Numerology Prediction (ಸಂಗ್ರಹ ಚಿತ್ರ)
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 17ರ ಶನಿವಾರದ ದಿನ ಭವಿಷ್ಯ (horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
- ಜನ್ಮಸಂಖ್ಯೆ 1: ಎಲ್ಲವನ್ನೂ ಮುಂಚೆಯೇ ಹೇಳಿಬಿಟ್ಟಿದ್ದೀರೇನೋ ಎಂಬಂತೆ ನಿಮ್ಮ ಮನಸಿನ ಮಾತುಗಳನ್ನು ಆಪ್ತರು, ಹತ್ತಿರದವರು ನಡೆದುಕೊಳ್ಳಲಿದ್ದಾರೆ. ಕುಟುಂಬದವರೊಂದಿಗೆ ಒಟ್ಟಿಗೆ ಸಮಯ ಕಳೆಯಲಿದ್ದೀರಿ. ನೀವು ಬಳಸುವ ವಾಹನದ ಸರ್ವೀಸ್ ಬಗ್ಗೆ ಕಾಳಜಿ ನೀಡಿ, ಇಲ್ಲದಿದ್ದಲ್ಲಿ ಮುಖ್ಯವಾದ ಸಮಯದಲ್ಲೇ ಕೈ ಕೊಡಬಹುದು.
- ಜನ್ಮಸಂಖ್ಯೆ 2: ಪ್ರೀತಿ- ಪ್ರೇಮದಲ್ಲಿ ಇರುವವರಿಗೆ ಈ ದಿನ ಖರ್ಚು ಹಾಗೂ ಸಂತೋಷ ಎರಡೂ ಒಟ್ಟೊಟ್ಟಿಗೆ ಇದೆ. ಭಾವನಾತ್ಮಕವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಕ್ರಿಯೇಟಿವ್ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಒಂದಿಷ್ಟು ಒತ್ತಡ ಸೃಷ್ಟಿ ಆಗಬಹುದು. ಆದರೆ ಅದರಿಂದ ಬೇಜಾರಾಗಿ, ಅದರ ಪರಿಣಾಮ ನಿಮ್ಮ ಕೆಲಸದ ಮೇಲೆ ಆಗದಂತೆ ನೋಡಿಕೊಳ್ಳಿ.
- ಜನ್ಮಸಂಖ್ಯೆ 3: ಪಬ್, ರೆಸ್ಟೋರೆಂಟ್‌ಗಳು, ಮಲ್ಟಿಪ್ಲೆಕ್ಸ್‌ಗಳು ಇಂಥ ಕಡೆ ಈ ದಿನ ನಿಮಗೆ ಖರ್ಚಾಗುವ ಯೋಗ ಇದೆ. ಇನ್ನು ಬಟ್ಟೆ ವಿಚಾರದಲ್ಲೂ ಒಂದಿಷ್ಟು ಧಾರಾಳವಾಗಿ ಖರ್ಚಾಗಬಹುದು. ಕ್ರೆಡಿಟ್ ಕಾರ್ಡ್ ಬಳಸುವಂಥವರು ಖರ್ಚಿನ ಮೇಲೆ ನಿಗಾ ಇಡಿ. ದಿನದ ದ್ವಿತೀಯಾರ್ಧದಲ್ಲಿ ಸೊಗಸಾದ ಆಹಾರ ತಿನಿಸುಗಳನ್ನು ಸವಿಯುವ ಯೋಗ ಇದೆ.
- ಜನ್ಮಸಂಖ್ಯೆ 4: ಈ ದಿನ ಕಾಯುವಿಕೆ ನಿಮಗೆ ಬೇಸರ ತರಿಸಬಹುದು. ಇಂಥ ಸಮಯಕ್ಕೆ ಬರುತ್ತೀನಿ ಎಂದವರು ಬಾರದೇ ಇರಬಹುದು ಅಥವಾ ತಡವಾಗಬಹುದು. ಇನ್ನು ಉಪಾನ್ಯಾಸಕರು, ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಗೌರವ- ಸಮ್ಮಾನಗಳು ದೊರೆಯುವ ದಿನ ಇದಾಗಿರಲಿದೆ. ಬೆನ್ನು ನೋವಿನ ಸಮಸ್ಯೆ ಕಾಡಬಹುದು, ಎಚ್ಚರ ಇರಲಿ.
- ಜನ್ಮಸಂಖ್ಯೆ 5: ಹೆಣ್ಣುಮಕ್ಕಳಿಗೆ ತವರು ಮನೆಯಲ್ಲಿನ ಕೆಲ ಬೆಳವಣಿಗೆಗಳು ಬೇಸರಕ್ಕೆ ಕಾರಣ ಆಗಬಹುದು. ಅಥವಾ ಅಲ್ಲಿನ ವಿಚಾರಗಳು ನಿಮಗೆ ಬೇರೆ ರೀತಿಯಲ್ಲಿ ತಲುಪಬಹುದು. ಸ್ಟಾರ್ ಗೇಜ್ ಮಾಡುವಂಥವರು, ಪಕ್ಷಿ ವೀಕ್ಷಣೆ ಮಾಡುವಂಥವರು, ಭಾಷೆಗಳನ್ನು ಕಲಿಸುವಂಥವರಿಗೆ ಈ ದಿನ ಹೊಸ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ.
- ಜನ್ಮಸಂಖ್ಯೆ 6: ಈ ದಿನ ಆಲಸ್ಯ ನಿಮ್ಮನ್ನು ಬೆನ್ನಟ್ಟಲಿದೆ. ಬೆಳಗ್ಗೆ ಹಾಸಿಗೆ ಬಿಟ್ಟು ಏಳಬೇಕಾ ಎಂಬಲ್ಲಿಂದ ಸಮಸ್ಯೆಗಳು ಶುರುವಾಗುತ್ತವೆ. ಇಷ್ಟು ದಿನದ ನಿಮ್ಮ ಶ್ರಮ ಹಾಗೂ ಪ್ರತಿಭೆಯನ್ನು ಇದೊಂದು ಕಾರಣಕ್ಕೆ ಬೇರೆಯವರು ಹೀಗಳೆಯದಂತೆ ನೋಡಿಕೊಳ್ಳಿ. ಕಣ್ಣಿಗೆ ಸಂಬಂಧಿಸಿದ ಸಮಸ್ಯೆಗಳು ಇರುವವರು ಸರಿಯಾದ ವೈದ್ಯರಲ್ಲಿ ಕೂಡಲೇ ಪರೀಕ್ಷಿಸಿಕೊಳ್ಳಿ.
- ಜನ್ಮಸಂಖ್ಯೆ 7: ನಿಮ್ಮ ಸ್ನೇಹಿತರು ತರುವ ಪ್ರಾಜೆಕ್ಟ್‌ಗಳನ್ನು ಗಂಭೀರವಾಗಿ ಪರಿಗಣಿಸಿ. ಮೇಲುನೋಟಕ್ಕೆ ಕಾಣುವುದಕ್ಕಿಂತ ಹೆಚ್ಚಿನ ಅನುಕೂಲ ಇದರಿಂದ ಆಗಲಿದೆ. ದೇವಾಲಯಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೆಚ್ಚಿನ ಜವಾಬ್ದಾರಿಗಳು ಹುಡುಕಿಕೊಂಡು ಬರಲಿವೆ. ತೀರ್ಥಕ್ಷೇತ್ರ ಪ್ರಯಾಣಗಳಿಗೆ ಸಿದ್ಧತೆ ಮಾಡಿಕೊಳ್ಳಲಿದ್ದೀರಿ.
- ಜನ್ಮಸಂಖ್ಯೆ 8: ಅಯ್ಯಪ್ಪ ಸ್ವಾಮಿ ಆರಾಧನೆ ಮಾಡುವುದರಿಂದ ನಿಮಗೆ ಈ ದಿನ ನೆಮ್ಮದಿ ಸಿಗಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಶುಭ ಕಾರ್ಯಗಳಿಗೆ ಹಣ ಹೊಂದಿಸುವ ಬಗ್ಗೆ ಮನೆಯಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ. ವಾಹನ ಓಡಿಸುವಾಗ ಒಂದಿಷ್ಟು ಎಚ್ಚರ ವಹಿಸುವುದು ಮುಖ್ಯ.
- ಜನ್ಮಸಂಖ್ಯೆ 9: ಯಾವುದೋ ಹಳೆಯ ವಿಚಾರವೊಂದು ನಿಮ್ಮನ್ನು ಈ ದಿನ ವಿಪರೀತ ಕಾಡಲಿದೆ. ದಾಕ್ಷಿಣ್ಯಕ್ಕೆ ಸಿಲುಕಿ ಯಾರಿಗಾದರೂ ಜಾಮೀನು ನೀಡುವುದಾಗಿ ಮಾತು ನೀಡಬೇಡಿ. ಏಕೆಂದರೆ ಈ ಕಾರಣಕ್ಕೆ ನಿಮ್ಮ ಸ್ನೇಹಕ್ಕೆ ಅಥವಾ ಸಂಬಂಧಕ್ಕೆ ತಡೆಯಾಗಿ ಪರಿಣಮಿಸಬಹುದು. ಇನ್ನು ಬೆಲೆಬಾಳುವ ವಸ್ತುಗಳನ್ನು ಜೋಪಾನವಾಗಿ ಇರಿಸಿಕೊಳ್ಳಿ.
ಲೇಖನ- ಎನ್.ಕೆ.ಸ್ವಾತಿ