Weekly Horoscope:ಜನವರಿ 22ರಿಂದ 28ರ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?

| Updated By: ರಮೇಶ್ ಬಿ. ಜವಳಗೇರಾ

Updated on: Jan 22, 2023 | 6:10 AM

ಜನವರಿ 22ರಿಂದ ಜ.28ರ ವರೆಗೆ ವಾರ ಭವಿಷ್ಯದಲ್ಲಿ ಯಾವ ರಾಶಿಯವರಿಗೆ ಲಾಭದಾಯಕ..? ಯಾವ ರಾಶಿಯವರಿಗೆ ನಷ್ಟ? ಎನ್ನುವುದನ್ನು ತಿಳಿದುಕೊಳ್ಳಿ.

Weekly Horoscope:ಜನವರಿ 22ರಿಂದ 28ರ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?
ದಿನಭವಿಷ್ಯ
Follow us on

ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಭವಿಷ್ಯ(Weekly Horoscope) ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹಾಗೂ ಕುತೂಹಲವಿರುತ್ತದೆ. ಅದರಂತೆ 2023ರ ಜನವರಿ 22ರಿಂದ ಜ.28ರ ವರೆಗಿನ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

ಮೇಷ :ನಿಮಗೆ ಇನ್ನು ಸುವರ್ಣ ಯುಗವೆಂದೇ ಹೇಳಬಹುದು.‌ ಕರ್ಮಾಧಿಪತಿಯು ಏಕಾದಶಸ್ಥಾನಕ್ಕೆ ಬಂದು ನಿಮಗೆ ಅನುಕೂಲವನ್ನು ಮಾಡಿಕೊಡಲಿದ್ದಾನೆ. ಇದರಿಂದ ನೀವು ಮಾಡುವ ಕೆಲಸಗಳು ಲಾಭವನ್ನು ತರಲಿವೆ. ವೃತ್ತಿಯಲ್ಲಿ ಉನ್ನತಸ್ಥಾನಕ್ಕೆ ಏರಬಹುದು. ಅನೇಕ ಅವಕಾಶಗಳೂ ಬರಬಹುದು. ವಿದೇಶಕ್ಕೆ ಪ್ರಯಾಣವನ್ನು ಬೆಳೆಸಬಹುದು. ಹಣದ ಹರಿವು ಚೆನ್ನಾಗಿರಲಿದೆ. ತಾಯಿಯಿಂದ ನಿಮಗೆ ಸಂಪತ್ತುಗಳು ಬರುವ ಸಾಧ್ಯತೆ ಇದೆ. ಅಶ್ವತ್ಥವೃಕ್ಷವನ್ನು ಅಶ್ವತ್ಥಮಂತ್ರವನ್ನು ಪಠಿಸುತ್ತಾ ಮೂರು ಬಾರಿ ಪ್ರದಕ್ಷಿಣೆ ಮಾಡಿರಿ.

ವೃಷಭ: ಏಕಾದಶದ ಗುರುವು ನಿಮಗೆ ಶುಭವನ್ನೇ ಪ್ರದಾನ ಮಾಡಲಿದ್ದಾನೆ. ನವಮದಲ್ಲಿ ಇರುವ ಶುಕ್ರ-ಚಂದ್ರ ನಿಮ್ಮ ಕಾರ್ಯಕ್ಕೆ ಬಲವನ್ನೂ ಕಾರ್ಯದಿಂದ ಕೀರ್ತಿಯನ್ನೂ ಸಂಪತ್ತನ್ನೂ ತರಲಿದ್ದಾರೆ. ಪೂರ್ವಪುಣ್ಯವು ಫಲಕೊಡುವ ಕಾಲ. ಕಲಾವಿದರು ಬೇರೆ ಬೇರೆ ಕಡೆಗಳಿಗೆ ಕಲಾಪ್ರದರ್ಶನಕ್ಕೆ ಪ್ರಯಾಣ ಬೆಳೆಸುವರು. ಅಷ್ಟಮದ ಬುಧನು ನಿಮಗೆ ಚರ್ಮವ್ಯಾಧಿಗಳನ್ನು ತಂದಾನು. ಷಷ್ಠದ ಕೇತುವು ದೀರ್ಘಕಾಲದ ಆರೋಗ್ಯದಿಂದ ಮುಕ್ತಿ, ನಿಶ್ಶತ್ರುಗಳನ್ನು ಮಾಡಲಿದ್ದಾನೆ. ಶಮೀವೃಕ್ಷವನ್ನು ಶನಿಮಂತ್ರವನ್ನು ಪಠಿಸಿಸುತ್ತ ಪ್ರದಕ್ಷಿಣೆ ಬನ್ನಿ.

ಮಿಥುನ: ಇಷ್ಟು ದಿನ ನಿಮಗೆ ಅಷ್ಟಮದ ಶನಿಯು ನಿಮಗೆ ಪ್ರಾಣಹರಣಸಮವಾದ ನೋವನ್ನೂ ಕೊಟ್ಟು ನವಮಕ್ಕೆ ಹೋಗಿದ್ದಾನೆ. ಆತನ ಮನೆಯೇ ಆಗಿದ್ದು ಪೂರ್ವಕರ್ಮದ ದೋಷಗಳನ್ನು ಸವೆಸುವನು. ಹೊಸ ರೀತಿಯ ಅವಕಾಶಗಳನ್ನು ದೊರಕಿಸಿಕೊಡುವನು. ಹೊಸ ಬದಲಾವಣೆಗಳಿಗೆ ಸಿದ್ಧರಾಗಿ. ಸಂಪತ್ತುಗಳು ನಿಮ್ಮನ್ನು ಸೇರಲಿವೆ. ಇಷ್ಟು ದಿನ ಅಪಜಯವನ್ನು ಕಂಡ ನಿಮಗೆ ಜಯವು ಸನಿಹಕ್ಕೆ ಬರಲಿದೆ. ಮಕ್ಕಳಿಂದ ನೋವನ್ನು ಅನುಭವಿಸಬೇಕಾಗಬಹುದು. ಗಣಪತಿಗೆ ಪ್ರಿಯವಾದ ದೂರ್ವಾಪತ್ರವನ್ನು ಸಮರ್ಪಿಸಿ. ವಾಹನದಿಂದ ತೊಂದರೆಗಳು ಆಗಬಹುದು, ಜಾಗರೂಕರಾಗಿರಿ.

ಕರ್ಕಾಟಕ: ಅಷ್ಟಮದ ಶನಿಯು ನಿಮಗೆ ಆರಂಭವಾಗಿದೆ. ಆತನು ನಿಮ್ಮ ಕಾರ್ಯಗಳನ್ನು ನಿಧಾನ ಮಾಡಿಸುವನು. ಆಲಸ್ಯವನ್ನೂ ತರುವನು.‌ ತಂತ್ರಜ್ಞರಿಗೆ ವಿದೇಶ ಪ್ರಯಾಣ, ಉದ್ಯೋಗದಲ್ಲಿ ಉನ್ನತಸ್ಥಾನವೂ ಲಭ್ಯವಾಗಲಿದೆ. ಷಷ್ಠದಲ್ಲಿರುವ ಬುಧನಿಂದ ನಿಮಗೆ ಸಹೋದರರೇ ಶತ್ರುಗಳಾಗಲಿದ್ದಾರೆ. ಕಲಹವನ್ನು ಮಾಡಿಕೊಳ್ಳಲು ಹೋಗಬೇಡಿ. ಸಂಪತ್ತು ವ್ಯಯವಾಗಲು ನಾನಾ ಮಾರ್ಗಗಳು ತೆರೆದುಕೊಳ್ಳುವುವು. ಶಮೀವೃಕ್ಷದ ಸಹವಾಸವನ್ನು ಇಟ್ಟುಕೊಳ್ಳಿ. ಶಿವನ ಪೂಜೆಯನ್ನು ಮಾಡಿ.

ಸಿಂಹ: ಷಷ್ಠಸ್ಥಾನದ ಶನಿಯು ಸಪ್ತಮಸ್ಥಾನಕ್ಕೆ ಹೋಗಿರುತ್ತಾನೆ. ಕೆಲಸಕಾರ್ಯಗಳು ನಿಧಾನವಾಗಲಿವೆ. ವಿಶೇಷವಾಗಿ ವಿವಾಹದ ಕೆಲಸಗಳು ಬಹಳ ನಿಧಾನವಾಗಿ ಸಾಗಲಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಇರುತ್ತದೆ. ಗುರುವೂ ಅಷ್ಟಮಸ್ಥಾನದಲ್ಲಿ ಇದ್ದಾನೆ. ಗೌರವಗಳು ಹೋಗುವ ಸಾಧ್ಯತೆ ಇದೆ. ಮಾನಸಿಕ ಕಿರಿಕಿರಿಗಳು ಬಹಳ ಇರಲಿವೆ. ನವಮಸ್ಥಾನದ ರಾಹುವು ನಿಮ್ಮನ್ನು ಕೆಟ್ಟ ಕಾರ್ಯಗಳಿಗೆ ಪ್ರೇರಿಸುವನು. ಕೇತುವು ತೃತೀಯದಲ್ಲಿ ಇದ್ದು ಪರಾಕ್ರಮವನ್ನು ಹೆಚ್ಚಿಸುವನು. ಧೈರ್ಯವನ್ನು ಕೊಡುವನು. ಕುಲಗುರುಗಳ ದರ್ಶನವನ್ನು ಮಾಡಿರಿ. ನಾಗದೇವರ ಪ್ರಾರ್ಥನೆ, ಪೂಜೆಗಳನ್ನು ಮಾಡಿರಿ.

ಕನ್ಯಾ:ನೀವು ಈ ವಾರದ ಸುಖೀವ್ಯಕ್ತಿಗಳು ಎಂದೇ ಹೇಳಬೇಕು. ಸಪ್ತಮದಲ್ಲಿರುವ ಗುರುವು ಸಕಲಸೌಭಾಗ್ಯವನ್ನೂ ಧನಕನಕಗಳನ್ನೂ ಉದ್ಯೋಗದಲ್ಲಿ ಉನ್ನತಸ್ಥಾನವನ್ನೂ ಸ್ಫುರದ್ರೂಪಿ ವ್ಯಕ್ತಿಗಳ ಜೊತೆ ವಿವಾಹವನ್ನೂ ಮಾಡಿಸುವನು. ಅಂದುಕೊಂಡ ಕಾರ್ಯಗಳೂ ಕೈಗೂಡುವುವು. ಷಷ್ಠಸ್ಥಾನಕ್ಕೆ ಬಂದಿರುವ ಶನಿಯು ನಿಮ್ಮನ್ನು ಆರೋಗ್ಯವಾಗಿ ಇರಿಸುವನು. ಶತ್ರುಗಳನ್ನೂ ನಾಶಮಾಡಿಸುವನು. ದ್ವಿತೀಯದಲ್ಲಿರುವ ಕೇತುವು ಪಿತ್ರಾರ್ಜಿತ ಆಸ್ತಿಯನ್ನು ಕಳೆಸುವನು. ಅಷ್ಟಮದ ರಾಹುವು ಆರೋಗ್ಯವನ್ನು ನೀಡುವನು. ದಶಮಸ್ಥಾನದ ಕುಜವು ಕಷ್ಟದ ಕೆಲಸವನ್ನು ಮಾಡಿಸುವನು. ಮಹಾವಿಷ್ಣುವು ನಿಮ್ಮನ್ನು ಕಾಪಾಡುವನು.

ತುಲಾ: ಶನಿಯು ತನ್ನ ಸ್ಥಾನವನ್ನು ಬದಲಿಸಿ ನಿಮ್ಮ ರಾಶಿಯಿಂದ ಪಂಚಮದಲ್ಲಿ ಇದ್ದಾನೆ. ಮಕ್ಕಳ ವಿಷಯದಲ್ಲಿ ಜಾಗರೂಕರಾಗಿರಿ. ಅವರೊಡನೆ ಮಾತನಾಡುವಾಗ ಸಿಟ್ಟುಗೊಳ್ಳಬೇಡಿ. ಹಾಗೆಂದು ಸ್ವೇಚ್ಛಾರಿಯನ್ನಾಗಿಯೂ ಮಾಡಬೇಡಿ. ಅವನ ಮೇಲೆ ಕಣ್ಣಿಟ್ಟಿರಿ. ನಿಮ್ಮ ಶಕ್ತಿಯೂ ಪ್ರಭಾವವೂ ಹಲ್ಲುಕಿತ್ತ ಹಾವಿನಂತಾಗುತ್ತದೆ. ನಿಮ್ಮ ಬುದ್ಧಿಯು ತಪ್ಪಾದ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಆರೋಗ್ಯವೂ ಕೆಡುವ ಸಾಧ್ಯತೆ ಇದೆ. ಷಷ್ಠದ ಗುರುವೂ ನಿಮಗೆ ಅಪಮಾನವನ್ನು ಮಾಡಿಸುವನು. ಮಾತಿಗೆ ಗೌರವವಿಲ್ಲದಂತೆ ಮಾಡಿಸಲಿದ್ದಾನೆ. ಪಂಚಮದಲ್ಲಿದ್ದ ಶುಕ್ರನು ವಾಹನಾದಿ ಲಾಭಗಳನ್ನು ಮಾಡುವನು. ಅಶ್ವತ್ಥವೃಕ್ಷದ ಪ್ರದಕ್ಷಿಣೆಯನ್ನು ಬೆಳಗ್ಗೆ ಸ್ನಾನದ ಅನಂತರ ಮಾಡಿರಿ.

ವೃಶ್ಚಿಕ: ನಿಮ್ಮ ರಾಶಿಯಿಂದ ಶನಿಯು ಚತುರ್ಥಸ್ಥಾನದಲ್ಲಿದ್ದಾನೆ. ಮನೆಯಲ್ಲಿ ಕಿರಿಕಿರಿಯ ವಾತಾವರಣವು ಇರಲಿದೆ. ಬಂಧುವರ್ಗದಿಂದ ಅವಮಾನವನ್ನು ಎದುರಿಸಬೇಕಾದೀತು. ವಿದೇಶದ ಪ್ರಯಾಣವನ್ನು ಷಷ್ಠದ ರಾಹುವು ನಿಮ್ಮ ಶತ್ರುಗಳು ನಾಶವಾಗುವಂತೆ ಮಾಡುವನು. ಸಪ್ತಮದಲ್ಲಿ ಇರುವ ಕುಜನು ಸ್ತ್ರೀ ಅಥವಾ ಪುರುಷರೊಂದಿಗೆ ಅಕ್ರಮಸಂಬಂಧಕ್ಕೆ ಪ್ರೇರಣೆಯನ್ನು ನೀಡುವನು. ಕೋಪಗಳನ್ನು ಅಧಿಕಗೊಳಿಸುವನು. ತೃತೀಯದಲ್ಲಿರುವ ರವಿಯು ನಿಮ್ಮ ಪ್ರಭಾವವನ್ನು ಹೆಚ್ಚಿಸುವನು. ಚತುರ್ಥದ ಶುಕ್ರನಿಂದ ಬಂಧುಗಳು ಸಹಾಯವನ್ನು ಮಾಡಲಿದ್ದಾರೆ. ಖದಿರವೃಕ್ಷವನ್ನು ಅಥವಾ ಸುಬ್ರಹ್ಮಣ್ಯನನ್ನು ಪೂಜಿಸಿ. ಆಪತ್ತಿನಿಂದಲೂ ಕೋಪದಿಂದಲೂ ದೂರವಿರುವಿರಿ.

ಧನು: ಶನಿಯು ತೃತೀಯಸ್ಥಾನದಲ್ಲಿರುತ್ತಾನೆ. ಅದು ಆತನ ಕ್ಷೇತ್ರವೇ ಆಗಿದೆ. ಇದರಿಂದ ಈ ರಾಶಿಯವರಿಗೆ ಅನೇಕಾನೇಕ ಲಾಭಗಳಿವೆ. ನ್ಯಾಯಾಲಯಕ್ಕೆ ಸಂಬಂಧಪಟ್ಟವರಿಗೆ ಅಧಿಕಲಾಭವಾಗಲಿದೆ. ಕಬ್ಬಿಣದ ವ್ಯಾಪರಿಗಳು ಲಾಭವನ್ನು ಪಡೆಯಲಿದ್ದಾರೆ. ಮನಸ್ಸು ಸ್ವಲ್ಪ ಕಿರಿಕಿರಿಯನ್ನು ಅನುಭವಿಸುವುದು. ವಿದ್ಯಾಭ್ಯಾಸದಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯಾಗಲಿದೆ. ಷಷ್ಠದ ಕುಜನು ನಿಮ್ಮ ಅನೇಕ ದಿನಗಳಿಂದ ಇರುವ ಶತ್ರುವು ಮಿತ್ರನಾಗಲಿದ್ದಾನೆ. ವಾಹನದಿಂದ ಆರೋಗ್ಯವೂ ಗುಣಮುಖವಾಗಲಿದೆ. ಏಕಾದಶ ಕೇತುವು ಭೂಮಿಯ ಒಳಗಿನ ಸಂಪನ್ಮೂಲಗಳಿಂದ ಲಾಭವನ್ನು ಕೊಡುವನು.

ಮಕರ: ಈ ರಾಶಿಗೆ ಸಾಡೇಸಾಥ್ ಶನಿಯ ಉತ್ತರಾಭಾಗವು ಆರಂಭವಾಗಿದೆ. ಸ್ವಸ್ಥಾನದಲ್ಲಿರುವ ಶನಿಯಿಂದ ನಿಮಗೆ ಅನಾಹುತವಾಗದೇ ಇರುವುದು. ತೃತೀಯದ ಗುರುವು ಮನಸ್ಸು ಕಿರಿಕಿರಿಯಿಂದ ಸ್ವಸ್ಥವಾಗಲಿದೆ. ಬಂಧುಗಳಿಂದ ವಂಚನೆಗೊಳ್ಳುವಿರಿ. ಪಂಚಮದ ಕುಜನು ನಿಮ್ಮನ್ನು ಕೆಟ್ಟ ಮಾರ್ಗಕ್ಕೆ ಕರೆದೊಯ್ಯುವನು. ನಿಮ್ಮ ಪ್ರತಿಭೆಯ ಮುಖವಾಡವನ್ನು ಕಳಚುವನು. ತಂದೆಯಿಂದ ಆಸ್ತಿ ಬರುವ ಸಾಧ್ಯತೆ ಅಥವಾ ಆಸ್ತಿಯ ಪ್ರಸ್ತಾಪಗಳು ಆಗಬಹುದು. ಇದಕ್ಕೆ ಸಂಬಂಧಪಟ್ಟಂತೆ ಸಣ್ಣ ವಾದಗಳೂ ನಡೆಯಬಹುದು. ಕೇತುವು ನಿಮ್ಮನ್ನು ಕೆಟ್ಟ ಕರ್ಮಗಳಿಗೆ ಪ್ರೇರಣೆ ನೀಡುವನು. ವ್ಯಯದ ಬುಧನು ಅನಾರೋಗ್ಯದಿಂದ ಮೋಸದಿಂದ ಹಣವನ್ನು ಖರ್ಚುಮಾಡಿಸುವನು. ಶ್ರೀರಾಮರಕ್ಷಾಸ್ತೋತ್ರವನ್ನು ಪಠಿಸಿರಿ.

ಕುಂಭ: ಪ್ರಥಮಸ್ಥಾನದಲ್ಲಿರುವ ಶನಿಯು ಆಲಸ್ಯವನ್ನು ಉಂಟುಮಾಡುವನು. ಮಧ್ಯಮದ ಶನಿಯು ಅರಂಭವಾಗಿದೆ. ದ್ವಿತೀಯದ ಗುರುವು ಸ್ವಲ್ಪ ಸಂಪತ್ತನ್ನು ನೀಡುವನು. ನಿಮ್ಮ ಬಗ್ಗೆ ಸಲ್ಲದ ಮಾತುಗಳು ಕೇಳಿಬರಬಹುದು. ತಂದೆಗೆ ನಿಮ್ಮ ವರ್ತನೆಯಿಂದ ಅನುಮಾನವು ಬರುವುದು. ಒಳ್ಳೆಯ ಅಭಿಪ್ರಾಯವಿರದು. ಪತ್ನಿಯ ಕಾರಣಕ್ಕೆ ಸಂಪತ್ತು ವ್ಯಯವಾಗಲಿದೆ. ನವಮದ ಕೇತು ದುಷ್ಕರ್ಮಕ್ಕೆ ಪ್ರೇರಣೆಯನ್ನು ನೀಡುವನು. ಏಕಾದಶದಲ್ಲಿ ಬುಧನಿದ್ದಾನೆ. ಕಲಾವಿದರಿಗೆ ಉತ್ತಮ ಅವಕಾಶಗಳು ಬರಲಿವೆ. ಸಾಹಿತ್ಯಕ್ಷೇತ್ರದಲ್ಲಿ ಇರುವವರಿಗೆ ಅಧಿಕವಾದ ಲಾಭವು ಆಗಲಿದೆ. ರುದ್ರಾಭಿಷೇಕವನ್ನು ಮಾಡಿಸಿ. ಗಣಪತಿಯ ಪ್ರಾರ್ಥನೆಯನ್ನು ಮಾಡಿರಿ.

ಮೀನ: ಈ ರಾಶಿಗೆ ಏಳುವರೆ ಶನಿಯು ಆರಂಭವಾಗಿದೆ. ಮಂದನು ಮಂದಗತಿಯಲ್ಲಿಯೇ ಎಲ್ಲ ಕೆಲಸಗಳನ್ನೂ ಮಾಡುವನು. ಬೇಗ ಕೆಲಸವಾಗಲೆಂದು ಹಣವನ್ನೂ ಖರ್ಚುಮಾಡಬೇಕಾಗಿಬರಬಹುದು. ಕಾರ್ಯಗಳು ಮಂದಗತಿಯಲ್ಲಿ ಸಾಗುತ್ತದೆ. ವಿವಾಹಕ್ಕೆ ಯೋಗ್ಯವಾದ ಸಮಯವಾಗಲಿದೆ ಅಥವಾ ನಿಶ್ಚಯವನ್ನಾದರೂ ಮಾಡಿಮುಗಿಸಿಕೊಳ್ಳಿ. ಅಷ್ಟಮದ ಕೇತುವುದು ಸ್ವಲ್ಪಮಟ್ಟಿನ ಶಾರೀರಿಕಪೀಡೆಯನ್ನು ತರುವನು. ದಶಮಸ್ಥಾನದ ಬುಧನಿಂದ ಶಿಕ್ಷಕವೃತ್ತಿಯವರಿಗೆ ಅನುಕೂಲವಾಗಲಿದೆ. ಶನಿಯು ವ್ಯಸ್ಥಾನಕ್ಕೆ ಬಂದು ಸಂಪತ್ತನ್ನು ನಷ್ಟಗೊಳಿಸುವನು.

ಲೇಖನ-ಲೋಹಿತಶರ್ಮಾ ಇಡುವಾಣಿ