ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜೂನ್ 3 ಶನಿವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಚತುರ್ದಶೀ, ನಿತ್ಯನಕ್ಷತ್ರ: ಅನುರಾಧಾ, ಯೋಗ: ಸುಕರ್ಮ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:17 ರಿಂದ 10:54ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:07 ರಿಂದ 03:44ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:04 ರಿಂದ 07:40ರ ವರೆಗೆ.
ಸಿಂಹ: ಮನೆಯಲ್ಲಿ ನೆಮ್ಮದಿಯ ವಾತಾವರಣ ಇದ್ದರೂ ಕೊರತೆಯನ್ನು ನೀವು ಸೃಷ್ಟಿಕೊಳ್ಳುವಿರಿ. ಇದರಿಂದ ನಿಮಗೇ ನಷ್ಟವಾಗುವ ಸಾಧ್ಯತೆ ಇದೆ. ಮಾತಿನ ನಿಯಂತ್ರಣ ತಪ್ಪಿ ಇನ್ನೊಬ್ಬರಿಂದ ಅಪಮಾನವನ್ನು ಎದುರಿಸಿಬೇಕಾದೀತು. ಎಲ್ಲವೂ ವಿಳಂಬವಾಗುವುದು ಎಂಬ ವ್ಯಥೆಯು ಬಾಧಿಸಬಹುದು. ಹಿರಿಯರನ್ನು ನೀವು ಅಗೌರವದಿಂದ ಕಾಣುವಿರಿ. ಸಮಾಜದ ನಡುವೆ ನೀವೊಬ್ಬ ವ್ಯಕ್ತಿಯಾಗಬೇಕು ಎಂದು ಅಂದುಕೊಳ್ಳುವಿರಿ. ಸಂಪತ್ತನ್ನು ಸಂಪಾದಿಸಲು ವಿಧವಾದ ಯೋಜನೆಯನ್ನು ಮಾಡುವಿರಿ. ಅಪವಾದವನ್ನು ನೀವು ಎದುರಿಸಲು ಹಿಂಜರಿಯಬಹುದು.
ಕನ್ಯಾ: ನಿಮ್ಮವರು ನಿಮ್ಮ ನಡವಳಿಕೆಯನ್ನು ಕಂಡು ನಕ್ಕಾರು. ಆದರೂ ನಿಮ್ಮ ಮಾರ್ಗವನ್ನು ನೀವು ಬದಲಿಸುವುದಿಲ್ಲ. ಮಕ್ಕಳಿಗಾಗಿ ನೀವು ಪರಿವರ್ತನೆಯಾಗುವಿರಿ. ಲೆಕ್ಕಾಚಾರ ವಿಚಾರಗಳು ನಿಮ್ಮ ತಲೆಗೆ ಹೋಗದು. ವಿದ್ಯಾರ್ಥಿಗಳು ಹೆಚ್ಚಿನ ಶ್ರಮದಿಂದ ಅಭ್ಯಾಸ ಮಾಡಬೇಕಾದೀತು. ನಿಮಗೆ ಬರುವ ಸಮಸ್ಯೆಗಳು ನಗಣ್ಯವಾಗಿದ್ದರೂ ಅದನ್ನು ದೊಡ್ಡ ಮಾಡುವಿರಿ. ಆರೋಗ್ಯವು ನಿಮಗೆ ದೃಢವಾಗಿದೆ ಎಂದು ಅನ್ನಿಸಿದರೂ ಹಠಾತ್ ವ್ಯತ್ಯಾಸದ ಕಾರಣದಿಂದ ಧೈರ್ಯವನ್ನು ಕಳೆದುಕೊಳ್ಳುವಿರಿ. ದಾಂಪತ್ಯದಲ್ಲಿ ಸುಖವು ಮಧ್ಯಮದಲ್ಲಿ ಇರಲಿದೆ. ಗುರುಸೇವೆಯ ಅಗತ್ಯತೆ ಬಹಳ ಇರಲಿದೆ. ನಿಮಗೆ ಒದಗುವ ಅನೇಕ ಸಂಕಟಗಳನ್ನು ಅದು ದೂರ ಮಾಡೀತು.
ತುಲಾ: ಇಂದು ನಿಮ್ಮ ಕೋಪವನ್ನು ಮನೆಯವರು ನೋಡುವರು. ನಿಮ್ಮ ವರ್ತನೆಯು ಬಹಳ ಬೇಸರ ತರಿಸಬಹುದು. ಸಂಗಾತಿಯ ಜೊತೆ ಕಲಹವನ್ನು ಮಾಡಿಕೊಳ್ಳುವಿರಿ. ಬೆಳಗಿನ ಸಮಯದಲ್ಲಿ ನಿಮಗೆ ಈ ದಿನವು ಮನೋಹರವಾಗಲಿದೆ ಎಂದು ಅನ್ನಿಸಬಹುದು. ಮಕ್ಕಳ ಜೊತೆ ಹೆಚ್ಚು ಕಾಲವನ್ನು ನೀವು ಕಳೆಯುವಿರಿ. ವಹಿಸಿಕೊಂಡ ಕೆಲಸವು ಹಿಂದುಳಿಯಬಹುದು. ಸಣ್ಣ ವಿಚಾರಕ್ಕೂ ಕೋಪಗೊಳ್ಳುವಿರಿ. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳಲು ಒತ್ತಾಯ ಬರಬಹುದು. ವ್ಯಾಪರವು ಮಧ್ಯಮಗತಿಯಲ್ಲಿ ಇರುವುದು. ಕೇಳಿಕೊಂಡರೆ ನಿಮಗೆ ಆಗಬೇಕಾದ ಕೆಲಸವು ಆಗುವುದು.
ವೃಶ್ಚಿಕ: ನಿಮ್ಮ ಬಹಳ ದಿನದ ಆಸೆಯು ಪೂರ್ಣಗೊಳ್ಳುವ ಸಂದರ್ಭವು ಬರಬಹುದು. ನೀವು ಇಂದು ಒತ್ತಡಗಳನ್ನು ಮಾಡಿಕೊಳ್ಳಬಾರದೆಂದು ಅಂದುಕೊಂಡಿದ್ದರೂ ಸನ್ನಿವೇಶಗಳು ಅದೇ ರೀತಿ ಸೃಷ್ಟಿಯಾಗುವ ಸಂಭವವಿದೆ. ಅನವಶ್ಯಕ ಖರ್ಚಿಗೆ ನೀವು ಕಡಿವಾಣ ಹಾಕಲಿದ್ದೀರಿ. ಆರೋಗ್ಯವನ್ನು ದೃಢ ಮಾಡಿಕೊಳ್ಳಲು ನೀವು ಪ್ರಯತ್ನಿಸುತ್ತಿರುವಿರಿ. ಅಪರಿಚಿತರ ಪರಿಚಯವು ನಿಮ್ಮ ಉದ್ಯಮಕ್ಕೆ ಹೆಚ್ಚು ಪೂರಕವಾಗಲಿದೆ. ಮಕ್ಕಳಿಂದ ದೂರವಿರುವ ನಿಮಗೆ ಬೇಸರವಾದೀತು. ದಿನದ ಕಾರ್ಯದಲ್ಲಿ ಸ್ವಲ್ಪ ವ್ಯತ್ಯಾಸವಾಗಲಿದೆ.
-ಲೋಹಿತಶರ್ಮಾ ಇಡುವಾಣಿ