Nitya Bhavishya: ಸಂಜೆ ವೇಳೆ ಈ ರಾಶಿಯವರಿಗೆ ಶುಭ ಸುದ್ದಿಯೊಂದು ಬರಲಿದೆ, ಕುಟುಂಬದಲ್ಲಿ ಸ್ವಲ್ಪ ಮಟ್ಟಿನ ಕಲಹಗಳು ಆಗಬಹುದು

| Updated By: Rakesh Nayak Manchi

Updated on: Jan 22, 2023 | 6:00 AM

Horoscope Today: ಜನವರಿ 22, 2023ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ. ರಾಹು ಕಾಲ 17:00 - 18:26, ಯಮಘಂಡ ಕಾಲ 12:44 - 14:10, ಗುಳಿಕ ಕಾಲ 15:35 - 17:00. ಸೂರ್ಯೋದಯ: ಬೆಳಗ್ಗೆ 07 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 25ನಿಮಿಷಕ್ಕೆ.

Nitya Bhavishya: ಸಂಜೆ ವೇಳೆ ಈ ರಾಶಿಯವರಿಗೆ ಶುಭ ಸುದ್ದಿಯೊಂದು ಬರಲಿದೆ, ಕುಟುಂಬದಲ್ಲಿ ಸ್ವಲ್ಪ ಮಟ್ಟಿನ ಕಲಹಗಳು ಆಗಬಹುದು
ರಾಶಿ ಭವಿಷ್ಯ
Follow us on

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 22 ಭಾನುವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಹೇಮಂತ ಋತು, ಮಕರಮಾಸ, ಮಹಾನಕ್ಷತ್ರ: ಉತ್ತರಾಷಾಢ, ಮಾಸ: ಮಾಘ, ಪಕ್ಷ: ಶುಕ್ಲ, ವಾರ: ಭಾನುವಾರ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಶ್ರವಣಾ ನಕ್ಷತ್ರಾ, ಯೋಗ : ವಜ್ರ, ಕರಣ : ಕಿಂಸ್ತಘ್ನ, ರಾಹು ಕಾಲ 17:00 – 18:26, ಯಮಘಂಡ ಕಾಲ 12:44 – 14:10, ಗುಳಿಕ ಕಾಲ 15:35 – 17:00. ಸೂರ್ಯೋದಯ – 07-03am, ಸೂರ್ಯಾಸ್ತ – 06-25pm.

ಮೇಷ: ಒಂಟಿತನ ನಿಮ್ಮನ್ನೇ ಅತಿಯಾಗಿ ಕಾಡಲಿದೆ. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಸಂಪತ್ತು ಸ್ವಲ್ಪ ವ್ಯಯವಾಗಲಿದೆ. ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ವ್ಯವಸ್ಥೆಗಳನ್ನು ಮಾಡಿಕೊಳ್ಳಿ. ಆಪ್ತರ ಸಲಹೆಯನ್ನು ಸ್ವೀಕರಿಸಿ. ಸಂಜೆಯೊಳಗೆ ನಿಮಗೆ ಶುಭವಾರ್ತೆಯೊಂದು ಬರಲಿದೆ. ಅಸಾಧ್ಯವೆನಿಸಿ ಕೆಲಸಕ್ಕೆ ಕೈ ಹಾಕಿ ಸುಟ್ಟುಕೊಳ್ಳಲು ಹೋಗಬೇಡಿ. ವಿದ್ಯಾರ್ಥಿಗಳು ಓದಿನ ಕಡೆ ಗಮನಕೊಡಿ.

ವೃಷಭ: ನಿಮ್ಮ ನಿರ್ಧಾರಗಳನ್ನು ಯಾರದೋ ಮಾತಿನ ಮೇಲೆ ಬದಲಾಯಿಸಬೇಡಿ. ನಿಮಗೆ ನಿಮ್ಮ ಯೋಜನೆಯ ಸ್ಪಷ್ಟವಾದ ಮಾಹಿತಿ ಇರಲಿ. ಸ್ನೇಹಿತರಿಂದ ಆಪತ್ಕಾಲದಲ್ಲಿ ಸಹಾಯವು ದೊರೆಯಲಿದೆ. ದೂರದ ಪ್ರಯಾಣವು ನಿಮಗೆ ಆಯಾಸವನ್ನು ಉಂಟುಮಾಡಬಹುದು. ತಂತ್ರಜ್ಞರಿಗೆ ಹೊಸ ಕೆಲಸಕ್ಕೆ ಆಹ್ವಾನಬರಬಹುದು. ವಾತದಿಂದ ಊತಗಳು ಉಂಟಾಗಬಹುದು. ವೈದ್ಯರ ಸಲಹೆಯನ್ನು ಪಡೆದು ಔಷಧೋಪಚಾರಗಳನ್ನು ಮಾಡಿರಿ.

ಮಿಥುನ: ಉದ್ಯೋಗದ ಸ್ಥಳದಲ್ಲಿ ಕಾರ್ಯಗಳು ನಿಧಾನವಾಗಲಿದೆ. ಒಂದಾದಮೇಲೊಂದು ಬರುವ ಕೆಲಸಗಳಿಂದ ಒತ್ತಡವು ಅತಿಯಾಗಲಿದೆ. ವಾಗ್ವಾದಗಳು ನಡೆಯಬಹುದು. ಅಂತಹ ಸಂದರ್ಭದಲ್ಲಿ ಮೌನವಹಿಸುವುದು ಒಳ್ಳೆಯದು. ಭರವಸೆಯೇ ನಿಮ್ಮ ಭವಷ್ಯಕ್ಕೆ ಆಧಾರವಾಗಿರಲಿದೆ. ಹೀಗೆಯೇ ಆಗಬೇಕು ಎನ್ನುವ ಯಾವುದೇ ಗಟ್ಟಿ ನಿರ್ದಾರಗಳು ಬೇಡ. ಅದರಲ್ಲಿ ಸ್ವಲ್ಪ ಬದಲಾವಣೆ ಆಗುವ ಸಾಧ್ಯತೆ ಇರುತ್ತದೆ.

ಕಟಕ: ಉತ್ತಮವಾದ ಆರೋಗ್ಯವು ಇಂದು ಇರಲಿದೆ. ಕುಟುಂಬದಲ್ಲಿ ಸ್ವಲ್ಪ ಮಟ್ಟಿನ ಕಲಹಗಳು ಆಗಬಹುದು. ತಂದೆ ಮತ್ತು ಮಕ್ಕಳು ಒಮ್ಮನಸ್ಸಿನಿಂದ ಇರಲು ಯತ್ನಿಸಿ. ನಿಮ್ಮ ಕನಸುಗಳೆಲ್ಲವೂ ನನಸಾಗುವ ನಂಬಿಕೆಯನ್ನು ಇಟ್ಟುಕೊಂಡಿರಿ. ದೈವವು ನಿಮ್ಮ ಕನಸನ್ನು ನನಸಾಗಿಸಲು ಸಮಯವನ್ನು ತೆಗದುಕೊಳ್ಳುವುದು. ಸ್ವಂತ ಉದ್ಯೋಗಿಗಳಿಗೆ ಲಾಭವಾಗಲಿದೆ. ವಿವಾಹದ ಮಾತುಕತೆಗಳು ವಿಳಂಬವಾಗಬಹುದು.

ಸಿಂಹ: ಏಕಾಗ್ರತೆಯ ಕೊರತೆಯು ಇರಲಿದೆ. ಸಮಾಜಿಕವಾದ ಗೌರವಗಳು ನಿಮಗೆ ಸಿಗಬಹುದು. ಸಮಾರಂಭಗಳಿಗೆ ಹೋಗಲಿದ್ದೀರಿ. ಕಲಾವಿದರಿಗೆ ದೊಡ್ಡ ಕೀರ್ತಿಯು ಲಭಿಸಬಹುದು. ಎತ್ತರದ ಪ್ರದೇಶಗಳಿಗೆ ಹೋಗಬಹುದು. ಕಛೇರಿಯಲ್ಲಿ ನಿಮ್ಮ ಕೆಲಸಗಳಿಗೆ ಅಡ್ಡಿಯನ್ನು ಉಂಟುಮಾಡಲು ಕೆಲವರು ಇರುತ್ತಾರೆ. ಚಾತುರ್ಯದಿಂದ ಕೆಲಸಗಳನ್ನು ಮಾಡಿ. ನಿಮ್ಮ ಅಂತರಂಗವನ್ನು ಪೂರ್ಣವಾಗಿ ಬಿಚ್ಚಿಡಲು ಹೋಗಬೇಡಿ.

ಕನ್ಯಾ: ಅದೃಷ್ಟವಿದೆ ಎಂದು ಏನನ್ನಾದರೂ ಮಾಡಲು ಹೋಗಬೇಡಿ. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎನ್ನುವುದು ನಿಮಗೆ ಗೊತ್ತಿರಬೇಕು. ಅನ್ಯರಿಂದ ವಂಚನೆಗೆ ಒಳಗಾಗಬಹುದು. ದ್ವಂದ್ವದಲ್ಲಿ ಇರುವ ನಿಮಗೆ ಸ್ಪಷ್ಟವಾದ ಮಾರ್ಗವನ್ನು ಬುದ್ಧಿಯ ಮೂಲಕ ದೈವವೇ ಸೂಚಿಸುವುದು. ಹಾಗಯೇ ಮುಂದುವರಿಯಿರಿ. ಉದರಕ್ಕೆ ಸಂಬಂಧಿಸಿದ ರೋಗವು ಅತಿಯಾಗಬಹುದು. ಮಕ್ಕಳು ಮನೆಗೆ ಕರೆಯಬಹುದು, ಅಲ್ಲಿಗೆ ಹೋಗುವ ಮನಸ್ಸು ಮಾಡುವಿರಿ.

ತುಲಾ: ಭೂಮಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮೆಟ್ಟಿಲೇರಬಹುದು. ದಾಂಪತ್ಯದಲ್ಲಿ ಉಂಟಾದ ಕಲಹವು ವಿಚ್ಛೇದನಕ್ಕೆ ಕಾರಣವಾಗಬಹುದು. ಪೂಜ್ಯರ ಭೇಟಿಯಾಗಲಿದ್ದು ನಿಮ್ಮ ಅನೇಕ ಸಮಸ್ಯೆಗಳು ಪರಿಹಾರವಾಗಲಿವೆ. ಕೃಷಿಕರಿಗೆ ಅಷ್ಟಾಗಿ ಲಾಭವು ಇರುವುದಿಲ್ಲ. ಈ ಮೊದಲೇ ಗೊತ್ತಾಗಿದ್ದರೆ ಚೆನ್ನಾಗಿತ್ತು ಎಂದು ಅನ್ನಿಸುತ್ತದೆ. ಆದರೆ ಕಾಲವು ಮುಂದೆ ಬಂದಿರುತ್ತದೆ. ಈಗೇನು ಮಾಡಬೇಕು ಎನ್ನುವುದು ಆಲೋಚಿಸಿ.

ವೃಶ್ಚಿಕ: ಶ್ರಮಕ್ಕೆ ತಕ್ಕ ಫಲವನ್ನು ಎಣಿಸದೇ ಅದಕ್ಕೂ ಮೀರಿದ ಫಲವನ್ನು ಕಲ್ಪಿಸಿಕೊಂಡು ಈಗ ದುಃಖಪಡುವಿರಿ. ಎಷ್ಟೋ ವರ್ಷದ ಅನಂತರ ನಿಮ್ಮನ್ನು ಭೇಟಿಯಾಗಲು ಸ್ನೇಹಿತರು ಬರಲಿದ್ದಾರೆ. ಮಕ್ಕಳಿಂದ ಎದುರುತ್ತರವನ್ನು ಪಡೆದು ದುಃಖಿಸುವಿರಿ. ಸ್ನೇಹಿತರ ಜೊತೆ ದೂರದ ಊರಿಗೆ ಪ್ರಯಾಣವನ್ನು ಮಾಡುವಿರಿ. ನಿಮ್ಮ ನಕಾರಾತ್ಮಕ ಆಲೋಚನೆಗಳನ್ನು ಇನ್ನೊಬ್ಬರಮೇಲೆ ಹೇರಲು ಪ್ರಯತ್ನಿಸಬೇಡಿ. ಕುಳಿತಲ್ಲೇ ಕುಳಿತುಕೊಳ್ಳುವ ಮನಸ್ಸಿಲ್ಲದೇ ವ್ಯಗ್ರರಾಗಿರುವಿರಿ.

ಧನು: ಅನಿರೀಕ್ಷಿತವಾದ ಧನವ್ಯಯವು ನಿಮ್ಮಲ್ಲಿ ಆತಂಕವನ್ನು ತರಲಿದೆ. ಕಛೇರಿಯಿಂದ ವಿದೇಶಕ್ಕೆ ಹೋಗುವ ಪ್ರಸ್ತಾಪವು ಬರಬಹುದು. ಸಂತಾನದಿಂದ ಸಂತಸವು ಉಂಟಾಗಲಿದೆ‌. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿ ಧನವ್ಯಯವಾಗುವುದು. ಏಕಾಂತವನ್ನು ಇಷ್ಟಪಡುವಿರಿ. ತಂತ್ರಜ್ಞಾನರಾಗಿದ್ದರೆ ಕಛೇರಿಯಲ್ಲಿ ಕಿರಿಕಿರಿಯುಂಟಾಗಲಿದ್ದು ಕೆಲಸವನ್ನು ಬಿಡಲೂಬಹುದು. ನೀರಿನ ಸ್ಥಾನಕ್ಕೆ ಹೋದಾಗ ಜಾಗರೂಕರಾಗಿರಿ.

ಮಕರ: ವಿನಾಕಾರಣ ವ್ಯಾಜ್ಯ ಮಾಡಲು ಹೋಗಬೇಡಿ. ನಿಮ್ಮ ಮೇಲೇ ಅಪರಾಧವು ಬರಬಹುದು. ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ವಾಹನದಿಂದ ಆಗುವ ಅಪಘಾತವು ನೂಲೆಳೆಯ ಅಂತರದಲ್ಲಿ ಬಜಾವಾಗುವಿರಿ. ಪೂರ್ವಕೃತ ಉಪಕಾರವೇ ನಿಮಗೆ ಬೇಕಾದಾಗ ಸಹಾಯಕ್ಕೆ ಬರುವುದು. ಗೃಹ ನಿರ್ಮಾಣ ಕಾರ್ಯವು ವೇಗವನ್ನು ಪಡೆಯಲಿದೆ. ಇಂಜಿನಿಯರಿಂಗ್ ಆಗಿದ್ದು ಸ್ವಂತ ಉದ್ಯಮವನ್ನು ಮಾಡುತ್ತಿದ್ದವರಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ.

ಕುಂಭ: ನಿಮ್ಮ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲು ಜನರು ಬಹಳ ಪ್ರಯತ್ನಿಸುವರು. ನಿಮ್ಮ ನಡೆಯು ಅರ್ಥವಾಗದ್ದಾಗಿರುತ್ತದೆ. ಹಣವನ್ನು ಹೊಂದಿದ್ದರೂ ನಿರ್ಧನಿಕರಂತೆ ಇರುವಿದು ನಿಮ್ಮ ಸ್ವಭಾವವಾಗಿರುತ್ತದೆ. ಐಷಾರಾಮಿ ಜೀವನವನ್ನು ಇಷ್ಟಪಡುತ್ತೀರಿ. ಅದಕ್ಕೋಸ್ಕರ ಶ್ರಮಿಸುತ್ತೀರಿ. ಅನಿರೀಕ್ಷಿತವಾಗಿ ಧನಾಗಮನವಾಗಲಿದೆ. ಸ್ನೇಹಿತರು ನಿಮ್ಮನ್ನು ಮೆಚ್ಚಿಕೊಳ್ಳುವರು. ಅವರಿಗೆ ಎಂದಿಗೂ ಸಹಾಯವನ್ನು ಮಾಡುವಿರಿ.

ಮೀನ: ಒಂದೇ ಬಾರಿ ನಾಲ್ಕಾರು ಕೆಲಸಗಳನ್ನು ಮಾಡಲು ಇಚ್ಛಿಸುವಿರಿ. ನಿಮ್ಮ ನಡಿಗೆ ಬಹಳ ವೇಗವಾಗಿರುತ್ತದೆ. ಒಂದು ಘಟನೆಯಂತೆ ಇನ್ನೊಂದು ಘಟನೆಯನ್ನು ಊಹಿಸಲು ಹೋಗಿ ಹಳ್ಳಕ್ಕೆ ಬೀಳುವಿರಿ. ಯಾರನ್ನೂ ಅನುಕರಿಸಲು ಹೋಗಬೇಡಿ. ಅವರಿಂದ ಬೈಗುಳವನ್ನು ತಿನ್ನಬೇಕಾದೀತು. ಬಂಧುಗಳು ನಿಮ್ಮನ್ನು ಕಂಡು ನಕ್ಕಾರು. ನಿಮ್ಮ ಕೆಲಸದ ಮೂಲಕ ಅವರಿಗೆ ಉತ್ತರವನ್ನು ಕೊಡಲು ಹೋಗಿ. ಮಾತಿನಿಂದ ಮಾತೇ ಬೆಳೆಯುವುದು, ಕೆಲಸವಲ್ಲ.

-ಲೋಹಿತಶರ್ಮಾ, ಇಡುವಾಣಿ