AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 13ರ ಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಈ ಲೇಖನದಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಕೂಡ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ನವೆಂಬರ್ 13ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಂಡು, ನಿಮ್ಮ ದಿನವನ್ನು ಪ್ರಾರಂಭಿಸಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 13ರ ಭವಿಷ್ಯ
ಸಂಖ್ಯಾಶಾಸ್ತ್ರ
ಸ್ವಾತಿ ಎನ್​ಕೆ
| Updated By: ಅಕ್ಷತಾ ವರ್ಕಾಡಿ|

Updated on: Nov 13, 2025 | 12:57 AM

Share

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನಿಮ್ಮ ಒಬ್ಬರಿಂದ ಏನಾದೀತು ಎಂದುಕೊಂಡು ಇಷ್ಟು ಸಮಯ ಸುಮ್ಮನಿದ್ದು, ಸಹಿಸಿಕೊಂಡು ಬಂದಂಥ ಕೆಲವು ವಿಷಯಗಳ ಬಗ್ಗೆ ಸಂಬಂಧಪಟ್ಟ ವ್ಯಕ್ತಿಗಳು ಅಥವಾ ಅಧಿಕಾರ ಸ್ಥಾನದಲ್ಲಿ ಇರುವಂಥವರಿಗೆ ದೂರು ನೀಡುವ ಬಗ್ಗೆ ತೀರ್ಮಾನ ಮಾಡುತ್ತೀರಿ. ಕೈ ಅಳತೆಯಲ್ಲಿ ಇರುವಂಥ ಬಜೆಟ್ ಬಳಸಿಕೊಂಡು ನೀವು ಕೈಗೊಂಡ ಕಾರ್ಯಗಳ ಬಗ್ಗೆ ಉದ್ಯೋಗ ಸ್ಥಳದಲ್ಲಿ ಮೆಚ್ಚುಗೆ ಹಾಗೂ ಪ್ರೋತ್ಸಾಹ ದೊರೆಯಲಿದೆ. ಲೇಖಕರು, ಪುಸ್ತಕ ಮುದ್ರಕರು, ಸ್ಟೇಷನರಿ ಮಳಿಗೆಗಳನ್ನು ನಡೆಸುತ್ತಾ ಇರುವವರಿಗೆ ಆದಾಯದಲ್ಲಿ ಏರಿಕೆ ಕಾಣುವಂಥ ಯೋಗ ಇದ್ದು, ದೊಡ್ಡ ಮಟ್ಟದ ಆರ್ಡರ್ ದೊರೆಯುವ ಬಗ್ಗೆ ಸುಳಿವು ದೊರೆಯುಲಿದೆ. ಸಣ್ಣ- ಪುಟ್ಟ ಮನಸ್ತಾಪ ಆಗಿ ಮಾತು ಬಿಟ್ಟಿದ್ದವರು ಅಥವಾ ಕೆಲ ಕಾಲದಿಂದ ದೂರ ಇದ್ದಂಥ ಹಳೆ ಗೆಳೆಯ- ಗೆಳತಿಯರ ಜೊತೆಗೆ ಮುಕ್ತ ಮಾತುಕತೆ ಮೂಲಕ ಪರಿಸ್ಥಿತಿ ತಿಳಿಗೊಳಿಸುವ ವೇದಿಕೆ ದೊರೆಯಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ತಂದೆಯ ಅಥವಾ ತಂದೆ ಸಮಾನರ ಜೊತೆಗೆ ಕೆಲವು ವಿಚಾರ/ವಿಷಯಗಳಿಗೆ ಅಭಿಪ್ರಾಯ ಭೇದ ಕಾಣಿಸಿಕೊಳ್ಳಲಿದೆ. ನಿಮ್ಮ ಉತ್ಸಾಹ ಎಷ್ಟೇ ಇರಲಿ, ಕಾರಣಗಳನ್ನು ಸರಿಯಾಗಿ ತಿಳಿಸಿ, ಹೇಳುವುದಕ್ಕೆ ಪ್ರಯತ್ನಿಸಿ. ಉದ್ಯೋಗ ಸ್ಥಳದಲ್ಲಿ ಬಡ್ತಿಯ ನಿರೀಕ್ಷೆಯಲ್ಲಿ ಇರುವವರಿಗೆ ಅದೇ ಕಾರಣವನ್ನು ಮುಂದಿಟ್ಟುಕೊಂಡು ತುಂಬ ಕಠಿಣವಾದ ಹಾಗೂ ಸವಾಲು ಎನಿಸುವ ಕೆಲ ಜವಾಬ್ದಾರಿ ವಹಿಸುವ ಸಾಧ್ಯತೆ ಇದೆ. ಇದರಿಂದ ಸ್ವಲ್ಪ ಮಟ್ಟಿಗೆ ಹಿನ್ನಡೆ ಸಹ ಆಗಬಹುದು. ದೇಹದ ತೂಕ ನಿರ್ವಹಣೆ ಬಗ್ಗೆ ನಿಮ್ಮ ವೈದ್ಯರು ನೀಡುವ ಸೂಚನೆಗಳನ್ನು ಸರಿಯಾಗಿ ಪಾಲಿಸುವ ಕಡೆಗೆ ಹೆಚ್ಚಿನ ಗಮನವನ್ನು ನೀಡಿ. ಮಾಂಸಾಹಾರ ಸೇವನೆ ಮಾಡುವಂಥವರು ಇನ್ನೂ ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ಫಿಸಿಯೋ ಥೆರಪಿ ಮಾಡಿಸುತ್ತಿದ್ದಿರಿ, ಆದರೆ ನಾನಾ ಕಾರಣಗಳಿಗೆ ಮುಂದುವರಿಸುವುದು ಕಷ್ಟ ಆಯಿತು ಎಂದು ಅದನ್ನು ಕೈ ಬಿಟ್ಟಿದ್ದಲ್ಲಿ ಫಾಲೋ ಅಪ್ ಕಡೆಗೆ ಗಮನ ನೀಡಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಾ ಇರುವವರಿಗೆ ಈ ಹಿಂದೆ ನೀವು ತೆಗೆದುಕೊಂಡ ನಿರ್ಧಾರವು ಅದೆಷ್ಟು ಸಹಾಯ ಆಯಿತು ಎಂದು ತುಂಬ ಸಲ ಅನಿಸುವಂಥ ದಿನ ಇದಾಗಿರುತ್ತದೆ. ಪ್ರಭಾವಿಯೊಬ್ಬರು ನಿಮ್ಮ ಮೇಲೆ ಒತ್ತಡ ತಂದು, ಆಗಲೇಬೇಕು ಎಂದು ಕೆಲಸ ಮಾಡಿಕೊಡುವಂತೆ ಪಟ್ಟು ಹಾಕಿದ ನಂತರವು ಇಲ್ಲ ಎಂಬ ಉತ್ತರ ನೀಡುವ ಮೂಲಕ ಕೆಲವು ಸಮಸ್ಯೆಗಳನ್ನು ಆರಂಭದಲ್ಲಿಯೇ ತಡೆಯುತ್ತೀರಿ. ಕೃಷಿ ಜಮೀನಲ್ಲಿ ಹೆಚ್ಚು ಹಣ ಹೂಡಿಕೆ ಮಾಡಿ, ಆದಂಥ ಕೆಲಸಗಳ ಫಲವನ್ನು ಪಡೆದಿರುವುದಕ್ಕೆ ಹೆಮ್ಮೆ ಮೂಡಲಿದೆ. ಅಷ್ಟು ದೊಡ್ಡ ಮೊತ್ತ ಹಾಕಿದ ನಂತರ ರಿಟರ್ನ್ಸ್ ಬರಬಹುದಾ ಎಂಬ ಬಗ್ಗೆ ನಿಮಗಿದ್ದ ಆತಂಕ ದೂರವಾಗಲಿದೆ. ತರಕಾರಿ ಬೆಳೆಯುವ ರೈತರಿಗೆ ಆದಾಯ ಹೆಚ್ಚಳ ಆಗುವಂತೆ ದೊಡ್ಡ ದೊಡ್ಡ ಆರ್ಡರ್ ಹುಡುಕಿಕೊಂಡು ಬರುವ ಯೋಗ ಈ ದಿನ ಇದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ನೀವು ಕನಸಿನಲ್ಲಿಯೂ ಅಂದುಕೊಳ್ಳದ ಕೆಲವು ಅವಕಾಶಗಳು ಹುಡುಕಿಕೊಂಡು ಬರಲಿವೆ. ನಿಮ್ಮಲ್ಲಿ ವಿವಾಹ ವಯಸ್ಕರಿದ್ದು, ಮದುವೆ ಆಗುವ ಇಂಗಿತ ಹೇಳಿಕೊಂಡು ಪ್ರಸ್ತಾವ ಇಟ್ಟಿದ್ದಂಥ ವ್ಯಕ್ತಿಯೊಬ್ಬರು ಅದಕ್ಕೆ ಒಪ್ಪಿಗೆ ಸೂಚಿಸುವ ಅವಕಾಶ ಈ ದಿನ ಇದೆ. ಮನೆ ನವೀಕರಣ ಮಾಡಿಸಬೇಕು ಎಂದು ಬಹುಕಾಲದಿಂದ ಅಂದುಕೊಳ್ಳುತ್ತಾ ಇರುವವರಿಗೆ ಹಣದ ಹೊಂದಾಣಿಕೆ ಆಗುವ ಸೂಚನೆ ದೊರೆಯಲಿದೆ. ಕ್ರೀಡಾಪಟುಗಳಿಗೆ ಉತ್ತಮವಾದ ದಿನ ಇದಾಗಲಿದ್ದು, ಪ್ರಾಯೋಜಕರಿಗಾಗಿ ಹುಡುಕಾಟ ನಡೆಸುತ್ತಾ ಇದ್ದಲ್ಲಿ ಸಿಗುವ ಸಾಧ್ಯತೆಗಳು ಹೆಚ್ಚಿವೆ. ಶಿಕ್ಷಣ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಬಡ್ತಿ, ವೇತನ ಹೆಚ್ಚಳದ ಸಾಧ್ಯತೆಯೂ ಇದ್ದು, ನಿಮ್ಮ ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಪಟ್ಟಂಥ ಪರಿಶ್ರಮ ಫಲ ನೀಡುವುದಕ್ಕೆ ಆರಂಭ ಆಗಲಿದೆ. ಬಟ್ಟೆ- ಬರೆ, ವಾಚ್, ಬ್ರ್ಯಾಂಡೆಡ್ ಪರ್ ಫ್ಯೂಮ್ ಇಂಥವುಗಳ ಖರೀದಿಗೆ ಹೆಚ್ಚಿನ ಖರ್ಚನ್ನು ಈ ದಿನ ಮಾಡುತ್ತೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಸಾಮಾಜಿಕ ಸ್ಥಾನಮಾನದಲ್ಲಿ ಬದಲಾವಣೆ ಆಗುವಂಥ ಅಥವಾ ಮಾಡಿಕೊಳ್ಳಲೇ ಬೇಕು ಅಂತ ನೀವೇ ನಿರ್ಧಾರ ಮಾಡುವ ಸಮಯ ಇದು ಎಂದು ಬಲವಾಗಿ ಈ ದಿನ ಅನಿಸಲಿದೆ. ಈ ಕಡೆಗೆ ಕೆಲವು ಪ್ರಯತ್ನ ಸಹ ಆರಂಭ ಮಾಡುತ್ತೀರಿ. ನಿಮ್ಮಲ್ಲಿ ಕೆಲವರು ಸಾಲ ಮಾಡಿಯಾದರೂ ಮನೆಗೆ ಕೆಲವು ವಸ್ತುಗಳನ್ನು ಖರೀದಿ ಮಾಡುವ ಯೋಗ ಇದೆ. ಕ್ರೆಡಿಟ್ ಕಾರ್ಡ್ ಬಳಸಿಯೋ ಅಥವಾ ಪರ್ಸನಲ್ ಲೋನ್ ತೆಗೆದುಕೊಂಡೋ ಗೃಹಾಲಂಕಾರಿಕ ವಸ್ತುಗಳನ್ನು ಕೊಳ್ಳುವ ಸಾಧ್ಯತೆ ಇದೆ. ಇನ್ನು ನಿಮ್ಮ ಬಳಿ ಗುಟ್ಟಾಗಿದ್ದ ವಿಷಯವೊಂದನ್ನು ಸ್ನೇಹಿತರಿಗೆ ಹೇಳಿ, ಅವರಿಂದ ನಿಮಗೆ ಕೆಲವು ಸಮಸ್ಯೆ ಎದುರಾಗಬಹುದು. ಕಮಿಷನ್ ಆಧಾರದಲ್ಲಿ ಆದಾಯ ಪಡೆಯುವಂಥವರಿಗೆ ತಮ್ಮ ವ್ಯವಹಾರದ ವಿಧಾನ ಬದಲಾಯಿಸಬೇಕು ಎಂದೆನಿಸುವುದಕ್ಕೆ ಆರಂಭ ಆಗಲಿದೆ. ವಿದ್ಯಾರ್ಥಿಗಳಿಗೆ ಜನಪ್ರಿಯತೆ ಸಿಗುವ ಯೋಗವಿದ್ದು, ಪಠ್ಯೇತರ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡುತ್ತೀರಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಕುಟುಂಬ ಸದಸ್ಯರ ಮನೆಯಲ್ಲಿ ನಡೆಯುವ ಸಮಾರಂಭಗಳಿಗೆ ಹಣಕಾಸಿನ ಹೊಂದಾಣಿಕೆ ಮಾಡಲೇ ಬೇಕಾದ ಸನ್ನಿವೇಶ ಸೃಷ್ಟಿ ಆಗಲಿದೆ. ಸಂಘ- ಸಂಸ್ಥೆಗಳ ಚುನಾವಣೆಗೆ ಸಿದ್ಧತೆ ಮಾಡುತ್ತಾ ಇರುವವರು ಕೊನೆ ಕ್ಷಣದಲ್ಲಿ ಸ್ಪರ್ಧೆಯಿಂದ ಹಿಂದೆ ಸರಿಯುವ ಬಗ್ಗೆ ಗೊಂದಲ ಏರ್ಪಡಬಹುದು. ನಿಮ್ಮ ಜತೆಗೆ ಸುಮಧುರವಾದ ಸಂಬಂಧ ಹೊಂದಿದವರು ತಮ್ಮ ನಿಲವು ಬದಲಿಸಿದ ಬಗ್ಗೆ ಸಿಟ್ಟು, ಆಕ್ರೋಶ ಮೂಡಲಿದ್ದು, ಮಾನಸಿಕವಾಗಿ ಕುಗ್ಗುವಂತೆ ಆಗಲಿದೆ. ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಗೆಳೆಯ ಅಥವಾ ಗೆಳತಿಯ ವರ್ತನೆ ಬೇಸರಕ್ಕೆ ಕಾರಣ ಆಗಲಿದೆ. ಬೇಕೆಂತಲೆ ಫೋನ್ ಸ್ವೀಕಾರ ಮಾಡುತ್ತಿಲ್ಲ. ಮೆಸೇಜ್ ಗೆ ರಿಪ್ಲೈ ಮಾಡುತ್ತಿಲ್ಲ ಎಂದೆಲ್ಲ ಅನಿಸುವುದಕ್ಕೆ ಶುರು ಆಗಲಿದೆ. ನಿಮ್ಮಲ್ಲಿ ಕೆಲವರು ಈ ದಿನ ಮಾಸ್ಟರ್ ಚೆಕ್ ಅಪ್ ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂದುಕೊಳ್ಳಲಿದ್ದೀರಿ. ಹಲ್ಲಿನ ನೋವು ಯಾರಿಗೆ ತೀವ್ರವಾಗಿದೆ ಅವರು ಸಹ ವೈದ್ಯರ ಭೇಟಿ ಮಾಡುವ ಯೋಗ ಇದೆ.

ಇದನ್ನೂ ಓದಿ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ನವೆಂಬರ್ 9ರಿಂದ 15ರ ತನಕ ವಾರಭವಿಷ್ಯ

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಮಕ್ಕಳ ಶಿಕ್ಷಣ, ನಡವಳಿಕೆ ಹಾಗೂ ಮನೆಯಲ್ಲಿ ಆಗುವಂಥ ಕೆಲವು ಬದಲಾವಣೆಗಳು ಚಿಂತೆಗೆ ಕಾರಣ ಆಗಲಿದೆ. ನೀವು ಬಹಳ ಇಷ್ಟ ಪಟ್ಟು ಖರೀದಿ ಮಾಡಿ ತಂದಿದ್ದ ವಸ್ತುವೊಂದು ಕಳೆದು ಹೋಗಿದೆ ಎಂಬ ಅಂಶ ಗಮನಕ್ಕೆ ಬರಲಿದ್ದು, ಇದರಿಂದ ಬಹಳ ಬೇಸರ ಆಗಲಿದೆ. ಹೂಡಿಕೆಗೆ ಸಂಬಂಧಿಸಿದಂತೆ ನೀವು ಬಹಳ ಗೌರವ ನೀಡುವ ವ್ಯಕ್ತಿಯೊಬ್ಬರು ತಾವಾಗಿಯೇ ಸಲಹೆ ನೀಡಲಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಿ. ಆಸಕ್ತಿ ವಹಿಸಿ, ನೀವು ಮಹತ್ವಾಕಾಂಕ್ಷೆ ಜೊತೆಗೆ ತೊಡಗಿಕೊಂಡಿದ್ದ ಪ್ರಾಜೆಕ್ಟ್ ಒಂದರಿಂದ ನಿಮ್ಮನ್ನೇ ಹೊರಗಿಡುವ ಸುಳಿವು ದೊರೆಯಲಿದೆ. ಹೊಟ್ಟೆಗೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆ ಆತಂಕಕ್ಕೆ ದೂಡಬಹುದು. ಆಹಾರ ಪಥ್ಯವನ್ನು ಕಡ್ಡಾಯವಾಗಿ ಪಾಲನೆ ಮಾಡಿ. ಕಾರ್ಯಕ್ರಮ- ಸಮಾರಂಭದಲ್ಲಿ ಭಾಗೀ ಆಗುವರಿದ್ದಲ್ಲಿ ಅಲ್ಲಿಯೂ ಆಹಾರ ಸೇವನೆ ವಿಚಾರದಲ್ಲಿ ಯಾವ ಕಾರಣಕ್ಕೂ ರಾಜೀ ಮಾಡಿಕೊಳ್ಳುವುದು ಬೇಡ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಪ್ರಭಾವಿಗಳ ಸಂಪರ್ಕ ದೊರೆಯಲಿದೆ. ನಿಮ್ಮ ಕೆಲಸ- ಕಾರ್ಯಗಳಿಗೆ ಅನುಕೂಲ ಮಾಡಿಕೊಡುವುದಾಗಿ ಹಾಗೂ ಬೇಕಾದ ಬೆಂಬಲ ಸಹ ನೀಡುವುದಾಗಿ ಭರವಸೆ ನೀಡುವ ಸಾಧ್ಯತೆ ಇದೆ. ಮನೆ ನಿರ್ಮಾಣಕ್ಕಾಗಿ ಆಲೋಚನೆ ಮಾಡುತ್ತಾ ಇರುವವರು ಅದಕ್ಕಾಗಿ ಬ್ಯಾಂಕ್ ಮೂಲಕ ಸಾಲಕ್ಕೆ ಪ್ರಯತ್ನ ಮಾಡುವುದಕ್ಕೆ ಗಟ್ಟಿ ತೀರ್ಮಾನ ಮಾಡಲಿದ್ದೀರಿ. ತಂದೆ- ತಾಯಿ ಬೇಡ ಎಂದ ಮೇಲೂ ಅವರ ಇಚ್ಛೆಗೆ ವಿರುದ್ಧವಾಗಿ ಹೂಡಿಕೆ ಮಾಡುವ ನಿರ್ಧಾರ ಮಾಡಲಿದ್ದೀರಿ. ವ್ಯಾಪಾರ- ವ್ಯವಹಾರ ಮಾಡುತ್ತಾ ಇರುವವರಿಗೆ ಬರಬೇಕಾದ ಹಣ, ಅದರಲ್ಲಿ ಬಹಳ ಸಮಯದಿಂದ ಹಾಗೇ ಬಾಕಿ ಉಳಿದುಕೊಂಡಿದೆ ಎಂದಾದಲ್ಲಿ ಪಟ್ಟು ಹಿಡಿದು, ವಸೂಲಿ ಮಾಡಲಿದ್ದೀರಿ. ಇನ್ನು ನಿಮ್ಮಲ್ಲಿ ಕೆಲವರು ವ್ಯವಹಾರದ ಸಲುವಾಗಿ ಕೆಲವು ಯಂತ್ರೋಪಕರಣ ಖರೀದಿ ಮಾಡುವ ಯೋಗ ಇದೆ. ಇದರಿಂದ ಅನುಕೂಲ ಆಗಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನೀವು ಬಯಸಿದ್ದು ಸಿಗಲಿಲ್ಲ, ಪ್ರಯತ್ನ ಕೂಡ ಪಡದೇ ಇದ್ದದ್ದು ದೊರೆಯುವ ಸೂಚನೆ ಇದೆ. ಈಗ ಏನು ಮಾಡಬೇಕು ಎಂಬ ವಿಚಾರವೇ ಆಲೋಚನೆಗೆ ಕಾರಣ ಆಗಲಿದೆ. ಉತ್ಸಾಹದಲ್ಲಿ ನಿತ್ಯದ ಕಾರ್ಯಗಳಲ್ಲಿ ತೊಡಗುವುದು ಸಾಧ್ಯ ಇಲ್ಲದಂತೆ ಆಗಲಿದೆ. ವಿವಾಹ ವಯಸ್ಕರಾಗಿದ್ದು ಮದುವೆಗೆ ಪ್ರಯತ್ನ ಪಡುತ್ತಾ ಇದ್ದಲ್ಲಿ ಸೂಕ್ತ ಸಂಬಂಧ ಹುಡುಕಿ ಬರಲಿದ್ದು, ಪ್ರಯತ್ನಗಳು ಫಲ ನೀಡುವ ಸಾಧ್ಯತೆ ಹೆಚ್ಚಿದೆ. ಇನ್ನು ಪ್ರೀತಿಯಲ್ಲಿ ಇರುವಂಥವರು ಮನೆಯಲ್ಲಿ ಈ ವಿಚಾರ ಪ್ರಸ್ತಾವ ಮಾಡುವ ಸಾಧ್ಯತೆ ಸಹ ಹೆಚ್ಚಿದ್ದು, ಇದಕ್ಕೆ ಒಪ್ಪಿಗೆ ಸಿಗುವ ಅವಕಾಶ ಇದೆ. ಆದರೆ ಪಾರದರ್ಶಕವಾಗಿ ನಡೆದುಕೊಳ್ಳಿ. ಅಷ್ಟೇನೂ ಅಪಾಯಕಾರಿ ಅಲ್ಲ ಎಂದು ನೀವೇ ಅಂದುಕೊಂಡು ಸಣ್ಣ- ಪುಟ್ಟ ಸುಳ್ಳುಗಳನ್ನು ಹೇಳಬೇಡಿ. ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಣೆ ಮಾಡುವವರಿಗೆ ಬಡ್ತಿ ಸಿಗುವ ಅವಕಾಶಗಳು ಇವೆ.

ಲೇಖನ- ಎನ್‌.ಕೆ.ಸ್ವಾತಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ