AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Siddaramaiah Horoscope: ರಾಜಯೋಗವಿದ್ದರೂ ಸದಾ ಒಂದಿಲ್ಲೊಂದು ಬಾಧೆ ಅನುಭವಿಸುವ ಸಿದ್ದರಾಮಯ್ಯಗೆ ವಾತ್ಸಲ್ಯ ಬಂಧನ

Siddaramaiah Astrology Prediction: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭವಿಷ್ಯವು ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಹೇಗಿರಲಿದೆ ಎಂಬುದರ ವಿಶ್ಲೇಷಣೆ ಇಲ್ಲಿದೆ. ಅಧಿಕಾರದ ವಿಚಾರದಲ್ಲಿ ತುಂಬ ವಿಶಿಷ್ಟವಾದ ಜಾತಕ ಇವರದು. ಕುರ್ಚಿಯಲ್ಲಿ ಕೂತ ಮೇಲೆ ಈ ವ್ಯಕ್ತಿ ಅಧಿಕಾರ ಪೂರ್ಣವಾಗಿ ಅನುಭವಿಸಿಯೇ ಅನುಭವಿಸುತ್ತಾರೆ ಎಂಬುದು ಗ್ರಹ ಸ್ಥಿತಿಯ ಆಧಾರದ ಮೇಲೆ ಹೇಳಬಹುದು. ಆದರೆ ಈ ಬಾರಿ ಗ್ರಹಸ್ಥಿತಿಯು ಪರಿಸ್ಥಿತಿಯನ್ನು ಬದಲಾಯಿಸಬಹುದಾ? ಇದನ್ನು ತಿಳಿಸುವುದಕ್ಕಾಗಿಯೇ ಇಲ್ಲಿದೆ ಸಿದ್ದರಾಮಯ್ಯನವರ ಜಾತಕ ವಿಶ್ಲೇಷಣೆ.

Siddaramaiah Horoscope: ರಾಜಯೋಗವಿದ್ದರೂ ಸದಾ ಒಂದಿಲ್ಲೊಂದು ಬಾಧೆ ಅನುಭವಿಸುವ ಸಿದ್ದರಾಮಯ್ಯಗೆ ವಾತ್ಸಲ್ಯ ಬಂಧನ
ಅಕ್ಷಯ್​ ಪಲ್ಲಮಜಲು​​
|

Updated on: Jun 04, 2024 | 7:06 AM

Share

ಸಿದ್ದರಾಮಯ್ಯ (Siddaramaiah) ಅವರದು ಜನ್ಮ ದಿನಾಂಕ, ಸಮಯ ಮತ್ಯಾವುದೂ ಗೊತ್ತಿಲ್ಲ ಅಂತ ಸ್ವತಃ ಅವರೇ ಹೇಳಿಕೊಂಡಿದ್ದಾರೆ. ಆದರೆ ಅದನ್ನು ಕಂಡುಕೊಳ್ಳುವುದಕ್ಕೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಕ್ರಮವನ್ನು ಹೇಳಲಾಗಿದೆ. ಅದನ್ನು ಅನುಸರಿಸಿ, ಪ್ರಯತ್ನ ಪಟ್ಟಾಗ ಕಂಡುಬರುವುದು ಏನೆಂದರೆ, ಅವರದು ವಿಶಾಖ ನಕ್ಷತ್ರ, ಒಂದನೇ ಪಾದ, ವೃಶ್ಚಿಕ ರಾಶಿ ಹಾಗೂ ಕನ್ಯಾ ಲಗ್ನ. ಒಂದು ನಂಬಿಕೆ ಅಥವಾ ಸಿದ್ಧಾಂತದ ಪ್ರಕಾರ, ವೃಶ್ಚಿಕ ರಾಶಿಗೆ ಮಾತ್ರವೇ ಅದರ ಏಕಾದಶ (ಹನ್ನೊಂದನೇ ಮನೆ) ರಾಶಿ ಆದ ಕನ್ಯಾ ರಾಶಿಯು ಮಹಾಬಾಧಾ ರಾಶಿ ಆಗಿರುತ್ತದೆ. ಇದರ ಆಧಾರದಲ್ಲಿ ಹೇಳುವುದಾದರೆ, ಈ ಜಾತಕರಿಗೆ ಅದೆಂಥ ಉನ್ನತ ಸ್ಥಾನದಲ್ಲೇ ಇದ್ದರೂ ಒಂದಲ್ಲಾ ಒಂದು ಬಾಧೆ ಕಾಡುತ್ತಲೇ ಇರುತ್ತದೆ. ಹೀಗೆ ಎಲ್ಲರಿಗೂ ಇರುತ್ತದೆ ಅಂತ ನೀವು ಅಂದುಕೊಳ್ಳಬಹುದು. ಅಧಿಕಾರದಲ್ಲಿ ಇದ್ದರೂ ಮಗ್ಗುಲ ಮುಳ್ಳಿನಂತೆ ಚುಚ್ಚುತ್ತಲೇ ಇರುವ ವ್ಯಕ್ತಿಗಳು, ತಲೆಯ ಮೇಲೊಂದು ಹುಕುಂ, ನಾನಾ ಕಿರಿಕಿರಿಗಳು ಇವೆಲ್ಲ ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ. ಅಂಥ ಜಾತಕರು ಸಿದ್ದರಾಮಯ್ಯ.

ಈ ಜಾತಕರಿಗೆ ಮುತ್ಸದ್ದಿತನ ಇರುತ್ತದೆ. ಚಿಂತನೆ ಸ್ಪಷ್ಟತೆಯಿಂದ ಇರುತ್ತದೆ (ಅದು ಸರಿಯೋ ತಪ್ಪೋ ಆಮೇಲೆ ವಿಶ್ಲೇಷಿಸೋಣ). ಆಡಂಬರ ಗೊತ್ತೂ ಗೊತ್ತಾಗದಂತೆ ಇರುತ್ತದೆ. ಇವೆಲ್ಲ ಒಂದು ಮುಖವಾಯಿತು. ಆದರೆ ಹಲವು ಸಲ ಈ ವ್ಯಕ್ತಿ ತನ್ನ ಮೂಗಿನ ನೇರಕ್ಕೆ ಮಾತ್ರ ಮಾತನಾಡುತ್ತಾರೆ. ತನ್ನದು ಸರಿ, ತನ್ನದೇ ಸರಿ ಎಂಬುದನ್ನು ಅತಿ ಎನ್ನುವ ಮಟ್ಟದವರೆಗೆ ಒಯ್ಯುತ್ತಾರೆ. ಒಮ್ಮೆ ನಿರ್ಧಾರ ಮಾಡಿಯಾಯಿತು ಅಂತಾದರೆ ಯಾರು ಏನು ಹೇಳಿದರೂ ಕೇಳಿಸಿಕೊಳ್ಳುವುದಿಲ್ಲ, ಕೇಳುವುದು ದೂರದ ಮಾತಾಯಿತು. ತನಗೆ ಆ ಕ್ಷಣಕ್ಕೆ ಏನು ಅನ್ನಿಸುತ್ತದೋ ಅದನ್ನು ಮಾಡಿಬಿಡುವ ಈ ವ್ಯಕ್ತಿ ಅದೆಷ್ಟೋ ಮಂದಿ ಪಾಲಿಗೆ ಗಾಡ್ ಫಾದರ್ ಅಥವಾ ಕಿಂಗ್ ಮೇಕರ್. ತಾನು ಆ ವ್ಯಕ್ತಿ ಜತೆಗೆ ಗುರುತಿಸಿಕೊಂಡೆನಲ್ಲ, ಅಂಥದ್ದೊಂದು ಸ್ಥಾನ- ಮಾನ ಕೊಟ್ಟೆನಲ್ಲ, ಆ ವ್ಯಕ್ತಿ ಹೇಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಅಂತಲೂ ಗಮನಿಸುವುದಕ್ಕೆ ಹೋಗುವುದಿಲ್ಲ ಎಂಬುದು ಸಿದ್ದರಾಮಯ್ಯ ಅವರ ದೌರ್ಬಲ್ಯ.

ಸಿದ್ದರಾಮಯ್ಯ ಯಾವುದೇ ಹುದ್ದೆ ಪಡೆದರೂ ಅದನ್ನು ನೀಡಿದವರ ಅಥವಾ ಅದಕ್ಕೆ ಕಾರಣರಾದವರ ಋಣಭಾರವನ್ನು ಇಟ್ಟುಕೊಳ್ಳುವ ವ್ಯಕ್ತಿಯೇ ಅಲ್ಲ. ಅದು ಪಕ್ಷವಿರಲಿ ಅಥವಾ ವ್ಯಕ್ತಿ ಇರಲಿ, ಋಣಸಂದಾಯವನ್ನು ಮಾಡಿಬಿಡುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರಲ್ಲಿ ಡಿ.ಕೆ. ಶಿವಕುಮಾರ್ ಅವರ ಪಾತ್ರ ದೊಡ್ಡದು ಅಂತ ಯಾರು ಎಷ್ಟೇ ವಾದ ಮಾಡಿದರೂ ಸಿದ್ದರಾಮಯ್ಯ ಅವರ ಜಾತಕ ನೋಡಿದರೆ ಹೇಳಬಹುದಾದದ್ದು ಏನೆಂದರೆ, ಈ ವ್ಯಕ್ತಿ ಮುಂಚೂಣಿಯಲ್ಲಿ ಇರಲಿಲ್ಲ ಅಂತಾದಲ್ಲಿ ಕೈ ಪಕ್ಷಕ್ಕೆ ಅಧಿಕಾರ ಕಷ್ಟ ಕಷ್ಟವಾಗುತ್ತಿತ್ತು. ಹಾಗೆ ನೋಡಿದರೆ ಸಿದ್ದರಾಮಯ್ಯನವರ ಜಾತಕ ಬಲದಿಂದ, ಡಿ.ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ ಆಗಿದ್ದಾರೆ.

ಇದನ್ನು ಹೇಗೆ ಜ್ಯೋತಿಷ್ಯ ರೀತಿಯಾಗಿ ಹೇಳಬಹುದು ಅಂದರೆ, ಸಿದ್ದರಾಮಯ್ಯ ಅವರಿಗೆ ಏಕಾದಶ ಸ್ಥಾನದ ಅಧಿಪತಿ (ಕರ್ಕಾಟಕ) ಚಂದ್ರ ದಶೆ ನಡೆಯುತ್ತಿದ್ದು, ಅದರಲ್ಲಿ ಗುರು ಭುಕ್ತಿ. ಇವರಿಗೆ ನೀಗಡ ದ್ರೇಕ್ಕಾಣ ಇರುವುದು ಪಂಚಮದಲ್ಲಿ. ಲಗ್ನಾತ್ ತೃತೀಯದಲ್ಲಿ ಗುರು ಇದ್ದಾನೆ. ಇವರು ಸ್ವಲ್ಪ ಆತಂಕದಲ್ಲೇ ಇರುವಂಥ ವ್ಯಕ್ತಿ. ಜತೆಗೆ ತನ್ನ ಸುತ್ತ ಏನಾಗುತ್ತಿದೆ ಎಂಬ ಬಗ್ಗೆ ಜಾಗ್ರತೆಯಿಂದ ಇರುವಂಥ ಮನುಷ್ಯ. ಆರಂಭದಲ್ಲಿ ಹೇಳಿದಂತೆ ಋಣ ಸಂದಾಯಕ್ಕೆ ಮತ್ತೆ ಬರೋಣ. ಇದರಲ್ಲಿ ಶನಿಯ ಸ್ಥಿತಿ ಹೇಗಿರುತ್ತದೆ ಎಂಬುದು ಸಹ ಮುಖ್ಯವಾಗುತ್ತದೆ. ಸಿದ್ದರಾಮಯ್ಯ ಅವರ ಜಾತಕದಲ್ಲಿ ಶನಿ ದುರ್ಬಲ. ಆದ್ದರಿಂದ ಋಣ ಮಾತ್ರವಲ್ಲ, ಹಗೆಯನ್ನೂ ಬೇಗ ಬೇಗ ತೀರಿಸಿಕೊಳ್ಳಲು ಬಯಸುವ ವ್ಯಕ್ತಿ ಇವರು.

ಇದನ್ನೂ ಓದಿ: ಅಧಿಕಾರವಿರಲಿ ಇರುವುದನ್ನು ಉಳಿಸಿಕೊಂಡರೆ ರಾಹುಲ್ ಗಾಂಧಿ ಗೆದ್ದಂತೆಯೇ ಸರಿ

ಸಿದ್ದರಾಮಯ್ಯ ಅವರ ಲಗ್ನಾಧಿಪತಿಯೇ ಏಕಾದಶ ಕರ್ಕಾಟಕ ರಾಶಿಯಲ್ಲಿ ಇರುವುದರಿಂದ ಪೂರ್ಣ ಪ್ರಮಾಣದ ರಾಜಯೋಗ ಇರುತ್ತದೆ. ಎಲ್ಲಾದರೂ ಸಮ್ಮಿಶ್ರ ಸರ್ಕಾರ ಇರುವಾಗ ಇವರು ಮುಖ್ಯಮಂತ್ರಿ ಆದದ್ದು ಇದೆಯೋ ನೋಡಿ. ಆದರೆ ಲಗ್ನಾಧಿಪತಿಯೇ ರವಿಯೊಡನೆ ನಿಪುಣ ಯೋಗದಲ್ಲಿ ಇದ್ದರೂ ಬೇಗನೆ ಮೋಸ ಹೋಗುವವರು ಅಂತ ಹೇಳಬೇಕಾಗುತ್ತದೆ. ಯಾರನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾರೋ ಅವರೇ ಮೋಸ ಮಾಡುತ್ತಾರೆ. ಯಾರಾದರೂ ಇವರು ನಂಬಿದವರು ಮೋಸ ಮಾಡಿದ್ದಾರೆ ಅಂತೇನಾದರೂ ಎಚ್ಚರಿಸಲು ಪ್ರಯತ್ನಿಸಿದಲ್ಲಿ ಅದನ್ನು ಕೇಳುವ ತಾಳ್ಮೆಯೂ ಇವರಿಗೆ ಇರುವುದಿಲ್ಲ.

ಹಾಗಿದ್ದರೆ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಸಿದ್ದರಾಮಯ್ಯ ಅವರ ಭವಿಷ್ಯದ ಕಥೆ ಮುಂದೇನು?

ಲೋಕಸಭಾ ಚುನಾವಣೆ ಫಲಿತಾಂಶವು ಸಿದ್ದರಾಮಯ್ಯ ಅವರು ವಹಿಸಿಕೊಂಡ ಜವಾಬ್ದಾರಿ ಅಡಿಯಲ್ಲಿ ತೃಪ್ತಿಯಾಗಿರುತ್ತದೆ. ಇಲ್ಲಿ ಜ್ಯೋತಿಷಿಯಾಗಿ ಒಂದಿಷ್ಟು ಸ್ವಾತಂತ್ರ್ಯ ತೆಗೆದುಕೊಂಡು ವಿಚಾರವೊಂದನ್ನು ಹೇಳಬೇಕು. ಗ್ಯಾರಂಟಿಗಳು ಇವೆಯಲ್ಲ, ಇವುಗಳ ಪೈಕಿ ಬಹುತೇಕ ವಿಚಾರಕ್ಕೆ ಸಿದ್ದರಾಮಯ್ಯ ಒಪ್ಪಿರುವ ಸಾಧ್ಯತೆಯೇ ಇಲ್ಲ. ಇರಲಿ. ಕರ್ನಾಟಕದ ಮಟ್ಟಿಗೆ ಸಿದ್ದರಾಮಯ್ಯ ಸಾಧನೆಯನ್ನು ಅಲ್ಲಗಳೆಯುವುದಕ್ಕೆ ಸಾಧ್ಯವೇ ಇಲ್ಲ ಎಂಬಷ್ಟರ ಮಟ್ಟಿಗೆ ಲೋಕಸಭೆ ಫಲಿತಾಂಶ ಇರುತ್ತದೆ. ಆದರೆ ಇದು ವೈಯಕ್ತಿಕವಾಗಿ ಅವರಿಗೆ ಸಂಭ್ರಮಿಸುವುದಕ್ಕೆ ಸಾಧ್ಯವೇ ಆಗುವುದಿಲ್ಲ. ಕಾಂಗ್ರೆಸ್ ನಲ್ಲಿ ಭಿನ್ನಮತ ಉದ್ಭವಿಸುತ್ತದೆ. ಇನ್ನು ಅವರ ಜಾತಕದಲ್ಲಿ ನೀಗಡ ದ್ರೇಕ್ಕಾಣ ಪಂಚಮ ಸ್ಥಾನ ಮಕರದಲ್ಲಿದೆ. ಆ ಸ್ಥಾನವು ಪೂರ್ವ ಪುಣ್ಯ- ಮಕ್ಕಳ ವಿಚಾರವನ್ನು ಸೂಚಿಸುವ ಸ್ಥಾನ. ಆದ್ದರಿಂದ ಮಗನ ಸಲುವಾಗಿ ತ್ಯಾಗ ಮಾಡಲೇಬೇಕಾಗುತ್ತದೆ ಅಥವಾ ಮಗನು ಭಾವನಾತ್ಮಕ ಅಡ್ಡಿಯಾಗಲಿದ್ದಾರೆ.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಅಧ್ಯಾತ್ಮ ಚಿಂತಕರು, ಕಾಪು (ಉಡುಪಿ ಜಿಲ್ಲೆ)

(ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಲೇಖಕರದು. ಜ್ಯೋತಿಷ್ಯ ಆಧಾರದಲ್ಲಿ ಲೇಖಕರು ವಿಶ್ಲೇಷಣೆ ಮಾಡಿದ್ದು, ಅದರ ಸಂಪೂರ್ಣ ಜವಾಬ್ದಾರಿ ಲೇಖಕರದು. ಇಲ್ಲಿ ವ್ಯಕ್ತವಾಗಿರುವ ಲೇಖಕರ ಅಭಿಪ್ರಾಯವನ್ನು ಟಿವಿ9 ಕನ್ನಡ ವೆಬ್ ಸೈಟ್ ಆಗಲೀ ಅಥವಾ ಇತರ ಸೋದರ ಸಂಸ್ಥೆಗಳಾಗಲೀ ಅನುಮೋದಿಸುವುದಿಲ್ಲ.)

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್