ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ 04) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಭರಣೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಐಂದ್ರ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 09 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 49 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:20 ರಿಂದ 10:55ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:04 ರಿಂದ 03:39 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:10 ರಿಂದ 07:45ರ ವರೆಗೆ.
ಮೇಷ ರಾಶಿ: ಕಷ್ಟಗಳ ಪರಿಹಾರಕ್ಕೆ ಹತ್ತಾರು ಮಾರ್ಗಗಳು ಇರುವುದು. ಸಹಾಯಕ್ಕೆ ಯಾರನ್ನಾದರೂ ನೀವು ಯಾವುದನ್ನು ಆರಿಸಿಕೊಳ್ಳುವಿರಿ ಎನ್ನುವುದು ಮುಖ್ಯವಾಗಲಿದೆ. ಸಂಗಾತಿಯ ಜೊತೆ ಕಾಲವನ್ನು ಕಳೆದರೂ ತಂದೆ – ತಾಯಿಯರ ಜೊತೆಗೂ ಕೆಲವು ಕಾಲ ಕಳೆಯುವ ಇಚ್ಛೆ ಇರುವುದು. ಅವರ ನೋವು ಮತ್ತು ನಲಿವಿನಲ್ಲೂ ಭಾಗಿಯಾಗಿ. ಅಚ್ಚರಿಯ ಸುದ್ದಿಗಳು ನಿಮಗಾಗಿ ಇರಲಿವೆ. ತಂದೆಯ ಕಾರಣಕ್ಕಾಗಿ ಧನವನ್ನು ವ್ಯಯಿಸುವಿರಿ. ಇಷ್ಟಪಟ್ಟವರ ಜೊತೆ ಸಮಯವನ್ನು ಕಳೆಯುವುದು ಕಷ್ಟವಾಗಬಹುದು. ಆದಾಯದ ಮೂಲದಿಂದ ನಿಮಗೆ ನೆಮ್ಮದಿ ಸಿಗುವುದು. ಪ್ರತಿಭೆ ಪ್ರದರ್ಶನಕ್ಕೆ ಒಳ್ಳೆಯ ಅವಕಾಶ ಸಿಗಲಿದೆ. ದೂರಪ್ರಯಾಣವನ್ನು ಇಂದು ಇಷ್ಟಪಡುವಿರಿ. ಅಶಕ್ತರಿಗೆ ಯಾವುದಾದರೂ ಒಂದು ಸಹಾಯ ಮಾಡಿ.
ವೃಷಭ ರಾಶಿ: ನೀವು ವಿವಾಹದ ವಿಚಾರದಲ್ಲಿ ದುಡುಕುವಿರಿ. ಅಕಾರ್ಯಕ್ಕೆ ಧನವು ವ್ಯಯವಾಗಬಹುದು. ಬಹಳ ವರ್ಷಗಳ ಅನಂತರ ಪುತ್ರೋತ್ಸವವು ನಿಮ್ಮ ನೆಮ್ಮದಿಯನ್ನು ಇಮ್ಮಡಿಗೊಳಿಸುವುದು. ಸತ್ಯವನ್ನೇ ನಂಬಿ ಬದುಕುವವರು ಎಂದು ಇದುವರೆಗೆ ತಿಳಿದದ್ದು ಸುಳ್ಳು ಮಾಡುವಿರಿ. ಮಾತಿಗೆ ಬೆಲೆಯು ಕಡಿಮೆಯಾದೀತು. ಬಲವಂತವಾಗಿ ಯಾರನ್ನೂ ನಿಮ್ಮವರನ್ನಾಗಿ ಮಾಡಿಕೊಳಗಳಬೇಡಿ. ನಿಮ್ಮನ್ನು ನೀವು ಆದ್ಯಂತವಾಗಿ ನೋಡಿಕೊಳ್ಳಿ. ಮನಸ್ಸು ಭಾರವಾಗಲಿದೆ. ಕೆಲವಾರು ವ್ಯಕ್ತಿತ್ವಗಳು ನಿಮ್ಮನ್ನು ಆಕರ್ಷಿಸಬಹುದು. ಕೆಲವು ಸಂದರ್ಭದಲ್ಲಿ ನಿಮ್ಮ ಸ್ವಭಾವವು ನಾಟಕೀಯದಂತೆ ತೋರುವುದು. ಕಲ್ಪನೆಯಲ್ಲಿ ಓಡಾಡುವುದನ್ನು ಕಡಿಮೆ ಮಾಡಿ. ಮಕ್ಕಳಿಂದ ನೀವು ಸ್ವತಂತ್ರರಾಗಲು ಬಯಸುವಿರಿ. ಇಂದು ನಿಮ್ಮ ವೈಯಕ್ತಿಕ ಕೆಲಸಗಳಿಗೆ ತೊಂದರೆ ಬರುವುದು. ಇಲ್ಲದೆ ಸಮಸ್ಯೆಯನ್ನು ಸುಮ್ಮನೇ ಸೃಷ್ಟಿಸಿಕೊಳ್ಳುವಿರಿ.
ಮಿಥುನ ರಾಶಿ: ಇಂದು ಸ್ತ್ರೀಯರ ವಿವಾದದಲ್ಲಿ ಸಿಕ್ಕಿಕೊಳ್ಳುವಿರಿ. ನೀವಿಂದು ಬದಲಾವಣೆಯನ್ನು ಇಷ್ಟಪಡುತ್ತೀರಿ. ಹೆಸರಾಂತ ವ್ಯಕ್ತಿಗಳ ಸಹವಾಸವು ನಿಮಗೆ ಸಿಗಲಿದೆ. ದೂರಪ್ರಯಾಣದಲ್ಲಿ ನಿಮಗೆ ನಾನಾ ತೊಂದರೆಗಳು ಎದುರಾಗಬಹುದು. ಒತ್ತಡವನ್ನು ನಿಭಾಯಿಸುವ ಕಲೆ ನಿಮಗೆ ಸಿದ್ಧಿಸಿದ್ದು ಅದನ್ನು ಚೆನ್ನಾಗಿ ನಿರ್ವಹಿಸಬಲ್ಲಿರಿ. ಎಂದೋ ಮಾಡಿದ ಇಂದು ನಿಮ್ಮ ಆಪತ್ತಿಗೆ ಬರಲಿದೆ. ಅತಿಥಿಗಳ ಆಗಮನದಿಂದ ಖುಷಿಯಾಗುವುದು. ಸತ್ಯವನ್ನು ಮುಚ್ಚಿಡಲು ಹೋಗಬೇಡಿ. ಮುಂದೆ ಅದೇ ದೊಡ್ಡ ಕಂಟಕವಾದೀತು. ನಂಬಿಕೆಯನ್ನು ಕಳೆದುಕೊಳ್ಳಬೇಕಾಗುವುದು. ನಿಮ್ಮಲ್ಲಿ ಎಷ್ಟೇ ಆತ್ಮವಿಶ್ವಾಸವಿದ್ದರೂ ಕೆಲಸಗಳ ಒತ್ತಡದಲ್ಲಿ ಗೊಂದಲದಲ್ಲಿ ಸಿಕ್ಕಿಕೊಳ್ಳುವಿರಿ. ಸ್ಪರ್ಧೆಗಳಿಗೆ ನಿಮ್ಮ ಆಸೆಗಳನ್ನು ಯಾವುದೇ ಪೂರ್ವಾಪರ ವಿಚಾರವಿಲ್ಲದೇ ಪೂರೈಸಿಕೊಳ್ಳುವಿರಿ. ಮಕ್ಕಳ ಮೇಲೇ ಅಕ್ಕರೆ ಇರುವುದು. ಭೂಮಿಯ ಬಗ್ಗೆ ನಿಮಗೆ ವೈರಾಗ್ಯ ಬರಬಹುದು.
ಕಟಕ ರಾಶಿ: ಇಂದು ಹೊಸ ಉದ್ಯೋಗಕ್ಕೆ ಉತ್ಸಾಹದಿಂದ ಹೋದರೂ ನಿಮ್ಮೊಳಗೆ ಆತಂಕವಂತೂ ಇರುವುದು. ಲಲಿತಕಲೆಗಳಲ್ಲಿ ಆಸಕ್ತಿ ಇದ್ದರೆ ನಿಮಗೆ ಗೌರವ, ಸಮ್ಮಾನಗಳು ಸಿಗುವುದು. ಮೇಲಿನಿಂದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ. ಅಧಿಕ ಖರ್ಚಾಗುವುದನ್ನು ನಿಲ್ಲಿಸಲಿದ್ದೀರಿ. ಧಾರ್ಮಿಕಕ್ಷೇತ್ರಗಳಿಗೆ ಭೇಟಿ ನೀಡಲಿದ್ದೀರಿ. ನಿಮ್ಮ ವ್ಯಕ್ತಿತ್ವವನ್ನು ಕಂಡು ಕೆಲವರು ಸಲಹೆಗಳನ್ನು ಕೊಡಲು ಬರಬಹುದು. ದೈವೀಸಂಪತ್ತಿಗೆ ಆಸೆಪಡಲಿದ್ದೀರಿ. ಜಾಗರೂಕರಾಗಿರಿ. ಯಾವುದೇ ಪ್ರತ್ಯುತ್ತರಗಳನ್ನು ಕೊಡಲು ಹೋಗಬೇಡಿ. ಸಮಾಧಾನದಿಂದ ಆಲೋಚಿಸಿ. ಅವಾಚ್ಯ ಶಬ್ದಗಳಿಂದ ಯಾರನ್ನಾದರೂ ನಿಂದಿಸುವಿರಿ. ಅಧಿಕಾರಿಗಳಿಂದ ಆರ್ಥಿಕತೆಯ ಪರಿಶೀಲನೆ ನಡೆಯುವುದು. ಅಪರಿಚಿತ ವ್ಯಕ್ತಿಗಳ ಜೊತೆ ಯಾವ ವ್ಯವಹಾರವನ್ನು ಕಡಮೆ ಮಾಡಿ. ಯಾರ ಮಾತನ್ನೂ ನಂಬದ ಸ್ಥಿತಿಯನ್ನು ನೀವೇ ತಂದುಕೊಳ್ಳುವಿರಿ. ತುರ್ತಾದ ಕೆಲಸವನ್ನು ನಿಧಾನ ಮಾಡುವಿರಿ.