Horoscope 18 Nov: ದಿನಭವಿಷ್ಯ, ಈ ರಾಶಿಯವರಿಗೆ ಅಪರೂಪದ ವ್ಯಕ್ತಿಗಳ ಭೇಟಿ, ಅನಿರೀಕ್ಷಿತ ಲಾಭ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 18, 2023 | 12:02 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ನವೆಂಬರ್​ 18) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 18 Nov: ದಿನಭವಿಷ್ಯ, ಈ ರಾಶಿಯವರಿಗೆ ಅಪರೂಪದ ವ್ಯಕ್ತಿಗಳ ಭೇಟಿ, ಅನಿರೀಕ್ಷಿತ ಲಾಭ
ಇಂದಿನ ದಿನಭವಿಷ್ಯ
Image Credit source: iStock Photo
Follow us on

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್​ 18) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ತುಲಾ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಪಂಚಮೀ, ನಿತ್ಯನಕ್ಷತ್ರ: ಉತ್ತರಾಷಾಢಾ, ಯೋಗ: ಗಂಡ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 35 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05-59 ಗಂಟೆ, ರಾಹು ಕಾಲ ಬೆಳಗ್ಗೆ 09:27 ರಿಂದ 10:52ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:43 ರಿಂದ 03:09ರ ವರೆಗೆ, ಗುಳಿಕ ಕಾಲ ಬೆಳಗ್ಗೆ 06:36 ರಿಂದ 08:01ರ ವರೆಗೆ.

ಮೇಷ ರಾಶಿ: ವೃತ್ತಿಯ ಜೀವನನ್ನು ಆನಂದದಿಂದ ಕಳೆಯುವಿರಿ. ಸಂಗಾತಿಯ ಭಾವನೆಗೆ ಸ್ಪಂದಿಸುವಿರಿ. ಬಂಗಾರದ ಸೂಚಿಯಾದರೂ ಕಣ್ಣನ್ನು ಚುಚ್ಚಿಕೊಳ್ಳಬಾರದು. ಸಿಟ್ಟಿನಿಂದ ಕೆಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಿರಿ. ನೋವನ್ನು ಮನಸ್ಸನಲ್ಲಿ ಇಟ್ಟುಕೊಂಡು ಸಂಕಟಪಡುವಿರಿ. ಹೊಸ ವಸ್ತ್ರಗಳನ್ನು ಧರಿಸುವಿರಿ. ಉಡುಗೊರೆಯನ್ನು ಸ್ನೇಹಿತರಿಂದ ಸ್ವೀಕರಿಸುವಿರಿ. ಭೂಮಿಯ ವ್ಯವಹಾರದಲ್ಲಿ ಹಿನ್ನಡೆಯಾಗಲಿದೆ. ಇಂದಿನ ಸಮಯವು ವ್ಯರ್ಥವಾಗುವುದು. ಇಂದು ನಿಮ್ಮ ಜವಾಬ್ದಾರಿಯ ಕಾರ್ಯದಲ್ಲಿ ಮಗ್ನರಾಗುವಿರಿ. ರಹಸ್ಯದಿಂದ ಇಂದಿನ‌ ಕೆಲಸವನ್ನು ಮಾಡುವಿರಿ. ನಿಮ್ಮ ಪ್ರಾಮಾಣಿಕತೆಯ ಪರೀಕ್ಷೆ ಆಗಬಹುದು. ಬದಲಾಣೆಗೆ ನೀವು ತೆರೆದುಕೊಳ್ಳಬೇಕಾದೀತು. ಸಂಗಾತಿಯನ್ನು ಭೇಟಿಯಾಗಲು ನಾನಾ ಕಾರಣವನ್ನು ಹುಡುಕುವಿರಿ. ನಿಮ್ಮ ಮಾತಿನಿಂದ ತಾಯಿಗೆ ನೋವಾಗಬಹುದು.

ವೃಷಭ ರಾಶಿ: ಉನ್ನತ ವ್ಯಾಸಂಗಕ್ಕೆ ಅವಕಾಶವು ಸಿಗುವುದು. ಕಲಾವಿದರಿಗೆ ಅಪ್ರಶಂಸೆಯು ಬರಬಹುದು. ನಿಮ್ಮ ಇಂದಿನ ಉತ್ಸಾಹವು ಯಾರಿಗೂ ಪ್ರೇರಣೆ ನೀಡುವುದು. ದಾಯಾದಿಗಳು ನಿಮ್ಮ ಸಂಕಷ್ಟವನ್ನು ಎದುರು ನೋಡುತ್ತ ಇರಬಹುದು. ಎಲ್ಲ ವಿಚಾರಗಳನ್ನೂ ನೀವು ನಿರಾಧಾರವಾಗಿ ತಳ್ಳಿಹಾಕುವಿರಿ. ಅಸತ್ಯವನ್ನು ಹೇಳುವುದು ಗೊತ್ತಾದೀತು. ಹಿತವಚನದಿಂದ ಯಾವ ಪರಿವರ್ತನೆಯೂ ಆಗದು. ಒಗ್ಗಟ್ಟಿನ ಕೆಲಸದಲ್ಲಿ ಜಯವಿರಲಿದೆ. ನಿಮ್ಮ ನಡೆವಳಿಕೆಯು ಅಸಹಜತೆ ಎಂದು ಕೆಲವರಿಗೆ ಅನ್ನಿಸಬಹುದು. ಅನಿರೀಕ್ಷಿತ ಬದಲಾವಣೆಯನ್ನು ನೀವು ಸ್ವೀಕರಿಸಲಾರಿರಿ. ಎಂದೋ ಕಳೆದುಕೊಂಡ ವಸ್ತುವು ಇಂದು ಪ್ರಾಪ್ತವಾಗುವುದು. ಹಣದ ಅಭಾವವಿದ್ದರೂ ಖರ್ಚನ್ನು‌ ಮಾಡಬೇಕಾದ ಸ್ಥಿತಿಯು ಬರಬಹುದು. ಮನೆಯಿಂದ ದೂರವಿದ್ದು ಬೇಸರವಾಗಲಿದೆ. ಭವಿಷ್ಯದ ಬಗ್ಗೆ ಗಂಭೀರವಾದ ಚಿಂತನೆ ಮಾಡುವಿರಿ.

ಮಿಥುನ ರಾಶಿ: ನಿಮ್ಮ ವರ್ತನೆಯು ಭಿನ್ನವಾಗಿ ಕಾಣಿಸುವುದು. ಯಾರ ಮೇಲೋ ಸಂದೇಹಪಡುವಿರಿ. ಹಣಕಾಸಿನ ವಿಚಾರದಲ್ಲಿ ಜೋಪನ. ಆಭರಣದ ಬಗ್ಗೆ ಮೋಹ ಉಂಟಾಗುವುದು. ಹಿರಿಯರಿಗೆ ಅಗೌರವದ ಮಾತುಗಳನ್ನು ಆಡಬೇಕಾದೀತು. ನಿಮ್ಮ‌ ಮೇಲೆ ಸಂದೇಹವು ಬರಬಹುದು. ಭವಿಷ್ಯದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳುವಿರಿ. ನಿಮ್ಮ ಮನೆಯ ಸಮಸ್ಯೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದು ಬೇಡ. ಬೇಕಾದಷ್ಟು ಹಣವಿದ್ದರೂ ತುರ್ತಿಗೆ ಪ್ರಯೋಜನಕ್ಕೆ ಬಾರದು. ನಿಮ್ಮ ನಿರ್ಧಾರಕ್ಕೆ ಮನೆಯಿಂದ ನಿಮಗೆ ಬೆಂಬಲವಿರುವುದು. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸಬೇಕಾಗುವುದು. ವಾತಕ್ಕೆ ಸಂಬಂಧಿಸಿದ ಖಾಯಿಲೆ ಕಾಣಿಸಿಕೊಳ್ಳುವುದು.

ಕಟಕ ರಾಶಿ: ಅನಿರೀಕ್ಷಿತ ಲಾಭವನ್ನು ನೀವು ಅಪೇಕ್ಷಿಸುವಿರಿ. ಅಪರೂಪದ ವ್ಯಕ್ತಿಗಳ ಭೇಟಿಯಾಗಲಿದೆ. ಗೌಪ್ಯತೆಯನ್ನು ಹೊರ ಹಾಕುವಿರಿ. ತಂದೆಯ ಕಾರ್ಯಕ್ಕೆ ನಿಮ್ಮ ಸಹಕಾರವು ಇರಲಿದೆ. ನಿಮ್ಮವರ ಪ್ರೀತಿಯನ್ನು ಕಳೆದುಕೊಳ್ಳುವ ಭಯವು ಇರಲಿದೆ. ಹೇಳಬೇಕಾದ ವಿಚಾರವನ್ನು ನೇರವಾಗಿ ಹೇಳಿ. ನಿಮ್ಮ ಮಾತು ಚೌಕಟ್ಟನ್ನು ಮೀರಬಹುದು. ಎಲ್ಲರ ದೃಷ್ಟಿಯಲ್ಲಿ ಸ್ವಾರ್ಥಿಯಂತೆ ಕಾಣಿಸುವಿರಿ. ಸರ್ಕಾರದ ಸೌಲಭ್ಯವನ್ನು ಪಡೆಯಲು ನೀವು ಓಡಾಟ ಮಾಡುವಿರಿ. ಮಾತಿನಿಂದ ನೀವು ಗೆಲ್ಲವುದು ಸುಲಭವಲ್ಲ. ಚಿತ್ತವನ್ನು ಸಮಾಧಾನವಾಗಿ ಇಟ್ಟಕೊಳ್ಳಲು ವಿಫಲರಾಗುವಿರಿ. ಇಂದು ಮನೋರಂಜನೆಗೆ ಹೆಚ್ಚಿನ ಒತ್ತು ಕೊಡುವಿರಿ. ಸಿಗದ ವಸ್ತುಗಳನ್ನು ಬಲಾತ್ಕಾರವಾಗಿ ಪಡೆಯುವ ಪ್ರಯತ್ನ ಮಾಡುವಿರಿ.

ಸಿಂಹ ರಾಶಿ: ಸಣ್ಣ ಸಂಸ್ಥೆಯೊಂದನ್ನು ಹುಟ್ಟುಹಾಕುವ ಯೋಚನೆ ಬರುವುದು. ಆಹಾರದ ಉದ್ಯಮದಲ್ಲಿ ಅಧಿಕ ಲಾಭವೂ ಕೆಲವು ಅನಿರೀಕ್ಷಿತ ತೊಂದರೆಯೂ ಬರಬಹುದು. ಉದ್ಯೋಗದ ಅವಕಾಶಗಳ ನಿರೀಕ್ಷೆಯಲ್ಲಿ ಇರುವಿರಿ. ಅಧಿಕಾರಿವರ್ಗದಿಂದ ನಿಮ್ಮ ಗೌರವಕ್ಕೆ ದಕ್ಕೆ ಆಗಬಹುದು. ಸಂಗಾತಿಯ ಇಂಗಿತವನ್ನೇ ಅರಿತು ಕಾರ್ಯವನ್ನು ಮಾಡುವಿರಿ. ಮನೋಭಿಲಾಶೆಯನ್ನು ಪೂರ್ಣಗೊಳಿಸಿಕೊಳ್ಳುವಿರಿ. ಒಂಟಿಯಾಗಿ ಸುತ್ತಾಡಬೇಕೆನಿಸುವುದು. ಕೆಲವರ ಮಾತಿಗೆ ಉತ್ತರವನ್ನು ಕೊಡುವುದು ಇಷ್ಟವಾಗದು. ಇಂದು ನಿಮ್ಮ‌ ಬಳಿ ಸಾಮಾಜಿಕ ಕಳಕಳಿಯಿರುವ ಜನರು ಬರುವರು. ಇನ್ನು ಬಾರದು ಎಂದುಕೊಂಡ ಹಣವು ಇಂದು ನಿಮ್ಮ ಕೈ ಸೇರುವುದು. ಕರ್ತವ್ಯದತ್ತ ನಿಮ್ಮ ಗಮನಹರಿಸುವಿರಿ. ನಿಮ್ಮ ಮೇಲೆ‌ ಬಂದ ಅಪವಾದವನ್ನು ನೀವು ಇನ್ನೊಬ್ಬರ ಮೇಲೆ‌ ಹಾಕಲು ಪ್ರಯತ್ನಿಸುವಿರಿ.

ಕನ್ಯಾ ರಾಶಿ: ಉದ್ಯಮಕ್ಕೆ ಆಪ್ತರ,‌ ಪರಿಚಿತರ ಪ್ರೋತ್ಸಾಹವು ಸಿಗಲಿದೆ. ಆಸ್ತಿಯ ವಿಚಾರದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದಕೊಳ್ಳಲಾಗದು. ಸಹೋದರನ ಮಾತು ನಿಮಗೆ ಜೀರ್ಣಮಾಡಿಕೊಳ್ಳುವುದು ಕಷ್ಟವಾಗಿ ಸಿಟ್ಟಾಗುವಿರಿ. ಹಳೆಯ ಅನುಭವದ ಆಧಾರದ ಮೇಲೆ ನೀವು ಕೆಲಸವನ್ನು ಮಾಡುವಿರಿ. ಹೂಡಿಕೆಯನ್ನು ಬೇರೆಯವರ ಹೆಸರಿನಲ್ಲಿ ಮಾಡುವಿರಿ. ನಿಮ್ಮ ಮಾತಿನ ಮೇಲೆ ವಿಶ್ವಾಸದ ಕೊರತೆ ಕಾಣಲಿದೆ. ವಾಹನವನ್ನು ಚಲಾಯಿಸುವಾಗ ಆತುರ ಬೇಡ. ದೂರ ಹೋಗುವವರಿದ್ದರೆ ಹಿರಿಯರ ಆಶೀರ್ವಾದವನ್ನು ಪಡೆದುಕೊಳ್ಳಿ. ಸಂಗಾತಿಯು ನಿಮ್ಮ ಜೊತೆ ಜಗಳವಾಡಿ ಹಳೆಯ ವಿಚಾರವನ್ನು ಪುನಃ ಪ್ರಸ್ತಾಪಿಸಬಹುದು. ಸ್ತ್ರೀಸಂಬಂಧವಾದ ಆರೋಪವು ಬರಲಿದ್ದು, ಆತಂಕವೂ ಆಗುವುದು.

ತುಲಾ ರಾಶಿ: ಹಣಕಾಸಿನ‌ ವಿಚಾರದಲ್ಲಿ ದುಡುಕುವುದು ಬೇಡ. ನಿಮ್ಮ ಯೋಜನೆಗಳು ಕ್ರಮವನ್ನು ಅನುಸರಿಸಿ ಇರಲಿ.‌ ವಿಶ್ವಸ್ಥರ ಸಲಹೆಯನ್ನು ಪಡೆದುಕೊಳ್ಳಿ. ಬಂಧುಗಳಿಗಾಗಿ ಇಂದಿನ ಸಮಯವನ್ನು ಕೊಡುವಿರಿ. ‌ಅಶುಭ ವಾರ್ತೆಯಿಂದ ಏನನ್ನು ಮಾಡಲೂ ದಿಕ್ಕು ತೋರದು. ಆಸ್ತಿಯ ವಿಚಾರವಾಗಿ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧರಾಗುವಿರಿ. ನಿಮ್ಮ ನಿರ್ಧಾರವನ್ನು ಯಾರು ಏನೇ ಹೇಳಿದರೂ ಬದಲಾಯಿಸುವುದಿಲ್ಲ.ಪರಸ್ಪರ ಸಾಮರಸ್ಯಕ್ಕಾಗಿ ದಂಪತಿಗಳು ದಾರಿಯನ್ನು ಹುಡುಕುವಿರು. ಕಳೆದು ಹೋದ ಪ್ರೇಮವನ್ನು ಮತ್ತೆ ಯಾರಾದರೂ ನೆನಪಿಸುವರು. ತಪ್ಪನ್ನು ಒಪ್ಪಿಕೊಳ್ಳದೇ ಅಹಂಕಾರವನ್ನು ತೋರಿಸುವಿರಿ. ನಿಮ್ಮ ಬಗ್ಗೆ ಬೇರೆಯವರಿಗೆ ಔದಾರ್ಯಭಾವವು ಇರಲಿದೆ. ನಿಮ್ಮ‌ ಅಸಾಮಾನ್ಯ ಚಿಂತನೆಯು ನಿಮ್ಮನ್ನು ದೊಡ್ಡವರನ್ನಾಗಿ ಮಾಡಿದ್ದು. ಅಪ್ರಾಪ್ತರ ಜೊತೆ ವಾಗ್ವಾದ ಬೇಡ.

ವೃಶ್ಚಿಕ ರಾಶಿ: ವ್ಯವಹಾರದಲ್ಲಿ ಕಾಳಜಿ ತಪ್ಪಿದ ಕಾರಣ ನಷ್ಟ ಮಾಡಿಕೊಳ್ಳುವಿರಿ. ಕಾರ್ಯಗಳು ನಿಧಾನವಾಗುತ್ತಿದೆ ಎಂಬ ಬೇಸರವು ಬೇಡ. ಇಂದಿನ ಸೋಲಿನಿಂದ ಪಾಠ ಕಲಿಯುವಿರಿ. ಅನಿರೀಕ್ಷಿತ ಪ್ರಯಾಣವು ಆಯಾಸವನ್ನು ಕೊಡಬಹುದು. ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪರಾಜಯ ಆಗಬಹುದು. ಭಾವನಾತ್ಮಕ ವಿಚಾರಗಳಿಗೆ ಸ್ಪಂದಿಸುವುದು ಕಷ್ಟವಾಗಲವಾಗಲಿದೆ. ನಿಮ್ಮವರ ಮಾತುಗಳಿಂದ ನೀವು ಬೇಸರಗೊಳ್ಳುವಿರಿ. ಸಾಲಗಾರರಿಗೆ ಅತಿಯಾದ ಕಿರಿಕಿರಿಯು ಮೇಲಿಂದ‌ ಮೇಲೆ ಬರಲಿದೆ. ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಿರಿ. ನಿಮ್ಮ‌ ಅಂತಸ್ಸಾಕ್ಷಿಗೆ ಸತ್ಯವನ್ನು ಹೇಳುವ ಧೈರ್ಯ ಬರುವುದು. ವಿದೇಶದಿಂದ ಆಹ್ವಾನವು ಬರಬಹುದು. ಆತುರದ ಪ್ರಯಾಣವನ್ನು ಇಂದು ಮಾಡಬೇಡಿ. ಒತ್ತಾಯದಿಂದ‌ ಸ್ನೇಹಿತರ ಮನೆಗೆ ಹೋಗುವಿರಿ. ಆದಾಯದ ಬಗ್ಗೆ ಗಮನಹರಿಸಿ ಆರೋಗ್ಯವನ್ನು ನಿರ್ಲಕ್ಷ್ಯದಿಂದ ನೋಡುವಿರಿ.

ಧನು ರಾಶಿ: ಲೋಹದ ವಸ್ತುಗಳಿಂದ ಘಾಸಿಯಾಗಬಹುದು. ಆದಷ್ಟು ಅಂತಹ ವಸ್ತುಗಳನ್ನು ದೂರವಿರಿಸಿ ಅಥವಾ ಬಹಳ ಜಾಗರೂಕತೆಯಿಂದ ಬಳಸಿ. ನೀವು ಮಾಡಿಕೊಂಡ ಎಡವಟ್ಟಿನಿಂದ ಅವಕಾಶದಿಂದ ವಂಚಿತರಾಗಬೇಕಾಗುವುದು. ಪರಾಧೀನ ಸ್ಥಿತಿಯಿಂದ ಮಾನಸಿಕ ಹಿಂಸೆಯಾದೀತು. ಅಧಿಕಾರದಿಂದ ಮಾತ್ರ ಎಲ್ಲವೂ ಸರಿಯಾಗುವುದು ಎಂಬ ಭ್ರಮೆ‌ ಬೇಡ. ಇಂದಿನ ಕಾರ್ಯವು ಯಾವುದೇ ತೊಂದರೆಗಳಿಲ್ಲದೇ ಮುಗಿಯುವುದು. ಸ್ತ್ರೀಯರು ಅನಾರೋಗ್ಯದಿಂದ ಪೀಡಿತರಾಗುವಿರಿ. ಮುಕ್ತ‌ ಮನಸ್ಸಿನಿಂದ ಮಾತನಾಡುವಿರಿ.‌ ದಾಂಪತ್ಯದಲ್ಲಿ ಹೊಂದಾಣಿಕೆ ಅವಶ್ಯಕತೆ ಅಧಿಕವಾಗಿ ಇರಲಿದೆ. ಅಪರಿಚಿತ ವ್ಯಕ್ತಿಯಿಂದ ಹೆದರಿ ಸಂಪತ್ತನ್ನು ಕಳೆದುಕೊಳ್ಳುವಿರಿ. ನಿಮಗೆ ಇಂದು ಪ್ರೀತಿ ಪಾತ್ರರಿಂದ ಉಡುಗೊರೆ ಬರಲಿದೆ. ವಿದ್ಯಾಭ್ಯಾಸವನ್ನು ಯೋಗ್ಯರೀತಿಯಲ್ಲಿ ನಡೆಸಲು ಕಷ್ಟವಾದೀತು.

ಮಕರ ರಾಶಿ: ಇಂದು ನೀವು ಅಂದುಕೊಂಡಷ್ಟು ಸರಳವಾಗಿ ಕಾರ್ಯಗಳನ್ನು ಮಾಡಲಾರಿರಿ. ಮಹಿಳೆಯರಿಂದ‌ ನಿಮಗೆ ಗೌರವವು ಸಿಗುವುದು. ಸ್ನೇಹಿತರಿಂದ ಆರ್ಥಿಕತೆಗೆ ಸಹಾಯವು ಸಿಗುವುದು. ಚಿಕಿತ್ಸೆಯಿಂದ ಆರೋಗ್ಯದಲ್ಲಿ ಸುಧಾರಣೆ ಇರಲಿದೆ. ಹಿತಶತ್ರುಗಳಿಂದ ತೊಂದರೆ ಎದುರಾದೀತು. ಹೊಸತರ ಕಲಿಕೆಯಲ್ಲಿ ಆಸಕ್ತಿಯು ಅಧಿಕವಾಗುವುದು. ಸಮಾರಂಭಗಳಿಗೆ ತೆರಳುವಿರಿ. ಕೃಷಿಕರಿಗೆ ಲಾಭದಲ್ಲಿ ಸ್ವಲ್ಪ ಇಳಿಮುಖ ಇರಲಿದೆ‌. ಸಾಮಾಜಿಕ ಕಾರ್ಯಗಳಿಂದ ಮೆಚ್ಚುಗೆ ಪಡೆಯುವಿರಿ. ಸಂಬಂಧದಲ್ಲಿ ಒಡಕು ಬರಬಹುದು.‌ ವ್ಯವಹಾರವು ಸರಿಯಾಗಿ ಇರಲಿ. ಅತಿಯಾದ ಕೋಪದಿಂದ ಎಲ್ಲ ಕೆಲಸವನ್ನು ವ್ಯತ್ಯಾಸ ಮಾಡಿಕೊಳ್ಳುವಿರಿ. ಆಲಂಕಾರಿಕ ವಸ್ತುಗಳನ್ನು ಖರೀದಿಸುವಿರಿ. ಅಧಿಕಾರಿಯ ವಿಶ್ವಾಸವನ್ನು ಪಡೆದು ಹೆಚ್ಚಿನ ಸ್ಥಾನ ಪಡೆಯುವಿರಿ. ಅನಿರೀಕ್ಷಿತ ರಾಜಕಾರಿಣಿಗಳ ಭೇಟಿಯಿಂದ ಕೆಲವು ಬದಲಾವಣೆಯನ್ನು ಕಾಣುವಿರಿ.

ಕುಂಭ ರಾಶಿ: ಮಾತನಾಡುವಾಗ ಎಚ್ಚರಿಕೆಯು ಅಗತ್ಯ. ಉದ್ಯಮದಲ್ಲಿ ಅಧಿಕ ಚಿಂತೆಯು ಇರಲಿದ್ದು ಪ್ರಯತ್ನವು ಅಧಿಕವಾಗಿ ಇರುವುದು. ಸಂಗಾತಿಯ ಮಾತನ್ನು ಇಂದು ಅನುಸರಿಸುವಿರಿ. ಮನೆಯಲ್ಲಿ ಹಿಂದಿನ ಘಟನೆಯೇ ಮರುಕಳಿಸಲಿದ್ದು ಸಣ್ಣ ವಾಗ್ವಾದವೂ ನಡೆಯಬಹುದು. ವ್ಯಾಪಾರವು ಸಾಧಾರಣವಾಗಿ ಇರಲಿದೆ. ಉದ್ಯೋಗವನ್ನು ಬದಲಿಸಲು ಮನಸ್ಸು ಇಲ್ಲದಿದ್ದರೂ ನಿಮಗೆ ಅನಿವಾರ್ಯ ಆಗಬಹುದು. ವಾಹನದಿಂದ ಬಿದ್ದು ಪೆಟ್ಟಾಗಬಹುದು. ದುರ್ಬಲರ‌ ಜೊತೆ ಸಂಘರ್ಷ ಬೇಡ. ಆತುರದಲ್ಲಿ ವಾಹನ ಚಾಲನೆಯಿಂದ ತೊಂದರೆಯಾದೀತು. ಇಂದು ಬಂಧುಗಳನ್ನು ಮನೆಗೆ ಆಹ್ವಾನಿಸುವಿರಿ. ಮನಸ್ಸಿನ ನೋವನ್ನು ಮರೆಯಲು ಒಂಟಿಯಾಗಿ ದೂರ ಹೋಗುವಿರಿ. ಪುಣ್ಯಕ್ಷೇತ್ರಗಳ ದರ್ಶನವನ್ನು ಮಾಡುವಿರಿ. ಅನಾರೋಗ್ಯದಿಂದ ಕೆಲಸಗಳಿಗೆ ವಿಘ್ನವು ಬರುವುದು.

ಮೀನ ರಾಶಿ: ಪ್ರೇಮಿಗಳು ಪರಸ್ಪರ ಮನಸ್ತಾಪದಿಂದ ಇರುವರು. ಸಾಲವನ್ನು ಪಡೆದುಕೊಳ್ಳಲು ಅವಕಾಶ ಲಭ್ಯವಾಗಬಹುದು. ಇಂದು ನಿಮಗೆ ದೇವರ ಕಾರ್ಯವನ್ನು ಮಾಡುವ ಉತ್ಸಾಹವಿರುವುದು. ಅದಕ್ಕಾಗಿ ಹೆಚ್ಚು ಸಮಯ ಕೊಡುವಿರಿ. ದೂರದಲ್ಲಿ ಇದ್ದ ಮಕ್ಕಳ ಆಗಮನದಿಂದ ಮನೆಯಲ್ಲಿ ಸಂತೋಷವು ಇರುವುದು. ಆಸ್ತಿಯನ್ನು ಖರೀದಿಸುವ ಕುರಿತು ಮನೆಯಲ್ಲಿ ಚರ್ಚೆಗಳು ನಡೆಯುವುದು. ಆರ್ಥಿಕ ಒತ್ತಡದಿಂದ ನೀವು ಹೊರಬರುವ ಮಾರ್ಗವನ್ನು ಹುಡುಕುವಿರಿ. ಇಂದಿನ ಉತ್ಸಾಹವು ಕೆಲಸಕ್ಕೆ ಪೂರಕವಾಗವುವುದು. ಹಣದ ಹರಿವು ಸಾಧಾರಣವಾಗಿ ಇರಲಿದೆ. ಪ್ರೀತಿಪಾತ್ರರ ವರ್ತನೆಯಿಂದ ಕಿರಿಕಿರಿ ಆಗಬಹುದು. ಹೇಳಲಾಗದ ಮರೆಯಲಾಗದ ಸ್ಥಿತಿ ಇರಲಿದೆ. ನೀವೇ ನಿಮ್ಮ ಬಗ್ಗೆ ಹೇಳಿಕೊಳ್ಳುವುದು ಉಚಿತವಲ್ಲ.‌

ಲೋಹಿತಶರ್ಮಾ – 8762924271 (what’s app only)