Saturn transit in Pisces: ಮೀನ ರಾಶಿಗೆ ಶನಿ ಗ್ರಹದ ಪ್ರವೇಶ ಮಕರ ರಾಶಿ ಮೇಲೆ ಏನು ಪ್ರಭಾವ?

ನಿಮ್ಮ ರಾಶ್ಯಾಧಿಪತಿ, ಅಂದರೆ ತನು ಭಾವದ ಅಧಿಪತಿ ಹಾಗೂ ಧನ- ಕುಟುಂಬ ಸ್ಥಾನದ ಅಧಿಪತಿಯಾದ ಶನಿಯು ಮೂರನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಇಲ್ಲಿಯವರೆಗೆ ಆರೋಗ್ಯ ಸಮಸ್ಯೆಗಳು, ದೈಹಿಕವಾಗಿ ನಾನಾ ಬಗೆಯ ನೋವು- ಬಾಧೆಗಳನ್ನು ಎದುರಿಸಿದವರಿಗೆ ಸೂಕ್ತವಾದ ವೈದ್ಯ- ಔಷಧೋಪಚಾರಗಳು ದೊರೆಯಲಿವೆ. ಇನ್ನು ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧಗಳಿಂದ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ.ಮೀನ ರಾಶಿಗೆ ಶನಿ ಗ್ರಹದ ಪ್ರವೇಶದಿಂದ ಮಕರದಲ್ಲಿ ಈ ಬದಲಾವಣೆಗಳು ಆಗಲಿದೆ.

Saturn transit in Pisces: ಮೀನ ರಾಶಿಗೆ ಶನಿ ಗ್ರಹದ ಪ್ರವೇಶ ಮಕರ ರಾಶಿ ಮೇಲೆ ಏನು ಪ್ರಭಾವ?
ಸಾಂದರ್ಭಿಕ ಚಿತ್ರ
Edited By:

Updated on: Feb 28, 2025 | 4:58 PM

2025ನೇ ಮಾರ್ಚ್ ತಿಂಗಳ 29ನೇ ತಾರೀಕು ಶನಿ ಗ್ರಹವು ಕುಂಭ ರಾಶಿಯಿಂದ ಮೀನಕ್ಕೆ ಪ್ರವೇಶಿಸುತ್ತದೆ. ಅದೇ ರಾಶಿಯಲ್ಲಿ ಜೂನ್ 3, 2027ರ ತನಕ ಇರುತ್ತದೆ. ಈ ಸಂಚಾರದೊಂದಿಗೆ ಮಕರ ರಾಶಿಯವರಿಗೆ ಸಾಡೇಸಾತ್ ಕಳೆಯಲಿದೆ. ಏಳೂವರೆ ವರ್ಷಗಳ ಶನಿ ಪ್ರಭಾವದಿಂದ ಹೊರಬಂದು, ನೆಮ್ಮದಿಯನ್ನು ಕಾಣುವಂಥ ಸಮಯ ಇದಾಗಿರಲಿದೆ. ಆರೋಗ್ಯ, ಹಣಕಾಸು ವಿಚಾರ ಸೇರಿದಂತೆ ನಾನಾ ಸಂಕಷ್ಟಗಳನ್ನು ಹಾಗೂ ಸವಾಲುಗಳನ್ನು ಎದುರಿಸಿದಂಥ ಮಕರ ರಾಶಿಯವರು ಅದರಿಂದ ಹೊರಬರಲಿದ್ದಾರೆ. ಅಂದ ಹಾಗೆ ಈ ವರ್ಷದ ವಿಶೇಷ ಏನೆಂದರೆ ನಾಲ್ಕು ಪ್ರಮುಖ, ದೀರ್ಘಾವಧಿಗೆ ಒಂದೇ ರಾಶಿಯಲ್ಲಿ ಇರುವಂಥ ಗ್ರಹಗಳು ಸಂಚಾರ ಬದಲಿಸಿ, ತಮ್ಮ ಪರಿಕ್ರಮಣಕ್ಕೆ ತಕ್ಕಂತೆ ಮುಂದಿನ ರಾಶಿಗೆ ಪ್ರವೇಶಿಸುತ್ತವೆ. ಮಾರ್ಚ್ ನಲ್ಲಿ ಶನಿ ಗ್ರಹವಾದರೆ, ಮೇ ತಿಂಗಳಲ್ಲಿ ಗುರು, ರಾಹು- ಕೇತುಗಳು ಸಂಚಾರದಲ್ಲಿ ಬದಲಾವಣೆಯಿದೆ.

ಇನ್ನು ಶನಿ ಗ್ರಹಕ್ಕೆ ಮಕರ ಹಾಗೂ ಕುಂಭ ರಾಶಿಗಳು ಸ್ವಕ್ಷೇತ್ರವಾಗುತ್ತವೆ. ತುಲಾ ರಾಶಿಯು ಉಚ್ಚ ಕ್ಷೇತ್ರ ಮತ್ತು ಮೇಷ ರಾಶಿಯು ನೀಚ ಕ್ಷೇತ್ರವಾಗುತ್ತದೆ. ಮೀನ ರಾಶಿಯ ಅಂತಿಮ ಡಿಗ್ರಿಗಳಿಗೆ ತಲುಪುತ್ತಿದ್ದಂತೆಯೇ ಮೇಷ ರಾಶಿಯ ನೀಚಸ್ಥ ಫಲವನ್ನು ಶನಿ ಗ್ರಹ ನೀಡಲು ಆರಂಭಿಸುತ್ತದೆ.

ಹನ್ನೆರಡು ರಾಶಿಗಳ ಮೇಲೂ ಈ ಶನಿ ಸಂಚಾರದ ಫಲ ಇರಲಿದ್ದು, ಮಕರ ರಾಶಿಯ ಮೇಲೆ ಏನು ಪ್ರಭಾವ ಆಗಲಿದೆ ಎಂಬ ವಿವರ ಇಲ್ಲಿದೆ.

ನಿಮ್ಮ ರಾಶ್ಯಾಧಿಪತಿ, ಅಂದರೆ ತನು ಭಾವದ ಅಧಿಪತಿ ಹಾಗೂ ಧನ- ಕುಟುಂಬ ಸ್ಥಾನದ ಅಧಿಪತಿಯಾದ ಶನಿಯು ಮೂರನೇ ಮನೆಯಲ್ಲಿ ಸಂಚಾರ ಮಾಡುತ್ತದೆ. ಇಲ್ಲಿಯವರೆಗೆ ಆರೋಗ್ಯ ಸಮಸ್ಯೆಗಳು, ದೈಹಿಕವಾಗಿ ನಾನಾ ಬಗೆಯ ನೋವು- ಬಾಧೆಗಳನ್ನು ಎದುರಿಸಿದವರಿಗೆ ಸೂಕ್ತವಾದ ವೈದ್ಯ- ಔಷಧೋಪಚಾರಗಳು ದೊರೆಯಲಿವೆ. ಇನ್ನು ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧಗಳಿಂದ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ. ಯಾವುದೇ ಕೆಲಸಕ್ಕೆ ಪ್ರಯತ್ನಿಸಿದರೂ ಯಶಸ್ಸು ದೊರೆಯಲಿದೆ. ಸೋದರ- ಸೋದರಿಯರ ಮಧ್ಯೆ ಅಭಿಪ್ರಾಯ ಭೇದ- ಮನಸ್ತಾಪಗಳು ಇದ್ದಲ್ಲಿ ಅವುಗಳನ್ನು ನಿವಾರಿಸಿಕೊಳ್ಳುವುದಕ್ಕೆ ವೇದಿಕೆ ದೊರೆಯಲಿದ್ದು, ನಿಮ್ಮ ಕೆಲಸ ಕಾರ್ಯಗಳಲ್ಲಿ ಅವರಿಂದ ನೆರವು ಸಿಗಲಿದೆ.

ಸಾಲದ ಪ್ರಮಾಣ ಜಾಸ್ತಿಯಾಗಿದ್ದು, ಅದನ್ನು ತೀರಿಸಿಕೊಳ್ಳುವುದಕ್ಕಾಗಿ ಪ್ರಯತ್ನ ಮಾಡುತ್ತಿರುವವರಿಗೆ ಅದು ಕೂಡ ಸಾಧ್ಯವಾಗಲಿದೆ. ಆಸ್ತಿ ಮಾರಾಟಕ್ಕೆ ಇಟ್ಟಿದ್ದು, ಒಂದಲ್ಲಾ ಒಂದು ಕಾರಣದಿಂದ ಅದು ಮುಂದಕ್ಕೆ ಹೋಗುತ್ತಿದೆ ಅಂತಾದಲ್ಲಿ ಈ ಅವಧಿಯಲ್ಲಿ ಅಂದುಕೊಂಡಂಥ ಬೆಲೆಗೆ ಮಾರಾಟ ಆಗಲಿದ್ದು, ಮಾನಸಿಕ ನೆಮ್ಮದಿ ದೊರೆಯಲಿದೆ. ಕುಟುಂಬದಲ್ಲಿ ವಿರಸ- ಮನಸ್ತಾಪಗಳು ಇದ್ದಲ್ಲಿ ಅವುಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಲಿದೆ. ನೀವು ಹಣ ನೀಡಿ, ಬಹಳ ಸಮಯದಿಂದ ಅದು ವಾಪಸ್ ಬಂದಿಲ್ಲ ಅನ್ನುವಂತೆ ಇದ್ದರೂ ಅದು ವಾಪಸ್ ಬರಲಿದೆ.

ಇತರರು ವಿನಾಕಾರಣ ಆಕ್ಷೇಪ ಮಾಡುತ್ತಾರೆ, ಓದಿನಲ್ಲಿ ಏನು ಮಾಡಿದರೂ ಏಕಾಗ್ರತೆ ಸಾಧ್ಯವಾಗುತ್ತಿಲ್ಲ. ತಂದೆ- ತಾಯಿಗೂ ಇದೇ ವಿಚಾರಕ್ಕೆ ಬೇಸರ ಆಗುತ್ತಿದೆ ಎಂಬ ಸ್ಥಿತಿಯಲ್ಲಿ ಇರುವ ವಿದ್ಯಾರ್ಥಿಗಳಿಗೆ ಸಮಸ್ಯೆಗಳು ನಿವಾರಣೆ ಆಗುತ್ತವೆ. ಮುಖ್ಯವಾಗಿ ನೀವು ಪಡುವ ಶ್ರಮಕ್ಕೆ ತಕ್ಕ ಫಲಿತಾಂಶ ದೊರೆಯಲಿದೆ. ಕಣ್ಣಿನ ಸಮಸ್ಯೆಯಿಂದ, ತಲೆ ನೋವಿನಿಂದ ಬಳಲುತ್ತಿರುವವರಿಗೆ ಅದರ ನಿವಾರಣೆಗೆ ಸರಿಯಾದ ಔಷಧೋಪಚಾರ ದೊರೆಯುವುದರಿಂದ ಮಾನಸಿಕವಾಗಿ ನೆಮ್ಮದಿ ಸಿಗಲಿದೆ.

ಹೆಣ್ಣುಮಕ್ಕಳಿಗೆ ತವರು ಮನೆಯಿಂದ ಬರಬೇಕಾದ ಪಿತ್ರಾರ್ಜಿತ ಆಸ್ತಿಗಳು ಬರುವಂಥ ಸಮಯ ಇದಾಗಿರುತ್ತದೆ. ಸೋದರ- ಸೋದರಿಯರಿಂದ ಅಡೆತಡೆಗಳು ಎದುರಾಗುತ್ತಿದ್ದಲ್ಲಿ ಅವು ನಿವಾರಣೆ ಆಗುತ್ತವೆ.

ಇನ್ನು ಮನೆ- ಸೈಟು ಖರೀದಿ ಮಾಡಬೇಕು ಎಂದು ಹುಡುಕಾಟ ನಡೆಸುತ್ತಿರುವವರಿಗೆ, ಈಗಾಗಲೇ ಸೈಟು ಇದ್ದಲ್ಲಿ ಮನೆ ನಿರ್ಮಾಣಕ್ಕೆ ಎಲ್ಲ ಅನುಕೂಲಗಳು ಆಗಲಿದ್ದು, ನೀವು ಪ್ರಯತ್ನಿಸುತ್ತಿರುವ ಹಣಕಾಸು ಮೂಲಗಳಿಂದಲೇ ನಿಮಗೆ ದುಡ್ಡಿನ ಹರಿವು ಆಗಲಿದೆ. ಒಟ್ಟಾರೆ ಮಕರ ರಾಶಿಯವರಿಗೆ ಇದು ಉತ್ತಮವಾದ ಸಮಯವಾಗಿರಲಿದೆ.

-ಸ್ವಾತಿ ಎನ್.ಕೆ.