ವಿವಿಧ ರಾಶಿಗಳ ಜನರ ಸುಪ್ತ ರಹಸ್ಯಗಳು ಹೇಗೆಲ್ಲಾ ಇರುತ್ತವೆ ಗೊತ್ತಾ? ಜಸ್ಟ್​ ಒಮ್ಮೆ ನೀವೂ ನೋಡಿ!

|

Updated on: Apr 20, 2023 | 5:23 PM

Aquarius: ಪ್ರಶಂಸೆ -ಇದು ಅರ್ಥವಾಗುವಂತಹದ್ದಾಗಿದೆ. ಕುಂಭ ರಾಶಿಯವರು ತಾವು ಮಾಡುವ ಸಾಮಾಜಿಕ ಕಾರ್ಯವನ್ನು ಇಷ್ಟಪಡುತ್ತಾರೆ. ಜೊತೆಗೆ ಜನ ಅದನ್ನು ಗುರುತಿಸುವುದು, ಅದರ ಬಗ್ಗೆ ಹೊಗಳುವುದು ಕುಂಭ ರಾಶಿಯವರನ್ನು ಮತ್ತಷ್ಟು ಖುಷಿಗೆ ಹಚ್ಚುತ್ತದೆ.

ವಿವಿಧ ರಾಶಿಗಳ ಜನರ ಸುಪ್ತ ರಹಸ್ಯಗಳು ಹೇಗೆಲ್ಲಾ ಇರುತ್ತವೆ ಗೊತ್ತಾ? ಜಸ್ಟ್​ ಒಮ್ಮೆ ನೀವೂ ನೋಡಿ!
ವಿವಿಧ ರಾಶಿಗಳ ಜಾತಕದವರ ಸುಪ್ತ ರಹಸ್ಯಗಳು ಹೇಗೆಲ್ಲಾ ಇರುತ್ತವೆ ಗೊತ್ತಾ?
Image Credit source: steemit.com
Follow us on

ಚಟ? ಚಟ (Addiction) ಯಾರನ್ನು ಬಿಟ್ಟಿಲ್ಲ ಹೇಳಿ? ನಾವೆಲ್ಲರೂ ಒಂದಲ್ಲ ಹಲವು ಚಟಗಳನ್ನು ಹೊಂದಿರಬಹುದು. ಆದರೆ ಅದು ನಮ್ಮ ಗುಪ್ತ ರಹಸ್ಯಗಳಾಗಿ (hidden secrets) ಉಳಿದಿರುತ್ತದಲ್ಲವೇ! ಆದರೂ ಇಂತಹ ತಪ್ಪಿತಸ್ಥ ಸಂತೋಷಗಳು ನಮ್ಮ ವೈಭವದ ಸಂಪತ್ತುಗಳಾಗಿರುತ್ತವೆ (treasures). ಯಾವ ಯಾವ ರಾಶಿಯವರು (zodiac signs) ಎಂತೆಂತಹ ವ್ಯಸನಗಳನ್ನು ಹೊಂದಿರುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.

ಮೇಷ Aries: ಮೇಷ ರಾಶಿಯವರು ಗಮನ ಸೆಳೆಯುವುದನ್ನು ಪ್ರೀತಿಸುತ್ತಾರೆ. ವೈಯಕ್ತಿಕ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಅವರು ಇಡೀ ಊರಿಗೆ ಚರ್ಚೆಯ ವಸ್ತುವಾಗಲು ಇಷ್ಟಪಡುತ್ತಾರೆ. ಮೇಷ ರಾಶಿಯವರಿಗೆ ಸಾಮಾಜಿಕ ಜೀವನವು ಮುಖ್ಯವಾಗಿದೆ ಏಕೆಂದರೆ ಅದು ಅವರ ಬಹಿರ್ಮುಖ ಸ್ವಭಾವವನ್ನು ಪೋಷಿಸುತ್ತದೆ.

ವೃಷಭ Taurus: ವೃಷಭ ರಾಶಿಯವರಿಗೆ ಒಳ್ಳೆಯ ಆಹಾರ ಮತ್ತು ಉತ್ತಮ ನಿದ್ರೆಯ ಬಗ್ಗೆ ಒಲವು ಇರುತ್ತದೆ. ವೃಷಭ ರಾಶಿಯವರು ಅಕ್ಷರಶಃ ಕುಟುಂಬಸ್ಥರು ಅಂದರೆ ಮನೆಗೇ ಅಂಟಿಕೊಂಡವರು, ಯಾವುದರಿಂದಲಾದರೂ ಅವರನ್ನು ಸಲೀಸಾಗಿ ತೃಪ್ತಿಪಡಿಸಬಹುದು. ಒಂದೇ ತೆರನಾದ ದಿನಚರಿಯನ್ನು ಹೊಂದಿರುವುದು ಅವರಿಗೆ ವ್ಯಸನವಾಗಿರುತ್ತದೆ.

ಮಿಥುನ Gemini: ಸಮಾಜದ ಮಧ್ಯೆ ಬದುಕುವುದು ಅವರಿಗೆ ವ್ಯಸನವಾಗಿರುತ್ತದೆ. ಅದು ದೈನಂದಿನ ಜೀವನದಲ್ಲಿ ಇರಲಿ ಅಥವಾ ಮಾಧ್ಯಮದಲ್ಲಿಯೇ ಇರಲಿ ಜನಪ್ರಿಯವಾಗಿರಲು ಹಾತೊರೆಯುತ್ತಾರೆ. ಮಿಥುನ ರಾಶಿಯವರು ಟ್ರೆಂಡ್‌ಗೆ ತಕ್ಕಂತೆ ಅಪ್‌ಡೇಟ್‌ ಆಗುವುದನ್ನು ಇಷ್ಟಪಡುತ್ತಾರೆ ಮತ್ತು ಅವುಗಳನ್ನು ಕರಗತ ಮಾಡಿಕೊಳ್ಳುವುದು ಅವರ ಹವ್ಯಾಸವಾಗಿರುತ್ತದೆ.

ಕರ್ಕಾಟಕ: ಮಾಹಿತಿಯೋ ಅಥವಾ ಗಾಸಿಫ್ಪಾ? ಇವೆರಡೂ ಒಂದೇ ರೀತಿಯದ್ದಾಗಿರುತ್ತದೆ. ಕರ್ಕಾಟಕ ರಾಶಿಯವರು ತಮಗೆ ಪರಿಚಯವಿರುವ ಅಥವಾ ತಿಳಿಯದೇ ಇರುವವರ ಬಗ್ಗೆಯೂ ಎಲ್ಲವನ್ನೂ ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ತಮ್ಮ ಸುತ್ತಮುತ್ತಲ ಜನ ಮತ್ತು ಆ ಜನರ ಜೀವನವು ಇವರಿಗೆ ಬಹಳಷ್ಟು ಆಸಕ್ತಿದಾಯಕವಾಗಿರುತ್ತದೆ.

ಸಿಂಹ Leo: ಹಣದ ಮಾಯಾಜಾಲ! ಸ್ವಲ್ಪ ಹೆಚ್ಚುಕಮ್ಮಿ ಸಿಂಹ ರಾಶಿಯವರಿಗೆ ಎಲ್ಲವೂ ಇದೇ ಆಗಿಬಿಟ್ಟಿರುತ್ತದೆ. ಅವರು ಯಶಸ್ಸಿನ ಕಲ್ಪನೆಯಿಂದ ಪ್ರೇರೇಪಿಸಲ್ಪಟ್ಟಿದ್ದಾರೆ ಮತ್ತು ಅದಕ್ಕೆ ದಾರಿ ಯಾವುದು ಎಂಬುದನ್ನು ತಿಳಿದುಕೊಂಡಿರುತ್ತಾರೆ. ಹಾಗಂತ ಅವರು ಮೆಟೀರಿಯಲಿಸ್ಟಿಕ್ ಎಂದು ಅವರನ್ನು ದೂಷಿಸಲಾಗುವುದಿಲ್ಲ ಅಲ್ಲವೇ?

ಕನ್ಯಾ Virgo: ಏಕಾಂಗಿತನ, ಒಂಟಿತನ ಸಮಯವನ್ನು ಅವರು ಇಷ್ಟಪಡುತ್ತಾರೆ. ಕನ್ಯಾ ರಾಶಿಯವರು ಸಮಾಜದೊಂದಿಗೆ ಚೆನ್ನಾಗಿ ಬೆರೆಯಬಲ್ಲರು ಮತ್ತು ಅದನ್ನೇ ಅವರು ಇಷ್ಟಪಡುತ್ತಾರೆ. ಆದರೆ ಸ್ವಲ್ಪ ಸಮಯದ ನಂತರ, ಅವರಿಗೂ ವೈಯಕ್ತಿಕವಾಗಿ ತಮ್ಮೊಂದಿಗೆ ಸ್ವಲ್ಪ ಖಾಸಗಿತನ ಬೇಕು ಅನಿಸಿಬಿಡುತ್ತದೆ. ಅವರು ತಮ್ಮದೇ ಆದ ಪಟಾಲಂ ಅನ್ನು ಪ್ರೀತಿಸುತ್ತಾರೆ. ಇನ್ನು ಜೀವನದಲ್ಲಿ ಚೇತರಿಸಿಕೊಳ್ಳಲು ಮತ್ತು ಯೋಚಿಸಲು ಇವರಿಗೆ ಸಮಯ ಹಿಡಿಸುತ್ತದೆ.

ತುಲಾ Libra: ಮಲಗುವುದನ್ನೂ ಒಂದು ವೃತ್ತಿ ಎಂದು ಪರಿಗಣಿಸಲ್ಪಟ್ಟರೆ ತುಲಾ ರಾಶಿಯವರು ಶ್ರೀಮಂತರಾಗಿಬಿಡುತ್ತಿದ್ದರು. ಅವರು ಎಚ್ಚರವಾಗಿರುವಾಗ ಕಷ್ಟಕರವಾದ ಸಂದರ್ಭಗಳು ಎದುರಾದರೆ ಅದನ್ನು ನಿಭಾಯಿಸುವ ಬದಲು ನಿದ್ರೆಗೆ ಜಾರಿಬಿಡುತ್ತಾರೆ. ವಿಶ್ರಾಂತಿಯು ಎಲ್ಲವನ್ನೂ ಪರಿಹರಿಸುತ್ತದೆ ಎಂಬುದು ಇವರ ದೃಢವಾದ ನಂಬಿಕೆಯಾಗಿರುತ್ತದೆ.

ವೃಶ್ಚಿಕ Scorpio: ಕಾರುಗಳು. ಹೌದು, ಅದು ಅವರ ವ್ಯಸನವಾಗಿರುತ್ತದೆ. ವೃಶ್ಚಿಕ ರಾಶಿಯವರು ಜೀವನದಲ್ಲಿ ಸದಾ ಥ್ರಿಲ್ ಮತ್ತು ವೇಗದ ಹೊಗೆಯನ್ನು ಹೊರಸೂಸುತ್ತಿರುತ್ತಾರೆ. ಅನೇಕವನ್ನು ಹೊಂದಲು ಸಾಧ್ಯವಾಗದಿದ್ದರೆ, ಅವುಗಳಲ್ಲಿ ಹೆಚ್ಚಿನವುಗಳ ಬಗ್ಗೆ ಅವರು ಚೆನ್ನಾಗಿ ಜ್ಞಾನವನ್ನು ಹೊಂದಿರುತ್ತಾರೆ.

ಧನು ರಾಶಿ Sagittarius: ಆಹಾರ! ಆಹಾರವನ್ನು ಧನು ರಾಶಿಯವರು ಹೆಚ್ಚು ಇಷ್ಟಪಡುತ್ತಾರೆ. ಅವರು ತಮ್ಮ ನೆಚ್ಚಿನ ಭಕ್ಷ್ಯಗಳ ಬಗ್ಗೆಯಂತೂ ಇನ್ನೂ ಹೆಚ್ಚು ರುಚಿ ಹೊಂದಿರುತ್ತಾರೆ. ಧನು ರಾಶಿಯವರ ಜೊತೆ ಜಗಳವೇರ್ಪಟ್ಟರೆ ಜಸ್ಟ್​… ಅವರ ನೆಚ್ಚಿನ ಆಹಾರವನ್ನು ಉಣಬಡಿಸಿ ಸಾಕು! ಅದರಿಂದ ಅವರು ನಿಮ್ಮ ಬಗ್ಗೆ ಅಸಮಾಧಾನ ಹೊಂದುವುದರ ಪ್ರಮೇಯವೇ ಉದ್ಭವಿಸಿದರು.

ಮಕರ Capricorn: ಹಣದ ವಿಷಯದಲ್ಲಿ ಇವರು ತಮ್ಮನ್ನು ಸಮರ್ಪಣೆ ಮಾಡಿಕೊಂಡಿರುತ್ತಾರೆ. ಇದು ಭೌತಿಕ ಉತ್ತುಂಗವನ್ನು ತಲುಪುತ್ತದೆ. ಮಕರ ರಾಶಿಯವರು ಇದನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಶ್ರೀಮಂತಿಕೆ ಮತ್ತು ಐಷಾರಾಮಿ ಕಲ್ಪನೆಯು ಅವರನ್ನು ಸೆಳೆಯುತ್ತಿರುತ್ತದೆ. ಇದು ಅವರನ್ನು ಜೀವಂತವಾಗಿಡುತ್ತದೆ.

ಕುಂಭ Aquarius: ಪ್ರಶಂಸೆ -ಇದು ಅರ್ಥವಾಗುವಂತಹದ್ದಾಗಿದೆ. ಕುಂಭ ರಾಶಿಯವರು ತಾವು ಮಾಡುವ ಸಾಮಾಜಿಕ ಕಾರ್ಯವನ್ನು ಇಷ್ಟಪಡುತ್ತಾರೆ. ಜೊತೆಗೆ ಜನ ಅದನ್ನು ಗುರುತಿಸುವುದು, ಅದರ ಬಗ್ಗೆ ಹೊಗಳುವುದು, ಅದರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುವುದು ಕುಂಭ ರಾಶಿಯವರನ್ನು ಮತ್ತಷ್ಟು ಖುಷಿಗೆ ಹಚ್ಚುತ್ತದೆ.

ಮೀನ Pisces: ತಮ್ಮ ಭಾವನೆಗಳೊಂದಿಗೆ ಸಂಪರ್ಕ ಕಲ್ಪಿಸುವ ಸಂಗೀತ, ಹಾಡುಗಳನ್ನು ಕೇಳುವುದು ಈ ರಾಶಿಯವರಿಗೆ ಮತ್ಸರದ ಒಂದು ರೂಪವಾಗಿದೆ. ತಮಗೆ ಹೇಳಲು ಸಾಧ್ಯವಾಗದೆ ಇರುವಂತಹ ಎಲ್ಲವನ್ನೂ ಹಾಡುಗಳು ಹೇಳುತ್ತವೆ, ತನ್ಮೂಲಕ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ಭಾವಿಸುತ್ತಾರೆ.

Published On - 5:20 pm, Thu, 20 April 23