ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 22ರ ಭಾನುವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಗಂಭೀರ ಸ್ವರೂಪದ ಅಥವಾ ದೀರ್ಘಕಾಲದ ಕಾಯಿಲೆ- ಕಸಾಲೆಗಳಿಂದ ಬಳಲುತ್ತಿದ್ದಲ್ಲಿ ಅದು ಹೆಚ್ಚಾಗುವ ಅವಕಾಶಗಳಿವೆ. ಅಲರ್ಜಿ ಆಗುವಂಥ ಆಹಾರ- ಪಾನೀಯಗಳನ್ನು ಸೇವನೆ ಮಾಡಬೇಡಿ. ಸ್ನೇಹಿತರು ಸಂಬಂಧಿಗಳ ಜತೆಗೂಡಿ ಸುತ್ತಾಟಕ್ಕೆ ಹೋಗಬೇಕಾದ ಅನಿವಾರ್ಯ ಇದ್ದರೂ ಆರೋಗ್ಯದಲ್ಲಿ ನಿರ್ಲಕ್ಷ್ಯ ಮಾಡಬಾರದು. ಮನೆಗೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿ ಮಾಡುವಂಥ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ಚಿನ್ನ- ಬೆಳ್ಳಿ ಸೇರಿದಂತೆ ನಿಮ್ಮ ಬೆಲೆ ಬಾಳುವ ವಸ್ತುಗಳು, ದಾಖಲೆ- ಕಾಗದ ಪತ್ರಗಳನ್ನು ಬಹಳ ಜಾಗ್ರತೆಯಿಂದ ನೋಡಿಕೊಳ್ಳಿ. ಅದೆಷ್ಟೇ ಬಿಡುವಿಲ್ಲದ ಕೆಲಸ ಅಂತಿದ್ದರೂ ಬೆಲೆಬಾಳುವ ವಸ್ತುಗಳನ್ನು ಇತರರನ್ನು ನಂಬಿ, ನೀಡಬೇಡಿ. ಪುಷ್ಕಳವಾದ ಊಟ- ತಿಂಡಿ ಮಾಡುವಂಥ, ಸಂಗೀತ ಕಾರ್ಯಕ್ರಮಗಳಲ್ಲಿ ಭಾಗಿ ಆಗುವ ಯೋಗ ಇದೆ. ಮನೆ ದುರಸ್ತಿ ಬಗ್ಗೆ ಸಂಬಂಧಪಟ್ಟವರ ಜತೆಗೆ ಮಾತುಕತೆ ಆಡುವಂಥ ಸಾಧ್ಯತೆ ಇದೆ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಿ. ಒಂದು ಕಡೆ ಪಿತ್ರಾರ್ಜಿತ ಆಸ್ತಿ ವಿಚಾರ, ಭೂಮಿಗೆ ಸಂಬಂಧಿಸಿದ ವ್ಯಾಜ್ಯ ಇತ್ಯರ್ಥ ಆಗುವ ಅವಕಾಶಗಳಂತೂ ಇದ್ದೇ ಇದೆ. ಇದರ ಜತೆಗೆ ಈಗಾಗಲೇ ಕೋರ್ಟ್- ಕಟ್ಲೆಗಳಲ್ಲಿ ಇರುವ ವ್ಯಾಜ್ಯಗಳು ಸಂಧಾನದ ಮೂಲಕ ಪರಿಹರಿಸಿಕೊಳ್ಳುವ ಮಾರ್ಗ ದೊರೆಯಲಿದೆ. ಸಂಬಂಧಿಕರು ನಿಮ್ಮ ಬಳಿ ಸಾಲ ಕೇಳಿಕೊಂಡು ಬರುವ ಸಾಧ್ಯತೆ ಇದೆ. ಇದರಿಂದ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಮೂಡಬಹುದು.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ನಿಮ್ಮ ಸಂಗಾತಿ ಜತೆಗೆ ಮಾತನಾಡುವಾಗ ಗೌರವ ನೀಡಿ. ಆಡುವ ಮಾತಿನ ಜತೆಗೆ, ಬಳಸುವ ಶಬ್ದಗಳ ಆಯ್ಕೆಯಲ್ಲೂ ಎಚ್ಚರಿಕೆ ತುಂಬ ಮುಖ್ಯ. ಏಕೆಂದರೆ ಭಿನ್ನಾಭಿಪ್ರಾಯಗಳು, ಕೌಟುಂಬಿಕ ಕಲಹ ಬಾರದಂತೆ ಗಮನ ಹರಿಸಿ. ಆದರೆ ಈ ದಿನ ನಿಮ್ಮ ಪಾಲಿಗೆ ಅನುಕೂಲ ಏನೆಂದರೆ, ವಿದೇಶಗಳಿಂದ ಅಥವಾ ದೂರದ ಪ್ರದೇಶಗಳಿಂದ ಶುಭ ಸುದ್ದಿಯನ್ನು ನೀವು ನಿರೀಕ್ಷೆ ಮಾಡುತ್ತಿದ್ದಲ್ಲಿ ಬರಲಿದೆ. ಆದಾಯ ಮೂಲ ಹೆಚ್ಚು ಮಾಡಿಕೊಳ್ಳುವ ದಾರಿ ಗೋಚರಿಸಲಿದೆ.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ವ್ಯಾಪಾರ- ವ್ಯವಹಾರಗಳಲ್ಲಿ ಲಾಭದ ಪ್ರಮಾಣವು ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ. ಈಗಾಗಲೇ ಲಾಭ ಬರುವ ಸೂಚನೆ ಇದಲ್ಲಿ ಅದು ಬರುವುದು ಒಂದಿಷ್ಟು ತಡ ಆಗಬಹುದು. ಇನ್ನು ಈ ಹಿಂದೆ ನೀವು ಮಾಡಿದ್ದ ಷೇರು, ಮ್ಯೂಚುವಲ್ ಫಂಡ್ಸ್ ಹೂಡಿಕೆಯಿಂದ ಈಗ ಲಾಭವನ್ನು ತೆಗೆದುಕೊಳ್ಳುವುದಕ್ಕೆ ಯೋಜನೆ ರೂಪಿಸುತ್ತೀರಿ. ಮನೆ- ಸೈಟು, ಅಪಾರ್ಟ್ ಮೆಂಟ್ ಗಳಲ್ಲಿ ಹಣ ಹೂಡುವ ಬಗ್ಗೆ ಸಂಗಾತಿ ಜತೆಗೆ ಚರ್ಚೆ ಮಾಡಲಿದ್ದೀರಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ಈ ದಿನ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗಿರುತ್ತದೆ. ಅಂದ ಹಾಗೆ ನಿಮ್ಮ ಶತ್ರುಗಳು ತಮ್ಮತಮ್ಮಲ್ಲೇ ಭಾರೀ ಗೊಂದಲಕ್ಕೆ ಈಡಾಗುತ್ತಾರೆ. ಇನ್ನು ನೀವೇನಾದರೂ ಆಸ್ತಿಯನ್ನು ಮಾರಿ, ಅದನ್ನು ಬೇರೆ ಕಡೆ ಹೂಡಿಕೆ ಮಾಡಬೇಕು ಎಂದಿದ್ದಲ್ಲಿ ಅದು ಸಾಧ್ಯ ಆಗುತ್ತದೆ. ನಿರ್ಧಾರ ಮಾಡುವಾಗ ಅನುಭವಿಗಳ ಸಲಹೆ ಪಡೆಯಿರಿ. ನಿಮ್ಮ ಕೆಲಸ ಪೂರ್ಣಗೊಳಿಸುವ ಬಗ್ಗೆ ಇತರರು ಆಸಕ್ತಿ ವಹಿಸಲಿದ್ದಾರೆ. ಸ್ನೇಹಿತರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ತಾಯಿಯ ಆರೋಗ್ಯದ ಕಡೆಗೆ ಗಮನ ವಹಿಸಿ. ಮಾಡುವ ಕೆಲಸದಲ್ಲಿ ಏಕಾಗ್ರತೆ ಮುಖ್ಯ. ನಿಮ್ಮಿಂದ ಆಗದ ಕೆಲಸಗಳನ್ನು ಮಾಡಿಕೊಡುತ್ತೇನೆ ಎಂದು ಮಾತು ನೀಡದಿರಿ. ದಿನದ ಕೊನೆ ಹೊತ್ತಿಗೆ ಅಚ್ಚರಿಯ ಸುದ್ದಿಯೊಂದು ನಿಮ್ಮನ್ನು ಹುಡುಕಿಕೊಂಡು ಬರಲಿದೆ. ಆದರೆ ನೀವು ಅದನ್ನು ನಂಬಿದರೆ ಲಾಭ ಮಾಡಿಕೊಳ್ಳುವ ಅವಕಾಶ ಇದೆ. ಇನ್ನು ಕೈಗೆ ಬಂದಿರದ ಹಣವನ್ನು ನಂಬಿಕೊಂಡು, ಖರ್ಚನ್ನು ಮಾಡಬೇಡಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಮಕ್ಕಳ ವಿಚಾರದಲ್ಲಿ, ಅದರಲ್ಲೂ ಅವರು ಯಾರ ಜತೆ ಸ್ನೇಹದಿಂದ ಇದ್ದಾರೆ, ಹೇಗೆ ನಡೆದುಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಜಾಗ್ರತೆ ವಹಿಸಿ. ನೀವು ಇದಕ್ಕೂ ಮುನ್ನ ಮಾಡಿದ್ದ ಒಳ್ಳೆ ಕೆಲಸಗಳಿಂದ ಈಗ ಲಾಭ ಆಗಲಿದೆ. ಆದರೆ ಈ ಕಾರಣಕ್ಕೆ ತಲೆಗೆ ಅಹಂಕಾರ ಏರಬಾರದು. ಈ ದಿನ ಮನೆಗೆ ನೆಂಟರು ಬರುವ ಸಾಧ್ಯತೆ ಇದೆ. ನಿಮ್ಮಿಂದ ನೆರವು ನಿರೀಕ್ಷಿಸಬಹುದು. ಸಹಾಯ ಮಾಡುವುದಕ್ಕೆ ಸಾಧ್ಯವಾದರೆ ನೆರವಾಗಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ಹಣ ಬರುವುದಕ್ಕೆ ದಾರಿ ಕಂಡಂತೆಯೇ ಆಗುತ್ತದೆ, ಬರುತ್ತದೆ. ಅದನ್ನು ಸರಿಯಾಗಿ ವಿನಿಯೋಗ ಮಾಡುವುದು ನಿಮ್ಮಿಂದ ಸಾಧ್ಯವಾಗುವುದಿಲ್ಲ. ಪ್ರತಿಷ್ಠೆಗಾಗಿ ಎಲ್ಲೆಂದರಲ್ಲಿ ಖರ್ಚು ಮಾಡುವ ಅವಕಾಶಗಳು ಇವೆ. ಆದ್ದರಿಂದ ಖರ್ಚಿನ ವಿಷಯದಲ್ಲಿ ಯಾರ ಜತೆಗೂ ಸ್ಪರ್ಧೆಗೆ ನಿಲ್ಲದಿರಿ. ಮನಸ್ಸು ನಿಯಂತ್ರಣದಲ್ಲಿ ಇರಲಿ. ಮನರಂಜನೆಗಾಗಿ ಅಥವಾ ಹೋಟೆಲ್- ರೆಸ್ಟೋರೆಂಟ್ ಇಂಥವುಗಳಿಗೆ ಹಣ ಖರ್ಚಾಗುವ ಯೋಗ ಇದೆ.
ಲೇಖನ- ಎನ್.ಕೆ.ಸ್ವಾತಿ