
ಹೊಸ ಬಟ್ಟೆ- ವಾಚ್, ಶೂ ಇಂಥವುಗಳ ಖರೀದಿ ಮಾಡಲಿದ್ದೀರಿ. ಪ್ರವಾಸಕ್ಕೆ ಅಂತಲೋ ಕಾರ್ಯಕ್ರಮ- ಸಮಾರಂಭಗಳಿಗೆ ಸಿದ್ಧತೆ ನಡೆಸಲಿದ್ದೀರಿ. ನಿಮ್ಮಲ್ಲಿ ಕೆಲವರು ಇಷ್ಟಪಡುವ ವ್ಯಕ್ತಿ ಎದುರಿಗೆ ಪ್ರೇಮ ನಿವೇದನೆ ಮಾಡಲಿದ್ದೀರಿ. ನಿಮ್ಮ ಬಳಿ ರಹಸ್ಯ ಎಂದು ಇತರರು ಹೇಳಿದಂಥ ವಿಷಯಗಳನ್ನು ಯಾರ ಮುಂದೆಯೂ ಚರ್ಚೆ ಮಾಡುವುದಕ್ಕೆ ಹೋಗಬೇಡಿ. ಸ್ನೇಹಿತರಿಗೆ ನಿಮ್ಮ ಸಹಾಯದ ಅಗತ್ಯ ಬರಲಿದೆ. ನಿಮ್ಮ ಮೊಬೈಲ್ ಫೋನ್ ನಾಟ್ ರೀಚಬಲ್ ಆಗದಂತೆ ಸಾಧ್ಯವಾದಷ್ಟೂ ನೋಡಿಕೊಳ್ಳಿ.
ತುಂಬ ಒತ್ತಡದಲ್ಲಿಯೂ ಅದ್ಭುತವಾದ ಫಲಿತಾಂಶವನ್ನು ಪಡೆಯಲಿದ್ದೀರಿ. ವೃತ್ತಿ ಅಥವಾ ವ್ಯವಹಾರದಲ್ಲಿ ಇರುವವರು ಜೊತೆಯಲ್ಲಿ ಕಾರ್ಯ ನಿರ್ವಹಿಸುವವರಿಗೆ ಅನುಕೂಲಗಳನ್ನು ಮಾಡಿಕೊಡಲಿದ್ದೀರಿ. ಬಹಳ ಸಮಯದಿಂದ ಒಂದು ಅವಕಾಶ ಎಂಬಂತೆ ಎದುರು ನೋಡುತ್ತಾ ಇದ್ದದ್ದು ಅದೀಗ ನಿಮ್ಮ ಕಡೆಗೆ ಬರುವಂಥ ಸುಳಿವು ದೊರೆಯಲಿದೆ. ಮಾನಸಿಕವಾಗಿ ಈ ದಿನ ಬಹಳ ಗಟ್ಟಿಯಾಗಿ ಇರಲಿದ್ದೀರಿ. ಇತರರಿಗೆ ಕಷ್ಟ ಎನಿಸಿದ ವಿಷಯಗಳನ್ನು ಸಹ ಅರ್ಥ ಮಾಡಿಕೊಳ್ಳುವಿರಿ.
ನಿಮಗೆ ಇಷ್ಟವಾದದ್ದನ್ನು ಖರೀದಿ ಮಾಡಿಬಿಡಬೇಕು ಎಂಬ ಚಡಪಡಿಕೆ ನಿಮ್ಮಲ್ಲಿ ಇರಲಿದೆ. ನಿಶ್ಚಿತವಾದ ಆದಾಯ ಬರುವಂತೆ ಮಾಡಿಕೊಳ್ಳಬೇಕು ಎಂಬ ಪ್ರಯತ್ನಗಳು ಗುರಿಯ ಕಡೆಗೆ ಸಾಗಲಿವೆ. ಶಿಕ್ಷಕರಿಗೆ ನಿಯೋಜನೆ ಮೇರೆಗೆ ದೊಡ್ಡ ಜವಾಬ್ದಾರಿಗಳು ನಿರ್ವಹಿಸಬೇಕಾಗಿ ಬರಲಿದೆ. ಆರಂಭದಲ್ಲಿ ಅದು ನಿಮ್ಮಿಂದ ಸಾಧ್ಯವೇ ಎಂಬ ಆತಂಕವಾದರೂ ಇದರಿಂದ ನಿಮಗೆ ಹೆಸರು ಬರುವಂಥ ಸಾಧ್ಯತೆ ಇದೆ. ಸಿನಿಮಾ ರಂಗದಲ್ಲಿ ಅವಕಾಶಕ್ಕಾಗಿ ಪ್ರಯತ್ನ ಮಾಡುತ್ತಾ ಇರುವವರಿಗೆ ಆತ್ಮವಿಶ್ವಾಸ ಹೆಚ್ಚಾಗುವಂಥ ದಿನವಿದು.
ಲೇಖನ- ಸ್ವಾತಿ ಎನ್.ಕೆ.