ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್ 09) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ರೇವತೀ, ಯೋಗ: ವೈಧೃತಿ, ಕರಣ: ನಾಗವಾನ್, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:39 ರಿಂದ 05:12ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:29 ರಿಂದ 11:02 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:34 ರಿಂದ ಮಧ್ಯಾಹ್ನ 02:07ರ ವರೆಗೆ.
ಧನು ರಾಶಿ: ನೀವು ವ್ಯಾಪಾರದ ಕಾರಣಕ್ಕೆ ಕೈಗೊಂಡ ಪ್ರಯಾಣವು ದೀರ್ಘಾವಧಿಯಲ್ಲಿ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ಅನಿರೀಕ್ಷಿತ ರೂಪದಲ್ಲಿ ವೈವಾಹಿಕ ಸಂಬಂಧಗಳು ಕೂಡಿ ಬರಲಿದೆ. ಹಣಕಾಸಿನ ವಿಚಾರದಲ್ಲಿ ಲೆಕ್ಕಾಚಾರದ ಗಟ್ಟಿತನ ಧೈರ್ಯ ಕೊಡಲಿದೆ. ಆರೋಗ್ಯ ಉತ್ತಮ. ನಿಮ್ಮ ಪೋಷಕರ ಜೊತೆ ನೀವು ಆಸ್ತಿಯ ವಿಚಾರವಾಗಿ ಚರ್ಚಿಸುವಿರಿ. ಎಲ್ಲರ ಜೊತೆ ಪ್ರೀತಿಯನ್ನು ಹಂಚಿಕೊಳ್ಳುವಿರಿ. ಇಂದು ನೀವು ಆಚರಣೆಗೆ ಹೆಚ್ಚು ಒತ್ತು ನೀಡುವಿರಿ. ರಾಜಕೀಯದಲ್ಲಿ ನಿಮಗೆ ಜನಬೆಂಬಲ ಹೆಚ್ಚಾಗಬಹುದು. ನೀವು ಧಾರ್ಮಿಕ ಚಟುವಟಿಕೆಗಳಲ್ಲಿ ಶ್ರದ್ಧೆ ಹೆಚ್ಚಿರುವುದು. ಇನ್ನೊಬ್ಬರನ್ನು ಹಿಂದಿಕ್ಕಲು ಪ್ರಯತ್ನ ಪೂರ್ವಕವಾಗಿ ಕಾರ್ಯ ಮಾಡುವಿರಿ. ಸ್ನೇಹಿತನ ಮನೆಯಲ್ಲಿ ಇಂದು ಹಬ್ಬದ ವಾತಾವರಣವು ಇರಲಿದೆ. ನಂಬಿಕೆಯಿಂದ ಕೆಲಸವನ್ನು ಮಾಡುವಿರಿ. ಪ್ರಯತ್ನಿಸಿದ ಕಾರ್ಯಗಳು ನಿಮಗೆ ಬಹುಪಾಲು ಉತ್ತಮ ಫಲಿತಾಂಶವು ಕೊಡುವುದು.
ಮಕರ ರಾಶಿ: ನೀವು ಈ ದಿನವನ್ನು ಜಾಗರೂಕತೆಯಿಂದ ಆಯೋಜಿಸಿ ಕಾರ್ಯವನ್ನು ಸಾಧಿಸಿಕೊಳ್ಳಿ. ಸುತ್ತಲೂ ನಿಮ್ಮ ಪ್ರಿಯತಮೆಯ ಪ್ರೀತಿಯನ್ನು ಅನುಭವಿಸುತ್ತೀರಿ. ಕುಟುಂಬದಲ್ಲಿ ಕೆಲವು ಸಮಸ್ಯೆಗಳಿರುತ್ತವೆ. ಸಹೋದ್ಯೋಗಿಗಳ ಬಗ್ಗೆ ಪೂರ್ವಾಗ್ರಹವಿರುವುದು. ನೀವು ಸಂಬಂಧಿಕರ ಜೊತೆ ಸ್ವಲ್ಪ ಸಮಯ ಒಟ್ಟಿಗೆ ಕುಳಿತು ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಿರಿ. ಯಾವ ಕಾರ್ಯವನ್ನಾದರೂ ಜಾಣ್ಮೆಯಿಂದ ಮಾಡುವಿರಿ. ನಿಮ್ಮ ಗೌರವಕ್ಕೆ ಧಕ್ಕೆ ಬರಬಹುದು. ನಾಯಕತ್ವಸ ಸಾಮರ್ಥ್ಯವು ಬಲವಾಗಬಹುದು. ಕ್ರಿಯಾಶೀಲತೆಯು ನಿಮ್ಮ ಅಧಿಕಾರಕ್ಕೆ ಪೂರಕವಾಗಿರುವುದು. ನಿಮ್ಮ ಸಹನೆಯನ್ನು ಪರೀಕ್ಷಿಸುವ ಸಂದರ್ಭಗಳು ಬರಬಹುದು. ಆಸ್ತಿಯ ಭಾಗವನ್ನು ಮಾರಾಟ ಮಾಡಬೇಕಾದೀತು. ಎಷ್ಟೋ ಕೆಲಸಗಳು ನಿಮ್ಮ ಬಳಿಯೇ ಬಾಕಿ ಇರುವುದು. ಆಲಸ್ಯದಿಂದ ಮುಖ್ಯ ಕೆಲಸವನ್ನೇ ಮರೆಯುವಿರಿ.
ಕುಂಭ ರಾಶಿ: ನೀವು ಸಂಗಾತಿಯ ಜೊತೆ ಸಂತೋಷವನ್ನು ಹಂಚಿಕೊಳ್ಳಲು ಬಯಸುವಿರಿ. ಆದರೆ ಅವರ ಸಮಸ್ಯೆಗಳ ಬಗ್ಗೆ ಮಾತನಾಡಿ ನಿಮ್ಮನ್ನು ಇನ್ನಷ್ಟು ತೊಂದರೆಗೊಳಿಸಬಹುದು. ಸಾಮಾಜಿಕ ಕಾರ್ಯಗಳಿಗೆ ಹಾಜರಾಗಲು ಅವಕಾಶಗಳಿರಬಹುದು ಹಾಗೂ ಇದು ನಿಮ್ಮನ್ನು ಪ್ರಭಾವಿ ವ್ಯಕ್ತಿಗಳ ಜೊತೆ ನಿಕಟ ಸಂಪರ್ಕ ಹೊಂದುವಂತೆ ಮಾಡಬಹುದು. ಇಂದು ನಿಮಗಾಗಿ ಯಾರಾದರೂ ಸಹಕಾರವನ್ನು ನೀಡಲು ಬರಬಹುದು. ಹೆಚ್ಚುತ್ತಿರುವ ವೆಚ್ಚಗಳನ್ನು ಕಡಿವಾಣ ಹಾಕಿಕೊಳ್ಳಿ. ನೀವು ಅಪೂರ್ಣವಾದ ಕಾರ್ಯಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವಿರಿ. ನಿಮ್ಮ ಕಾರ್ಯದ ಒಟ್ಟು ಅವಲೋಕನದ ಅವಶ್ಯಕತೆ ಇರಲಿದೆ. ನಿಮ್ಮ ಮಾತಿನಿಂದ ಸ್ಥಾನಮಾನ ಮತ್ತು ಪ್ರತಿಷ್ಠೆಗಳು ಹೆಚ್ಚಾಗಬಹುದು. ವಿಷಯದಲ್ಲಿ ನೀವು ಗೊಂದಲವಿರಬಹುದು. ನೀವು ಮಂಗಳಕರ ಕಾರ್ಯಕ್ರಮದಲ್ಲಿ ಭಾಗಿಯಾಗುವಿರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ವ್ಯವಸ್ಥೆಯನ್ನು ಮಾಡುವಿರಿ.
ಮೀನ ರಾಶಿ: ಇಂದು ನಿಮ್ಮ ಒರಟುತನದಿಂದ ದಾಂಪತ್ಯದಲ್ಲಿ ಕಲಹವಾಗುವ ಸಾಧ್ಯತೆ ಇದೆ. ನೀವು ನಿಮ್ಮ ಕೆಲಸದ ಮೇಲೆ ಮಾತ್ರ ಗಮನಹರಿಸಿದರೆ ಉತ್ತಮ. ಇತರರಿಗೆ ಒಳ್ಳೆಯದನ್ನು ಮಾಡುವ ಕಾರ್ಯಕ್ಕೆ ಪ್ರತಿಫಲವಿದೆ. ನೀವು ಒಳ್ಳೆಯ ಅಭಿವೃದ್ಧಿ ಸಾಧಿಸುತ್ತಿದ್ದ ಹಾಗೆ ಪ್ರೇಮ ಜೀವನ ಒಳ್ಳೆಯ ತಿರುವು ತೆಗೆದುಕೊಳ್ಳುತ್ತದೆ. ನೀವು ನಿರಾಸೆ ಅನುಭವಿಸುತ್ತೀರಿ. ಆರ್ಥಿಕ ವ್ಯವಹಾರಕ್ಕೆ ಇಂದು ಶುಭ ದಿನವಾಗಿದೆ. ನಿಮ್ಮ ಆದಾಯವನ್ನು ಹೆಚ್ಚಿಸಲು ನಿಮ್ಮ ಪ್ರಯತ್ನಗಳನ್ನು ಹೆಚ್ಚಿಸುವಿರಿ. ಪ್ರೀತಿಪಾತ್ರರ ಬೆಂಬಲ ನಿಮ್ಮೊಂದಿಗೆ ಇದ್ದರೂ ಮಾನಸಿಕವಾಗಿ ಒಪ್ಪಿಕೊಳ್ಳಲಾರಿರಿ. ನಿಮ್ಮ ಆರ್ಥಿಕ ಪರಿಸ್ಥಿತಿಯು ಮೊದಲಿಗಿಂತ ಉತ್ತಮವಾಗಿದ್ದು, ಹೂಡಿಕೆಯ ಕಡೆ ಗಮನವಿರುವುದು. ನಿಮ್ಮ ಪ್ರಮುಖ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ನಿಮ್ಮ ಕೈಲಾದಷ್ಟು ಪ್ರಯತ್ನಿಸಿ. ಸ್ಥಿರತೆಯು ನಿಮಗೆ ಬಲವನ್ನು ಕೊಡುವುದು. ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಮಾಡಿಕೊಳ್ಳುವಿರಿ.