇಕಾದ ಆದಾಯ ಇನ್ನೂ ತಡ ಆಗಲಿದೆ ಎಂಬ ಬಗ್ಗೆ ತಿಳಿದುಬರಲಿದೆ. ಆದರೆ ಹಣವನ್ನು ಹೊಂದಿಸಲೇ ಬೇಕಾದ ಅನಿವಾರ್ಯ ಸ್ಥಿತಿ ನಿಮ್ಮಲ್ಲಿ ಕೆಲವರಿಗೆ ಇರಲಿದ್ದು, ಅದಕ್ಕೆ ತಾತ್ಕಾಲಿಕವಾಗಿ ಸಾಲ ಮಾಡಬೇಕಾದ ಅನಿವಾರ್ಯ ಸೃಷ್ಟಿ ಆಗಲಿದೆ. ದೇವತಾ ಆರಾಧನೆಯನ್ನು ಪಾಲ್ಗೊಳ್ಳುವುದರಿಂದ ಮನಸ್ಸಿನಲ್ಲಿ ಒಂದು ಬಗೆಯ ಸಮಾಧಾನ ದೊರೆಯುವ ಯೋಗ ಇದ್ದು, ನಿಮಗೆ ಇತರರು ಪೂಜೆ- ಪುನಸ್ಕಾರಕ್ಕೆ ಆಹ್ವಾನ ನೀಡಿದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಿ.
ಲೇಖನ- ಎನ್.ಕೆ.ಸ್ವಾತಿ