Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 15ರ ದಿನಭವಿಷ್ಯ

TV9 Digital Desk

| Edited By: ರಮೇಶ್ ಬಿ. ಜವಳಗೇರಾ

Updated on: Dec 15, 2022 | 6:06 AM

ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 15ರ ಗುರುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 15ರ ದಿನಭವಿಷ್ಯ
ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 15ರ ಗುರುವಾರದ ದಿನ ಭವಿಷ್ಯ (horoscope )ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1

ಹಣಕಾಸಿನ ವಿಚಾರಕ್ಕೆ ಭಾವನಾತ್ಮಕ ಸಂಗತಿಗಳು ತಳುಕು ಹಾಕಿಕೊಳ್ಳಲಿವೆ. ಆದ್ದರಿಂದ ನಿರ್ಧಾರಗಳು ಸರಿಯಾಗಿರಬೇಕು. ವಿದೇಶದಲ್ಲಿ ಉದ್ಯೋಗ, ವ್ಯಾಸಂಗಕ್ಕೆ ಅಥವಾ ಅಲ್ಲೇ ನೆಲೆಸುವುದಕ್ಕೆ ಪ್ರಯತ್ನ ಮಾಡುತ್ತಿರುವವರಿಗೆ ಈ ದಿನ ಮಹತ್ವವಾದ ಮಾಹಿತಿಯು ದೊರೆಯಲಿದೆ. ನಿಮ್ಮ ಜತೆಗೆ ಕೆಲಸ ಮಾಡುವವರ ಮೇಲೆ ಯಾವುದೇ ಕಾರಣಕ್ಕೂ ರೇಗಬೇಡಿ.

ಜನ್ಮಸಂಖ್ಯೆ 2

ಹೊಸ ಬಟ್ಟೆ, ಆಭರಣಗಳನ್ನು ಖರೀದಿಸುವುದಕ್ಕೆ ಹಣ ಖರ್ಚು ಮಾಡುವ ಯೋಗ ಇದೆ. ಒಂದಿಷ್ಟು ಚೌಕಾಸಿ ಮಾಡಲಿದ್ದೀರಿ. ಒಂದು ವೇಳೆ ಕ್ರೆಡಿಟ್ ಕಾರ್ಡ್ ಬಳಸಿ, ಇಎಂಐಗೆ ಬದಲಾಯಿಸಿಕೊಳ್ಳಬೇಕು ಎಂದಿದ್ದಲ್ಲಿ ಅಂಥ ಖರ್ಚು ಯಾವುದು ಎಂಬುದನ್ನು ಆಲೋಚಿಸಿ, ಮುಂದಕ್ಕೆ ಹೆಜ್ಜೆ ಇಡಿ.

ಜನ್ಮಸಂಖ್ಯೆ 3

ಉದ್ಯೋಗ ಬದಲಾವಣೆಗೆ ಪ್ರಯತ್ನ ಪಡುತ್ತಿರುವವರಿಗೆ ಇತರರ ನೆರವು- ಮಾರ್ಗದರ್ಶನ ದೊರೆಯಲಿದೆ. ಬಾಡಿಗೆ ಮನೆಯಲ್ಲಿ ವಾಸ ಮಾಡುವವರು ಒತ್ತಡಕ್ಕೆ ಸಿಲುಕಿಕೊಳ್ಳಲಿದ್ದೀರಿ. ಎನ್‌ಜಿಒಗಳಲ್ಲಿ ಕಾರ್ಯ ನಿರ್ವಹಿಸುವವರಿಗೆ ಜವಾಬ್ದಾರಿ ಹೆಚ್ಚಾಗಲಿದೆ. ಇದಕ್ಕೆ ಇತರರ ನೆರವು ಸಿಗಲಿದೆ.

ಜನ್ಮಸಂಖ್ಯೆ 4

ನಕ್ಕು ಸಮಯ ಕಳೆಯುವುದಕ್ಕೆ ಈ ದಿನ ಸಾಕಷ್ಟು ಕಾರಣಗಳು ದೊರೆಯುತ್ತವೆ. ಸ್ನೇಹಿತರು- ಸಂಬಂಧಿಕರಿಗೆ ಈ ದಿನ ನಿಮ್ಮ ನೆರವಿನ ಅಗತ್ಯ ಕಂಡುಬರಲಿದೆ. ಆದ್ದರಿಂದ ಮೊಬೈಲ್‌ಫೋನ್ ಅಥವಾ ಬೇರೆ ಯಾವುದೇ ರೀತಿಯಲ್ಲಿ ಲಭ್ಯ ಇರುವಂತೆ ಗಮನ ವಹಿಸಿ. ನಿಮ್ಮ ಮೊಬೈಲ್‌ ಫೋನ್‌ನಲ್ಲಿ ಅಥವಾ ವಾಟ್ಸಾಪ್ ಡಿಪಿಯಲ್ಲಿ ಲಕ್ಷ್ಮೀದೇವಿ ಚಿತ್ರವನ್ನು ಹಾಕಿಕೊಳ್ಳಿ.

ಜನ್ಮಸಂಖ್ಯೆ 5

ನಿಮ್ಮ ಆತ್ಮೀಯರು ಹಾಗೂ ಬಹಳ ಮೆಚ್ಚುವಂಥವರ ಜತೆಗೆ ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಏರ್ಪಡಬಹುದು. ಮಂಡಿನೋವು ಈ ದಿನ ನಿಮಗೆ ಕಾಡಬಹುದು. ತೂಕದ ಸಮಸ್ಯೆ ಎದುರಿಸುತ್ತಿರುವವರು ಇಳಿಸಿಕೊಳ್ಳುವ ಕಡೆಗೆ ಗಮನ ವಹಿಸಿ. ಸರಿಯಾದ ವೈದ್ಯರ ಹಾಗೂ ಸೂಕ್ತ ಔಷಧೋಪಚಾರದ ಅಗತ್ಯ ಕಂಡುಬರಲಿದೆ.

ಜನ್ಮಸಂಖ್ಯೆ 6

ಹಣಕಾಸು ವಿಚಾರದಲ್ಲಿ ನೀವಂದುಕೊಂಡಂತೆ ಕೆಲವು ಬೆಳವಣಿಗೆಗಳು ಆಗಲಿವೆ. ಮದುವೆ ಮತ್ತಿತರ ಶುಭ ಕಾರ್ಯಗಳಿಗೆ ಪ್ರಯತ್ನ ಮಾಡುತ್ತಿರುವವರಿಗೆ ಒಳ್ಳೆ ದಿನ ಇದು. ಹೊಸ ಗ್ಯಾಜೆಟ್, ಲ್ಯಾಪ್‌ಟಾಪ್, ಟೀವಿ ಇಂಥದ್ದನ್ನು ಖರೀದಿ ಮಾಡುವುದಕ್ಕೆ ಹಣ ಖರ್ಚಾಗುವ ಯೋಗ ಇದೆ.

ಜನ್ಮಸಂಖ್ಯೆ 7

ಪ್ರೀತಿಪಾತ್ರರ ಜತೆಗೆ ಸಮಯವನ್ನು ಕಳೆಯಲಿದ್ದೀರಿ. ಈಗಾಗಲೇ ಆರಂಬಿಸಿ, ಅರ್ಧದಷ್ಟು ಮುಗಿದ ಕೆಲಸವನ್ನು ಮೊದಲಿಂದ ಆರಂಭ ಮಾಡಬೇಕಾಗಬಹುದು. ಸೋದರ ಮಾವನ ಆರೋಗ್ಯದ ಕಡೆಗೆ ಜಾಗ್ರತೆಯನ್ನು ವಹಿಸಿ. ನೀವಾಗಿಯೇ ತೆಗೆದುಕೊಂಡ ಜವಾಬ್ದಾರಿಯನ್ನು ಗಡುವಿನೊಳಗೆ ಮುಗಿಸುವುದಕ್ಕೆ ಪ್ರಯತ್ನಿಸಿ.

ಜನ್ಮಸಂಖ್ಯೆ 8

ಯೋಗ, ಜಿಮ್ ಹೀಗೆ ದೈಹಿಕ ಆರೋಗ್ಯಕ್ಕೆ ಒತ್ತು ನೀಡುವಂಥದ್ದಕ್ಕೆ ಸೇರಿಕೊಳ್ಳುವ ಯೋಗ ಇದೆ. ಬಹಳ ಸಮಯದಿಂದ ನೀವು ಹುಡುಕಾಡುತ್ತಿದ್ದ ವ್ಯಕ್ತಿಗಳು, ಕಾಗದ- ಪತ್ರಗಳು ದೊರೆಯುವ ಸಾಧ್ಯತೆಗಳಿವೆ. ಕ್ರಿಯೇಟಿವ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಹೊಸ ಕಾಂಟ್ಯಾಕ್ಟ್‌ಗಳು ದೊರೆಯಲಿವೆ.

ಜನ್ಮಸಂಖ್ಯೆ 9

ಮನೆ ಕಟ್ಟುತ್ತಿರುವವರು, ಸೈಟು ಖರೀದಿಸಬೇಕು ಎಂದಿರುವವರಿಗೆ ಈ ದಿನ ಮಹತ್ವದ್ದಾಗಿರುತ್ತದೆ. ಷೇರು – ಡಿಜಿಟಲ್ ಸ್ವತ್ತುಗಳಲ್ಲಿ ಹೂಡಿಕೆ ಮಾಡಿರುವವರು ಕೆಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಅಂತರಂಗದ ರಹಸ್ಯಗಳನ್ನು ಯಾರ ಜತೆಗೂ ಹಂಚಿಕೊಳ್ಳಬೇಡಿ.

ಲೇಖನ- ಎನ್‌.ಕೆ.ಸ್ವಾತಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada