ರಾಶಿ ಭವಿಷ್ಯ ಪ್ರತಿಯೊಬ್ಬರ ಜೀವನದಲ್ಲಿ ವಿಭಿನ್ನವಾಗಿರುತ್ತದೆ. ಕೆಲವರು ಬೆಳಗ್ಗೆ ಎದ್ದ ಕೂಡಲೇ ರಾಶಿ ಭವಿಷ್ಯ (Daily horoscope) ತಪ್ಪದೇ ನೋಡುತ್ತಾರೆ. ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯದಿಂದ ತಿಳಿದುಕೊಳ್ಳುತ್ತಾರೆ. ಅದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜುಲೈ 1) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ?, ಯಾರಿಗೆ ಲಾಭ?, ಯಾರಿಗೆ ನಷ್ಟ?, ಯಾರಿಗೆ ಶುಭ, ಅಶುಭ? ಇಲ್ಲಿ ನೋಡಿ ನಿಮ್ಮ ಭವಿಷ್ಯ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಮಿಥುನ ಮಾಸ, ಮಹಾನಕ್ಷತ್ರ: ಆರ್ದ್ರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಶುಭ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 08 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 03 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:22 ರಿಂದ 10:59 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:13 ರಿಂದ 03:50 ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:08 ರಿಂದ 07:45 ರ ವರೆಗೆ.
ಸಿಂಹ: ಅದೃಷ್ಟವನ್ನು ನೀವು ಹುಡುಕಿಕೊಂಡು ಹೋಗಬೇಡಿ. ನಿಮ್ಮ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ನಿಮಗೆ ಹೆಚ್ಚಿನ ಆದಾಯದ ಅವಶ್ಯಕತೆ ಇರಲಿದೆ. ಅದಕ್ಕಾಗಿ ನೀವು ಏನನ್ನಾದರೂ ಆದಾಯದ ಮೂಲವನ್ನು ಪಡೆದುಕೊಳ್ಳಬೇಕಾಗುವುದು. ಹೊಸತನ್ನು ಯೋಚಿಸಿ ಅದನ್ನು ಕ್ರಿಯಾರೂಪಕ್ಕೆ ತೆಗೆದುಕೊಂಡು ಬನ್ನಿ. ಉದ್ಯೋಗದ ಸ್ಥಳದಲ್ಲಿ ನೀವು ಬಹಳ ಶಿಸ್ತಿನಿಂದ ಕೆಲಸವನ್ನು ಮಾಡುವಿರಿ. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸಲು ಸಮಯವನ್ನು ಕೊಡುವಿರಿ. ಸಂಗಾತಿಯು ನಿಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುವಳು.
ಕನ್ಯಾ: ಆಗಿಹೋದ ವಿಷಯವನ್ನು ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವಿರಿ. ಪ್ರಯಾಣವು ಇಂದು ಕಷ್ಟಕರವಾಗಬಹುದು. ಅನೇಕ ವಿಷಯಗಳತ್ತ ನಿಮ್ಮ ಗಮನವಿರಲಿದ್ದು ಯಾವುದುನ್ನೂ ಸರಿಯಾಗಿ ಪೂರ್ಣ ಮಾಡುವುದಿಲ್ಲ. ದೂರದ ಮಿತ್ರರು ನಿಮಗೆ ಅಗತ್ಯವಿರುವ ಸಹಕಾರವನ್ನು ನೀಡಬಹುದು. ಹೆಚ್ಚು ಪರಿಶ್ರಮದಿಂದ ಕೆಲಸವನ್ನು ಮಾಡುವಿರಿ. ಯಾರ ಸಹಕಾರವನ್ನೂ ಬಯಸದೇ ನಿಮ್ಮ ಜವಾಬ್ದಾರಿಯಲ್ಲಿ ನೀವು ಇರುವಿರಿ. ಸಮಯವನ್ನು ವ್ಯರ್ಥ ಮಾಡಿ ಸಂಕಟಪಡುವಿರಿ. ದಾನ ಮಾಡುವ ಮನಸ್ಸು ನಿಮಗೆ ಇರದು. ಅವಕಾಶವನ್ನು ಬಿಟ್ಟಕೊಂಡು ದುಃಖಿಸುವಿರಿ. ಮಕ್ಕಳಿಂದ ಅಲ್ಪ ಸಂತೋಷವು ಸಿಗಬಹುದು.
ತುಲಾ: ಸಂಗಾತಿಯ ವಿಚಾರವಾಗಿ ನೀವು ಹೆಚ್ಚು ಚಿಂತಯಲ್ಲಿ ಇರುವಿರಿ. ಸಾಧ್ಯವಾದಷ್ಟು ಮಾತನ್ನು ಕಡಿಮೆ ಮಾಡಿ, ಕೃತಿಯಲ್ಲಿ ನಿಮ್ಮ ಕೆಲಸವಿರಲಿ. ಇಂದು ಹೆಚ್ಚಿನ ಸಮಯವನ್ನು ನೀವು ಖರೀದಿಗೆಂದು ತೆಗೆದಿಡುವಿರಿ. ನಿಮಗೆ ಅಂಟಿದ ಅಪವಾದವು ನಿರಾಧಾರ ಎಂದು ಸಾಬೀತಾಗಬಹುದು. ಸಮಯಸ್ಫೂರ್ತಿಯಿಂದ ತೊಂದರೆಯ ಸನ್ನಿವೇಶವನ್ನು ದಾಟುವಿರಿ. ಸುಮ್ಮನೇ ಅನುಮಾನದಿಂದ ಸ್ನೇಹವನ್ನು ಹಾಳುಮಾಡಿಕೊಳ್ಳಬಹುದು. ಸಿಗಬೇಕಾದ ಸಮಯಕ್ಕೆ ಗೌರವವು ಸಿಗಲಿದೆ. ದುಡುಕಿ ನಿರ್ಧಾರವನ್ನು ತೆಗೆದುಕೊಳ್ಳುವುದು ಬೇಡ.
ವೃಶ್ಚಿಕ: ಧಾರ್ಮಿಕ ಕಾರ್ಯಕ್ರಮಗಳನ್ನು ಇಂದು ಅನಿವಾರ್ಯವಾಗಿ ಮಾಡುವಿರಿ. ನಿಮ್ಮ ಯೋಜನೆಯನ್ನು ಯಾರ ಬಳಿಯೂ ಹೇಳಿಕೊಳ್ಳುವುದು ಬೇಡ. ಸಂಕೋಚದ ಸ್ವಭಾವವು ನಿಮ್ಮ ಅನೇಕ ಸಮಸ್ಯೆಗಳನ್ನು ಹಾಗೆಯೇ ಉಳಿಸುತ್ತದೆ. ಸಂಬಂಧಗಳನ್ನು ನೀವು ಇಂದು ಬಿಡಲು ಪ್ರಯತ್ನಿಸುವಿರಿ. ವಾಹನ ಸಂಚಾರಕ್ಕೆ ನಿಮಗೆ ತೊಂದರೆಯಾಗಬಹುದು. ನಿಮ್ಮ ಪ್ರಯಾಣದ ಯೋಜನೆಯನ್ನು ಬದಲಿಸಿಕೊಳ್ಳುವುದು ಉತ್ತಮ. ಹಣದ ಕೊರತೆಯನ್ನು ನೀವು ಸ್ವಲ್ಪಮಟ್ಟಿಗೆ ನೀಗಿಸಿಕೊಳ್ಳುವಿರಿ. ಶುಭ ಸುದ್ದಿಯು ನಿಮಗೆ ಸ್ವಲ್ಪ ಸಂತೋಷವನ್ನು ತರಬಹುದು. ಮಕ್ಕಳ ಜೊತೆ ಇರುವಿರಿ.
-ಲೋಹಿತಶರ್ಮಾ