Horoscope: ದಿನಭವಿಷ್ಯ: ಇಂದು ಅವಮಾನವಾಗುವ ಪ್ರಸಂಗವೂ ಬರಬಹುದು-ಎಚ್ಚರ

ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ ರಾಶಿಯವರಾಗಿದ್ದರೆ. ಜೂ.14 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ದಿನಭವಿಷ್ಯ: ಇಂದು ಅವಮಾನವಾಗುವ ಪ್ರಸಂಗವೂ ಬರಬಹುದು-ಎಚ್ಚರ
ದಿನಭವಿಷ್ಯ
Updated By: ಕಿರಣ್ ಹನುಮಂತ್​ ಮಾದಾರ್

Updated on: Jun 14, 2024 | 12:30 AM

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಶುಕ್ರವಾರ (ಜೂನ್. 14) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಪೂರ್ವಾಫಲ್ಗುಣೀ, ಯೋಗ: ವಜ್ರ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 10:56 ರಿಂದ 12:33ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:47 ರಿಂದ 05:24ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:42 ರಿಂದ 09:19ರ ವರೆಗೆ.

ಸಿಂಹ ರಾಶಿ: ಇಂದು ಬಹಳ ದಿನಗಳಿಂದ ನಡೆಸಿದ ಭೂಮಿಯ ವ್ಯವಹಾರ ಕುದುರಬಹುದು. ಹೊಸ ಉತ್ಸಾಹದ ದಿನವಾಗಿ ಇರಲಿದೆ. ಮಕ್ಕಳಿಂದ ನಿಮಗೆ ಶುಭವಾರ್ತಯು ಇರಬಹುದು. ಮುಸುಕಿನ ಗುದ್ದಾಟ ನಿಮ್ಮ ಮತ್ತು ಪತಿಯ ನಡುವೆ ನಡೆಯತ್ತದೆ. ಹಿತಶತ್ರುಗಳು ಅರಿತುಕೊಳ್ಳಿ‌ ನಿಮಗೆ ಹೆಚ್ಚು ಸಮಯಬೇಕಾಗದು. ಇಂದಿನ‌ ಪ್ರಯಾಣವು ನಿಮಗೆ ಆಯಾಸವನ್ನು ಕೊಡುತ್ತದೆ. ಅಪ್ರಾಮಾಣಿಕತೆಯಿಂದ ನೀವು ಕೆಲವರನ್ನು ಕಳೆದುಕೊಳ್ಳುವಿರಿ. ಅದಕ್ಕೆ ಬಲಿಯಾಗಿ ಸಂಪತ್ತನ್ನು ಕಳೆದುಕೊಳ್ಳಬೇಡಿ. ದೇವರ ಉತ್ಸವಗಳಲ್ಲಿ ಭಾಗಿಯಾಗುವಿರಿ. ನಿಮ್ಮ ಮಾತು ಸ್ಪಷ್ಟವಾಗಿದ್ದರೂ ಅಪಾರ್ಥಕ್ಕೆ ಕಾರಣವಾಗಲಿದೆ. ಕೃಷಿಯನ್ನು ನೀವು ಇಷ್ಟಪಡುವುದಿಲ್ಲ. ಎಲ್ಲವನ್ನೂ ನೀವು ಲಾಭದಾಯಕವನ್ನಾಗಿ ಮಾಡಿಕೊಳ್ಳುವಿರಿ. ಅನ್ನಿಸಿದ್ದನ್ನು ಹೇಳುವ ರೀತಿಯಲ್ಲಿ ಹೇಳಿ. ಇಂದು ನಿಮ್ಮವರ ಬಗ್ಗೆಯೇ ಯೋಚಿಸಲು ಸಮಯ ಸಿಗದು. ದಿನದ ಆರಂಭವು ಬಹಳ ಉತ್ಸಾಹದಿಂದ ಇರಲಿದ್ದು ಎಲ್ಲ ಜೊತೆ ಸೌಹಾರ್ದವಾಗಿ ಇರುವಿರಿ. ನಿಮಗೆ ಸಿಕ್ಕ ಜವಾಬ್ದಾರಿಯಲ್ಲಿ ಪೂರ್ಣ ತೃಪ್ತಿ ಇರದು.

ಕನ್ಯಾ ರಾಶಿ: ಇಂದು ಅಚಾತುರ್ಯದಿಂದ ವ್ಯಾಪಾರದಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಅವಮಾನದವನ್ನು ನೀವು ಅನುಭವಿಸುವ ಪ್ರಸಂಗವೂ ಬರಬಹುದು. ಸಂಗಾತಿಯ ಮುನಿಸಿಗೆ ನೀವು ಸೊಪ್ಪು ಹಾಕುವುದು ಬೇಡ. ಅಲ್ಲಿಯೇ ಶಾಂತವಾಗಲಿ. ವಾಹನವನ್ನು ಖರೀದಿಸಿ ಹೊಸ ಉದ್ಯೋಗವನ್ನು ಆರಂಭಿಸಬಹುದು. ಪತ್ನಿಯು ನಿಮ್ಮ ಉದ್ಯೋಗಕ್ಕೆ ಸಹಕಾರ ಕೊಡುವಳು. ಆಲಂಕಾರಿಕ ವಸ್ತುವಿನ‌ಮೇಲೆ ಹೆಚ್ಚು ಆಸಕ್ತಿ ಇರುವುದು. ಬೆಂಕಿಯಿಂದ ಸ್ವಲ್ಪ ದೂರವಿರಿ ಅಥವಾ ಜಾಗರೂಕರಾಗಿರಿ. ವಿದ್ಯುದುಪಕರಣದಿಂದ ಹಣವು ವ್ಯಯವಾಗಲಿದೆ. ದುಃಸ್ವಪ್ನವು ನಿಮಗೆ ಚಿಂತನೆಯನ್ನು ಕೊಡುವುದು‌ ಸಂಬಂಧಗಳ ಬೆಲೆಯನ್ನು ಅರಿಯಲಿದ್ದೀರಿ. ಕುತೂಹಲಕ್ಕೆ ಏನನ್ನಾದರೂ ಮಾಡಲು ಹೋಗಿ ತೊಂದರೆಗೆ ಸಿಕ್ಕಿಕೊಳ್ಳುವಿರಿ. ನಷ್ಟವಾದುದರ ಅನುಭವವು ನಿಮಗಾಗುವುದು. ಈ ಕಾರಣಕ್ಕೆ ನಿಮಗೆ ಕೆಲಸದ ಪ್ರದೇಶದಲ್ಲಿ ಅಸ್ಥಿರತೆ ಇರುತ್ತದೆ. ಸಮಯದೊಂದಿಗೆ ಚಲಿಸುವ ಮೂಲಕ ನೀವು ಪ್ರಗತಿ ಹೊಂದುತ್ತೀರಿ. ಮಿತ್ರರ ಜೊತೆ ಪ್ರವಾಸ ಹೋಗಬಹುದು.

ತುಲಾ ರಾಶಿ: ನಿಮ್ಮ ಸೌಂದರ್ಯದ ಬಗ್ಗೆ ಠೀಕೆಗಳು ಬರಬಹುದು. ಯಾರ ಭಾವನೆಗಳನ್ನು ಕ್ಷುಲ್ಲಕವಾಗಿ ಕಾಣುವುದು ಬೇಡ. ಸಂಪಾದನೆಗೆ ಉತ್ತಮಮಾರ್ಗವು ನಿಮಗೆ ಗೊತ್ತಾಗಲಿದೆ. ನಿಮ್ಮವರು ನಿಮಗೆ ಅಪಮಾನವನ್ನು ಮಾಡಬಹುದು. ಅದರಿಂದ ಬೇಸರವೂ ಆಗಬಹುದು. ಏಕಾಗ್ರತೆಯ ಕೊರತೆ ಕಾಣಬಹುದು. ಮನೆಯಲ್ಲಿ ಜಗಳವಾಡಿ ದೂರ ಹೋಗುವಿರಿ. ನಿಮ್ಮವರೇ ನಿಮಗೆ ಶತ್ರುಗಳಂತೆ ಕಾಣುವರು. ಭೂಮಿಯ ಖರೀದಿಗೆ ಕುಟುಂಬದವರ ಸಲಹೆಯನ್ನು ಪಡೆಯುವಿರಿ. ಸಮಾಜಕ್ಕೆ ಏನನ್ನಾದರೂ ಮಾಡಬೇಕು ಎಂಬ ಹಂಬಲವಿರಲಿದೆ. ನಿಮ್ಮ ಪ್ರಾಮಾಣಿಕತೆಯು ನಿಮಗೆ ಯಶಸ್ಸನ್ನು ತರುವುದು. ಏಕಾಂತವು ನಿಮಗಿಂದು ಇಷ್ಟವಾಗುವುದು. ಅಪ್ತರ ಮೇಲೆ ನಿಮ್ಮ ಸ್ವಭಾವವನ್ನು ಹೇರುವುದು ಬೇಡ. ಉದ್ಯೋಗದಲ್ಲಿ ಅಕಸ್ಮಾತ್ ಬದಲಾವಣೆಗಳು ಆಗಬಹುದು. ನಿಮ್ಮ ವಾಹನದಿಂದ ನಿಮಗೆ ಅಲ್ಪ ಲಾಭವಾಗುವುದು. ಅನುಮಾನದ ಬುದ್ಧಿಯಿಂದಲೇ ಅವಕಾಶಗಳನ್ನು ಕಳೆದುಕೊಳ್ಳುವಿರಿ.

ವೃಶ್ಚಿಕ ರಾಶಿ: ಯಾವುದಾದರೂ ಹೊಸ ಮಾರ್ಗಗಳು ನಿಮ್ಮ ಗಮನ ಸೆಳೆಯಬಹುದು. ಅನಾರೋಗ್ಯದಿಂದ ವ್ಯತ್ಯಾಸವಾದ ನಿಮ್ಮ ದೇಹ, ಮನಸ್ಸುಗಳು ಸ್ವಸ್ಥವಾಗುವ ಕಡೆಗೆ ಹೋಗುತ್ತಿವೆ. ಆಲಸ್ಯದ ಕಾರಣ ನೀವು ಎಲ್ಲಿಗೂ ಹೋಗಲು ಇಷ್ಟಪಡುವುದಿಲ್ಲ. ಇಂದು ಪ್ರಯಾಣ ಮಾಡದ ಲೆಕ್ಕಕ್ಕೆ ಒಳ್ಳೆಯದೇ ಆಗಿದೆ. ನೀವು ಅದನ್ನು ಬದಲಾಯಿಸಲು ಹೋಗಿ ಇನ್ನೊಂದು ಸಂಕಷ್ಟವನ್ನು ತಂದುಕೊಳ್ಳುವಿರಿ. ಹೊಸ ಆವಿಷ್ಕಾರಗಳ ಕಡೆ ಗಮನವು ಅಧಿಕವಾಗಿರುವುದು. ಅನಾರೋಗ್ಯದಿಂದ ನೀವು ವಿಶ್ರಾಂತಿ ಪಡೆಯುವಿರಿ. ನಿಮ್ಮ ಒರಟುತನವು ನಿಮ್ಮವರಿಗೆ ಹಿಂಸೆಯನ್ನು ಕೊಡಬಹುದು. ಮಕ್ಕಳು ನಿಮ್ಮನ್ನು ಪ್ರಶ್ನಿಸುವರು. ನಿಮಗೆ ಸಂತೋಷವೂ ಬೇಸರೂ ಆಗಬಹುದು. ನಿಮ್ಮ ಕಾರ್ಯವನ್ನು ಕೆಲವರು ಆಡಿಕೊಳ್ಳಬಹುದು. ಸಂಗಾತಿಯ ಮಾತುಗಳಿಂದ ಸಿಟ್ಟಾಗುವ ಸಾಧ್ಯತೆ ಇದೆ. ಇನ್ನೊಬ್ಬರ ವ್ಯಕ್ತಿತ್ವವನ್ನು ಅನುಕರಣೆ ಮಾಡುವಿರಿ. ನೌಕರರ ವಿಚಾರಕ್ಕೆ ನೀವು ಸಿಟ್ಟುಗೊಳ್ಳುವಿರಿ. ನಿಜ ಸಂಗತಿಗಳನ್ನು ಯಾರಿಗೂ ಹೇಳದೇ ಮುಚ್ಚಿಡುವಿರಿ.