ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಜೂನ್ 2ರ ರಾಶಿ ಭವಿಷ್ಯದಲ್ಲಿ ಮೇಷ ರಾಶಿಯಿಂದ ಕಟಕ ರಾಶಿಯವರೆಗೆ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ರೇವತೀ, ಯೋಗ: ಸೌಭಾಗ್ಯ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:41 ರಿಂದ 09:17ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:54 ರಿಂದ ಮಧ್ಯಾಹ್ನ 12:31ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:08 ರಿಂದ 03:45ರ ವರೆಗೆ.
ಮೇಷ ರಾಶಿ: ಇಂದು ಅನುಭವಿಗಳ ಜೊತೆ ನಿಮ್ಮ ಅನನುಭವದ ಸನ್ನಿವೇಶವನ್ನು ಹಂಚಿಕೊಳ್ಳುವಿರಿ. ಅದು ಬಾಲಿಶ ಎನಿಸುವುದು. ನಿಮ್ಮ ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಕಾಣಿಸಿಕೊಳ್ಳುವುದು. ವ್ಯಾಪಾರ ಪ್ರಯತ್ನಗಳು ಫಲಪ್ರದವಾಗುತ್ತವೆ. ಮಕ್ಕಳ ಶಿಕ್ಷಣದ ಬಗ್ಗೆ ಚಿಂತಿತರಾಗುವಿರಿ. ಅನಗತ್ಯ ತೊಡಕುಗಳು ಉಂಟಾಗುತ್ತವೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಭಯದ ಕಾರಣಕ್ಕೆ ನೀವು ಎಲ್ಲ ಕಾರ್ಯಗಳಿಂದ ಹಿಮ್ಮುಖರಾಗುವಿರಿ. ಕೆಲವರಿಗೆ ದಾರ್ಷ್ಟ್ಯದ ಮಾತುಗಳನ್ನು ಆಡಬೇಕಾಗುವುದು. ಮನೆಯ ನಿರ್ಮಾಣದ ಕನಸನ್ನು ಕಾಣುವಿರಿ. ಯಾರ ಪ್ರಭಾವವನ್ನೂ ನೀವು ಉಪಯೋಗಿಸಿಕೊಳ್ಳಲು ಇಷ್ಟಪಡುವುದಿಲ್ಲ. ಯಾವುದೋ ಸಮಯಕ್ಕೆ ಆಹಾರವನ್ನು ಸ್ವೀಕರಿಸಬೇಕಾದೀತು. ನಿಮ್ಮ ಚೌಕಟ್ಟಿನಲ್ಲಿ ಎಲ್ಲವೂ ಇರಬೇಕು ಎನ್ನುವುದು ಅಸಾಧ್ಯದ ಮಾತು.
ವೃಷಭ ರಾಶಿ: ಇಂದು ನಿಮಗೆ ಯಾರ ಸಹಾನುಭೂತಿಯೂ ಬೇಡವಾಗುವುದು. ನೀವು ಇತರರ ಸಲಹೆಯನ್ನು ಮಾತ್ರ ಅವಲಂಬಿಸಿದ್ದರೆ ಸಂಭಾವ್ಯ ಆರ್ಥಿಕ ನಷ್ಟಗಳ ಬಗ್ಗೆ ಜಾಗರೂಕರಾಗಿರಿ. ಕೌಟುಂಬಿಕ ಗೌರವ ಹೆಚ್ಚಲಿದೆ. ಹಣಕಾಸಿನ ಪ್ರಯತ್ನಗಳು ಫಲ ನೀಡುತ್ತವೆ. ಸಂಬಂಧಗಳಲ್ಲಿ ನಿಕಟತೆ ಇರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಮಾಡುವ ಪ್ರಯತ್ನಗಳು ಫಲಪ್ರದವಾಗುತ್ತವೆ. ದ್ವೇಷವನ್ನು ಕಟ್ಟಿಕೊಳ್ಳುವ ಸಾಧ್ಯತೆ ಇದೆ. ಕೆಲವು ಅಪವಾದವನ್ನು ಅನಿವಾರ್ಯವಾಗಿ ಹೊರಬೇಕಾಗುವುದು. ಸಂಗಾತಿಯನ್ನು ಕೆಲವು ವಿಷಯಕ್ಕೆ ದ್ವೇಷಿಸುವಿರಿ. ಹಳೆಯ ವಿಚಾರವನ್ನು ಮತ್ತೆ ತೆಗದು ವಿವಾದ ಮಾಡಿಕೊಳ್ಳುವ ಸಂದರ್ಭವಿದೆ. ಅಮೂಲ್ಯ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ಸಜ್ಜನರ ಸಹವಾಸದಿಂದ ಕೆಲವು ಬದಲಾವಣೆಯನ್ನು ತಂದುಕೊಳ್ಳುವಿರಿ.
ಮಿಥುನ ರಾಶಿ: ನಿಮ್ಮ ಬಿಡುವಿನ ದಿನದಲ್ಲಿಯೂ ಕುಟುಂಬದವರ ಬಗ್ಗೆ ಕಾಳಜಿ ಇರದು. ವಿದ್ಯುತ್ ಉಪಕರಣಗಳಿಗೆ ಧನವ್ಯಯವಾಗಬಹುದು. ನಿಮ್ಮ ಮಾತುಕತೆಗಳು ಪ್ರಾಮಾಣಿಕರಾಗಿರಲಿ. ಏಕೆಂದರೆ ನಾಟಕೀಯವಾಗಿ ಬದುಕುವುದರಿಂದ ಏನೂ ಪ್ರಯೋಜನವಿಲ್ಲ. ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಸಮಯದ ಸದುಪಯೋಗದ ಬಗ್ಗೆ ನಿಮಗೆ ಚಿಂತೆ ಇರುವುದು. ಸರಕಾರದಿಂದ ಸಹಕಾರ ದೊರೆಯಲಿದೆ. ವ್ಯಾಪಾರ ಪ್ರಯತ್ನಗಳು ಫಲಪ್ರದವಾಗುತ್ತವೆ. ಉಡುಗೊರೆಗಳು ಅಥವಾ ಗೌರವ ಹೆಚ್ಚಾಗುತ್ತದೆ. ಮಾಡಿದ ಪ್ರಯತ್ನಗಳು ಸಾರ್ಥಕವಾಗುತ್ತವೆ. ಮಾತನ್ನು ಸರಿಯಾಗಿ, ಸರಿಯಾದ ಸ್ಥಳದಲ್ಲಿ ಆಡಿ. ಊಹಿಸದ ಕೆಲವು ಸಂದರ್ಭಗಳು ಇಂದು ಬರಬಹುದು. ಮಕ್ಕಳ ವಿಚಾರದಲ್ಲಿ ನೀವು ಬಹಳ ಮಾರ್ದವವನ್ನು ತೋರಿಸುವಿರಿ. ನಿಮಗೆ ಸಿಕ್ಕ ಮೆಚ್ಚುಗೆಯನ್ನು ನೀವು ಸಂಕೋಚದಿಂದ ಸ್ವೀಕರಿಸುವಿರಿ. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು.
ಕಟಕ ರಾಶಿ; ಇಂದು ನಿಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಗಿ ಬರಬಹುದು. ಕುಟುಂಬ ಸದಸ್ಯರ ಬಗ್ಗೆ ನಿಮಗಿದ್ದ ನಿರೀಕ್ಷೆಗಳು ಹುಸಿಯಾಗಬಹುದು. ಪ್ರೀತಿ ಇಂದು ನಿಮಗೆ ಸಂತೋಷವನ್ನು ತರಬಹುದು. ಕೆಲಸದಲ್ಲಿ ಉತ್ಪಾದಕ ದಿನವನ್ನು ನಿರೀಕ್ಷಿಸಿ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನೀವು ವ್ಯವಹಾರದಲ್ಲಿ ಅಥವಾ ಇತರ ಯಾವುದೇ ವಿಷಯದಲ್ಲಿ ಅಹಿತಕರ ಸುದ್ದಿಗಳನ್ನು ಸ್ವೀಕರಿಸಬಹುದು. ಮಕ್ಕಳ ಜವಾಬ್ದಾರಿಗಳನ್ನು ಪೂರೈಸಲಾಗುವುದು. ಎಲ್ಲರೂ ನಿಮ್ಮನ್ನು ಮೆಚ್ಚಬೇಕು ಎಂದುಕೊಳ್ಳುವಿರಿ. ಸೃಜನಾತ್ಮಕ ಪ್ರಯತ್ನಗಳು ಫಲ ನೀಡುತ್ತವೆ. ಪರದೇಶಲ್ಲಿರುವವರಿಗೆ ಜೀವನ ಕಷ್ಟವೆನಿಸಬಹುದು. ನಿಂತಲ್ಲಿ ನಿಲ್ಲುವುದು ಕಷ್ಟವಾಗಿ ಸುಮ್ಮನೇ ಅಡ್ಡಾಡುವಿರಿ. ಹೊಸ ವೃತ್ತಿಯಲ್ಲಿ ಪೂರ್ಣ ತೊಡಗಿಕೊಳ್ಳುವುದು ನಿಮಗೆ ಇಷ್ಟವಾಗುವುದು. ಮಕ್ಕಳಿಗಾಗಿ ಕೆಲವು ಬದಲಾವಣೆಯನ್ನು ಮಾಡಿಕೊಳ್ಳುವಿರಿ. ನಿಮ್ಮ ಪರೀಕ್ಷೆಯನ್ನು ನೀವು ಮಾಡಿಕೊಳ್ಳುವುದು ಉತ್ತಮ.