Horoscope: ದಿನ ಭವಿಷ್ಯ; ಯಾರಿಂದಲಾದರೂ ಮೋಸ ಹೋಗುವ ಸಾಧ್ಯತೆ ಇದೆ
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಮೇ 22 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ 22) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಅನೂರಾಧಾ, ಯೋಗ: ವರಿಯಾನ್, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 54 ನಿಮಿಷಕ್ಕೆ, ರಾಹು ಕಾಲ 12:29 ರಿಂದ 14:06ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 07:41ರಿಂದ ಬೆಳಗ್ಗೆ 9:17ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:53 ರಿಂದ 12:29ರ ವರೆಗೆ.
ಸಿಂಹ ರಾಶಿ :ಇಂದು ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಾಗಲಿದೆ. ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಇರುವಿರಿ. ಸಂಶೋಧನೆ ಮಾಡುತ್ತಿರುವವರಿಗೆ ಶುಭವಾರ್ತೆ ಇರಲಿದೆ. ಪ್ರೀತಿಪಾತ್ರರ ಜೊತೆ ಉದ್ವೇಗದಿಂದ ಮಾತನಾಡಿ ದೂರ ಮಾಡಿಕೊಳ್ಳುವಿರಿ. ನಿಮ್ಮ ಹಾಸ್ಯ ಸ್ವಭಾವವು ಜನರಿಗೆ ಮೆಚ್ಚುಗೆ ಆಗಲಿದೆ. ಸಹೋದ್ಯೋಗಿಗಳ ಜೊತೆ ಸಣ್ಣ ವಿವಾದ ಆಗಬಹುದು. ಯಾರಿಂದಲಾದರೂ ಮೋಸ ಹೋಗುವ ಸಾಧ್ಯತೆ ಇದೆ. ಕೆಲವು ಘಟನೆಗಳು ನೀವು ಅಂದಿಕೊಂಡಂತೆ ಆಗುವುದು. ಆದಾಯದ ಭಾಗವನ್ನು ದಾನ ಮಾಡುವ ಆಸೆ ಬರಬಹುದು. ಗೆಳೆಯರ ಮಾತನ್ನು ಗೌರವಿಸಿದ್ದು ಅವರಿಗೆ ಸಂತೋಷವಾಗಲಿದೆ. ಕಲಾವಿದರಿಗೆ ಪ್ರಶಂಸೆಯು ಸಿಗಲಿದೆ. ಪ್ರಭಾವಿ ವ್ಯಕ್ತಿಗಳ ಜೊತೆ ಗೌರವದಿಂದ ವರ್ತಿಸಿ.
ಕನ್ಯಾ ರಾಶಿ :ನಿಮ್ಮ ವೃತ್ತಿಜೀವನವನ್ನು ಯಶಸ್ಸನ್ನು ಸಾಧಿಸಲು ಶ್ರಮವಹಿಸುವಿರಿ. ನಿಮ್ಮ ಉದ್ಯೋಗ ಅಭಿವೃದ್ಧಿಗೆ ಉತ್ತಮ ಆಲೋಚನೆಗಳನ್ನು ಮಾಡುತ್ತ ಮುಂದುವರಿಯಿರಿ. ಹಿರಿಯ ಅಧಿಕಾರಿಗಳ ಸಲಹೆಯನ್ನು ಪಡಯುವಿರಿ. ಅವರಿಂದ ಮೆಚ್ಚುಗೆ ಸಿಗಲಿದೆ. ಹಣಕಾಸಿನ ವಿಷಯಗಳಲ್ಲಿ ಸ್ವಲ್ಪ ಸಂಕಷ್ಟವಾಗಲಿದೆ. ಸಂಗಾತಿಯ ಜೊತೆ ಸಮಯ ಚೆನ್ನಾಗಿರಲಿದೆ ಉತ್ತಮವಾಗಿರುತ್ತದೆ. ನಿಮ್ಮ ಸಂಬಂಧವು ಮತ್ತಷ್ಟು ಆಪ್ತವಾಗಲು ಯೋಚಿಸುವಿರಿ. ಇನ್ನೊಬ್ಬರ ಸಂಧಾನಕ್ಕೆ ಮಧ್ಯಸ್ತಿಕೆಯನ್ನು ವಹಿಸುವಿರಿ. ಕಛೇರಿಯ ವ್ಯವಹಾರವು ನಿಮಗೆ ಸರಿ ಕಾಣಿಸದೇ ಕಲಹವಾಗುವುದು. ಬಿಗುಮಾನವನ್ನು ಬಿಟ್ಟು ಎಲ್ಲರ ಜೊತೆ ಬೆರೆಯುವ ಅಭ್ಯಾಸವು ಬೇಕಾಗುವುದು. ನೆಮ್ಮದಿಗಾಗಿ ಚಡಪಡಿಸುವಿರಿ. ಸಂಗಾತಿಗೆ ಬೇಕಾದ ವಸ್ತುವನ್ನು ಕೊಡಿಸುವಿರಿ. ಒತ್ತಡವು ನಿಮಗೆ ಯಾವ ವ್ಯವಹಾರಕ್ಕೂ ಆಸಕ್ತಿ ಇರದಂತೆ ಮಾಡುವುದು. ಯಾರ ಮಾತನ್ನೂ ಕೇಳುವ ತಾಳ್ಮೆ ಇರದು.
ತುಲಾ ರಾಶಿ :ನಿಮ್ಮ ಕುಟುಂಬ ಜೀವನವು ಉತ್ತಮವಾಗಿರಲಿದೆ. ಇಂದು ಕೌಟುಂಬಿಕ ಜೀವನದಲ್ಲಿ ನೀವು ತೃಪ್ತರಾಗಿರುವಿರಿ. ಹೊಸ ಮನೆಯ ನಿರ್ಮಾಣದ ಬಗ್ಗೆ ಯೋಜನೆಯನ್ನು ಸಿದ್ಧಗೊಳಿಸಿಕೊಳ್ಳುವಿರಿ. ಅನಿರೀಕ್ಷಿತ ಶುಭ ಸುದ್ದಿಗಳು ಮನೆಯಲ್ಲಿ ಸಂತೋಷವನ್ನು ಉಂಟುಮಾಡಲಿದೆ. ಪೂರ್ವಜರ ಆಸ್ತಿಯನ್ನು ಪಡೆಯುವ ಬಗ್ಗೆ ಮಾತುಕತೆಗಳು ನಡೆಯಲಿವೆ. ನಿಮ್ಮ ಪ್ರೀತಿಯಲ್ಲಿ ನೀವು ಯಾವುದೇ ಮಹತ್ವದ ಬದಲಾವಣೆ ಇಲ್ಲದೇ ಸಪ್ಪೆ ಎನಿಸಬಹುದು. ಈ ಸಮಯದಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಏನಾದರೂ ವಿವಾದವನ್ನು ಮಾಡುವಿರಿ. ದೂರದೂರಿಗೆ ಪ್ರಯಾಣ ಮಾಡುವ ನಿಮಗೆ ಕೆಲವು ಸಲಹೆಗಳು ಬೇಕಾಗುವುದು. ಹಣಕಾಸಿನ ಕೊರತೆಯಿಂದ ಯಾವದೋ ಕಾರ್ಯವನ್ನು ಮಾಡುವಿರಿ. ಸಿಟ್ಟಿನಿಂದ ಇಂದು ಖುಷಿಯ ವಾತಾವರಣದಿಂದ ದೂರವಿರುವಿರಿ. ಪರೋಕ್ಷವಾಗಿ ನಿಮ್ಮವರನ್ನು ದ್ವೇಷಿಸುವಿರಿ. ಮಕ್ಕಳ ಮೇಲೆ ಅತಿಯಾದ ಮೋಹವು ಬೇಡ.
ವೃಶ್ಚಿಕ ರಾಶಿ :ಇಂದು ನಿಮ್ಮ ಸ್ನೇಹಿತರಿಗೆ ಸಹಾಯ ಮಾಡಬೇಕಾಗಬಹುದು. ನೀವು ಏನನ್ನಾದರೂ ಸಾಧಿಸುವ ಛಲವನ್ನು ಇಟ್ಟುಕೊಳ್ಳುವಿರಿ. ಇಂದು ನಕಾರಾತ್ಮಕತೆಯ ವಿರುದ್ಧ ತೀವ್ರವಾದ ಹೋರಾಟ ಮಾಡುವಿರಿ. ಇದಕ್ಕಾಗಿ ಮನೆಯವರ ಜೊತೆ ಕಲಹವಾಗಬಹುದು. ಇಷ್ಟು ಬಹಳ ಸಹನೆಯಿಂದ ಇದ್ದ ನೀವು ಇಂದು ಸಹನೆಯ ಕಟ್ಟೆ ಒಡೆದುಹೋಗಲಿದೆ. ಕೆಲಸವನ್ನು ಬದಲಾಯಿಸಲು ನೀವು ಯೋಚಿಸುತ್ತಿದ್ದರೆ ಒಳ್ಳೆಯ ಸ್ಥಾನ ಲಭ್ಯವಾಗಲಿದೆ. ಬಹಳ ದಿನಗಳಿಂದ ಉಳಿದಿದ್ದ ಕಾರ್ಯವನ್ನು ಸತತ ಪ್ರಯತ್ನದಿಂದ ಪೂರ್ಣಮಾಡುವಿರಿ. ವಿದ್ಯಾದಾನವನ್ನು ಮಾಡಿದವರನ್ನು ಗೌರವಿಸುವಿರಿ. ಒರಟು ತನವನ್ನು ಬಿಟ್ಟಷ್ಟು ನಿಮಗೇ ಒಳ್ಳೆಯದು. ಓಡಾಟದ ಸಮಯದಲ್ಲಿ ನಿಮ್ಮ ವಸ್ತುವು ಕಾಣೆಯಾಗಿದ್ದು ನಿಮಗೆ ಗೊತ್ತಾಗದು. ಕಳೆದುಹೋದ ವಸ್ತುವಿನ ಮೌಲ್ಯವು ನಿಮಗೆ ಇಂದು ಗೊತ್ತಾಗದೇ ಹೋಗುವುದು.




