AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ನಿತ್ಯ ಭವಿಷ್ಯ; ಹೂಡಿಕೆಯಿಂದ ಲಾಭ, ವ್ಯಸನಕ್ಕೆ ತುತ್ತಾಗಿ ಹಣ ಕಳೆದುಕೊಳ್ಳಬೇಕಾದೀತು ಎಚ್ಚರ!

ಒಂದಷ್ಟು ಮಂದಿ ಪ್ರತಿನಿತ್ಯ ತಮ್ಮ ಭವಿಷ್ಯ ನೋಡುತ್ತಾರೆ. ಹಾಗಿದ್ದರೆ, ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರಾಗಿದ್ದರೇ, 09 ಏಪ್ರಿಲ್​​ 2024ರ ನಿಮ್ಮ ರಾಶಿಭವಿಷ್ಯ ಹೇಗಿದೆ? ನಿಮಗೆ ಶುಭ ಅಥವಾ ಅಶುಭ ದಿನವಾ? ಇಂದಿನ ಭವಿಷ್ಯದಲ್ಲಿ ನಿವು ಲಾಭದ ನಿರೀಕ್ಷೆ ಮಾಡಬಹುದಾ? ಎಂಬಿತ್ಯಾದಿ ಮಾಹಿತಿಗಳನ್ನು ಇಂದಿನ ರಾಶಿಭವಿಷ್ಯದಿಂದ ತಿಳಿದುಕೊಳ್ಳಿ.

Horoscope: ನಿತ್ಯ ಭವಿಷ್ಯ; ಹೂಡಿಕೆಯಿಂದ ಲಾಭ, ವ್ಯಸನಕ್ಕೆ ತುತ್ತಾಗಿ ಹಣ ಕಳೆದುಕೊಳ್ಳಬೇಕಾದೀತು ಎಚ್ಚರ!
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: Apr 09, 2024 | 12:10 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್​​​​​ 09) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ರೇವತೀ, ಯೋಗ: ವೈಧೃತಿ, ಕರಣ: ನಾಗವಾನ್, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:39 ರಿಂದ 05:12ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 09:29 ರಿಂದ 11:02 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:34 ರಿಂದ ಮಧ್ಯಾಹ್ನ 02:07ರ ವರೆಗೆ.

ಮೇಷ ರಾಶಿ: ನೀವು ಮಾಡಿದ ಹೂಡಿಕೆಯಿಂದ ಲಾಭವಿದ್ದು, ಸಂತೋಷವಾಗುವುದು. ವ್ಯಸನಕ್ಕೆ ತುತ್ತಾಗಿ ಹಣವನ್ನೂ ಆರೋಗ್ಯವನ್ನೂ ಉಳಿಸಿಕೊಳ್ಳಬೇಕಾಗಬಹುದು. ವ್ಯಾಪರದಲ್ಲಿ ಲಾಭವಾಗಲಿದೆ. ವಿದ್ಯಾರ್ಥಿಗಳು ಪರಿಶ್ರಮದ ಓದಿಗೆ ಫಲಸಿಗಬಹುದು. ಕಾರ್ಯಸ್ಥಾನದಲ್ಲಿ ಗೊಂದಲದ, ಹತಾಶೆಯ ವಾತಾವರಣ ಇರಬಹುದು. ಇಂದು ನಿಮ್ಮ ಮಾತಿನಲ್ಲಿ ಕಠೋರತೆ ಇರಲಿದ್ದು, ಅದನ್ನು ಕಡಿಮೆ‌ ಮಾಡಿಕೊಳ್ಳಬೇಕು. ಕಾರ್ಯಕ್ಷೇತ್ರದಲ್ಲಿ ನಿಮ್ಮ ಯೋಗ್ಯತೆಗೆ ತಕ್ಕಂತೆ ಕೆಲಸ ಸಿಗುತ್ತದೆ. ನಿಮ್ಮ ಆದಾಯವೆಲ್ಲ ನೀರಿನಂತೆ ಖರ್ಚಾಗಬಹುದು. ಹೇಳಿದ ಸಮಯಕ್ಕೆ ಕೆಲಸವನ್ನು ಮಾಡಿಕೊಡಲಾಗುವುದು. ಹಿರಿಯರ ಸೇವೆಯಲ್ಲಿ ನೀವು ಇರುವಿರಿ. ನಕಾರಾತ್ಮಕ ಆಲೋಚನೆಗಳನ್ನು ತಲೆಯಿಂದ ತೆಗೆಯಿರಿ. ಕೋಪವನ್ನು ಯಾರೆದುರೂ ಪ್ರಕಟಿಸುವುದು ಬೇಡ. ಬೇಕಾದುದನ್ನು ಆಪ್ತರಿಂದ ಕೇಳಿಪಡೆಯುವಿರಿ.

ವೃಷಭ ರಾಶಿ: ನೀವು ಒತ್ತಡಗಳಿಗೆ ಸಿಲಿಕದೇ ಎಚ್ಚರಿಕೆಯಿಂದ ಕಾರ್ಯವನ್ನು ನಿಭಾಯಿಸಲು ಕಲಿಯುವಿರಿ. ಹಣಕಾಸಿನ ಹರಿವು ಹೆಚ್ಚಾಗಲಿದೆ. ಕೊಟ್ಟ ಸಾಲ ಮರಳಿಬರಹುದು. ನಿಮ್ಮ ಮೇಲೆ ಸಹಾನುಭೂತಿಯು ಉಂಟಾಗುವ ಸಾಧ್ಯತೆ ಇದೆ. ಜಾಗರೂಕರಾಗಿರಿ. ನಿಮ್ಮನ್ನು ನೀವೇ ಕಾಪಾಡಿಕೊಳ್ಳಿ. ನೀವು ಅಪರಿಚಿತರ ಸಂಪರ್ಕವನ್ನು ಹೆಚ್ಚು ಮಾಡುವಿರಿ. ಹೂಡಿಕೆಯಲ್ಲಿ ದೀರ್ಘಾವಧಿಯ ಯೋಜನೆಗಳು ಮಾಡಿಕೊಳ್ಳಿ. ನಿಮ್ಮ ಮೇಲಿನ ವಿಶ್ವಾಸವು ದೂರವಾಗಬಹುದು. ನೀವು ಹಿರಿಯರಿಂದ ಬೆಂಬಲವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ. ವಿನಾಕಾರಣ ಸುತ್ತಾಟದಿಂದ ಆಯಾಸವಾಗುವುದು. ಪ್ರಭಾವಿಗಳ ಭೇಟಿಯಿಂದ ಸಂತೋಷವಾಗಲಿದೆ. ಬೇರೆ ಸ್ಥಳದಲ್ಲಿ ನಿಮ್ಮ ವಾಸವು ಇರಬಹುದು. ಯಾರದೋ ಸಂತೋಷಕ್ಕಾಗಿ ನೀವು ದುಡಿಯಬೇಕಾಗಬಹುದು. ಭವಿಷ್ಯದ ಬಗ್ಗೆ ಅಸ್ಪಷ್ಟವಾದ ಚಿಂತೆಯು ಬೇಡ.

ಮಿಥುನ ರಾಶಿ: ನಿಮ್ಮ ವಾಹನದಲ್ಲಿ ದೀರ್ಘಪ್ರಯಾಣವು ಇಂದು ಮಾಡುವುದು ಬೇಡ. ಅನಿವಾರ್ಯ ಕಾರಣಗಳಿಂದ ಖರ್ಚಿಗೆ ನಾನಾ ಮಾರ್ಗಗಳು ತೆರದುಕೊಳ್ಳಬಹುದು. ಇಂದು ನಿಮ್ಮ ಸಾಮಾರ್ಥ್ಯವನ್ನು ವ್ಯಕ್ತಪಡಿಸಲು ಸಕಾಲ. ಸಹೋದರರಿಂದ ಸಲಹೆ ಪಡೆದು ಮುನ್ನಡೆಯಿರಿ. ಕಲಿಕೆಯ ಆಸಕ್ತಿಯು ಹೆಚ್ಚಾಗಬಹುದು. ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುವುದು ಬೇಡ. ಭೂಮಿಯ ವ್ಯವಹಾರದಲ್ಲಿ ನಿಮಗೆ ಅನುಕೂಲ ಕಡಿಮೆ ಇರುವುದು. ಮಾನಸಿಕವಾಗಿ ತಯಾರಿರಬೇಕಾಗಬಹುದು. ನಿಮ್ಮ ಜವಾಬ್ದಾರಿಯನ್ನು ಇತರರು ಮಾಡಬೇಕಾಗಬಹುದು. ಸಾಮೂಹಿಕ ಕಾರ್ಯದಲ್ಲಿ ನಿಮಗೆ ಯಶಸ್ಸು ಸಿಗಬಹುದು. ಮಹಿಳೆಯರು ಉನ್ನತ ಅಧಿಕಾರವನ್ನು ಪಡೆದು ಅಹಂಕಾರ ಮಡುವುದು ಬೇಡ. ಸ್ವಪ್ರತಿಷ್ಠೆನ್ನಿಬ ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ಹಿರಿಯರೆದುರು ವಿನಯವಿರಲಿ. ದೇವತಾಕಾರ್ಯಗಳಲ್ಲಿ ಆಸಕ್ತಿಯು ಶ್ರದ್ಧೆಯಿಂದ ಭಾಗವಹಿಸುವಿರಿ.

ಕರ್ಕಾಟಕ ರಾಶಿ: ಅಹಂಕಾರದಿಂದ ಕೆಲವರನ್ನು ಕಳೆದುಕೊಳ್ಳುವಿರಿ. ಬಾಕಿಯಿರುವ ಗೃಹಕೃತ್ಯಗಳನ್ನು ಪೂರೈಸಲು ಒಂದು ಅನುಕೂಲಕರ ದಿನ. ಎಲ್ಲ ಹತಾಶೆ, ನೋವು, ಸಂಕಟ, ತುಮುಲಗಳನ್ನು ನಿವಾರಿಸಿಕೊಳ್ಳಲು ಒಳ್ಳೆಯ ಸಮಯ ಮತ್ತಾವುದೂ ಇಲ್ಲ. ಆರೋಗ್ಯ ಭಾಗ್ಯಕ್ಕಾಗಿ ಹೆಚ್ಚಿನ ಕಾಳಜಿ ವಹಿಸಿದ್ದಲ್ಲಿ ಆಸ್ಪತ್ರೆಯ ಅಲೆದಾಟ ತಪ್ಪಬಹುದು. ಮಕ್ಕಳಿಗೆ ಯೋಗ್ಯವಾದ ಮಾರ್ಗದರ್ಶನವನ್ನು ಮಾಡಿ. ನಿಮ್ಮ ಇಷ್ಟದ ವಿಷಯಗಳಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತೀರಿ. ನಿಮ್ಮವರ ವಿಶ್ವಾಸವನ್ನು ನೀವು ಸುಲಭವಾಗಿ ಗೆಲ್ಲಲು ಸಾಧ್ಯವಾಗುತ್ತದೆ. ನೀವು ಅನೇಕ ವ್ಯವಹಾರಗಳನ್ನು ನಿಭಾಯಿಸಲು ಕಷ್ಟಪಡುವರು. ಮನೆಯ ಸ್ಥಳವನ್ನು ಬದಲಾಯಿಸುವ ಅನಿವಾರ್ಯತೆ ಬಂದೀತು. ಅನ್ಯಾನ್ಯ ಮಾರ್ಗಗಳಿಂದ ಹಣವು ಬರಬಹುದು. ‌ಕಳೆದಕೊಂಡ ವಸ್ತುವಿಗೆ ತೀವ್ರ ಹುಡುಕಾಟ ಇರುವುದು.‌ ಉತ್ಸಾಹಕ್ಕೆ ತೊಂದರೆ ಬರುವ ಕಡೆ ನೀವು ಇರಲಾರಿರಿ.