Nitya Bhavishya: ಈ ರಾಶಿಯವರು ಇಂದು ಕಛೇರಿಯ ಕೆಲಸಕ್ಕೆ ವಿರಾಮ ಹಾಕಿ ದೂರ ಪ್ರವಾಸ ಹೋಗುವ ಸಾಧ್ಯತೆ ಇದೆ

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಮೇ 27) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Nitya Bhavishya: ಈ ರಾಶಿಯವರು ಇಂದು ಕಛೇರಿಯ ಕೆಲಸಕ್ಕೆ ವಿರಾಮ ಹಾಕಿ ದೂರ ಪ್ರವಾಸ ಹೋಗುವ ಸಾಧ್ಯತೆ ಇದೆ
ಜ್ಯೋತಿಷ್ಯ
Follow us
ವಿವೇಕ ಬಿರಾದಾರ
|

Updated on: May 27, 2023 | 12:45 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಮೇ​ 27) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಅಷ್ಟಮೀ, ನಿತ್ಯನಕ್ಷತ್ರ: ಆಶ್ಲೇಷ, ಯೋಗ: ಧೃತಿ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 55 ನಿಮಿಷಕ್ಕೆ, ರಾಹು ಕಾಲ 09:17 ರಿಂದ 10:53ರ ವರೆಗೆ, ಯಮಘಂಡ ಕಾಲ 02:06 ರಿಂದ 03:42ರ ವರೆಗೆ, ಗುಳಿಕ ಕಾಲ 06:04 ರಿಂದ 07:40ರ ವರೆಗೆ.

ಧನು: ಈ ದಿನ ನೀವು ಕಠಿಣ ಪರಿಶ್ರಮದ ಅನಂತರ ಅಂದುಕೊಂಡಿದ್ದನ್ನು ಅಲ್ಪ ಸಾಧಿಸುವಿರಿ. ನೀವು ಇಂದು ಕಛೇರಿಯ ಕೆಲಸಕ್ಕೆ ವಿರಾಮ ಹಾಕಿ ದೂರ ಪ್ರವಾಸ ಹೋಗುವ ಸಾಧ್ಯತೆ ಇದೆ. ಇಂದಿನ ಘಟನೆಗಳು ಮಾನಸಿಕವಾಗಿ ಕಿರಿಕಿರಿಯನ್ನು ಮಾಡುತ್ತವೆ. ಇದರಿಂದ ಮನಸ್ಸು ನಿರಾಸೆಗೊಳ್ಳಬಹುದು. ನಿಮ್ಮ ಅಪೂರ್ಣ ಕಾರ್ಯಗಳು ಇಂದು ಮುಂದಿವರಿಯಲಿವೆ. ಅದಲ್ಲಿ ಕೆಲವು ಪೂರ್ಣವಾಗುವುದು. ಇಂದಿನ ಸಂತೋಷಕ್ಕೆ ಅತಿಯಾಗಿ ಹಿಗ್ಗುವುದು ಬೇಡ, ಸಮತೋಲನವಿರಲಿ.

ಮಕರ: ಈ ದಿನ ನಿಮ್ಮ ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಬರುವ ಸಾಧ್ಯತೆ ಇದೆ. ನಿಮ್ಮ ಮೇಲಿನ ಗೌರವ ಹಾಗು ಪ್ರೀತಿಯು ಇರುವುದರಿಂದ ಅಲ್ಲಿಯೇ ಅದು ಮುಕ್ತಾಯವಾಗಬಹುದು. ಆರ್ಥಿಕತೆಯ ವಿಚಾರದಲ್ಲಿ ನಿಮಗೆ ಇಂದು ಸೂಚಿಸದೇ ಹೋದೀತು. ನಿಮ್ಮ ಕೆಲಸವನ್ನು ಟೀಕೆ ಮಾಡುವ ಸಾಧ್ಯತೆ ಇದೆ. ಬಂಧುಗಳ ವಿಚಾರದಲ್ಲಿ ನಿಮಗೆ ಅಸಮಾಧಾನ ಇರಬಹುದು. ವ್ಯಕ್ತಪಡಿಸುವ ವಿಧಾನವು ಬೇರೆ ರೀತಿಯಾಗಿರುತ್ತದೆ. ಮಾತು ನಿರರ್ಥಕ ಎಂದು ತಿಳಿದಮೇಲೆ ಮಾತು ನಿಲ್ಲಿಸುವುದು ಉತ್ತಮ.

ಕುಂಭ: ಇಂದು ನಿಮ್ಮ ಆರ್ಥಿಕ ಮತ್ತು ಕೌಟುಂಬಿಕ ತೊಂದರೆಗಳು ನಿಮ್ಮನ್ನು ಮತ್ತಷ್ಟು ಒತ್ತಡಕ್ಕೆ ಒಯ್ಯಬಹುದು. ಅತಿಯಾದ ಉತ್ಸಾಹ ಹಾಗೂ ಸಿದ್ಧತೆಯಲ್ಲಿರುವ ನಿಮಗೆ ಮನೆಯವರ ಮಾತು ಉತ್ಸಹ ಭಂಗವನ್ನು ಮಾಡುವುದು. ಒಳ್ಳೆಯ ಸುದ್ದಿಯ ನಿರೀಕ್ಷೆಯಲ್ಲಿ ನೀವಿರುವಿರಿ. ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಹಳೆಯದನ್ನು ನೆನಪಿಸಿಕೊಂಡು ಸಂತೋಷಿಸಬಹುದು. ಅನುಮಾನವಾಗುವ ಸ್ಥಳಗಳಿಗೆ ಹೋಗದೇ ಹಿಂದೇಟು ಹಾಕುವಿರಿ. ಸಂಪತ್ತನ್ನು ಅನ್ಯ ಮಾರ್ಗದಿಂದ ಸಂಪಾದಿಸಲು ಅವಕಾಶಗಳು ಬರಬಹುದು. ನಿಮ್ಮ ಶ್ರಮವು ನ್ಯಾಯಯುತವಾದ ಹಾದಿಯಲ್ಲಿ ಇರಲಿ. ಯಾರ ಮಾತನ್ನೂ ನಿರ್ಲಕ್ಷ್ಯ ಮಾಡಬೇಡಿ.

ಮೀನ: ಇಂದು ನಿಮ್ಮ ಅನಪೇಕ್ಷಿತ ಹಸ್ತಕ್ಷೇಪದಿಂದಾ ಲಾಭದ ಹಾದಿಯ ಮೇಲೆ ವಿಪರೀತ ಪರಿಣಾಮ ಉಂಟಾಗಬಹುದು. ಇಂದು ನೀವು ಅಪರಿಚಿತ ವ್ಯಕ್ತಿಯಿಂದ ಬೆಂಬಲವನ್ನು ಪಡೆಯಲಿದ್ದೀರಿ. ಕಾರ್ಯದಲ್ಲಿ ಶ್ರದ್ಧೆಯು ಅವಶ್ಯವಾಗಿ ಬೇಕಾಗಿದೆ. ಅಜಾಗರೂಕಯೆಯಿಂದ ತೊಂದರೆಗೆ ಸಿಕ್ಕಿಹಾಕಿಕೊಳ್ಳಬಹುದು. ನಿಮ್ಮ ಯಶಸ್ಸನ್ನು ಕಂಡು ನಿಮ್ಮನ್ನು ಸೋಲಿಸಲೆಂದು ಹಿತಶತ್ರುಗಳು ಹೊಂಚು ಹಾಕಬಹುದು. ಸುಕೃತದಿಂದ ಅದು ನಿಷ್ಫಲವಾಗಬಹುದು. ನಿರ್ಮಾಣ ಕಾರ್ಯದಲ್ಲಿ ತೊಡ್ಡಗಿದವರಿಗೆ ಹೆಚ್ಚಿನ ಕಾಮಗಾರಿಗಳು ಸಿಗಬಹುದು. ಎಷ್ಟೋ ದಿನಗಳಿಂದ ಅನುಭವಿಸಬೇಕಾದುದನ್ನು ನೀವು ಇಂದು ಅನುಭವಿಸುವಿರಿ. ಇಂದು ಬರುವ ಒಳ್ಳೆಯ ಸುದ್ದಿಯು ನಿಮ್ಮ ಉತ್ಸಾಹವನ್ನು ಇಮ್ಮಡಿಗೊಳಿಸೀತು.

-ಲೋಹಿತಶರ್ಮಾ – 8762924271