Personality Test : ಮುಖದ ಅಂದ ಹೆಚ್ಚಿಸುವ ಹುಬ್ಬುಗಳ ಆಕಾರವೇ ಬಿಚ್ಚಿಡುತ್ತೆ ನಿಮ್ಮ ನಿಗೂಢ ಗುಣಸ್ವಭಾವ
ಸಾಮಾನ್ಯವಾಗಿ ದೇಹದ ಪ್ರತಿಯೊಂದು ಭಾಗಗಳು ಕೂಡ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆ. ಕಣ್ಣು, ಕಿವಿ, ಮೂಗು, ಹಣೆ, ಕೈಬೆರಳು, ನಾಲಗೆ, ತುಟಿಗಳ ಆಕಾರದಿಂದಲೇ ವ್ಯಕ್ತಿಯ ಗುಣಸ್ವಭಾವವನ್ನು ತಿಳಿದುಕೊಳ್ಳುವುದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಈ ಹುಬ್ಬುಗಳು ಕೂಡ ವ್ಯಕ್ತಿತ್ವವನ್ನು ಬಹಿರಂಗಪಡಿಸುತ್ತದೆ. ಹೌದು, ಒಬ್ಬರ ಹುಬ್ಬಿನಂತೆ ಇನ್ನೊಬ್ಬರ ಹುಬ್ಬುಗಳು ಇರುವುದಿಲ್ಲ. ಆದರೆ ದಪ್ಪ, ತೆಳು, ನೇರ, ಕಮಾನು ಹೀಗೆ ಭಿನ್ನ ಆಕಾರಗಳಲ್ಲಿ ವಿಂಗಡಿಸಿ, ಆಯಾ ಆಕಾರಕ್ಕನುಸಾರವಾಗಿ ವ್ಯಕ್ತಿತ್ವದ ಗುಣಲಕ್ಷಣಗಳನ್ನು ತಿಳಿಯಬಹುದು. ಹಾಗಾದ್ರೆ ಈ ಚಿತ್ರದಲ್ಲಿರುವಂತೆ ನಿಮ್ಮ ಹುಬ್ಬು ಯಾವ ಆಕಾರದಲ್ಲಿದೆ? ನೇರವಾಗಿದ್ದರೆ ನಿಮ್ಮ ವ್ಯಕ್ತಿತ್ವ ಹೀಗಿರುತ್ತದೆಯಂತೆ, ಈ ಕುರಿತಾದ ಮಾಹಿತಿ ಇಲ್ಲಿದೆ.
ಸಾಂದರ್ಭಿಕ ಚಿತ್ರ
ಮುಖದ ಸೌಂದರ್ಯ ಹೆಚ್ಚಿಸುವುದೇ ಈ ಹುಬ್ಬುಗಳು. ಆದರೆ, ಎಲ್ಲರ ಹುಬ್ಬುಗಳು ಒಂದೇ ರೀತಿ ಇರುವುದಿಲ್ಲ. ಕೆಲವರು ದಟ್ಟವಾದ ಹುಬ್ಬನ್ನು ಹೊಂದಿದ್ದರೆ, ಇನ್ನು ಕೆಲವರು ತೆಳುವಾದ ಹುಬ್ಬನ್ನು ಹೊಂದಿರುತ್ತಾರೆ. ಆದರೆ ಹೆಚ್ಚಿನ ಮಹಿಳೆಯರು ದಟ್ಟವಾದ ಹುಬ್ಬು ಇರಬೇಕು ಎಂದು ಬಯಸುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಸಿಗುವ ಹಲವಾರು ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಮುಖದ ಸೌಂದರ್ಯ ಹೆಚ್ಚಿಸುವ ಈ ಹುಬ್ಬುವಿನಲ್ಲಿ ವ್ಯಕ್ತಿತ್ವವು ಬಹಿರಂಗಗೊಳ್ಳುತ್ತದೆ ಎಂಬುದು ಹೆಚ್ಚಿನವರಿಗೆ ತಿಳಿದಿಲ್ಲ. ನಿಮ್ಮ ಹುಬ್ಬುಗಳ ಆಕಾರಗಳ ಹೇಗಿದೆ ಎನ್ನುವ ಆಧಾರದ ಮೇಲೆ ನಿಮ್ಮ ನಿಗೂಢ ಗುಣಸ್ವಭಾವವನ್ನು ಕಂಡುಕೊಳ್ಳಬಹುದು.
- ನೇರವಾದ ಹುಬ್ಬುಗಳು : ನೀವು ನೇರ ಹುಬ್ಬುಗಳನ್ನು ಹೊಂದಿರುವ ವ್ಯಕ್ತಿಗಳು ಭಾವನಾತ್ಮಕವಾಗಿರುವುದಕ್ಕಿಂತ ತರ್ಕಬದ್ಧವಾಗಿರುತ್ತಾರೆ. ಈ ಜನರ ವ್ಯಕ್ತಿತ್ವವು ಸ್ಪಷ್ಟತೆ ಮತ್ತು ಪ್ರಾಯೋಗಿಕತೆಯನ್ನು ಪ್ರತಿಬಿಂಬಿಸುತ್ತದೆ. ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ನೂರು ಬಾರಿ ಯೋಚಿಸುತ್ತಾರೆ. ಭಾವನಾತ್ಮಕ ಸ್ಥಿರವಾಗಿರುವ ವ್ಯಕ್ತಿಗಳಿಗೆ ಹೆಚ್ಚು ಆದ್ಯತೆಯನ್ನು ನೀಡುವ ವ್ಯಕ್ತಿಗಳು ಇವರಾಗಿರುತ್ತಾರೆ. ವಿಷಯಗಳನ್ನು ಇರುವಂತೆ ಹೇಳುವ ಸ್ವಭಾವವು ಈ ಜನರದ್ದಾಗಿರುತ್ತದೆ. ವಿಶ್ವಾಸಾರ್ಹ ವ್ಯಕ್ತಿಯಾಗಿದ್ದು, ಸುತ್ತಮುತ್ತಲಿನ ಜನರು ಈ ವ್ಯಕ್ತಿಗಳ ಬಳಿ ಸಲಹೆಗಳನ್ನು ಪಡೆದುಕೊಳ್ಳುತ್ತಾರೆ. ಸಮಚಿತ್ತದಿಂದ ಸನ್ನಿವೇಶಗಳನ್ನು ಮೌಲ್ಯಮಾಪನ ಮಾಡುವ ಸಾಮರ್ಥ್ಯವಿದ್ದು, ಎಲ್ಲಾ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳುತ್ತಾರೆ.
- ಕಮಾನಿನಾಕಾರದ ಹುಬ್ಬುಗಳು : ಹುಬ್ಬುಗಳು ಕಮಾನಿನಾಕಾರದಲ್ಲಿದ್ದರೆ ಈ ಜನರಲ್ಲಿ ಸೂಕ್ಷ್ಮ ಸ್ವಭಾವ ಹೊಂದಿದ್ದು, ಮಹತ್ವಾಕಾಂಕ್ಷೆ, ತಾಳ್ಮೆ ಮತ್ತು ನಾಯಕತ್ವದ ಗುಣ ಅಧಿಕವಾಗಿರುತ್ತದೆ. ಹೊಸ ಜನರೊಂದಿಗೆ ಆರಾಮದಾಯಕವಾಗಿ ಬೆರೆಯುತ್ತಾರೆ. ಆತ್ಮಾವಲೋಕನ ಮತ್ತು ಚಿಂತನಶೀಲ ಸ್ವಭಾವವನ್ನು ಹೊಂದಿದ್ದು, ಯಾವುದೇ ಪರಿಸ್ಥಿತಿಯಿರಲಿ ಮಾನಸಿಕವಾಗಿ ನಿಯಂತ್ರಣಕಾಯ್ದುಕೊಳ್ಳುತ್ತಾರೆ. ಭಾವನೆಗಳು ಹಾಗೂ ನಿರ್ಧಾರಗಳ ಮೇಲೆ ನೀವು ಯಾವಾಗಲೂ ನಿಯಂತ್ರಣ ಸಾಧಿಸುವ ಗುಣವನ್ನು ಹೊಂದಿರುತ್ತಾರೆ. ಯಾವ ವಿಷಯವೇ ಇರಲಿ, ನೇರವಾಗಿ ತಿಳಿಸದೆ ಸಿಹಿಲೇಪಿಸಿ ಹೇಳಿಕೆಯ ಮೂಲಕ ಇತರರಿಗೆ ತಲುಪಿಸಲು ಇಷ್ಟಪಡುತ್ತಾರೆ. ಈ ಗುಣಗಳನ್ನು ಹೊಂದಿದ್ದರೂ ಕೂಡ ಯಾರನ್ನಾದರೂ ಹೃದಯಕ್ಕೆ ಹತ್ತಿರವಾಗಿಸಿಕೊಳ್ಳಲು ನಿಮಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಈ ವ್ಯಕ್ತಿಗಳಲ್ಲಿ ಭಾವನಾತ್ಮಕವಾಗಿ ಸ್ಪಂದಿಸುವ ಗುಣ ಹೆಚ್ಚಿದ್ದು, ಪ್ರಭಾವಶಾಲಿ ವ್ಯಕ್ತಿತ್ವದಿಂದ ಸಮಾಜದಲ್ಲಿ ಗುರುತಿಸಿಕೊಳ್ಳುತ್ತಾರೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ