Weekly Career Horoscope 2025: ವಾರದ ಉದ್ಯೋಗ ಭವಿಷ್ಯ; ಯಾವ ರಾಶಿಗೆ ಶುಭ, ಯಾರಿಗೆ ಅಶುಭ?
16-11-2025ರಿಂದ 22-11-2025ರವರಗೆ ನವೆಂಬರ್ ಮೂರನೇ ವಾರವಾಗಿದ್ದು ಉದ್ಯೋಗದ ಯಶಸ್ಸು ನಿಮ್ಮ ಕೈಯಲ್ಲಿ ಮಾತ್ರವಲ್ಲ, ದೈವದ ಕೈಯಲ್ಲೂ ಇರಲಿದೆ. ಹಾಗಾಗಿ ನಿಮ್ಮ ಪ್ರಯತ್ನದ ಜೊತೆ ದೈವಬಲವೂ ಇದ್ದಾಗ ಕಾರ್ಯ ಸುಲಭ. ಗ್ರಹಗಳೂ ಅದಕ್ಕೆ ಪೂರಕವಾಗಿ ಇರುವುದರಿಂದ ಸಣ್ಣ ವಿಘ್ನಗಳನ್ನು ಮನಸ್ಸಿಗೆ ತಂದುಕೊಳ್ಳದೇ ದೊಡ್ಡ ಗುರಿಯಲ್ಲಿ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿ, ಸಾಧಿಸಿ. ಸಕಲರಿಗೂ ಶುಭವಾಗಲಿ.

ಮೇಷ ರಾಶಿ :
ಈ ವಾರ ನಿಮ್ಮ ಕೆಲಸದ ಮೇಲಿನ ದೃಢತೆಯಿಂದ ಯಶಸ್ಸು ತರುತ್ತದೆ. ಅಧಿಕಾರಿಗಳಿಂದ ಮೆಚ್ಚುಗೆ ದೊರೆತರೂ ಸಹ ಹಿಗ್ಗನ್ನು ತೋರಿಸಬಾರದು. ಹೊಸ ಯೋಜನೆಯನೆಯೊಂದನ್ನು ನಿಮಗೆ ಹಸ್ತಾಂತರವಾಗುವ ಸಾಧ್ಯತೆ ಇದೆ. ಇದರಿಂದ ಹಣಕಾಸಿನ ಸುಧಾರಣೆಯೂ ಸಾಧ್ಯ. ಸೋಮವಾರ ಶಿವಮಿಗೆ ತಾಮ್ರಪಾತ್ರೆಯಲ್ಲಿ ಅಭಿಷೇಕ ಮಾಡಿ.
ವೃಷಭ ರಾಶಿ :
ರಾಶಿ ಚಕ್ರದ ಎರಡನೇ ರಾಶಿಗೆ ರಾಶಿಯ ಅಧಿಪತಿ ಶುಕ್ರನ ಅನುಗ್ರಹದಿಂದ ಉದ್ಯೋಗ ಕ್ಷೇತ್ರದಲ್ಲಿ ಲಾಭ ಮತ್ತು ಸಹೋದ್ಯೋಗಿಗಳ ಸಹಕಾರ ದೊರೆಯುತ್ತದೆ. ಹೊಸ ವ್ಯವಹಾರ ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಮಾಡುವಿರಿ. ಮೇಲಧಿಕಾರಿಗಳಿಂದ ಪ್ರೋತ್ಸಾಹ ಬರಲಿದ್ದು ಅಹಂಕಾರ ಜೊತೆಗೆ ಬರಲಿದೆ. ಶುಕ್ರವಾರ ದೇವಿಗೆ ಸಂಜೆ ಪೂಜೆ ಮಾಡುವುದು ಶುಭ.
ಮಿಥುನ ರಾಶಿ :
ಮೂರನೇ ವಾರ ಈ ರಾಶಿಯಬರಿಗೆ ಗುರುವಿನ ಕೃಪೆಯಿಂದ ಬುದ್ಧಿಶಕ್ತಿ ಹೆಚ್ಚುತ್ತದೆ. ಶಿಕ್ಷಣ, ಸಂಶೋಧನೆ, ಭಾಷಣ, ತರಬೇತಿ ಕ್ಷೇತ್ರದಲ್ಲಿ ಸತ್ಫಲ ಸಿಗಲಿದೆ. ಹೊಸ ಕಲಿಕೆಯವರಿಗೆ, ಆರಂಭದ ಕಲಿಕೆ ಉತ್ತಮ ರೀತಿಯಲ್ಲಿ ಲಭ್ಯವಾಗಲಿದೆ. ಪ್ರಯತ್ನಿಸಿದ ಕೆಲಸಗಳಲ್ಲಿ ಗೌರವ ದೊರೆಯುತ್ತದೆ. ಗುರುವಾರ ಹೆಸರುಕಾಳಿನ ಸಿಹಿ ಮಾಡಿ ಅತಿಥಿಗಳನ್ನು ಸತ್ಕಾರಿಸಿ.
ಕರ್ಕಾಟಕ ರಾಶಿ :
ರಾಶಿಯ ಅಧಿಪತಿ ಚಂದ್ರನ ಅನುಗ್ರಹದಿಂದ ಈ ವಾರ ನಿಮಗೆ ಮನಸ್ಸಿನಲ್ಲಿ ಶಾಂತಿ ಹಾಗೂ ಹಳೆಯ ಒತ್ತಡಗಳು ಕಡಿಮೆಯಾಗುತ್ತವೆ. ಹೊಸ ಸ್ಥಾನಮಾನದ ಜೊತೆ ಬಡ್ತಿಯೂ ಸಾಧ್ಯತೆ. ಸಹೋದ್ಯೋಗಿಗಳನ್ನು ವಿಶ್ವಾಸ ಪಡೆಯಬೇಕಾಗುವುದು. ಸೋಮವಾರ ರಾತ್ರಿ ಆಹಾರವನ್ನು ಆದಷ್ಟು ಕಡಿಮೆ ಸೇವಿಸಿ.
ಸಿಂಹ ರಾಶಿ:
ಈ ವಾರ ಸೂರ್ಯನ ಪ್ರಭಾವ ಇಲ್ಲದ ಕಾರಣ ಹೊಸ ಸ್ಥಾನಮಾನ ಅಥವಾ ಗೌರವ ದೊರೆಯ ಸಾಧ್ಯತೆ ಇದ್ದರೂ ಆಗದು. ಏನಾದರೂ ಅಡೆತಡೆಗಳು ನಿಮ್ಮ ಕಡೆಯಿಂದಲೂ ಸಂಸ್ಥೆಯ ಕಡೆಯಿಂದಲೂ ಬರಲಿದೆ. ನಾಯಕತ್ವದ ಅವಕಾಶಗಳನ್ನು ಪೂರ್ಣವಾಗಿ ಒಪ್ಪಿಕೊಳ್ಳಲಾರಿರಿ. ಆಡಳಿತ ವಲಯದಲ್ಲಿ ಕಾರ್ಯ ನಿರ್ವಹಿಸುವವರಿಗೆ ವಿಶೇಷ ಯಶಸ್ಸು. ರವಿವಾರ ಸೂರ್ಯನಿಗೆ ನಮಸ್ಕಾರ ಮಾಡಿ. ಆರೋಗ್ಯ ಸುರಕ್ಷಿತವಾಗಿ ಇರುವುದು.
ಕನ್ಯಾ ರಾಶಿ:
ರಾಶಿ ಚಕ್ರದ ಆರನೇ ರಾಶಿಯವರಿಗೆ ಬುಧನ ಪ್ರಭಾವದಿಂದ ಯೋಜನೆಗಳಲ್ಲಿ ನಿಖರತೆಯನ್ನು ತಂದುಕೊಳ್ಳುವಿರಿ. ಅಂಕಿ, ಅಂಶಕ್ಕೆ ಸಂಬಂಧಿತ ಕೆಲಸ ಯಶಸ್ವಿ ಮಾಡುವಿರಿ. ವಿವೇಕದಿಂದ ನಿರ್ಧಾರ ತೆಗೆದುಕೊಳ್ಳಿ. ಅಲ್ಪ ಮಾತು, ಅಧಿಕ ಕೃತ್ಯ, ಇದೇ ನಿಮ್ಮ ಯಶಸ್ಸಿನ ಗುಟ್ಟು. ಬುಧವಾರ ಹಸಿರು ಬಣ್ಣದ ವಸ್ತ್ರ ಧರಿಸಿದರೆ ಶುಭ.
ತುಲಾ ರಾಶಿ:
ಇದು ಏಳನೇ ರಾಶಿಯಾಗಿದ್ದು ಶುಕ್ರನ ಅನುಗ್ರಹದಿಂದ ಕೆಲಸದ ವಾತಾವರಣ ಸೌಮ್ಯವಾಗಿರುವುದು. ಸಹೋದ್ಯೋಗಿಗಳ ಸಹಕಾರವನ್ನು ಅಪೇಕ್ಷಿಸಲಾರಿರಿ. ಈ ವಾರ ಹೊಸ ಒಪ್ಪಂದಕ್ಕೆ ಸಹಿ ಹಾಕಲು ಶುಭ ಕಾಲ. ನಿಮ್ಮ ವ್ಯಾವಹಾರಿಕ ಗುಟ್ಟನ್ನು ಎಲ್ಲಿಯೂ ಪ್ರಕಟಪಡಿಸಲಾರಿರಿ. ಆರ್ಥಿಕ ಮೂಲವನ್ನು ನಿಮ್ಮದೆಂದು ಒಪ್ಪಿಕೊಳ್ಳಲಾರಿರಿ. ಮಹಾಗೌರಿಯನ್ನು ಸಂಧ್ಯಾಕಾಲದಲ್ಲಿ ಪ್ರಾರ್ಥಿಸಿ.
ವೃಶ್ಚಿಕ ರಾಶಿ:
ನವೆಂಬರ್ ತಿಂಗಳ ಮೂರನೇ ವಾರ ಈ ರಾಶಿಯವರಿಗೆ ಸೂರ್ಯನು ಇದೇ ರಾಶಿಯಲ್ಲಿ ಸಂಚಾರ ಮಾಡುವುದದಮರಿಂದ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಅಧಿಕಾರ ಅಥವಾ ಅಧಿಕರಿಗಳ ಜೊತೆ ಓಡಾಡುವ, ಅವರ ಸಂಪರ್ಕ ಇಟ್ಟುಕೊಳ್ಳುವ ಸನ್ನಿವೇಶ ಬರಲಿದೆ. ವೈಯಕ್ತಿಕ ಪ್ರಯತ್ನಗಳಿಂದಲೇ ಯಶಸ್ಸು. ಉದ್ಯೋಗ ಬದಲಾವಣೆ ಯೋಚನೆಗಳು ಫಲಪ್ರದವಾಗಬಹುದು. ಭಾನುವಾರ ಅಲ್ಪ ಗೋಧಿಯನ್ನು ಗೋವಿಗೆ ನೀಡಿ.
ಧನು ರಾಶಿ:
ಹತ್ತನೇ ರಾಶಿಯವರಿಗೆ ಈ ವಾರ ರಾಶಿಯ ಅಧಿಪತಿಯಾದ ಬೃಹಸ್ಪತಿಯ ಅನುಗ್ರಹದಿಂದ ಶಿಕ್ಷಣ, ಸಂಶೋಧನೆ, ಧಾರ್ಮಿಕ ಕಾರ್ಯಗಳಲ್ಲಿ ಪ್ರಗತಿ. ಪ್ರಾಯೋಗಿ ಕೆಲಸಕ್ಕೆ ಹೆಚ್ಚು ತೊಡಗಿಕೊಳ್ಳುವಿರಿ. ಹಿರಿಯರಿಂದ ಮಾರ್ಗದರ್ಶನವೂ ಸಕಾಲಕ್ಕೆ ದೊರೆಯುತ್ತದೆ. ಹಳದಿ ವಸ್ತ್ರ ಅಥವಾ ಹಳದಿ ಇರುವ ವಸ್ತ್ರ ಧರಿಸಿ.
ಇದನ್ನೂ ಓದಿ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 9ರಿಂದ 15ರ ತನಕ ವಾರಭವಿಷ್ಯ
ಮಕರ ರಾಶಿ:
ಮೂರನೆಯ ವಾರ ಶನಿಯ ಕೃಪೆಯಿಂದ ಶ್ರಮಪಟ್ಟು ಮಾಡಿದ ಕಾರ್ಯಕ್ಕೆ ಫಲ ಸಿಗುತ್ತದೆ. ಹಾಗೆಯೇ ಹಿಂದಿನ ಪ್ರಯತ್ನಗಳೂ ಕೆಲವು ಈ ವಾರ ಫಲಿಸುವುದು. ಆದಾಯ ನಿಧಾನವಾಗಿ ಹೆಚ್ಚಾಗುತ್ತದೆ. ಹಿರಿಯರ ಸಲಹೆ ಅನುಸರಿಸಿ. ನಿಮಗೆ ಶನಿವಾರ ಶುಭವಾಗಿದ್ದು, ಎಳ್ಳಿನ ದೀಪವನ್ನು ಆಂಜನೇಯನ ಸನ್ನಿಧಿಯಲ್ಲಿ ಹೊತ್ತಿಸಿ.
ಕುಂಭ ರಾಶಿ:
ರಾಶಿಯ ಅಧಿಪತಿ ದ್ವಿತೀಯದಲ್ಲಿ ಇದ್ದು ಮನಸ್ಸಿಗೆ ದ್ವಂದ್ವವನ್ನು ತಂದುಕೊಡುವನು. ಆದರೆ ಕೊನೆಯಲ್ಲಿ ತಿಳಿದೋ ತಿಳಿಯದೆಯೋ ಸಕಾರಾತ್ಮಕ, ಲಾಭದಾಯಕ ಅಂಶಕ್ಕೆ ನಿಮ್ಮ ತೀರ್ಮಾನ ಇರಲಿದೆ. ಕೆಲಸದಲ್ಲಿ ನಿಷ್ಠೆ ಹಾಗೂ ಕ್ರಮ ಎರಡೂ ಮುಖ್ಯ. ಹೆಚ್ಚು ಹೊಣೆಗಾರಿಕೆ ಇರುವುದರಿಂದ ಗೌರವವೂ ಅಷ್ಟೇ ಹೆಚ್ಚಾಗುತ್ತದೆ. ಪ್ರತಿ ದಿನ ಹನುಮಾನ್ ಚಾಲೀಸ್ ಪಠಿಸಿರಿ.
ಮೀನ ರಾಶಿ:
ರಾಶಿ ಚಕ್ರದ ಕೊನೆಯ ರಾಶಿಯಾಗಿದ್ದು ಗುರುವಿನ ದೃಷ್ಟಿಯಿಂದ ಕೆಲಸದಲ್ಲಿ ಅನುಭವಿಗಳ ಮಾರ್ಗದರ್ಶನ ದೊರೆಯುತ್ತದೆ. ಹೊಸ ಮಾರ್ಗ, ಹೊಸ ಯೋಚನೆಯಿಂದ ನಿಮಗೆ ಯಶಸ್ಸು. ಧೈರ್ಯ ಹಾಗೂ ಧರ್ಮದ ಬಲದಿಂದ ಎಲ್ಲ ತೊಂದರೆಗಳನ್ನೂ ಎದುರಿಸಬಹುದು. ಗುರುವಾರ ಶುಭವಾಗಿದ್ದು ಹೆಸರು ಕಾಳನ್ನು ಸೇವಿಸಿ.
– ಲೋಹಿತ ಹೆಬ್ಬಾರ್ – 8762924271 (what’s app only)




