Horoscope: ದಿನಭವಿಷ್ಯ: ನಿಮ್ಮ ಅಂತಸ್ತಿನ ಬಗ್ಗೆ ನಿಮಗೆ ಬಿಮ್ಮು ಇರುವುದು

|

Updated on: Jun 04, 2024 | 12:10 AM

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಜೂ.04 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ: ನಿಮ್ಮ ಅಂತಸ್ತಿನ ಬಗ್ಗೆ ನಿಮಗೆ ಬಿಮ್ಮು ಇರುವುದು
ದಿನಭವಿಷ್ಯ
Follow us on

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಜೂ.​​​​​4ರ ರಾಶಿ ಭವಿಷ್ಯದಲ್ಲಿ ಮೇಷ ರಾಶಿಯಿಂದ ಕಟಕ ರಾಶಿಯವರೆಗೆ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಶೋಭನ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 58 ನಿಮಿಷಕ್ಕೆ, ರಾಹು ಕಾಲ 15:45 ರಿಂದ 17:22 ವರೆಗೆ, ಯಮಘಂಡ ಕಾಲ ಬೆಳಗ್ಗೆ 09:18 ರಿಂದ 10:54ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 2:31 ರಿಂದ ಬೆಳಿಗ್ಗೆ 14:08ರ ವರೆಗೆ.

ಸಿಂಹ ರಾಶಿ: ನೀವು ಇಂದು ಯಾವುದೋ ವಿಷಯಕ್ಕೆ ಬೇರೆಯವರ ಬಗ್ಗೆ ಮನಸ್ಸಿನಲ್ಲಿ ಕಟ್ಟಿಕೊಂಡ ಗೋಡೆಯನ್ನು ಒಡೆಯುವಿರಿ. ಇದರಿಂದ ನೆಮ್ಮದಿ, ಸಂತೋಷಗಳು ತಾನಾಗಿಯೇ ಬರುವುವು. ಇಂದು ನೀವು ಈ ಎಲ್ಲವನ್ನು ಪರೀಕ್ಷೆ ಮಾಡಿಸಿಕೊಳ್ಳಲು ಮತ್ತು ಉತ್ತಮ ವೈದ್ಯರಿಂದ ಸಲಹೆ ಪಡೆಯಲು ಸಮಯವನ್ನು ಕಳೆಯುತ್ತೀರಿ. ನಿಮ್ಮ ಆದಾಯದ ಸ್ವಲ್ಪ ಭಾಗವನ್ನು ಭವಿಷ್ಯಕ್ಕೆ ಹೂಡಿಕೆ ಮಾಡುವಿರಿ. ಮಾತಿನ ಸೌಮ್ಯತೆಯು ನಿಮಗೆ ಗೌರವವನ್ನು ಕೊಡುವುದು. ನಿಮಗೆ ಹಿಡಿಸದ ವ್ಯವಹಾರವನ್ನು ಕಠೋರವಾಗಿ ಠೀಕಿಸುವಿರಿ. ವ್ಯಾಪಾರಸ್ಥರಿಗೆ ದಿನವು ಅಲ್ಪ ಲಾಭದಾಯಕವಾಗಲಿದೆ. ನಿಮ್ಮ ಆದಾಯಕ್ಕಿಂತ ಹೆಚ್ಚಿನ ಖರ್ಚು ಮಾಡುವುದನ್ನು ನೀವು ತಪ್ಪಿಸುವಿರಿ. ವೈವಾಹಿಕ ಜೀವನವನ್ನು ನಡೆಸಲು ನಿಮಗೆ ಕಷ್ಟ ಎನಿಸಬಹುದು. ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ, ಇನ್ನೊಬ್ಬರಿಗೆ ಸಹಾಯ ಮಾಡುವಿರಿ. ಯಾವುದೂ ಅಂತ್ಯವಲ್ಲ.‌ ಮತ್ತೊಂದರ ಆರಂಭವೂ ಆಗಬಹುದು.

ಕನ್ಯಾ ರಾಶಿ: ನೀವು ಚೆನ್ನಾಗಿ ಮಾತನಾಡುತ್ತೀರೆಂದು ಬೇರೆಯವರಿಗೆ ನೋವನ್ನು ಕೊಡಬೇಡಿ. ಬಾಯಿಯ ಚಪಲಕ್ಕೆ ಅಸಂಬದ್ಧವನ್ನು ಹೇಳುವಿರಿ. ಸದಾ ನಗುಮುಖದಿಂದ ಇರಿ. ವ್ಯಾಪರ ವಹಿವಾಟು ಸುಗಮವಾಗಿ ಸಾಗುವುದು. ನಿಶ್ಚಿಂತೆಯಿಂದ ನಿದ್ರಿಸಬಹುದು. ವಹಿವಾಟಿಗೆ ಸಂಬಂಧಿಸಿದ ಯಾವುದೇ ದೊಡ್ಡ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಇಂದು ಅದು ನರಕವಾಗಬಹುದು. ಇಂದು ನೀವು ಕೈಯಲ್ಲಿ ಸಾಕಷ್ಟು ಹಣದಿಂದ ಸಂತೋಷವಾಗಿರುತ್ತೀರಿ. ನಿಮ್ಮ ಅಂತಸ್ತಿನ ಬಗ್ಗೆ ನಿಮಗೆ ಬಿಮ್ಮು ಇರುವುದು. ಭೂಮಿಯ ವ್ಯವಹಾರವನ್ನು ನೀವು ಮಾಡುವುದು ಕಷ್ಟವೆನಿಸಬಹುದು. ನೀವು ಹೂಡಿಕೆ ವಿಷಯಗಳಲ್ಲಿ ಉತ್ತಮ ಆದಾಯವನ್ನು ಪಡೆಯುವ ಸಾಧ್ಯತೆಯಿದೆ. ಇಂದಿನ ದೂರಪ್ರಯಾಣವು ನಿರಾಶಾದಾಯಕವಾಗಿದ್ದು ಎಲ್ಲರನ್ನೂ ಹೀಗಳೆಯುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಗೊಂದಲವು ನಿವಾರಣೆಯಾಗಬಹು. ಕೆಲವು ಮಾತನ್ನು ನೀವು ನಿರ್ಲಕ್ಷಿಸುವುದೇ ಉತ್ತಮ.

ತುಲಾ ರಾಶಿ: ಇಂದು ನೀವು ಬೆಟ್ಟವನ್ನೇ ಮೈಮೇಲೆ ಹಾಕಿಕೊಳ್ಳುವ ಕೆಲಸವನ್ನು ಖಂಡಿತ ಮಾಡಬೇಡಿ. ಊಹೆಗೂ ನಿಲುಕದ ವಿಷಯವು ನಿಮ್ಮೆದುರು ಪ್ರಸ್ತಾಪಗೊಂಡೀತು. ಉದ್ಯೋಗ ವ್ಯವಹಾರ ಕ್ಷೇತ್ರದಲ್ಲಿ ಏನೇ ಪ್ರಯತ್ನಗಳು ನಡೆಯುತ್ತಿರುತ್ತವೆ. ಇಂದು ಅಲ್ಪ ಯಶಸ್ಸನ್ನು ಕಾಣುವರು. ನಿಮ್ಮ ಮಕ್ಕಳ ಕಡೆಯವರು ಕೂಡ ಇಂದು ಬಲವಾಗಿ ಕಾಣುತ್ತಾರೆ. ನಿಮ್ಮ ಜೀವನಶೈಲಿ ಕೂಡ ಸುಧಾರಿಸುತ್ತದೆ. ನಿಮ್ಮ ಮುಖ್ಯ ವಿಷಯಗಳು ಕುಟುಂಬದಲ್ಲಿ ಚರ್ಚೆಯಾಗಬಹುದು. ಸ್ಪರ್ಧಾತ್ಮಕ ಕ್ರಿಯೆಯಲ್ಲಿ ಸೋಲಾಗುವುದು. ಯಾರನ್ನೋ ನಿಮಗೆ ಹೋಲಿಸಿಕೊಂಡು ಸಂಕಟಪಡುವಿರಿ. ಕೆಲವರು ನಿಮ್ಮ ಬಗ್ಗೆ ಆಡಿಕೊಳ್ಳಬಹುದು. ವಿಶ್ವಾಸಕ್ಕೆ ಯೋಗ್ಯವಾದ ಕೆಲಸವನ್ನು ಮಾಡುವಿರಿ. ಮಾನಸಿಕ ಅಶಾಂತಿಗೆ ನಿಮ್ಮಲ್ಲಿಯೇ ಮದ್ದು ಇರುವುದು. ಭೂಮಿಯ ವ್ಯವಹಾರವು ಸಾಕೆನಿಸಬಹುದು.

ವೃಶ್ಚಿಕ ರಾಶಿ: ಇಂದು ನಿಮ್ಮ ದಿನದ ಕೆಲಸವನ್ನು ಒಮ್ಮೆ ಅವಲೋಕಿಸಿ ಅನಂತರ ಕಾರ್ಯದ ಕಡೆ ಮುನ್ನಡೆಯಿರಿ. ನಿಮ್ಮ ಆಲಸ್ಯ ಕ್ಷಣಾರ್ಧದಲ್ಲಿ ಮಾಯವಾಗುವುದು. ಮಾಜಿ ಪ್ರೇಯಸಿ ಕಂಡಳೆಂದು ಹಿಗ್ಗುವುದು ಬೇಡ. ಇರುವುದೂ ಇಲ್ಲವಾದೀತು. ನಿಮ್ಮ ಮಾತಿನ ಸೌಮ್ಯತೆ ಇಂದು ನಿಮ್ಮ ಗೌರವಕ್ಕೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ಶಿಕ್ಷಣ ಮತ್ತು ಸ್ಪರ್ಧೆಗಳಲ್ಲಿ ವಿಶೇಷ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಸಾಮಾಜಿಕ ಪ್ರಯತ್ನಗಳಿಗೆ ಬಲ ಸಿಗಲಿದೆ. ಬಹಳ ದಿನಗಳಿಂದ ಬಾಕಿಯಿದ್ದ ಕೆಲಸ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಪ್ರಬಲ ವೈರಿಗಳನ್ನು ನೀವು ಮೆಟ್ಟಿನಿಲ್ಲುವ ಛಾತಿ ಇರಲಿದೆ. ಹೂಡಿಕೆಯ ಬಗ್ಗೆ ನಿಮ್ಮ ಸ್ನೇಹಿತರು ನಿಮ್ಮ ಜೊತೆ ಮಾತನಾಡಬಹುದು. ಮಕ್ಕಳಿಗೆ ಮನೆಯ ಜವಾಬ್ದಾರಿಯನ್ನು ಕೊಟ್ಟು ನಿಶ್ಚಿಂತರಾಗಲು ಇಷ್ಟಪಡುವಿರಿ. ವೃತ್ತಿಯಲ್ಲಿ ಕಾರ್ಯವು ಸರಿಯಾಗದೇ ಸಂಕಷ್ಟಕ್ಕೆ ಬೀಳುವಿರಿ. ಅಧಿಕಾರಿಗಳಿಂದ ನಿಮಗೆ ಅಪಮಾನವೂ ಆದೀತು.