Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆಬ್ರವರಿ 24ರ ದಿನಭವಿಷ್ಯ

|

Updated on: Feb 24, 2023 | 5:30 AM

ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 24 ಶುಕ್ರವಾರ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಫೆಬ್ರವರಿ 24ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಫೆಬ್ರವರಿ 24ರ ಶುಕ್ರವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಕೆಲಸ ಪೂರ್ತಿ ಆಗುವ ಮುಂಚೆಯೇ ಹೇಳಿಕೊಂಡು, ಅದು ಅರೆಬರೆ ಆಗಿ ಅವಮಾನಕ್ಕೆ ಗುರಿ ಆಗಬಹುದು. ಆದ್ದರಿಂದ ಯಾವುದೇ ಕೆಲಸ ಪೂರ್ಣಗೊಳ್ಳುವವರೆಗೆ ಹೇಳಿಕೊಳ್ಳದಿರಿ. ಸಂಗೀತಗಾರರು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಇರುವವರು, ವೇದ ಪಾಠ ಮಾಡುವಂಥವರಿಗೆ ಗೌರವ- ಸನ್ಮಾನಗಳು ಆಗಲಿವೆ. ಹೊಸದಾಗಿ ಭೂಮಿ ಖರೀದಿ ಮಾಡಬೇಕು ಎಂದಿರುವವರು ಈ ದಿನದ ಮಟ್ಟಿಗೆ ಅದಕ್ಕೆ ಸಂಬಂಧಿಸಿದ ಕೆಲಸಗಳನ್ನು ಮುಂದಕ್ಕೆ ಹಾಕುವುದು ಒಳ್ಳೆಯದು.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಎಲ್ಲ ಸಂದರ್ಭದಲ್ಲೂ ನೇರ ಮಾತು ಕೆಲಸಕ್ಕೆ ಬರುವುದಿಲ್ಲ. ಬಹಳ ಡಿಪ್ಲೊಮಾಟಿಕ್ ಆಗಿ ಮಾತನಾಡಿ, ವ್ಯವಹಾರಗಳನ್ನು ಇತ್ಯರ್ಥ ಮಾಡಿಕೊಳ್ಳಿ. ನಿಮ್ಮೆದುರು ಹೇಗೆ ಕಾಣಿಸಿಕೊಳ್ಳುತ್ತಾರೆ ಅದನ್ನೇ ನಿಜ ಅಂದುಕೊಳ್ಳದಿರಿ. ಮದುವೆ, ನಿಶ್ಚಿತಾರ್ಥದ ಮಾತುಕತೆಗಳು ಇದ್ದಲ್ಲಿ ತುಂಬ ತಾಳ್ಮೆಯಿಂದ ವರ್ತಿಸಬೇಕಾಗುತ್ತದೆ. ತಾಯಿಯ ಕಡೆ ಸಂಬಂಧಿಕರು ಈ ದಿನ ಮನೆಗೆ ಬರುವಂಥ ಸಾಧ್ಯತೆ ಇದೆ. ಸಂಜೆ ನಂತರ ಬಿಡುವಿಲ್ಲದಷ್ಟು ಬ್ಯುಜಿ ಆಗುತ್ತೀರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಈ ದಿನ ನಿಮ್ಮಲ್ಲೊಂದು ಆತ್ಮವಿಶ್ವಾಸ ಇರುತ್ತದೆ. ನೀವು ಯಾವಾಗಲೋ ಸಹಾಯ ಮಾಡಿದ್ದವರು ಎದುರಾಗಿ, ಮನಸಾರೆ ನಿಮ್ಮನ್ನು ಮೆಚ್ಚಿ, ಕೊಂಡಾಡುವ ಸಾಧ್ಯತೆ ಇದೆ. ಯಾವುದನ್ನು ನೀವು ಬಹಳ ದೂರದ ಮಾತು ಎಂದುಕೊಂಡಿರುತ್ತೀರೋ ಅದು ಇಂದು ಕಣ್ಣೆದುರು ನಿಲ್ಲುವ ಸಮಯ. ಮಾನಸಿಕವಾಗಿ ದೈಹಿಕವಾಗಿ ಸಿದ್ಧರಾಗಿ. ಸ್ವತ್ತು ವ್ಯವಹಾರಗಳು ಈ ದಿನ ಮಾಡದಿರುವುದು ಉತ್ತಮ. ಅನಿವಾರ್ಯ ಅಲ್ಲ ಎಂದಾದರೆ ದಿನದ ಮಟ್ಟಿಗೆ ಮುಂದೂಡಿ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ನಿಮ್ಮ ಬಗ್ಗೆ ನಿಮಗೆ ಅಪರಿಮಿತವಾದ ಆತ್ಮವಿಶ್ವಾಸ, ಭರವಸೆ ಮೂಡುವ ದಿನ ಇದು. ಯಾವುದಾದರೂ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸೂಕ್ತವಾದ ದಿನ ಇದು. ಎಲ್ಲರನ್ನೂ ಜತೆಗೆ ಕರೆದುಕೊಂಡು ಮುಂದಕ್ಕೆ ಸಾಗಬೇಕು ಎಂಬ ನಿಮ್ಮ ಅಪೇಕ್ಷೆಗೆ ತಕ್ಕಂತೆ ಬೆಳವಣಿಗೆಗಳನ್ನು ಕಾಣಬಹುದು. ಆದರೆ ಹಣಕಾಸು ಖರ್ಚಿನ ವಿಚಾರದಲ್ಲಿ ಲೆಕ್ಕಾಚಾರ ತಪ್ಪಬೇಡಿ. ಗ್ಯಾಜೆಟ್ ಖರೀದಿ ಮಾಡಬೇಕು ಎಂದು ಕ್ರೆಡಿಟ್ ಕಾರ್ಡ್ ಬಳಸಿ, ಖರ್ಚು ಆಗಬಹುದು, ಜಾಗ್ರತೆ ಇರಲಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನೀವು ಕೂಡಿಟ್ಟುಕೊಂಡಿದ್ದ ಹಣವನ್ನು ಖರ್ಚು ಮಾಡುವ ಅಥವಾ ಹೂಡಿಕೆ ಮಾಡುವ ದಾರಿ ಕಾಣಿಸಿಕೊಳ್ಳುತ್ತದೆ. ಈ ದಿನ ಮನಸ್ಸಿಗೆ ತೋಚುವ ಅಥವಾ ಇನ್ನೊಬ್ಬರ ಬಗ್ಗೆ ಹೊಳೆಯುವ ಸಂಗತಿಗಳನ್ನು ಉಪೇಕ್ಷೆ ಮಾಡಬೇಡಿ. ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯಿಂದ ದೂರ ಇರಬೇಕು ಅಥವಾ ವಾಟ್ಸಾಪ್ ಗ್ರೂಪ್, ಫೇಸ್‌ಬುಕ್ ಕಮ್ಯುನಿಟಿ ಹೀಗೆ ಯಾವುದರಿಂದಾದರೂ ಆಚೆ ಬರಬೇಕು ಎಂದಾದಲ್ಲಿ ಮುಲಾಜಿಲ್ಲದೆ ಹೊರಬನ್ನಿ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಕುಟುಂಬ ಸದಸ್ಯರ ಜೊತೆಗೆ ಶಾಪಿಂಗ್ ಮಾಡುವ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ಪರ್ಸ್‌- ವ್ಯಾಲೆಟ್- ಕ್ರೆಡಿಟ್ ಕಾರ್ಡ್ ಹಾಗೂ ವಾಹನದ ಕೀಗಳನ್ನು ನೆನಪಿನಲ್ಲಿರುವಂಥ ಕಡೆ ಇಟ್ಟುಕೊಳ್ಳಿ. ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಏನಾದರೂ ಆಫರ್‌ಗಳು ಬಂದಲ್ಲಿ ಒಂದೆರಡು ದಿನ ಸಮಯ ಕೇಳಿ. ದೂರ ಪ್ರಯಾಣ ಮಾಡುವವರು ಮುಖ್ಯ ದಾಖಲೆ ಅಥವಾ ಕೊಂಡೊಯ್ಯಬೇಕಾದ ವಸ್ತುಗಳನ್ನು ಒಂದಕ್ಕೆ ಎರಡು ಬಾರಿ ಪರೀಕ್ಷಿಸಿಕೊಳ್ಳಿ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಕಣ್ಣಿನ ಸಮಸ್ಯೆ ಇರುವವರು ಕಡ್ಡಾಯವಾಗಿ ವೈದ್ಯರನ್ನು ಭೇಟಿ ಆಗಿ. ವಾಹನ ಓಡಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಅನಿವಾರ್ಯ ಅಲ್ಲ ಎಂದಾದರೆ ಓಡಿಸಲೇಬೇಡಿ. ಇನ್ನು ಕಾರಿನಲ್ಲಿ ಪ್ರಯಾಣಿಸುವಾಗ ಕಡ್ಡಾಯವಾಗಿ ಸೀಟ್ ಬೆಲ್ಟ್‌ ಧರಿಸಿರಿ. ಈ ದಿನ ಹೇಗಾದರೂ ಸಣ್ಣ ಪೆಟ್ಟಾದರೂ ಆಗುವಂಥ ಯೋಗ ಇದೆ. ಆದ್ದರಿಂದ ಈ ಸಲಹೆಯನ್ನು ಪಾಲಿಸುವುದು ಉತ್ತಮ. ನಿಮಗೆ ಸಾಧ್ಯವಿದಲ್ಲಿ ಮಂಗವೊಂದಕ್ಕೆ ಬಾಳೆಹಣ್ಣು ನೀಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ನಿಮ್ಮ ಮನೆಗಾಗಲಿ ಅಥವಾ ನಿಮಗಾಗಲಿ ಏನು ಬೇಕು ಮತ್ತು ಎಷ್ಟು ಬೇಕು ಎಂಬ ಸ್ಪಷ್ಟತೆ ಇಟ್ಟುಕೊಳ್ಳಿ. ಕೊಂಡು ತಂದ ಮೇಲೆ ಸುಮ್ಮನಿದ್ದಿದ್ದರೆ ಆಗುತ್ತಿತ್ತು ಎಂದುಕೊಂಡು ಹಳಹಳಿಸಬೇಡಿ. ಯಾರದೋ ಮೇಲಿನ ಸವಾಲಿಗೋ ಪ್ರತಿಷ್ಠೆಗೋ ಖರ್ಚು ಮಾಡುವುದಕ್ಕೆ ಹೋಗದಿರಿ. ನಿಮಗೆ ಸಮಯ ದೊರೆತಲ್ಲಿ, ನಂಬಿಕೆ ಇದ್ದಲ್ಲಿ ಹತ್ತು ನಿಮಿಷ ಪ್ರಶಾಂತವಾದ ಸ್ಥಳದಲ್ಲಿ ಓಂಕಾರ ಧ್ಯಾನ ಮಾಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಈ ದಿನ ಪಾರ್ಟಿಗಳಲ್ಲಿ ಭಾಗಿಯಾಗುವುದಕ್ಕೆ ನಿಮ್ಮನ್ನು ಕರೆಯಲಿದ್ದಾರೆ. ಪರಿಚಯಗಳು, ಹೊಸ ಹೊಸ ಜನರ ಸಂಪರ್ಕ ನಿಮ್ಮ ಪಾಲಿಗೆ ಒದಗಿ ಬರಲಿದೆ. ವಿದೇಶಗಳಿಗೆ ಯಾವುದಾದರೂ ಟ್ರಾನ್ಸಿಷನ್‌ಗೆ ಹೋಗಬೇಕೆಂದಿರುವವರಿಗೆ ಒಂದಿಲ್ಲೊಂದು ನಿರಾಶೆ ಆಗುವಂಥ ವರ್ತಮಾನ ಬರಬಹುದು. ಆದರೆ ಇದು ತಾತ್ಕಾಲಿಕ ಗೊಂದಲ ಅಷ್ಟೇ ಆಗಿರುತ್ತದೆ. ಯಾರ ಮೇಲೂ ಸಿಟ್ಟಾಗಬೇಡಿ. ನಿಮಗೆ ಗೊತ್ತಿಲ್ಲದ, ಬೇಕಿಲ್ಲದ ವಿಚಾರದಲ್ಲಿ ಅತಿಯಾದ ಆಸಕ್ತಿ ತೋರಿಸಬೇಡಿ.

ಲೇಖನ- ಎನ್‌.ಕೆ.ಸ್ವಾತಿ