Horoscope: ದಿನ ಭವಿಷ್ಯ; ಈ ರಾಶಿಯವರು ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲಿದ್ದಾರೆ

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಜೂ. 04 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನ ಭವಿಷ್ಯ; ಈ ರಾಶಿಯವರು ರಾಜಕೀಯ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲಿದ್ದಾರೆ
Follow us
ಗಂಗಾಧರ​ ಬ. ಸಾಬೋಜಿ
|

Updated on: Jun 04, 2024 | 12:12 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಜೂ.​​​​​4ರ ರಾಶಿ ಭವಿಷ್ಯದಲ್ಲಿ ಮೇಷ ರಾಶಿಯಿಂದ ಕಟಕ ರಾಶಿಯವರೆಗೆ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಶೋಭನ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 58 ನಿಮಿಷಕ್ಕೆ, ರಾಹು ಕಾಲ 15:45 ರಿಂದ 17:22 ವರೆಗೆ, ಯಮಘಂಡ ಕಾಲ ಬೆಳಗ್ಗೆ 09:18 ರಿಂದ 10:54ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 2:31 ರಿಂದ ಬೆಳಿಗ್ಗೆ 14:08ರ ವರೆಗೆ.

ಧನು ರಾಶಿ: ಇಂದು ನಿಮ್ಮ ಮಕ್ಕಳಿಂದ ಸಂತೋಷದ ವಾರ್ತೆ ಗೊತ್ತಾಗುವುದು. ಇಷ್ಟು ದಿನ ರಹಸ್ಯವಾಗಿ ಉಳಿದಿದ್ದ ವಿಷಯವು ಪ್ರಕಟಗೊಳ್ಳುವುದು. ಇಂದು ನೀವು ಸುಂದರರೂಪಕ್ಕೆ ಮರುಳಾಗುತ್ತೀರಿ‌. ಉದ್ಯೋಗದ ನಿಮಿತ್ತ ಪ್ರಯಾಣ ಸಾಧ್ಯತೆಯಿದೆ. ನಿಮ್ಮ ಮಕ್ಕಳ ಜವಾಬ್ದಾರಿಗಳನ್ನು ನೀವು ಪೂರೈಸಬಲ್ಲಿರಿ. ವಿದೇಶಿ ಪ್ರಯಾಣದ ಪರಿಸ್ಥಿತಿಯು ಆಹ್ಲಾದಕರ ಮತ್ತು ಲಾಭದಾಯಕವಾಗಿ ಕಾಣುತ್ತದೆ. ನಿಮ್ಮ ಸ್ನೇಹಿತರು ನಿಮಗೆ ಯಾವುದಾದರೂ ಸಲಹೆಯನ್ನು ನೀಡುತ್ತಿದ್ದರೆ ಅದನ್ನು ಗಮನಿಸಿ. ಸೌಕರ್ಯಗಳಿಗಾಗಿ ನೀವು ಸಾಕಷ್ಟು ಹಣವನ್ನು ಖರ್ಚು ಮಾಡಿಕೊಳ್ಳುವಿರಿ. ನೂತನ ವಸ್ತ್ರ, ವಸ್ತುಗಳ ಖರೀದಿಗೆ ಹೆಚ್ಚು ಸಮಯವನ್ನು ಕೊಡಬೇಕಾದೀತು. ಸಂಗಾತಿಯ ಮನೋಭಾವವನ್ನು ಅರ್ಥವಾಗುವುದು ಕಷ್ಟವಾದೀತು. ಮಕ್ಕಳ ವಿವಾಹಕ್ಕಾಗಿ ಓಡಾಟ, ಮಾತುಕತೆಗಳನ್ನು ಮಾಡಬೇಕಾದೀತು.

ಮಕರ ರಾಶಿ: ಇಂದು ನಿಮ್ಮ ಕೆಟ್ಟ ಆರೋಗ್ಯವನ್ನು ಅರೆಕ್ಷಣದಲ್ಲಿ ಸರಿ ಮಾಡುವುದು ಕಷ್ಟ. ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದು ಕಾಯಬೇಡಿ. ಅವಕಾಶಗಳನ್ನು ಸೃಷ್ಟಿಕೊಳ್ಳುವ ಸಾಮರ್ಥ್ಯ ನಿಮಲ್ಲಿದೆ. ನಿಮ್ಮ ಬಾಕಿಯಿರುವ ಕೆಲವು ಕೆಲಸಗಳು ಪೂರ್ಣಗೊಳ್ಳುವುದರಿಂದ ಇಂದು ನೀವು ಕೆಲವು ಯೋಜನೆಗಳನ್ನು ಮಾಡಬಹುದು. ಇಂದು ನೀವು ಶುಭ ಕಾರ್ಯಗಳನ್ನು ಪ್ರಚಾರ ಮಾಡುವಲ್ಲಿ ಪಾಲ್ಗೊಳ್ಳುವ ಸೌಭಾಗ್ಯವನ್ನು ಪಡೆಯುತ್ತೀರಿ. ಅತಿಯಾದ ಉತ್ಸಾಹ, ನಂಬಿಕೆಯಿಂದ ನೀವು ತೊಂದರೆಗೆ ಸಿಲುಕುವಿರಿ. ನಿಮ್ಮ ಮಾರ್ಗವು ನೇರವಾಗಿರಲಿ. ಜೊತೆಗಾರರು ನೀವು ಮಾಡುವ ಕಾರ್ಯಕ್ಕೆ ನಿರುತ್ಸಾಹ ತೋರಿಸುವರು. ಓಡಾಟದಲ್ಲಿ ಕೆಲವು ಅಡೆತಡೆಗಳ ಬರಬಹುದು. ನಿಮ್ಮ ದೌರ್ಬಲ್ಯಗಳಿಂದ ನಿಮಗೆ ತೊಂದರೆ ಆಗುವ ಸಾಧ್ಯತೆ ಇದೆ. ಆರ್ಥಿಕತೆಯ ಬೆಳವಣಿಗೆಯು ನಿಮಗೆ ಸಂತೋಷವನ್ನು ಕೊಡುವುದು.‌

ಕುಂಭ ರಾಶಿ: ಇಂದು ಉದ್ಯೋಗದಲ್ಲಿ ಹತ್ತಾರು ಕೆಲಸಗಳು ಒಮ್ಮೆ ಬಂದು ಬೀಳಬಹುದು. ಇದು ನಿಮ್ಮ ಸಾಮರ್ಥ್ಯವನ್ನು ತೋರಿಸುತ್ತದೆ. ಅಹಂಕಾರದಿಂದ ಬೀಗುವುದು ಬೇಡ. ಇತರರು ಅಚ್ಚರಿ ಪಡುವಂತೆ ಮಾಡುತ್ತದೆ. ರಾಜಕೀಯ ಕ್ಷೇತ್ರದಲ್ಲಿ ನೀವು ಯಾವುದೇ ಪ್ರಯತ್ನಗಳನ್ನು ಮಾಡುತ್ತಿದ್ದೀರಿ. ಇಂದು ನೀವು ಅದರಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಯಾವುದೇ ಮೈತ್ರಿಗಳಿದ್ದರೆ ಅವುಗಳಿಂದ ಇಂದು ನೀವು ಲಾಭ ಪಡೆಯಬಹುದು. ನಿಮ್ಮ ಮನಶ್ಚಾಂಚಲ್ಯವನ್ನು ಕಡಮೆ ಮಾಡಿಕೊಳ್ಳುವುದು ಉತ್ತಮ. ಮಕ್ಕಳಿಂದ ನೀವು ಒಳ್ಳೆಯ ಸುದ್ದಿಯನ್ನು ಕೇಳುವಿರಿ. ವೈಯಕ್ತಿಕ ವಹಿವಾಟಿನ ವಿಷಯದಲ್ಲಿ ನಿಮಗೆ ಸ್ಪಷ್ಟತೆ ಇರಲಿ. ಹಲವರ ಅಭಿಪ್ರಾಯದಿಂದ ನಿಮಗೆ ಗೊಂದಲವಾಗುವುದು. ಇಂದಿನ ನಿಮ್ಮ ಖರ್ಚು ಹೆಚ್ಚಾದಂತೆ ಅನ್ನಿಸೀತು. ನಿಮ್ಮ ನಿರ್ಮಾಣದ ಕಾರ್ಯಗಳು ನಿಧಾನವಾಗುವುದು. ಆತುರದಲ್ಲಿ ಯಾವ ಕೆಲಸವನ್ನೂ ಮಾಡಲು ಹೋಗುವುದು ಬೇಡ.

ಮೀನ ರಾಶಿ: ಇಂದು ನಿಮ್ಮಲ್ಲಿರುವ ತಿಳಿವಳಿಕೆಯ ಜೊತೆ ನಿಮ್ಮ ಪ್ರಯತ್ನವೂ ಯಶಸ್ಸಿನ ಮೆಟ್ಟಿಲೇರಲು ಸಹಕಾರಿ. ಸಹನೆಯನ್ನೇ ಆಯುಧವಾಗಿರಿಸಿಕೊಳ್ಳಿ. ಸಮಾರಂಭಗಳಿಗೆ ತೆರಳಲಿದ್ದೀರಿ. ಸಿಟ್ಟಿನಿಂದ ಇನ್ನಷ್ಟು ಪರಿಹಾಸ್ಯಕ್ಕೆ ಒಳಗಾಗಬೇಡಿ. ನೋವನ್ನು ನಲಿವಾಗಿ ಬದಲಿಸುವ ಕಲೆಯನ್ನು ನೀವು ಬಲ್ಲಿರಿ. ಮಕ್ಕಳ ಕಾರಣದಿಂದಾಗಿ, ನೀವು ಇಂದು ಕೆಲವು ನಿರಾಶಾದಾಯಕ ಮಾಹಿತಿಯನ್ನು ಪಡೆಯಬಹುದು. ಅದು ನಿಮ್ಮನ್ನು ಸ್ವಲ್ಪ ಚಿಂತಿತರನ್ನಾಗಿ ಮಾಡುತ್ತದೆ. ಬೇಸರಗೊಳ್ಳದೇ ಖುಷಿಯಿಂದ ಮಾಡಿ. ನಿಮ್ಮ ಜವಾಬ್ದಾರಿಗಳನ್ನು ಸಮಯಕ್ಕೆ ಸರಿಯಾಗಿ ನಿರ್ವಹಿಸಿ. ಸಹಕಾರದ ಮನೋಭಾವವು ನಿಮ್ಮ ಮನಸ್ಸಿನಲ್ಲಿ ಇರುವುದು. ನೀವು ನಿಮ್ಮ ಕುಟುಂಬದವರ ಜೊತೆ ಅಧಿಕ‌ ಕಾಲವನ್ನು ಕಳೆಯುವಿರಿ. ತಾಯಿಯು ನಿಮ್ಮನ್ನು ಬೆಂಬಲಿಸುವಳು. ಸ್ಥಿರಾಸ್ತಿಯ ಉಳಿವಿಗೆ ಹೋರಾಟವನ್ನೇ ಮಾಡಬೇಕಾದೀತು. ಮನೆಯಲ್ಲಿ ಬಹಳ ಕಾರ್ಯಗಳಿದ್ದು ಅದರಲ್ಲಿ ತನ್ಮಯರಾಗುವಿರಿ.

ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್