Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 5ರ ದಿನಭವಿಷ್ಯ

| Updated By: ಆಯೇಷಾ ಬಾನು

Updated on: Dec 06, 2022 | 8:53 AM

Numerology Prediction: ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 5ರ ಸೋಮವಾರದ ನಿಮ್ಮ ದಿನ ಭವಿಷ್ಯ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಿ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಡಿಸೆಂಬರ್ 5ರ ದಿನಭವಿಷ್ಯ
ದಿನಭವಿಷ್ಯ
Follow us on

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು (Numerology Daily Horoscope) ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಡಿಸೆಂಬರ್ 5ರ ಸೋಮವಾರದ ದಿನ ಭವಿಷ್ಯ (Horoscope) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1

ಈ ದಿನ ಡೆಡ್‌ಲೈನ್‌ನೊಳಗಾಗಿ ಕೆಲಸ ಮಾಡುವ ಧಾವಂತಕ್ಕೆ ಬೀಳುತ್ತೀರಿ. ನಿಮ್ಮ ಸಾಮರ್ಥ್ಯಕ್ಕೆ ಸವಾಲು ಹಾಕುವಂತೆ ಕೆಲವರು ಮಾತನಾಡಿ, ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುವಂತೆ ಮಾಡಬಹುದು. ಸ್ಕಂದನ ಆರಾಧನೆ ಮಾಡಿ, ಇತರರು ನಿಮ್ಮ ಬಗ್ಗೆ ಮಾಡುವ ಟೀಕೆಯ ಪೈಕಿ ಎಲ್ಲವನ್ನೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ.

ಜನ್ಮಸಂಖ್ಯೆ 2

ನಿಮ್ಮನ್ನು ಅಭಿಮಾನದಿಂದ ನೋಡುತ್ತಿದ್ದವರು, ಜತೆಗೆ ನೀವು ಬಹಳ ಆತ್ಮೀಯವಾಗಿ ಕಾಣುತ್ತಿದ್ದವರು ದಿಢೀರನೇ ಗೌರವ ನೀಡುತ್ತಿಲ್ಲ ಎಂಬ ಭಾವನೆಯೊಂದು ಮನಸ್ಸಿನಲ್ಲಿ ಮೂಡಬಹುದು. ನಿಮ್ಮ ನಿರೀಕ್ಷೆಯನ್ನು ಕಡಿಮೆ ಮಾಡಿಕೊಳ್ಳಿ. ಸಾಧ್ಯವಾದಲ್ಲಿ ವಿಷ್ಣು ಸಹಸ್ರನಾಮವನ್ನು ಕೇಳಿಸಿಕೊಳ್ಳಿ.

ಜನ್ಮಸಂಖ್ಯೆ 3

ಹಣಕಾಸಿನ ಹರಿವು ಉತ್ತಮ ಮಾಡಿಕೊಳ್ಳುವುದಕ್ಕೆ ಅವಕಾಶಗಳು ಒದಗಿಬರಲಿವೆ. ದೀರ್ಘ ಕಾಲದ ಪ್ರಾಜೆಕ್ಟ್‌ಗಳನ್ನು ಕೈಗೆತ್ತಿಕೊಳ್ಳುವುದಕ್ಕೆ ಇದೀಗ ಸಮಯ ಬಂದಿದೆ. ಆದರೆ ಇದರಲ್ಲಿ ಸ್ಥಿರತೆ ತಂದುಕೊಳ್ಳುವುದು ತುಂಬ ಮುಖ್ಯ. ಈ ದಿನ ನೀವು ಧರಿಸುವ ಪಾದರಕ್ಷೆಗಳ ಗುಣಮಟ್ಟ, ಅಳತೆ ಮತ್ತು ಅನುಕೂಲದ ಕಡೆ ಲಕ್ಷ್ಯ ವಹಿಸಿ. ಅದರಲ್ಲೂ ಕಾಲಿನ ಸಮಸ್ಯೆ ಪದೇಪದೇ ಕಾಣಿಸಿಕೊಳ್ಳುತ್ತಿದ್ದಲ್ಲಿ ಇದು ಮುಖ್ಯ.

ಜನ್ಮಸಂಖ್ಯೆ 4

ಈ ದಿನ ಏನನ್ನೂ ಮಾಡದೆ ಆರಾಮಾಗಿ ಇದ್ದುಬಿಡೋಣ ಅನಿಸುವುದುಂಟು. ಆದರೆ ಅದು ಅಷ್ಟು ಸಲೀಸಲ್ಲ. ಇನ್ನು ಪ್ರಾಣಿ- ಪಕ್ಷಿಪ್ರಿಯರಿಗೆ ಉಲ್ಲಾಸದಿಂದ ಇರುವ ದಿನ ಇದಾಗಿರುತ್ತದೆ. ಯಾವುದೇ ಹೊಸ ವ್ಯಾಪಾರ- ವ್ಯವಹಾರ ಶುರು ಮಾಡಬೇಕು ಎಂದುಕೊಂಡಿರುವವರು ಬಜೆಟ್ ಲೆಕ್ಕಾಚಾರ ಸರಿಯಾಗಿ ಹಾಕಿ.

ಜನ್ಮಸಂಖ್ಯೆ 5

ಸೊಗಸಾದ ಊಟ- ತಿಂಡಿ ಸವಿಯುವ ಯೋಗ ಇದೆ. ಗೆಳೆಯ- ಗೆಳತಿಯರ ಜತೆಗೆ ಉತ್ತಮವಾದ ಸಮಯ ಕಳೆಯುವಂತಹ ಅವಕಾಶ. ನಿಮ್ಮಲ್ಲಿ ಕೆಲವರು ಹತ್ತಿರದ ಸ್ಥಳಗಳಿಗೆ ಸಣ್ಣ ಪ್ರವಾಸವನ್ನು ಸಹ ಕೈಗೊಳ್ಳಬಹುದು. ಬಹು ಕಾಲದಿಂದ ನೀವು ನಿರೀಕ್ಷಿಸುತ್ತಿದ್ದಂಥ ಬೆಳವಣಿಗೆಯೊಂದು ಈ ದಿನ ಆಗಲಿದೆ. ಅಚ್ಚರಿಗೆ ಎದುರುಗೊಳ್ಳಲು ಸಿದ್ಧರಾಗಿ.

ಜನ್ಮಸಂಖ್ಯೆ 6

ಕುಟುಂಬ ಸದಸ್ಯರು, ಪ್ರೀತಿಪಾತ್ರರು, ನಿಮ್ಮ ಆತ್ಮೀಯರ ಜತೆಗೇ ನೀನಾ- ನಾನಾ ಎಂಬ ವಾದಕ್ಕೆ ಇಳಿಯಬೇಡಿ. ಎಲ್ಲಿಂದಲೋ ಶುರುವಾಗಿ ಬೇರೆಲ್ಲೋ ನಿಲ್ಲುವಂಥ ಸ್ಥಿತಿ ನಿರ್ಮಾಣ ಆಗುತ್ತದೆ. ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳಲು ಹತ್ತು ನಿಮಿಷ ಏಕಾಗ್ರತೆಯಿಂದ ಧ್ಯಾನ ಮಾಡಿ. ಬಿಳಿ ವಸ್ತ್ರವನ್ನು ಧರಿಸುವುದು ಉತ್ತಮ.

ಜನ್ಮಸಂಖ್ಯೆ 7

ಈ ದಿನ ನಿಮ್ಮ ಪಾಲಿಗೆ ಅನಿರೀಕ್ಷಿತಗಳ ಸರಮಾಲೆ ಕಾದಿರುತ್ತದೆ. ಸಾಧ್ಯವಾದಷ್ಟೂ ವೇಳಾಪಟ್ಟಿಯಂತೆ ಕೆಲಸ ಮಾಡುವುದಕ್ಕೆ ಪ್ರಯತ್ನಿಸಿ. ನಿಮ್ಮ ಸಾಮರ್ಥ್ಯ ಏನೇ ಇದ್ದರೂ ಅದನ್ನು ಇತರರ ಎದುರು ಹೇಳಿಕೊಳ್ಳುವುದು, ತೋರಿಸುವುದು ಮಾಡಬೇಡಿ. ಗಣಪತಿ ಆರಾಧನೆಯನ್ನು ಮಾಡುವುದು ಉತ್ತಮ.

ಜನ್ಮಸಂಖ್ಯೆ 8

ಹೊಸ ಲ್ಯಾಪ್ ಟಾಪ್, ಸ್ಮಾರ್ಟ್‌ಫೋನ್, ಗ್ಯಾಜೆಟ್‌ಗಳನ್ನು ಖರೀದಿಸುವ ಯೋಗ ಇದೆ. ಎಷ್ಟೋ ವರ್ಷಗಳ ನಂತರ ಹಳೇ ಗೆಳೆಯರು- ಗೆಳತಿಯರನ್ನು ಭೇಟಿ ಆಗುವಂಥ ಯೋಗ ಇದೆ. ಕಾರು ಅಥವಾ ದ್ವಿಚಕ್ರ ವಾಹನ ಖರೀದಿಗಾಗಿ ಸಾಲಕ್ಕೆ ಪ್ರಯತ್ನಿಸುವಂಥ ಸಾಧ್ಯತೆ ಇದೆ. ಈ ಒಂದು ದಿನ ನಿಮ್ಮ ಕೈಗೆ ಹಸಿರು ದಾರವನ್ನು ಕಟ್ಟಿಕೊಳ್ಳಿ.

ಜನ್ಮಸಂಖ್ಯೆ 9

ತುಂಬ ಚೆಂದಕ್ಕೆ ಯೋಜನೆಗಳನ್ನು ಮಾಡಿಕೊಳ್ಳುತ್ತೀರಿ. ಹಣಕಾಸಿನ ವಿಚಾರಕ್ಕೆ ಸ್ವಲ್ಪ ವೈಮನಸ್ಯ ಬರಬಹುದು. ಎಲ್ಲಿಯಾದರೂ ಮಾಡಿದ್ದ ಹೂಡಿಕೆಯನ್ನು ವಾಪಸ್ ತೆಗೆದುಕೊಳ್ಳುವ ಬಗ್ಗೆ ಗಂಭೀರವಾಗಿ ಆಲೋಚನೆ ಮಾಡಲಿದ್ದೀರಿ. ಸಮಚಿತ್ತವಾದ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ.

ಲೇಖನ- ಎನ್‌.ಕೆ.ಸ್ವಾತಿ

Published On - 6:39 am, Mon, 5 December 22