Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 19ರ ದಿನಭವಿಷ್ಯ

ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 19ರ ಸೋಮವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ವೃತ್ತಿ, ಹಣಕಾಸು, ಸಂಬಂಧಗಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ಜನ್ಮಸಂಖ್ಯೆಯವರಿಗೆ ಎದುರಾಗುವ ಸವಾಲುಗಳು ಮತ್ತು ಅವಕಾಶಗಳ ಬಗ್ಗೆ ಮಾಹಿತಿ ನೀಡಲಾಗಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 19ರ ದಿನಭವಿಷ್ಯ
ದಿನ ಭವಿಷ್ಯ
Edited By:

Updated on: Jan 19, 2026 | 12:25 AM

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ನಿಮ್ಮಲ್ಲಿ ಯಾರಿಗೆ ನಲವತ್ತು ವರ್ಷದ ಮೇಲೆ ವಯಸ್ಸಾಗಿರುತ್ತದೆ ಅಂಥವರು ನಿಮಗೆ ಈಗಾಗಲೇ ಕಾಡುತ್ತಿರುವ ನೋವು ಅಥವಾ ಅನಾರೋಗ್ಯ ಸಮಸ್ಯೆ ಬಗ್ಗೆ ಸೂಕ್ತ ವೈದ್ಯೋಪಚಾರ ಮಾಡುವ ಕಡೆಗೆ ಲಕ್ಷ್ಯವನ್ನು ನೀಡಬೇಕು. ಸುಲಭವಾಗಿ ಆಗಬೇಕಾದ ಕೆಲಸ- ಕಾರ್ಯಗಳಿಗೆ ವಿಪರೀತ ಓಡಾಟ ಆಗುತ್ತಿದೆ ಎಂಬ ಕಾರಣಕ್ಕೆ ಆಸಕ್ತಿಯನ್ನು ಕಳೆದುಕೊಳ್ಳಬೇಡಿ. ಸ್ನೇಹಿತರೋ ಸಂಬಂಧಿಗಳೋ ಸಹಾಯ ಮಾಡುವುದಾಗಿ ತಾವಾಗಿಯೇ ಮುಂದೆ ಬಂದಲ್ಲಿ ಅವರ ನೆರವು ಪಡೆದುಕೊಂಡು, ಕೆಲಸಗಳನ್ನು ಪೂರ್ಣಗೊಳಿಸುವುದು ಉತ್ತಮ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ದೀರ್ಘ ಕಾಲದಿಂದ ನೀವು ತೆರಳಬೇಕು ಎಂದುಕೊಳ್ಳುತ್ತಿದ್ದ ಸ್ಥಳವೊಂದಕ್ಕೆ ಹೋಗಲು ಬೇಕಾದ ಎಲ್ಲ ಸಿದ್ಧತೆ ಆರಂಭ ಮಾಡಲಿದ್ದೀರಿ. ನಿಮ್ಮಲ್ಲಿ ಯಾರು ಚೀಟಿ ಕಟ್ಟುತ್ತಿದ್ದೀರಿ, ಅದು ಹಣದ್ದೇ ಆಗಿರಬಹುದು ಅಥವಾ ಚಿನ್ನದ್ದೇ ಆಗಿರಬಹುದು; ಅದರ ಬಗ್ಗೆ ಒಂದು ಗುಮಾನಿ ನಿಮ್ಮನ್ನು ಈ ದಿನ ಕಾಡಲಿದೆ. ಆದ್ದರಿಂದ ವಾಪಸ್ ಪಡೆದುಕೊಳ್ಳಲು ಪ್ರಯತ್ನ ಮಾಡುವ ಸಾಧ್ಯತೆ ಇದೆ. ಪಿಆರ್ಒ ಆಗಿ ಸಂಘ- ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಇರುವವರಿಗೆ ಬಹಳ ಉತ್ತಮವಾದ ದಿನ ಇದಾಗಿರಲಿದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಸ್ವಂತ ವ್ಯವಹಾರ- ವ್ಯಾಪಾರ ಆರಂಭಿಸಲು ಬೇಕಾದ ಹಣಕಾಸಿನ ಸಂಪನ್ಮೂಲಕ್ಕೆ ಪ್ರಯತ್ನ ಪಡುತ್ತಾ ಇರುತ್ತೀರೋ ಅದು ಸಾಧ್ಯವಾಗಲಿದೆ. ಪ್ರಭಾವಿಗಳು ನಿಮ್ಮ ನೆರವಿಗೆ ಬರಲಿದ್ದಾರೆ. ನಿಮ್ಮ ಸ್ನೇಹಿತರ ಪೈಕಿ ಕೆಲವರು ತಮ್ಮ ಕಾಂಟ್ಯಾಕ್ಟ್ ನಲ್ಲಿ ಇರುವಂಥವರನ್ನು ನಿಮಗೆ ಪರಿಚಯಿಸಲಿದ್ದು, ಅದರಿಂದಾಗಿ ಕೂಡ ಹಲವು ಅನುಕೂಲ ನಿಮಗೆ ಒದಗಿ ಬರಲಿದೆ. ಕಟ್ಟಡ ನಿರ್ಮಾಣ, ಇಂಟೀರಿಯರ್ ಡೆಕೊರೇಷನ್ ಇಂಥವುಗಳಲ್ಲಿ ತೊಡಗಿಕೊಂಡವರಿಗೆ ದೊಡ್ಡ ಕಾಂಟ್ರಾಕ್ಟ್ ಹುಡುಕಿಕೊಂಡು ಬರಲಿದೆ.

ಲೇಖನ- ಸ್ವಾತಿ ಎನ್.ಕೆ.