ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಆಶ್ಲೇಷ, ಯೋಗ: ಧೃತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 55 ನಿಮಿಷಕ್ಕೆ, ರಾಹು ಕಾಲ 09:17 ರಿಂದ 10:53ರ ವರೆಗೆ, ಯಮಘಂಡ ಕಾಲ 02:06 ರಿಂದ 03:42ರ ವರೆಗೆ, ಗುಳಿಕ ಕಾಲ 06:04 ರಿಂದ 07:40ರ ವರೆಗೆ.
ಸಿಂಹ: ಈ ದಿನ ಸಹಜವಾಗಿ ಮುನ್ನಡೆಯುವುದು. ನಿಮ್ಮ ಎಲ್ಲ ಕೆಲಸಗಳೂ ಸಮಯಕ್ಕೆ ಸರಿಯಾಗಿ ಮುಗಿಸಿಕೊಂಡು ಕುಳಿತುಕೊಳ್ಳುವಿರಿ. ಹಳೆಯ ದಿನಗಳ ನೆನಪುಗಳು ಒಂದೊಂದಾಗಿಯೇ ಬಂದು ಹೋಗುವುದು. ಖರ್ಚನು ನಿಯಂತ್ರಿಸಲು ಅಥವಾ ಹೆಚ್ಚಿನ ಸಂಪಾದನೆಗೆ ಮನೆಯಲ್ಲಿಯೇ ಕೆಲಸ ಮಾಡುವ ಉದ್ಯೋಗವನ್ನು ಹುಡುಕುವಿರಿ. ಸಂಬಂಧಿಕರ ದೂರವಾಣಿ ಕರೆಗಳು ನಿಮಗೆ ತೊಂದರೆಯನ್ನು ಉಂಟುಮಾಡಿದರೂ ವ್ಯಕ್ತಪಡಿಸದೇ ಒಲ್ಲದ ಮನಸ್ಸಿನಿಂದ ಮಾತನಾಡುವಿರಿ. ಹಳೆಯ ಮನೆಯ ರಿಪೇರಿ ಕೆಲಸ ಮಾಡುವಿರಿ.
ಕನ್ಯಾ: ಇಂದು ನಿಮ್ಮ ದಾಂಪತ್ಯದಲ್ಲಿ ಹೆಚ್ಚಿನ ಸುಖವು ಸಿಗುವ ಸೂಚನೆ ಸಿಗಲಿದೆ. ಕೆಲಸಗಳನ್ನು ಬಹಳ ಸಂಕೀರ್ಣ ಮಾಡಿಕೊಳ್ಳುವಿರಿ. ಸರಳವಾದ ಆಲೋಚನೆಯಿಂದ ನಿಮ್ಮ ಕೆಲಸಗಳು ಸಲೀಸಾಗಬಹುದು. ಭೂಮಿಗೆ ಸಂಬಂಧಿಸಿದಂತೆ ನೆರೆಯವರ ಮಧ್ಯದಲ್ಲಿ ಬಿಸಿಬಿಸಿ ಮಾತುಗಳು ಆಗಬಹುದು. ಕಾನೂನಿನ ಮಾರ್ಗದಲ್ಲಿ ನಡೆಯುವುದು ಉತ್ತಮ. ಅಹಿತಕರ ಘಟನೆಗಳಿಗೆ ಆಸ್ಪದವನ್ನು ಕೊಡುವುದು ಬೇಡ. ಮಕ್ಕಳನ್ನು ಪ್ರೀತಿಯಿಂದ ಕಾಣುವಿರಿ. ಬೇಕಾದುದನ್ನು ಅವರಿಗೆ ನೀಡಿ ಖುಷಿಪಡಿಸುವಿರಿ. ಭಕ್ತಿಯಲ್ಲಿ ಚಾಂಚಲ್ಯವು ಅಧಿಕವಾದೀತು.
ತುಲಾ: ನೀವು ಈ ದಿನ ಕೆಲಸದ ಸ್ಥಳದಲ್ಲಿ ಕೊಪವನ್ನು ಮಾಡಿಕೊಳ್ಳದಿರುವುದು ಒಳ್ಳೆಯದು. ಹಣಕಾಸಿನ ವಿಚಾರದಲ್ಲಿ ನೀವು ದಂಡ ತೆರಬೇಕಾದೀತು. ಸರಿಯಾದ ಸಲಹೆಯನ್ನು ಪಡೆಯಿರಿ. ಹೊಟ್ಟೆ ನೋವಿನಿಂದ ನೀವು ಇಂದು ಬಳಲಬಹುದು. ಇದು ಕೆಲಸದ ಪ್ರದೇಶದಲ್ಲಿ ನಿಮ್ಮ ಮನಸ್ಸಿನ ಏಕಾಗ್ರತೆಯನ್ನು ಭಂಗ ಮಾಡೀತು. ಇಂದು ನಿಮ್ಮ ದಿನದ ಕೆಲಸವನ್ನು ಪಟ್ಟಿ ಮಾಡಿಕೊಳ್ಳಿ. ಇಲ್ಲವಾದರೆ ಸಮಯವೂ ವ್ಯರ್ಥ, ಕಾರ್ಯವೂ ಆಗದು. ಹೊಸ ಕೆಲಸಗಳನ್ನೂ ಆರಂಭಿಸಲು ಇದು ಸಹಕಾರಿಯಾಗುವುದು. ಯಾವುದನ್ನೂ ಇಂದು ಅತಿಯಾಗಿ ಮಾಡಲು ಹೋಗಬೇಡಿ. ಮಿತಿಯಲ್ಲಿ ಎಲ್ಲವೂ ಇರಲಿ.
ವೃಶ್ಚಿಕ: ಈ ದಿನ ನೀವು ಶುಭ ಕಾರ್ಯಗಳಲ್ಲಿ ಉತ್ಸಾಹದಿಂದ ಭಾಗವಹಿಸುವಿರಿ. ಆಹಾರದಿಂದ ನಿಮ್ಮ ಆರೋಗ್ಯವನ್ನು ಉತ್ತಮವಾಗಿಸಿಕೊಳ್ಳುವಿರಿ. ನಿರೀಕ್ಷಿತ ಕೆಲಸದಲ್ಲಿ ಹಿನ್ನಡೆಯಾದರೂ ಸ್ವಲ್ಪಮಟ್ಟಿನ ಸಮಾಧಾನ ಇರ್ಲಿದೆ. ಮಕ್ಕಳ ಮನಸ್ಸನ್ನು ನೋಯಿಸಲು ಹೋಗಬೇಡಿ. ನಿಮ್ಮ ಮಾತುಗಳು ವಿಪರೀತ ಪರಿಣಾಮವನ್ನು ಕೊಡುವುದು. ಬುದ್ಧಿವಂತಿಕೆಯಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳಿ. ಪ್ರೇಮವ್ಯವಹಾರದಲ್ಲಿ ಜಾಗರೂಕತೆ ಇರಲಿ. ಬಿಟ್ಟು ಹೋಗುವ ಸಾಧ್ಯತೆ ಇದೆ. ಆಕಸ್ಮಿಕ ತಿರುವುಗಳಿಗೆ ನೀವು ಇಂದು ತಯಾರಿರಬೇಕಾದೀತು.
–ಲೋಹಿತಶರ್ಮಾ