ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಸೋಮವಾರ (ಜೂನ್. 17) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ವೃಷಭ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠಾ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ದಶಮೀ, ನಿತ್ಯನಕ್ಷತ್ರ: ಚಿತ್ರಾ, ಯೋಗ: ವರಿಯಾನ್, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:42 ರಿಂದ 09:20ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:57 ರಿಂದ ಮಧ್ಯಾಹ್ನ 12:34ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:11 ರಿಂದ 03:48ರ ವರೆಗೆ.
ಧನು ರಾಶಿ: ಉಡುಗೊರೆಯಾಗಿ ಸಿಕ್ಕಿದ ಹೊಸ ವಸ್ತುಗಳ ಮೇಲೆ ಪ್ರೀತಿ ಹೆಚ್ಚು. ಬಹಳ ಜತನದಿಂದ ನೋಡಿಕೊಳ್ಳುವಿರಿ. ವಿವಾಹವು ವಿಳಂಬವೆಂದು ಅನ್ನಿಸಬಹುದು. ಚಿಂತೆಗೆ ಅವಕಾಶ ಕೊಡದೇ ಗುರಿಯ ಕಡೆ ಗಮನವಿರಲಿ. ಪೂರ್ವಾಗ್ರಹದಿಂದ ತಂದೆಯ ಜೊತೆ ಜಗಳವನ್ನು ಮಾಡುವಿರಿ. ಮನಸ್ಸು ಬಿಚ್ಚಿ ಮಾತನಾಡಿ ನಿಮ್ಮ ಇಂಗಿತವನ್ನು ಪ್ರಕಾಶಪಡಿಸುವಿರಿ. ಉದ್ಯಮಿಗಳು ಹಳೆಯ ವಸ್ತುವಿಗೆ ಹೊಸ ರೂಪಕೊಟ್ಟು ಮಾರಾಟವನ್ನು ಮಾಡುವರು. ಕೆಲಸಗಾರರ ಜೊತೆ ಅತಿ ಕೋಪ ಬೇಡ. ಹುಸಿ ಮುನಿಸಲ್ಲೇ ಕಾರ್ಯವನ್ನು ಮಾಡಿಸಿ. ಹಿತವಚನದಿಂದ ಕೆಲಸವನ್ನು ಮಾಡಿಕೊಳ್ಳಿ. ಇಂದಿನ ಆರ್ಥಿಕಲಾಭವು ನಿಮ್ಮ ನಿರೀಕ್ಷೆಯ ಮಟ್ಟವನ್ನು ತಲುಪಬಹುದು. ವಸ್ತ್ರಾಭರಣಗಳನ್ನು ಮಿತವಾಗಿ ಖರೀದಿಸಿ. ವಯಸ್ಕರಿಗೆ ವಿವಾಹ ಸಂಬಂಧವು ಒದಗಿ ಬರಬಹುದು. ಆಸ್ತಿಯನ್ನು ಸ್ವಂತಕ್ಕೆ ಮಾಡಿಕೊಳ್ಳುವ ಉಪಾಯವು ಹೊಳೆಯಬಹುದು. ಪ್ರೇಮ ವಿವಾಹವು ನಿಮಗೆ ಖುಷಿಕೊಡದು.
ಮಕರ ರಾಶಿ: ಇಂದು ಕಾನೂನಾತ್ಮಕ ವಿಚಾರದಲ್ಲಿ ಹೆಚ್ಚು ಆಸಕ್ತಿ ತೋರುವಿರಿ. ನಿಮ್ಮ ಸಕಾರಾತ್ಮಕತೆಯು ಹೆಚ್ಚು ಬಲವುಳ್ಳದ್ದಾಗಿದೆ. ಆಗಾಗ ಕಾಣಿಸಿಕೊಳ್ಳುವ ನೋವುಗಳು ನಿಮ್ಮನ್ನು ಪೀಡಿಸಿ ಮಾನಸಿಕವಾಗಿ ಕುಗ್ಗುಸುವುದು. ಆಪ್ತರ ಜೊತೆ ಒಂದಿಷ್ಟು ಹರಟೆ ಹೊಡೆಯಿರಿ. ಅಪರಿಚಿತ ವ್ಯಕ್ತಿಯಿಂದ ನಿಮಗೆ ಸಹಾಯ ದೊರೆಯಲಿದೆ. ವ್ಯಾಪಾರಿಗಳಿಗೆ ತೃಪ್ತಿಕರವಾದ ಆದಾಯ ಸಿಗುವ ಸಂದರ್ಭವಿದೆ. ತಾಯಿಯ ಆಶೀರ್ವಾದವನ್ನು ಪಡೆದು ಶುಭಕಾರ್ಯಕ್ಕೆ ಮನೆಯಿಂದ ಹೊರಡಿ. ರಾಜಕೀಯ ವ್ಯಕ್ತಿಗಳಿಗೆ ಅವರ ವಿರೋಧಿಗಳಿಂದಲೇ ತೊಂದರೆಯಾಗುವ ಸಾಧ್ಯತೆ ಇದೆ. ನಿಮ್ಮ ಅಧಿಕ ಕೋಪದಿಂದ ಸುಂದರ ಕ್ಷಣಗಳು ನಷ್ಟವಾಗಬಹುದು. ಮಕ್ಕಳ ಏಳಿಗೆಯು ಮಂದಗತಿಯಲ್ಲಿ ಇರಲಿದೆ. ನಿಮ್ಮ ಅಳತೆಯನ್ನು ಮೀರದೇ ಚೌಕಟ್ಟಿನಲ್ಲಿರಿ. ಪುಣ್ಯಕ್ಷೇತ್ರಗಳ ದರ್ಶನದ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿರುವಿರಿ. ಹಣಕಾಸಿನ ವಿಚಾರದಲ್ಲಿ ಇನ್ನೊಬ್ಬರನ್ನು ಅನುಸರಿಸುವ ಅವಶ್ಯಕತೆ ಇಲ್ಲ.
ಕುಂಭ ರಾಶಿ: ನಿಮ್ಮ ಪಾಲುದಾರಿಕೆಯಲ್ಲಿ ಹೊಂದಾಣಿಕೆ ಕಷ್ಟವಾದೀತು. ಹೇಗಾದರೂ ಮಾಡಿ ಸರಿಮಾಡಿಕೊಳ್ಳಿ. ಮನೆಯಿಂದ ದೂರದಲ್ಲಿ ವಾಸಿಸುವ ನೀವು ಇಂದು ಪೋಷಕರಿಗೆ ಖುಷಿಯಾಗುವುದು. ಆಸ್ತಿಗೆ ಸಂಬಂಧಿಸಿದಂತೆ ದಾಯಾದಿಗಳ ಕಲಹವು ಅನೂಹ್ಯಸ್ಥಿತಿಗೆ ಹೋಗಬಹುದು. ನಿಮಗಾಗದವರನ್ನು ನಿಂದಿಸಿ ಅವರಿಂದ ಅಪಮಾನಕ್ಕೆ ಒಳಗಾಗುವಿರಿ. ಆರ್ಥಿಕವಾಗಿ ಸ್ಥಿರತೆ ಇದ್ಷರೂ ಚರ್ಚನ್ನು ನಿಭಾಯಿಸುವ ಚಾಣಾಕ್ಷತನ ಬೇಕಿದೆ. ನಿಮ್ಮ ವ್ಯಕ್ತಿತ್ವಕ್ಕೆ ಸರಿಸಾಟಿಯಾದ ವ್ಯಕ್ತಿಯ ಗೆಳೆತನವಾಗಲಿದೆ. ಅಹಂಕಾರ ಪಡದೇ ಅವಶ್ಯಕತೆ ಇರುವಲ್ಲಿ ವಿನೀತತೆ ಇರಲಿ. ಅನ್ಯರ ತಪ್ಪಿನಿಂದ ಅಪಘಾತವು ಸಂಭವಿಸಬಹುದು. ನಿಮ್ಮ ಮನಸ್ಸಿಗೆ ಇಷ್ಟವಾಗದ ಘಟನೆಯು ದಿನವಿಡೀ ನಿಮ್ಮನ್ನು ಕಾಡುವುದು. ಏನನ್ನಾದರೂ ಮಾಡಬೇಕು ಎಂಬ ಮಹತ್ತರವಾದ ಯೋಜನೆಯನ್ನು ಮುಂದೂಡುವಿರಿ.
ಮೀನ ರಾಶಿ: ಇಂದು ಒತ್ತಡದ ನಡುವೆಯೂ ನಿಮ್ಮ ಕಾರ್ಯಗಳನ್ನು ಸರಳೀಕರಿಸಿಕೊಂಡು ಮಾಡುವ ವಿಧಾನವನ್ನು ಮೆಚ್ಚುವರು. ಹಣವನ್ನು ಉಳಿಸಲು ಯತ್ನದಲ್ಲಿ ಸೋಲಾಗುವುದು. ಮಹಿಳೆಯರಿಂದ ತೊಂದರೆ ಎನಿಸಬಹುದು. ಅವರ ಜೊತೆ ಮಾತನಾಡುವಾಗ ಎಚ್ಚರ. ಅನಂತರ ದುಃಖಗೊಂಡರೆ ಪ್ರಯೋಜನ ಇಲ್ಲ. ಇಂದು ಅಂದುಕೊಂಡ ಕಾರ್ಯಗಳು ಮುಗಿಯುವ ಹಂತವನ್ನು ತಲುಪಿದ್ದು ಪೂರ್ಣತೃಪ್ತಿ ಇರಲಾರದು. ನೀವೇ ವಿವಿಧ ಮೂಲಗಲಕಿಂದ ಮಾಹಿತಿಯನ್ನು ಒಡೆದು ಸರಿಮಾಡಿಕೊಳ್ಳಿ. ಪತಿ, ಪತ್ನಿಯರು ಅನ್ಯೋನ್ಯತೆಗೆ ದೃಷ್ಟಿ ಬೀಳಬಹುದು. ಮುಖದಲ್ಲಿ ಮಂದಹಾಸವಿರಲಿ. ಬಂಧುಗಳಿಂದ ನಿರ್ಲಕ್ಷ್ಯಕ್ಕೆ ಒಳಗಾದಂತೆ ಅನ್ನಿಸಬಹುದು. ದುರಭ್ಯಾಸದಿಂದ ದೂರವಿರಬೇಕು ಎನ್ನಿಸಬಹುದು. ಮನಸ್ಸು ಅಮೂರ್ತವಾದ ಅನಂದದಲ್ಲಿ ಇರಲಿದೆ. ಉನ್ನತವಾದ ಸ್ಥಾನಕ್ಕೆ ಏರಲು ನಿಮ್ಮೆದುರು ಅವಕಾಶವು ತೆರೆದುಕೊಳ್ಳುವುದು.
ಲೋಹಿತ ಹೆಬ್ಬಾರ್ – 8762924271 (what’s app only)