Horoscope: ಇಂದಿನ ರಾಶಿಭವಿಷ್ಯ, ಈ ರಾಶಿಯವರು ಅಧಿಕ ಮಾತನ್ನು ಕಡಿಮೆ ಮಾಡಿಕೊಳ್ಳಿ, ಒಳ್ಳೆಯ ಭೋಜನವನ್ನೂ ಮಾಡಲಿದ್ದಾರೆ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 20) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ಇಂದಿನ ರಾಶಿಭವಿಷ್ಯ, ಈ ರಾಶಿಯವರು ಅಧಿಕ ಮಾತನ್ನು ಕಡಿಮೆ ಮಾಡಿಕೊಳ್ಳಿ, ಒಳ್ಳೆಯ ಭೋಜನವನ್ನೂ ಮಾಡಲಿದ್ದಾರೆ
ಇಂದಿನ ರಾಶಿಭವಿಷ್ಯImage Credit source: freepik
Follow us
Rakesh Nayak Manchi
|

Updated on: Jun 20, 2023 | 12:30 AM

ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚೆನ್ನಾಗಿರಬೇಕು. ಹಾಗಾದರೆ 2023 ಜೂನ್ 20 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಅಶುಭ ಇದೆಯಾ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮಿಥುನ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಸುಕರ್ಮ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:48 ರಿಂದ 05:25ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:20 ರಿಂದ 10:57ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:34 ರಿಂದ 02:11ರ ವರೆಗೆ.

ಸಿಂಹ: ಇದ್ದಕ್ಕಿದ್ದಂತೆ ನೀವು ಪ್ರಚಾರವನ್ನು ಗಿಟ್ಟಿಸಿಕೊಳ್ಳುವಿರಿ. ನಿಮ್ಮ ಯೋಚನೆಗಳು ನಿಮಗೆ ಪ್ರಸಿದ್ಧಿಯನ್ನು ತಂದುಕೊಟ್ಟಾವು. ಪ್ರತಿಷ್ಠಿತ ಸಂಸ್ಥೆಯನ್ನು ನೀವು ಇಂದು ಸೇರಿಕೊಳ್ಳಬಹುದು. ಒತ್ತಡವನ್ನು ನಿವಾರಿಸಿಕೊಳ್ಳಲು ಯೋಗವನ್ನು ಮಾಡಬೇಕಾಗಬಹುದು. ಹಣಕಾಸಿನ ವ್ಯವಹಾರಕ್ಕೆ ತಿಳಿದವರ ಸಹಾಯವನ್ನು ಪಡೆಯುವಿರಿ. ತಾಯಿಯ ಕಡೆಯಿಂದ ನಿಮಗೆ ಉಚಿತ ಸಲಹೆಗಳು ಬರಬಹುದು. ರಾಜಕೀಯ ವ್ಯಕ್ತಿಗಳು ನಿಮ್ಮನ್ನು ತಮ್ಮ ಕಾರ್ಯಕ್ಕೆ ಸೇರಿಸಿಕೊಳ್ಳಬಹುದು. ನ್ಯಾಯದ ವಿಚಾರದಲ್ಲಿ ನೀವು ಸ್ವಲ್ಪ ಹಿನ್ನಡೆ ಪಡೆಯಬಹುದು.

ಕನ್ಯಾ: ವಿದ್ಯಾರ್ಥಿಗಳು ಪರೀಕ್ಷೆಯ ಭಯದಲ್ಲಿ ಓದಿದ್ದನ್ನು ಮರೆತುಕೊಳ್ಳವ ಸಾಧ್ಯತೆ ಇದೆ. ವಿವಾಹಕ್ಕೆ ಸಂಬಂಧಿಸಿದಂತೆ ನೀವು ಮುಂದೆ ಹಾಕಲಿದ್ದೀರಿ. ವಿವಾಹ ಆಗುವ ಸಮಯಕ್ಕೆ ಆಗುವುದು ಒಳ್ಳೆಯದು. ಆತ್ಮೀಯರ ಒಡನಾಟ ನಿಮಗೆ ಸಂತೋಷವನ್ನು ಕೊಡಬಹುದು. ಸಂಜೆ ನೀವು ವಾಯುವಿಹಾರವನ್ನು ಮಾಡುವಿರಿ.‌ ಮನಸ್ಸು ಸ್ವಲ್ಪ ಹಗುರಾಗಲಿದೆ. ಪೋಷಕರಿಗೆ ನೀವು ಸಹಾಯವನ್ನು ಮಾಡಲು ಬಯಸುವಿರಿ. ಹೆಚ್ಚಿನ ಆದಾಯಕ್ಕೆ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಅಷ್ಟು ಸುಖವಿಲ್ಲ. ಅದನ್ನು ಬಿಡಲು ಯೋಚಿಸುವಿರಿ.

ತುಲಾ: ನಿಮ್ಮ ನಿರೀಕ್ಷೆಯು ಇಂದು ಸಫಲವಾದೀತು.‌ ಕಛೇರಿಯ ಉಸ್ತುವಾರಿಗಳಾಗಿ ಎಲ್ಲವನ್ನೂ ಗಮನಿಸಿ ವರದಿ ನೀಡಲು ಹೇಳಬಹುದು. ನಿಮ್ಮ ಕಷ್ಟಗಳನ್ನು ನೀವು ಗಟ್ಟಿ‌ ಮನಸ್ಸಿನಿಂದ ಎದುರಿಸುವಿರಿ. ವಾಹನ ಸವಾರಿ ಮಾಡುವಾಗ ಸ್ವಲ್ಪ ಎಚ್ಚರಿಕೆ ಅಗತ್ಯ. ಸಮಯಕ್ಕೆ ಬೆಲೆ ಕೊಟ್ಟು ನಿಮ್ಮ ಕೆಲಸಗಳನ್ನು ಮುಗಿಸಿಕೊಳ್ಳುವಿರಿ. ವಿವಾಹ ಕಾರ್ಯವು ಬಹಳ ವಿಜೃಂಭಣೆಯಿಂದ ಮುಕ್ತಾಯಗೊಳ್ಳುವುದು. ಅಧಿಕ ಮಾತನ್ನು ಕಡಿಮೆ ಮಾಡಿಕೊಳ್ಳಿ. ಒಳ್ಳೆಯ ಭೋಜನವನ್ನು ಇಂದು ಮಾಡುವಿರಿ. ನಿಮ್ಮ ಊಹೆ ಪೂರ್ಣ ಸತ್ಯವಾಗದು. ಸಂಬಂಧಗಳನ್ನು ನೀವು ಬಿಟ್ಟುಕೊಡಬೇಕಾದೀತು.

ವೃಶ್ಚಿಕ: ವಿದ್ಯುತ್ ಉಪಕರಣಗಳು ನಿಮಗೆ ಒಂದಿಷ್ಟು ಲಾಭವನ್ನು ತಂದುಕೊಡಬಹುದು. ನೀವು ಸೇವಿಸುವ ಔಷಧವು ಇನ್ನೊಂದು ರೋಗಕ್ಕೆ ಕಾರಣವಾಗಿದೆ ಎಂದು ತಿಳಿಯುವುದು. ತಾಳ್ಮೆಯನ್ನು ಕಳೆದುಕೊಳ್ಳಲು ಅನೇಕ ಸಂಗತಿಗಳು ಇರಲಿವೆ. ದುರಾಲೋಚನೆಯನ್ನು ಬಿಟ್ಟುಬಿಡುವುದು ಒಳ್ಳೆಯದು. ನಿಮ್ಮ ಅಹಂಕಾರವು ನಿಮಗೆ ಸೋಲನ್ನು ತಂದುಕೊಡುವುದು. ವಿವೇಕವನ್ನು ಬಿಟ್ಟು ನೀವು ವ್ಯವಹರಿಸಲು ಹೋಗಿ ಮೋಸಹೋಗುವಿರಿ. ಖರ್ಚಿನ ಅಂದಾಜಿನ ಮೇಲೆ ಇಂದಿನ ವ್ಯವಹಾರವಿರಲಿ. ಹಿತಶತ್ರುಗಳ ಸಂಚು ಇಂದು ತಿಳಿಯಬಹುದು. ಉನ್ನತ ವ್ಯಾಸಂಗವು ನಿಮ್ಮ ಸ್ಥಾನವನ್ನು ಹೆಚ್ಚಿಸೀತು.

-ಲೋಹಿತಶರ್ಮಾ ಇಡುವಾಣಿ

ಪತಿ ಜೊತೆ ಗೌತಮಿ, ಕದ್ದು ನೋಡಿದ ದೋಸ್ತರಿಗೆ ಕಂಡಿದ್ದೇನು?
ಪತಿ ಜೊತೆ ಗೌತಮಿ, ಕದ್ದು ನೋಡಿದ ದೋಸ್ತರಿಗೆ ಕಂಡಿದ್ದೇನು?
Daily Devotional: ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ, ವಿಡಿಯೋ ನೋಡಿ
Daily Devotional: ಹಣಕಾಸಿನ ಸಮಸ್ಯೆಗಳಿಗೆ ಪರಿಹಾರ ಇಲ್ಲಿದೆ, ವಿಡಿಯೋ ನೋಡಿ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು