Daily Horoscope 20 June: ಈ ರಾಶಿಯವರಿಗೆ ಇಂದು ಅದೃಷ್ಟ ಖುಲಾಯಿಸಲಿದೆ, ಕೈ ತಪ್ಪಿ ಹೋದ ಸ್ಥಾನ ನಿಮಗೆ ಸಿಗಲಿದೆ
ಇಂದಿನ (2023 ಜೂನ್ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ಗೆಳೆಯರೇ ನಮಸ್ತೇ! ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ಭಿನ್ನವಾಗಿರುತ್ತದೆ. ಕೆಲವರು ಪ್ರತಿನಿತ್ಯ ಬೆಳಗ್ಗೆ ಎದ್ದ ಕೂಡಲೇ ತಮ್ಮ ರಾಶಿ ಭವಿಷ್ಯ (Daily horoscope) ಏನು ಹೇಳುತ್ತದೆ ಅಥವಾ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ಎಲ್ಲವನ್ನು ತಿಳಿಯುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮಿಥುನ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಸುಕರ್ಮ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:48 ರಿಂದ 05:25ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:20 ರಿಂದ 10:57ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:34 ರಿಂದ 02:11ರ ವರೆಗೆ.
ಮೇಷ: ನಿಮ್ಮವರನ್ನು ನೀವು ಬಿಟ್ಟಕೊಡುವಿರಿ. ಅವರು ಸ್ವತಂತ್ರವಾದಷ್ಟೂ ನೀವು ನೆಮ್ಮದಿಯ ಪಡೆಯುವಿರಿ. ವ್ಯಾಪರವು ಸ್ವಲ್ಪಮಟ್ಟಿಗೆ ಸುಧಾರಿಸುವುದು. ಭೂಮಿಯ ವ್ಯವಹಾರವೂ ನಿಮಗೆ ನಷ್ಟವನ್ನು ಕೊಡಬಹುದು. ಜಾಗರೂಕತೆಯಿಂದ ವ್ಯವಹರಿಸಿ. ಯಾರನ್ನೂ ಅತಿಯಾಗಿ ಹಚ್ಚಿಕೊಳ್ಳುವುದು ಒಳ್ಳೆಯದಲ್ಲ. ನಿಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮುಗಿಸಿ ಅನಂತರ ಇನ್ನೊಬ್ಬರ ಕೆಲಸದತ್ತ ಗಮನಕೊಡಿ. ಮಾಧ್ಯಮ ಕ್ಷೇತ್ರವು ನಿನಗೆ ಸದ್ಯ ಲಾಭದಾಯಕ ಆಗಲಿದೆ. ಯಶಸ್ಸನ್ನೂ ಅದು ತಂದುಕೊಡಬಹುದು. ದಾಂಪತ್ಯವನ್ನು ಸುಖವಾಗಿಡಲು ಉಡುಗೊರೆಯನ್ನು ಕೊಡಬೇಕಾಗಬಹದು.
ವೃಷಭ: ನಿಮಗೆ ಎದುರಾದ ಸಂಕಟವನ್ನು ನೀವು ಜೀರ್ಣಿಸಿಕೊಳ್ಳಲು ನೀವು ಶಕ್ತರಾಗಿದ್ದೀರಿ. ಅನೇಕ ದಿನಗಳಿಂದ ಮಾಡುತ್ತಿದ್ದ ಕೆಲಸವನ್ನು ಇಂದು ಬಹಳ ವೇಗವಾಗಿ ಮುಗಿಸಿ ನಿರಾಳವಾಗುವಿರಿ. ಮಕ್ಕಳು ನಿಮ್ಮನ್ನು ಬಿಡಲು ಬಹಳ ಕಷ್ಟಪಡುವರು. ಸಂಗಾತಿಯನ್ನು ನೀವು ಬಹಳ ದಿನಗಳ ಅನಂತರ ಪ್ರಶ್ನಿಸುವಿರಿ. ನಿಮ್ಮ ಬಗ್ಗೆ ಭಯವೂ ಹುಟ್ಟಬಹುದು. ನಿರ್ಭಾವುಕರಾಗಿ ವರ್ತಿಸುವುದು ನಿಮ್ಮವರಿಗೆ ಇಷ್ಟವಾಗದೇ ಹೋಗಬಹುದು. ನೀವು ಕೆಲಸವನ್ನು ಒಲ್ಲದ ಮನಸ್ಸಿನಿಂದ ಮಾಡುವಿರಿ. ಬೈಸಿಕೊಳ್ಳಲೂಬಹುದು.
ಮಿಥುನ: ನೆರೆಯವರ ಎದುರು ಹಾಕಿಕೊಳ್ಳಬೇಕಾದೀತು. ವೈವಾಹಿಕ ಜೀವನವು ನಿಮಗೆ ಸಾಕಾಗಬಹುದು. ನಿಮಗೆ ಸಿಗುವುದಿಲ್ಲ ಎಂದುಕೊಂಡ ಸ್ಥಾನವು ನಿಮಗೆ ಸಿಗಬಹುದು. ಅದೃಷ್ಟ ನಿಮ್ಮ ಕಡೆಗಿದ್ದು ಅದನ್ನು ಸರಿಯಾಗಿ ಬಳಸಿಕೊಳ್ಳಿ. ದೇವರ ಜೊತೆ ಸಮಯವನ್ನು ಕಳೆಯುವುದನ್ನು ಮರೆಯಬೇಡಿ. ನಿಮ್ಮ ಬಗ್ಗೆ ಸುಳ್ಳು ಪ್ರಚಾರವನ್ನೂ ಮಾಡಬಹುದು. ಸರಿಯಾದ ಉತ್ತರವನ್ನು ನೀವು ಕೊಡಬೇಕಾದೀತು. ದಿನದ ಆರಂಭದಲ್ಲಿ ಇದ್ದ ಒತ್ತಡವು ಸಂಜೆಯ ಸಮಯಕ್ಕೆ ಮುಕ್ತಾಯವಾಗಬಹುದು. ನಿಮ್ಮ ಸೌಂದರ್ಯದ ಬಗ್ಗೆ ನಿಮಗೇ ಅಸೂಯೆ ಬರಬಹುದು.
ಕರ್ಕ: ಇಂದಿನ ನಿಮ್ಮ ಕೆಲಸವು ನೆಮ್ಮಯನ್ನು ತಂದುಕೊಡುವುದು. ನಿಮ್ಮ ಉದ್ಯಮಕ್ಷೇತ್ರವನ್ನು ವಿಸ್ತರಿಸಲು ಇಷ್ಟಪಡುವಿರಿ. ಸಂಗಾತಿಗೆ ಬೇಕಾದ ವಸ್ತುಗಳನ್ನು ತಂದುಕೊಡುವಿರಿ. ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳಿ. ಕಳೆಯುವ ಸಾಧ್ಯತೆ ಇದೆ. ವಿದೇಶದ ವ್ಯವಹಾರಕ್ಕೆ ಇಡ್ಡಕೊಂಡ ವ್ಯಕ್ತಿಯಿಂದ ನೀವು ಮೋಸ ಹೋಗಬಹುದು. ನಿಮಗೆ ಸಿಗುವ ಗೌರವವನ್ನು ಯಾರಾದರೂ ತಪ್ಪಿಕೊಳ್ಳಬಹುದು. ಉದ್ಯೋಗಕ್ಕೆ ನೀವು ಕೊಟ್ಟ ಸಮಯವು ಸಫಲವಾಗಲಿದೆ. ನಿಮ್ಮ ಉತ್ಸಾಹವು ಇನ್ನೊಬ್ಬರ ಹೊಗಳಿಕೆಯಿಂದ ಬರಲಿದೆ. ದೇವಾಲಯದಲ್ಲಿ ಹೆಚ್ಚಿನ ಸಮಯವನ್ನು ನೀವು ಕಳೆಯುವಿರಿ.
ಸಿಂಹ: ಇದ್ದಕ್ಕಿದ್ದಂತೆ ನೀವು ಪ್ರಚಾರವನ್ನು ಗಿಟ್ಟಿಸಿಕೊಳ್ಳುವಿರಿ. ನಿಮ್ಮ ಯೋಚನೆಗಳು ನಿಮಗೆ ಪ್ರಸಿದ್ಧಿಯನ್ನು ತಂದುಕೊಟ್ಟಾವು. ಪ್ರತಿಷ್ಠಿತ ಸಂಸ್ಥೆಯನ್ನು ನೀವು ಇಂದು ಸೇರಿಕೊಳ್ಳಬಹುದು. ಒತ್ತಡವನ್ನು ನಿವಾರಿಸಿಕೊಳ್ಳಲು ಯೋಗವನ್ನು ಮಾಡಬೇಕಾಗಬಹುದು. ಹಣಕಾಸಿನ ವ್ಯವಹಾರಕ್ಕೆ ತಿಳಿದವರ ಸಹಾಯವನ್ನು ಪಡೆಯುವಿರಿ. ತಾಯಿಯ ಕಡೆಯಿಂದ ನಿಮಗೆ ಉಚಿತ ಸಲಹೆಗಳು ಬರಬಹುದು. ರಾಜಕೀಯ ವ್ಯಕ್ತಿಗಳು ನಿಮ್ಮನ್ನು ತಮ್ಮ ಕಾರ್ಯಕ್ಕೆ ಸೇರಿಸಿಕೊಳ್ಳಬಹುದು. ನ್ಯಾಯದ ವಿಚಾರದಲ್ಲಿ ನೀವು ಸ್ವಲ್ಪ ಹಿನ್ನಡೆ ಪಡೆಯಬಹುದು.
ಕನ್ಯಾ: ವಿದ್ಯಾರ್ಥಿಗಳು ಪರೀಕ್ಷೆಯ ಭಯದಲ್ಲಿ ಓದಿದ್ದನ್ನು ಮರೆತುಕೊಳ್ಳವ ಸಾಧ್ಯತೆ ಇದೆ. ವಿವಾಹಕ್ಕೆ ಸಂಬಂಧಿಸಿದಂತೆ ನೀವು ಮುಂದೆ ಹಾಕಲಿದ್ದೀರಿ. ವಿವಾಹಗಳನ್ನು ಆಗುವ ಸಮಯಕ್ಕೆ ಆಗುವುದು ಒಳ್ಳೆಯದು. ಆತ್ಮೀಯರ ಒಡನಾಟ ನಿಮಗೆ ಸಂತೋಷವನ್ನು ಕೊಡಬಹುದು. ಸಂಜೆ ನೀವು ವಾಯುವಿಹಾರವನ್ನು ಮಾಡುವಿರಿ. ಮನಸ್ಸು ಸ್ವಲ್ಪ ಹಗುರಾಗಲಿದೆ. ಪೋಷಕರಿಗೆ ನೀವು ಸಹಾಯವನ್ನು ಮಾಡಲು ಬಯಸುವಿರಿ. ಹೆಚ್ಚಿನ ಆದಾಯಕ್ಕೆ ಆಯ್ಕೆ ಮಾಡಿಕೊಂಡ ಕ್ಷೇತ್ರವು ನಿಮಗೆ ಅಷ್ಟು ಸುಖವಿಲ್ಲ. ಅದನ್ನು ಬಿಡಲು ಯೋಚಿಸುವಿರಿ.
ತುಲಾ: ನಿಮ್ಮ ನಿರೀಕ್ಷೆಯು ಇಂದು ಸಫಲವಾದೀತು. ಕಛೇರಿಯ ಉಸ್ತುವಾರಿಗಳಾಗಿ ಎಲ್ಲವನ್ನೂ ಗಮನಿಸಿ ವರದಿ ನೀಡಲು ಹೇಳಬಹುದು. ನಿಮ್ಮ ಕಷ್ಟಗಳನ್ನು ನೀವು ಗಟ್ಟಿ ಮನಸ್ಸಿನಿಂದ ಎದುರಿಸುವಿರಿ. ವಾಹನ ಸವಾರಿ ಮಾಡುವಾಗ ಸ್ವಲ್ಪ ಎಚ್ಚರಿಕೆ ಅಗತ್ಯ. ಸಮಯಕ್ಕೆ ಬೆಲೆ ಕೊಟ್ಟು ನಿಮ್ಮ ಕೆಲಸಗಳನ್ನು ಮುಗಿಸಿಕೊಳ್ಳುವಿರಿ. ವಿವಾಹ ಕಾರ್ಯವು ಬಹಳ ವಿಜೃಂಭಣೆಯಿಂದ ಮುಕ್ತಾಯಗೊಳ್ಳುವುದು. ಅಧಿಕ ಮಾತನ್ನು ಕಡಿಮೆ ಮಾಡಿಕೊಳ್ಳಿ. ಒಳ್ಳೆಯ ಭೋಜನವನ್ನು ಇಂದು ಮಾಡುವಿರಿ. ನಿಮ್ಮ ಊಹೆ ಪೂರ್ಣ ಸತ್ಯವಾಗದು. ಸಂಬಂಧಗಳನ್ನು ನೀವು ಬಿಟ್ಟುಕೊಡಬೇಕಾದೀತು.
ವೃಶ್ಚಿಕ: ವಿದ್ಯುತ್ ಉಪಕರಣಗಳು ನಿಮಗೆ ಒಂದಿಷ್ಟು ಲಾಭವನ್ನು ತಂದುಕೊಡಬಹುದು. ನೀವು ಸೇವಿಸುವ ಔಷಧವು ಇನ್ನೊಂದು ರೋಗಕ್ಕೆ ಕಾರಣವಾಗಿದೆ ಎಂದು ತಿಳಿಯುವುದು. ತಾಳ್ಮೆಯನ್ನು ಕಳೆದುಕೊಳ್ಳಲು ಅನೇಕ ಸಂಗತಿಗಳು ಇರಲಿವೆ. ದುರಾಲೋಚನೆಯನ್ನು ಬಿಟ್ಟುಬಿಡುವುದು ಒಳ್ಳೆಯದು. ನಿಮ್ಮ ಅಹಂಕಾರವು ನಿಮಗೆ ಸೋಲನ್ನು ತಂದುಕೊಡುವುದು. ವಿವೇಕವನ್ನು ಬಿಟ್ಟು ನೀವು ವ್ಯವಹರಿಸಲು ಹೋಗಿ ಮೋಸಹೋಗುವಿರಿ. ಖರ್ಚಿನ ಅಂದಾಜಿನ ಮೇಲೆ ಇಂದಿನ ವ್ಯವಹಾರವಿರಲಿ. ಹಿತಶತ್ರುಗಳ ಸಂಚು ಇಂದು ತಿಳಿಯಬಹುದು. ಉನ್ನತ ವ್ಯಾಸಂಗವು ನಿಮ್ಮ ಸ್ಥಾನವನ್ನು ಹೆಚ್ಚಿಸೀತು.
ಧನುಸ್ಸು: ಅನಾಮಧೇಯ ಕರೆಗಳು ನಿಮ್ಮನ್ನು ಹೂಡಿಕೆಗೆ ಪ್ರೇರಿಸಬಹುದು. ನಿಮ್ಮ ನಗವಿನಲ್ಲಿ ಅಸಹಜತೆ ಹೆಚ್ಚು ಇರಲಿದೆ. ವಿವಾಹ ಮಾತುಕತೆ ಮುಂದಕ್ಕೆ ಹೋಗಬಹುದು. ನಿಮ್ಮ ಆಪ್ತರನ್ನು ನೀವು ದೂರ ಮಾಡುವಿರಿ. ನಿಮ್ಮ ಸೌಂದರ್ಯವು ಇಂದು ಆಕರ್ಷಕವಾಗಿರುವುದು. ಎಂದಿನಂತೆ ನಿಮ್ಮ ಮಾನಸಿಕ ಸ್ಥಿತಿಯು ಇರದು. ವಿದ್ಯಾರ್ಥಿಗಳು ತಕ್ಕಮಟ್ಟಿನ ಪ್ರದರ್ಶನವನ್ನು ತೋರುವರು. ಸರ್ಕಾರಿ ಉದ್ಯೋಗಿಗಳು ಒತ್ತಡದಲ್ಲಿ ಇರುವರು. ನಿಮ್ಮ ಆಡಳಿತವು ಬೇಸರ ತರಿಸೀತು. ಮನೆಯ ಜವಾಬ್ದಾರಿಯು ಬರುವ ಸಾಧ್ಯತೆ ಇದೆ. ಕೆಲವು ವಿಚಾರಗಳು ಬಹಳ ವಿಳಂಬವಾಗಿ ನಿಮ್ಮ ಗಮನಕ್ಕೆ ಬರಬಹುದು. ಇದು ಬೇಸರವನ್ನು ಉಂಟುಮಾಡೀತು.
ಮಕರ: ಗುರುದರ್ಶನವು ನಿಮ್ಮ ಈ ದಿನಕ್ಕೆ ಶುಭವನ್ನು ತರುವುದು. ಕಲಾವಿದರು ಹೆಚ್ಚಿನ ಪ್ರಸಿದ್ಧಿಗೆ ಶ್ರಮಿಸಬಹುದು. ಬದ್ಧತೆಯ ಕೊರತೆಯಿಂದ ಕಾರ್ಯಗಳು ಸರಿಯಾಗಿ ಆಗದು. ಕಾಲವು ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬಹುದು. ಹೊಸ ಸುದ್ದಿಯು ನಿರೀಕ್ಷೆಯಲ್ಲಿ ನೀವು ಇರುವಿರಿ. ಎಲ್ಲರ ನಡುವೆ ಇದ್ದರೂ ಒಂಟಿತನವು ನಿಮ್ಮನ್ನು ಕಾಡಬಹುದು. ಅನವಶ್ಯಕ ವಸ್ತುಗಳನ್ನು ನೀವು ಪಡೆಯಲು ಹಣವನ್ನು ಖರ್ಚುಮಾಡಬಹುದು. ಯಾರದೋ ಮಾತಿನ ಮೇಲೆ ಹಣವನ್ನು ಹೂಡುವಿರಿ. ಅಲಭ್ಯ ವಸ್ತುವಿಗೆ ದುಃಖಿಸುವ ಅವಶ್ಯಕತೆ ಇಲ್ಲ. ಸಮಾಜದ ಕಾರ್ಯಗಳಲ್ಲಿ ನೀವು ತೊಡಗಿಕೊಳ್ಳುವವರಿದ್ದೀರಿ.
ಕುಂಭ: ನಿಮ್ಮ ವಸ್ತುಗಳು ಕಾಣಿಸದೇ ಹೋದೀತು. ನೋವು ಇಂದು ಇದ್ದುದರಲ್ಲಿ ತೃಪ್ತಿಪಡಬೇಕಾದೀತು. ನೀವು ಇಂದು ಸೋಲನ್ನು ಒಪ್ಪಿಕೊಳ್ಳಲು ಹಿಂಜರಿಯುವಿರಿ. ಎದುರು ಮಾತನಾಡುವುದು ನಿಮಗೆ ಇಂದು ಸರಿಕಾಣದು. ಗಳಿಕೆ ಸ್ವಲ್ಪಭಾಗವನ್ನು ನೀವು ಉಳಿತಾಯ ಮಾಡಲು ಉಪಯೋಗಿಸುವಿರಿ. ಪೂರ್ತಿ ತಿಳಿಯದೇ ಯಾವುದನ್ನೂ ಹೇಳಲು ಹೋಗಬೇಡಿ. ನಿಮ್ಮೆದುರೇ ನಿಮ್ಮವರನ್ನು ಅಲ್ಲಗಳೆಯಬಹುದು. ನಿಮ್ಮ ವರ್ತನೆಗಳು ಸ್ವಲ್ಪ ಮಾರ್ಗವನ್ನು ಬಿಡಬಹುದು. ಕೆಲವು ವಿಚಾರವನ್ನು ನಿಮ್ಮ ತಲೆಯಿಂದ ತೆಗೆದುಹಾಕಬೇಕಾಗಬಹುದು.
ಮೀನ: ವ್ಯಾಪರವು ಇಂದು ಅಲ್ಪಪ್ರಮಾಣದ ಲಾಭವನ್ನು ಕೊಡಬಹುದು. ಅಶಿಸ್ತಿನಿಂದ ನೀವು ಇರಲಿದ್ದೀರಿ. ಯೋಜನೆಯನ್ನು ಸಿದ್ಧಪಡಿಸಲು ನೀವು ಅಧಿಕ ಶ್ರಮವನ್ನು ವಹಿಸಬೇಕಾದೀತು. ಉದ್ಯೋಗದ ಸ್ಥಳವು ಸ್ವಲ್ಪ ಕಿರಿಕಿರಿಯಿಂದ ಇರಲಿದೆ. ನಿಮ್ಮ ಆದಾಯದ ಮೂಲವನ್ನು ನೀವು ಯಾರಿಗೂ ಹೇಳಬೇಡಿ. ನಿಮ್ಮನ್ನು ಅಪಹಾಸ್ಯ ಮಾಡಬಹುದು. ಸುಂದರವಾದ ಪ್ರದೇಶಗಳಿಗೆ ನೀವು ಹೋಗುವವರಿದ್ದೀರಿ. ಸಾಮಾನ್ಯ ವಿಚಾರವನ್ನು ದೊಡ್ಡದಾಗಿ ಬಿಂಬಿಸುವ ಅವಶ್ಯಕತೆ ಇಲ್ಲ. ಸರಿಯಾದುದನ್ನು ನೀವು ಆಯ್ಕೆ ಮಾಡಿಕೊಳ್ಳಲು ಕಷ್ಟವಾದೀತು.