Horoscope for 3 June 2024: ಕುಟುಂಬದ ಒತ್ತಡಕ್ಕೆ ಒಳಗಾಗಬಹುದು, ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ
2024 ಜೂನ್ 02ರ ದಿನ ಭವಿಷ್ಯ: ಸೋಮವಾರದಂದು 12 ರಾಶಿಗಳ ರಾಶಿಫಲ ಹೇಗಿದೆ ಎನ್ನುವುದು ತಿಳಿದುಕೊಳ್ಳಿ. ಈ ದಿನ ಯಾರಿಗೆ ಯೋಗ, ಶುಭ ಸಂಯೋಗ, ಗ್ರಹಗಳ ಸ್ಥಾನ ಬದಲಾವಣೆಗಳಿಂದ ಮೇಷದಿಂದ ಮೀನ ರಾಶಿವರೆಗಿನ ರಾಶಿ ಭವಿಷ್ಯ ಹೇಗಿರಲಿದೆ? ಶುಭಕಾಲ ಹೇಗಿದೆ? ಯಾವ ರಾಶಿಯವರಿಗೆ ಅದೃಷ್ಟ ಕಾದಿದೆ ಎಂಬಿತ್ಯಾದಿ ಮಾಹಿತಿಯನ್ನು ನಿತ್ಯ ಭವಿಷ್ಯದಿಂದ ತಿಳಿಯಿರಿ.
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಸೋಮವಾರ (ಜೂನ್ 03) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ವೈಶಾಖ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ರೇವತೀ, ಯೋಗ: ಸೌಭಾಗ್ಯ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 07:41 ರಿಂದ 09:17ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:54 ರಿಂದ ಮಧ್ಯಾಹ್ನ 12:31ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:08 ರಿಂದ 03:45ರ ವರೆಗೆ.
ಮೇಷ ರಾಶಿ: ಇಂದು ಅನುಭವಿಗಳ ಜೊತೆ ನಿಮ್ಮ ಅನನುಭವದ ಸನ್ನಿವೇಶವನ್ನು ಹಂಚಿಕೊಳ್ಳುವಿರಿ. ಅದು ಬಾಲಿಶ ಎನಿಸುವುದು. ನಿಮ್ಮ ವೈವಾಹಿಕ ಜೀವನದಲ್ಲಿ ಉದ್ವಿಗ್ನತೆ ಕಾಣಿಸಿಕೊಳ್ಳುವುದು. ವ್ಯಾಪಾರ ಪ್ರಯತ್ನಗಳು ಫಲಪ್ರದವಾಗುತ್ತವೆ. ಮಕ್ಕಳ ಶಿಕ್ಷಣದ ಬಗ್ಗೆ ಚಿಂತಿತರಾಗುವಿರಿ. ಅನಗತ್ಯ ತೊಡಕುಗಳು ಉಂಟಾಗುತ್ತವೆ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ಭಯದ ಕಾರಣಕ್ಕೆ ನೀವು ಎಲ್ಲ ಕಾರ್ಯಗಳಿಂದ ಹಿಮ್ಮುಖರಾಗುವಿರಿ. ಕೆಲವರಿಗೆ ದಾರ್ಷ್ಟ್ಯದ ಮಾತುಗಳನ್ನು ಆಡಬೇಕಾಗುವುದು. ಮನೆಯ ನಿರ್ಮಾಣದ ಕನಸನ್ನು ಕಾಣುವಿರಿ. ಯಾರ ಪ್ರಭಾವವನ್ನೂ ನೀವು ಉಪಯೋಗಿಸಿಕೊಳ್ಳಲು ಇಷ್ಟಪಡುವುದಿಲ್ಲ. ಯಾವುದೋ ಸಮಯಕ್ಕೆ ಆಹಾರವನ್ನು ಸ್ವೀಕರಿಸಬೇಕಾದೀತು. ನಿಮ್ಮ ಚೌಕಟ್ಟಿನಲ್ಲಿ ಎಲ್ಲವೂ ಇರಬೇಕು ಎನ್ನುವುದು ಅಸಾಧ್ಯದ ಮಾತು.
ವೃಷಭ ರಾಶಿ: ಇಂದು ನಿಮಗೆ ಯಾರ ಸಹಾನುಭೂತಿಯೂ ಬೇಡವಾಗುವುದು. ನೀವು ಇತರರ ಸಲಹೆಯನ್ನು ಮಾತ್ರ ಅವಲಂಬಿಸಿದ್ದರೆ ಸಂಭಾವ್ಯ ಆರ್ಥಿಕ ನಷ್ಟಗಳ ಬಗ್ಗೆ ಜಾಗರೂಕರಾಗಿರಿ. ಕೌಟುಂಬಿಕ ಗೌರವ ಹೆಚ್ಚಲಿದೆ. ಹಣಕಾಸಿನ ಪ್ರಯತ್ನಗಳು ಫಲ ನೀಡುತ್ತವೆ. ಸಂಬಂಧಗಳಲ್ಲಿ ನಿಕಟತೆ ಇರುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಮಾಡುವ ಪ್ರಯತ್ನಗಳು ಫಲಪ್ರದವಾಗುತ್ತವೆ. ದ್ವೇಷವನ್ನು ಕಟ್ಟಿಕೊಳ್ಳುವ ಸಾಧ್ಯತೆ ಇದೆ. ಕೆಲವು ಅಪವಾದವನ್ನು ಅನಿವಾರ್ಯವಾಗಿ ಹೊರಬೇಕಾಗುವುದು. ಸಂಗಾತಿಯನ್ನು ಕೆಲವು ವಿಷಯಕ್ಕೆ ದ್ವೇಷಿಸುವಿರಿ. ಹಳೆಯ ವಿಚಾರವನ್ನು ಮತ್ತೆ ತೆಗದು ವಿವಾದ ಮಾಡಿಕೊಳ್ಳುವ ಸಂದರ್ಭವಿದೆ. ಅಮೂಲ್ಯ ವಸ್ತುವನ್ನು ಖರೀದಿಸುವುದಕ್ಕಿಂತ ಅದನ್ನು ಕಾಪಾಡಿಕೊಳ್ಳುವುದು ಬಹುಮುಖ್ಯ. ಸಜ್ಜನರ ಸಹವಾಸದಿಂದ ಕೆಲವು ಬದಲಾವಣೆಯನ್ನು ತಂದುಕೊಳ್ಳುವಿರಿ.
ಮಿಥುನ ರಾಶಿ: ನಿಮ್ಮ ಬಿಡುವಿನ ದಿನದಲ್ಲಿಯೂ ಕುಟುಂಬದವರ ಬಗ್ಗೆ ಕಾಳಜಿ ಇರದು. ವಿದ್ಯುತ್ ಉಪಕರಣಗಳಿಗೆ ಧನವ್ಯಯವಾಗಬಹುದು. ನಿಮ್ಮ ಮಾತುಕತೆಗಳು ಪ್ರಾಮಾಣಿಕರಾಗಿರಲಿ. ಏಕೆಂದರೆ ನಾಟಕೀಯವಾಗಿ ಬದುಕುವುದರಿಂದ ಏನೂ ಪ್ರಯೋಜನವಿಲ್ಲ. ಜೀವನೋಪಾಯ ಕ್ಷೇತ್ರದಲ್ಲಿ ಪ್ರಗತಿ ಕಂಡುಬರಲಿದೆ. ಸಮಯದ ಸದುಪಯೋಗದ ಬಗ್ಗೆ ನಿಮಗೆ ಚಿಂತೆ ಇರುವುದು. ಸರಕಾರದಿಂದ ಸಹಕಾರ ದೊರೆಯಲಿದೆ. ವ್ಯಾಪಾರ ಪ್ರಯತ್ನಗಳು ಫಲಪ್ರದವಾಗುತ್ತವೆ. ಉಡುಗೊರೆಗಳು ಅಥವಾ ಗೌರವ ಹೆಚ್ಚಾಗುತ್ತದೆ. ಮಾಡಿದ ಪ್ರಯತ್ನಗಳು ಸಾರ್ಥಕವಾಗುತ್ತವೆ. ಮಾತನ್ನು ಸರಿಯಾಗಿ, ಸರಿಯಾದ ಸ್ಥಳದಲ್ಲಿ ಆಡಿ. ಊಹಿಸದ ಕೆಲವು ಸಂದರ್ಭಗಳು ಇಂದು ಬರಬಹುದು. ಮಕ್ಕಳ ವಿಚಾರದಲ್ಲಿ ನೀವು ಬಹಳ ಮಾರ್ದವವನ್ನು ತೋರಿಸುವಿರಿ. ನಿಮಗೆ ಸಿಕ್ಕ ಮೆಚ್ಚುಗೆಯನ್ನು ನೀವು ಸಂಕೋಚದಿಂದ ಸ್ವೀಕರಿಸುವಿರಿ. ವಿದ್ಯಾಭ್ಯಾಸಕ್ಕಾಗಿ ಮನೆಯನ್ನು ಬಿಟ್ಟು ಇರುವುದು ಕಷ್ಟವಾಗುವುದು.
ಕಟಕ ರಾಶಿ: ಇಂದು ನಿಮ್ಮ ಸ್ಥಾನವನ್ನು ಬಿಟ್ಟುಕೊಡಬೇಕಾಗಿ ಬರಬಹುದು. ಕುಟುಂಬ ಸದಸ್ಯರ ಬಗ್ಗೆ ನಿಮಗಿದ್ದ ನಿರೀಕ್ಷೆಗಳು ಹುಸಿಯಾಗಬಹುದು. ಪ್ರೀತಿ ಇಂದು ನಿಮಗೆ ಸಂತೋಷವನ್ನು ತರಬಹುದು. ಕೆಲಸದಲ್ಲಿ ಉತ್ಪಾದಕ ದಿನವನ್ನು ನಿರೀಕ್ಷಿಸಿ. ನಿಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಿ. ನೀವು ವ್ಯವಹಾರದಲ್ಲಿ ಅಥವಾ ಇತರ ಯಾವುದೇ ವಿಷಯದಲ್ಲಿ ಅಹಿತಕರ ಸುದ್ದಿಗಳನ್ನು ಸ್ವೀಕರಿಸಬಹುದು. ಮಕ್ಕಳ ಜವಾಬ್ದಾರಿಗಳನ್ನು ಪೂರೈಸಲಾಗುವುದು. ಎಲ್ಲರೂ ನಿಮ್ಮನ್ನು ಮೆಚ್ಚಬೇಕು ಎಂದುಕೊಳ್ಳುವಿರಿ. ಸೃಜನಾತ್ಮಕ ಪ್ರಯತ್ನಗಳು ಫಲ ನೀಡುತ್ತವೆ. ಪರದೇಶಲ್ಲಿರುವವರಿಗೆ ಜೀವನ ಕಷ್ಟವೆನಿಸಬಹುದು. ನಿಂತಲ್ಲಿ ನಿಲ್ಲುವುದು ಕಷ್ಟವಾಗಿ ಸುಮ್ಮನೇ ಅಡ್ಡಾಡುವಿರಿ. ಹೊಸ ವೃತ್ತಿಯಲ್ಲಿ ಪೂರ್ಣ ತೊಡಗಿಕೊಳ್ಳುವುದು ನಿಮಗೆ ಇಷ್ಟವಾಗುವುದು. ಮಕ್ಕಳಿಗಾಗಿ ಕೆಲವು ಬದಲಾವಣೆಯನ್ನು ಮಾಡಿಕೊಳ್ಳುವಿರಿ. ನಿಮ್ಮ ಪರೀಕ್ಷೆಯನ್ನು ನೀವು ಮಾಡಿಕೊಳ್ಳುವುದು ಉತ್ತಮ.
ಸಿಂಹ ರಾಶಿ: ಇಂದು ಸಾಮಾಜಿಕ ಕೂಟಗಳಲ್ಲಿ ಭಾಗವಹಿಸಲು ಅವಕಾಶ ಸಿಗುವುದು. ಹಣವನ್ನು ಉಳಿಸುವ ನಿಮ್ಮ ಪ್ರಯತ್ನಕ್ಕೆ ಇಂದು ಅಡೆತಡೆಗಳನ್ನು ಬರಬಹುದು. ಯಾವುದೇ ಅನ್ಯ ಆಲೋಚನೆಗೆ ಅವಕಾಶವಿಲ್ಲದೇ ಇರಬಹುದು. ಆರೋಗ್ಯದ ಬಗ್ಗೆ ಜಾಗರೂಕತೆ ಅಗತ್ಯ. ನಿಮ್ಮ ಆಸಕ್ತಿಯಿಲ್ಲದ ಏನಾದರೂ ಇರಬಹುದು. ವೈವಾಹಿಕ ಜೀವನವು ಆಹ್ಲಾದಕರ ಮತ್ತು ಉತ್ತೇಜಕವಾಗಿರುತ್ತದೆ. ಮಿತವಾಗಿ ಕಡಿಮೆ ತೆಗೆದುಕೊಳ್ಳಿ. ಲೋಕವ್ಯವಹಾರದಲ್ಲಿ ಆಸಕ್ತಿ ತೋರಿಸಲಾರಿರಿ. ಅಧಿಕ ಲಾಭದ ನಿರೀಕ್ಷೆಯಲ್ಲಿ ಹೊರಟ ನಿಮಗೆ ಅಲ್ಪ ಲಾಭವಾಗಬಹುದು. ಜಾಣ್ಮೆಯಿಂದ ಸರ್ಕಾರದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಸ್ವಂತ ವಾಹನದ ದುರಸ್ತಿಗೆ ಖರ್ಚಾಗಬಹುದು. ಇಂದು ಸ್ಥೈರ್ಯವನ್ನು ಕಳೆದುಕೊಳ್ಳುವಿರಿ. ನಿಷ್ಠೆಯನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಶ್ರದ್ಧೆಯಿಂದ ಮಾಡುವ ಕಾರ್ಯಕ್ಕೆ ವಿಘ್ನಗಳು ಬರಬಹುದು.
ಕನ್ಯಾ ರಾಶಿ: ನಿಮ್ಮ ದೌರ್ಬಲ್ಯಗಳನ್ನು ಹತೋಟಿ ತರುವುದು ಕಷ್ಟವಾಗುವುದು. ಇದೇ ಕಾರಣಕ್ಕೆ ಅಪಮಾನವನ್ನು ಎದುರಿಸಬೇಕಾಗುವುದು. ಭೂಮಿ ಮಾರಾಟದ ಬಗ್ಗೆ ಯೋಚಿಸುತ್ತಿದ್ದರೆ ಇಂದು ಉತ್ತಮವಾಗಿರುವುದು. ನಿಮ್ಮ ಪ್ರೀತಿಪಾತ್ರರ ಭಾವನೆ ಜೊತೆ ಸಹಾನುಭೂತಿ ಹೊಂದುವಿರಿ. ಆರ್ಥಿಕ ಪರಿಸ್ಥಿತಿಯು ಭಾಗಶಃ ಸುಧಾರಿಸುತ್ತದೆ. ಭವಿಷ್ಯದ ಬಗ್ಗೆ ಮನಸ್ಸು ಚಿಂತಿಸಲಿದೆ. ಮಕ್ಕಳ ಜವಾಬ್ದಾರಿಗಳನ್ನು ಪೂರೈಸುವ ಪ್ರಯತ್ನಗಳು ಯಶಸ್ವಿಯಾಗುತ್ತವೆ. ಸೃಜನಾತ್ಮಕ ಕೆಲಸಗಳಲ್ಲಿ ಪ್ರಗತಿ ಇರುತ್ತದೆ. ಮಿತ್ರನ ಬಗ್ಗೆ ಯಾರಾದರೂ ಸಲ್ಲದ ಮಾತನಾಡಬಹುದು. ಕಾರ್ಯದ ವಿಳಂಬದಿಂದ ಮನೆಗೆ ಬರುವುದು ವಿಳಂಬವಾಗುವುದು. ಸಾಮರಸ್ಯದ ಕೊರತೆ ಎದ್ದು ಕಾಣಿಸುವುದು. ಅತಿಯಾದ ಕೋಪದಿಂದ ನಿಮ್ಮ ವ್ಯವಹಾರವು ಬುಡಮೇಲಾದೀತು. ಲೆಕ್ಕ ಪರಿಶೋಧಕರು ಒತ್ತಡದಲ್ಲಿ ಇರುವರು. ಸಂಗಾತಿಯ ಬೇಡಿಕೆಯನ್ನು ನೀವು ಪೂರೈಸಬೇಕಾದೀತು. ವಿದ್ಯಾರ್ಥಿಗಳು ವಿಶೇಷ ತರಬೇತಿಯನ್ನು ಪಡೆಯಬೇಕಾಗಬಹುದು.
ತುಲಾ ರಾಶಿ: ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಅತಿಯಾದಂತೆ ಯಾರಿಗಾದರೂ ಅನ್ನಿಸಬಹುದು. ನಿಮ್ಮ ನಿರ್ಧಾರಗಳು ಇಂದು ಹೆಚ್ಚುವರಿ ಹಣಕಾಸಿನ ಲಾಭವನ್ನು ತರಬಹುದು. ನಿಮ್ಮ ಸಂಗಾತಿಯ ಜೊತೆ ಗುಣಮಟ್ಟದ ಸಮಯವನ್ನು ಕಳೆಯಲು ಹಾಗೂ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶ ದೊರೆಯಲಿದೆ. ಇತರರ ಸಹಕಾರವನ್ನು ತೆಗೆದುಕೊಳ್ಳುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಸಂಪತ್ತು, ಕೀರ್ತಿ ಮತ್ತು ವೈಭವದಲ್ಲಿ ಹೆಚ್ಚಳವಾಗುತ್ತದೆ. ಸರಕಾರದಿಂದ ಸಹಕಾರ ದೊರೆಯಲಿದೆ. ಶಿಕ್ಷಣವನ್ನು ನೀಡುವ ವ್ಯವಸ್ಥೆಯಲ್ಲಿ ಇದ್ದರೆ ಹೆಚ್ಚು ಉಪಯುಕ್ತವಾಗುವುದು. ಬೆಳಗಿನಿಂದಲೇ ಮನಸ್ಸು ಸರಿ ಇಲ್ಲದ ಕಾರಣ ಎಲ್ಲದಕ್ಕೂ ಸಿಟ್ಟು ಮಾಡುವಿರಿ. ಮಕ್ಕಳಿಗಾಗಿ ಹಣವನ್ನು ಇಡುವಿರಿ. ಸ್ನೇಹಿತರ ಸಹವಾಸದಿಂದ ದುರಭ್ಯಾಸವು ರೂಢಿಯಾಗಬಹುದು. ಆಲಸ್ಯದಿಂದ ಸಮಯವನ್ನು ಹಾಳುಮಾಡಿಕೊಳ್ಳುವಿರಿ. ಮಿತ್ರರಿಂದ ಧನದ ವಿಚಾರದಲ್ಲಿ ಮೋಸಹೋಗುವಿರಿ.
ವೃಶ್ಚಿಕ ರಾಶಿ: ಇಂದು ನಿಮಗೆ ಅತ್ಯಾಕರ್ಷಕ ಅವಕಾಶಗಳು ಅನಿರೀಕ್ಷಿತವಾಗಿ ಸಿಗಲಿದೆ. ನಿಮ್ಮ ಸಂಗಾತಿಯಿಂದ ನಿಮಗೆ ಸಂತೋಷವು ಬೇಕೆನಿಸುವುದು. ಇಂದು ಎದುರಾಗುವ ಸವಾಲುಗಳು ನಿಮಗೆ ಉದ್ಯೋಗದಲ್ಲಿ ಸ್ಥಿರತೆಯನ್ನು ತೋರಿಸುತ್ತದೆ. ನೀವು ಸರ್ಕಾರದಿಂದ ಬೆಂಬಲವನ್ನು ಪಡೆಯಬಹುದು. ಕುಟುಂಬದ ಜವಾಬ್ದಾರಿಗಳನ್ನು ಪೂರೈಸಲಾಗುವುದು. ಆರ್ಥಿಕ ಅಂಶವು ಬಲವಾಗಿರುತ್ತದೆ. ಉಡುಗೊರೆಗಳು ಅಥವಾ ಗೌರವ ಹೆಚ್ಚಾಗುತ್ತದೆ. ಪರಸ್ಪರ ಸಂಬಂಧಗಳು ಮಧುರವಾಗಿರುತ್ತದೆ. ಭೂಮಿಯ ವ್ಯವಹಾರವು ನಿಮಗೆ ಶಕ್ತಿಯನ್ನು ತಂದೀತು. ಅವಶ್ಯಕವಿರುವದನ್ನು ಇಟ್ಟುಕೊಂಡು ಇನ್ನೊಬ್ಬರಿಗೂ ಕೊಡಿ. ಅವರ ಬಗ್ಗೆ ಅತಿಯಾದ ಕಾಳಜಿ ಬೇಕು. ವೃತ್ತಿಯಲ್ಲಿ ಒಂದೇ ಕೆಲಸವನ್ನು ಇಬ್ಬರು ಮಾಡಲು ಹೋಗಿ ವೈಮನಸ್ಯ ಉಂಟಾಗುವುದು. ಉದ್ಯೋಗದಲ್ಲಿ ನಿರಂತರ ಯಾವುದಾದರೂ ಸಮಸ್ಯೆಯು ಬಾಧಿಸುತ್ತಿದ್ದು ದೈವಜ್ಞರಿಂದ ಪರಿಹಾರ ಪಡೆಯಿರಿ.
ಧನು ರಾಶಿ: ಇಂದು ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಮಾತ್ರವಲ್ಲದೆ, ವೈಯಕ್ತಿಕವಾಗಿಯೂ ಒತ್ತಡ ಹೆಚ್ಚಿರುವುದು. ನಿಮ್ಮ ಪೋಷಕರ ಆರೋಗ್ಯಕ್ಕೆ ಸಂಬಂಧಿಸಿದಂತೆ ವೆಚ್ಚಗಳು ಹೆಚ್ಚಾಗಬಹುದು. ಇದು ನಿಮ್ಮ ಹಣಕಾಸಿನ ಸ್ಥಿತಿಯ ಮೇಲೆ ಪರಿಣಾಮವನ್ನು ಬೀರಬಹುದು. ಬೌದ್ಧಿಕ ಕಸರತ್ತಿನಿಂದ ಮಾಡಿದ ಕೆಲಸವು ಪೂರ್ಣಗೊಳ್ಳುತ್ತದೆ. ಸಂಬಂಧಗಳಲ್ಲಿ ನಿಕಟತೆ ಇರುತ್ತದೆ. ವ್ಯಾಪಾರದ ಖ್ಯಾತಿ ಹೆಚ್ಚಾಗುತ್ತದೆ. ಸಂಪತ್ತು, ಕೀರ್ತಿ ಮತ್ತು ವೈಭವದಲ್ಲಿ ಧನಾತ್ಮಕ ಪರಿವರ್ತನೆ ಇರಲಿದೆ. ಸೃಜನಾತ್ಮಕ ಪ್ರಯತ್ನಗಳು ಫಲ ನೀಡುತ್ತವೆ. ವಾಹನ ಚಾಲನೆಯನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕಾಗುವುದು. ಉದ್ವೇಗದಿಂದ ಏನನ್ನಾದರೂ ಮಾಡಲು ಅನೀತಿ ಮಾರ್ಗದಲ್ಲಿ ಹೋಬೇಕಾದೀತು. ಕೋಪದಿಂದ ಕೆಲವು ಸುಂದರ ಕ್ಷಣವನ್ನು ಕಳೆದುಕೊಳ್ಳುವಿರಿ. ಸಂಗಾತಿಯ ಆಗಮನವನ್ನು ನಿರೀಕ್ಷಿಸುವಿರಿ. ಬಂಧುಗಳ ಆಸ್ತಿಯ ನಿಮಗೆ ಸಿಗಬಹುದು. ಒತ್ತಡಕ್ಕೆ ಮಣಿದು ಇಷ್ಟವಿಲ್ಲದ ಕೆಲಸವನ್ನು ಮಾಡಬೇಕಾಗುವುದು. ಬಂಧುಗಳಿಂದ ಆದ ಮನಸ್ತಾಪವನ್ನು ಮರೆಯಲಾರಿರಿ.
ಮಕರ ರಾಶಿ: ನಿಮಗೆ ಬೇಕಾದ ಹಣವನ್ನು ಹೊಂದಿಸಲು ಸೂಕ್ತ ವ್ಯಕ್ತಿಗಳ ಅನ್ವೇಷಣೆ ಮಾಡವಿರಿ. ಕೆಲಸ ಮೇಲೆ ನಿಮ್ಮ ಗಮನ ಕೇಂದ್ರೀಕರಿಸುವುದನ್ನು ಖಚಿತಪಡಿಸಿಕೊಳ್ಳಿ. ವ್ಯಾಪಾರದ ಆದ ಸ್ವಲ್ಪ ಅಜಾಗರೂಕತೆಯೂ ಭಾರೀ ನಷ್ಟವನ್ನು ಉಂಟುಮಾಡಬಹುದು. ಸಂಪತ್ತು, ಖ್ಯಾತಿ ಮತ್ತು ವೈಭವದಲ್ಲಿ ಹೆಚ್ಚುವುದು. ಆದರೆ ವ್ಯರ್ಥ ಖರ್ಚುಗಳನ್ನು ತಪ್ಪಿಸಬೇಕಾಗುತ್ತದೆ. ಹಣಕಾಸಿನ ವಿಷಯಗಳಲ್ಲಿ ಅಪಾಯಗಳನ್ನು ತೆಗೆದುಕೊಳ್ಳಬೇಡಿ. ಅನಗತ್ಯ ಸಮಸ್ಯೆಗಳು ಮತ್ತು ತೊಡಕುಗಳು ಉಂಟಾಗುತ್ತವೆ. ಎಂತಹ ಒತ್ತಡವಿದ್ದರೂ ತಾಳ್ಮೆಯಿಂದ ಕೆಲಸ ಮಾಡಿ. ಕಾರ್ಯಕ್ರಮದಲ್ಲಿ ದುಂದುವೆಚ್ಚದಂತೆ ಕೆಲವು ತೋರೀತು. ವಿವಾದಗಳನ್ನು ಮಾಡುವ ಸಂದರ್ಭವು ಬಂದರೂ ಅದರಿಂದ ದೂರವಿರಿ. ಸಹೋದರರ ಬಗೆಗಿನ ನಿಮ್ಮ ನಿಲುವು ಸರಿ ಇರದು. ಅಪರಿಚಿತರ ಬಂಧನದಿಂದ ನೀವು ಮುಕ್ತಾರಾಗಲು ಕಷ್ಟವಾಗಬಹುದು. ಕೃಷಿಯ ವ್ಯವಹಾರದಲ್ಲಿ ಲಾಭವು ಬರವಂತೆ ಆಲೋಚನೆ ಮಾಡುವಿರಿ.
ಕುಂಭ ರಾಶಿ: ನಿಮ್ಮ ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಬರುವುದು ಸಹಜವೇ. ಆದರೆ ಅದನ್ನು ಎದುರಿಸಬೇಕೋ ಶಾಂತಗೊಳಿಸಬೇಕೋ ಎನ್ನುವುದು ನಿಮಗೆ ಸೇರಿದ್ದು. ನಿಮ್ಮ ಸ್ನೇಹಿತರು ನಿಮ್ಮ ಸಹಾಯಕ್ಕೆ ಬರಬಹುದು. ಗುಣಮಟ್ಟದ ಹೂಡಿಕೆಯು ನಿಮಗೆ ಲಾಭವನ್ನು ತರಲಿದೆ. ನಿಮ್ಮ ಅನಾರೋಗ್ಯವು ಕಡಿಮೆ ಆಗುವುದು, ನಿಮ್ಮ ಮನಸ್ಸು ಹಗುರಾಗುವುದು. ಆರ್ಥಿಕವಾಗಿ ಸುಧಾರಣೆಯಿಂದ ಧೈರ್ಯವು ಬರಲಿದೆ. ನಿಮ್ಮ ಸಂಗಾತಿಯಿಂದ ನೀವು ಬೆಂಬಲ ಮತ್ತು ಒಡನಾಟವನ್ನು ಪಡೆಯುತ್ತೀರಿ. ನೀವು ಸೃಜನಶೀಲ ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ವ್ಯಾಪಾರದಲ್ಲಿ ಖ್ಯಾತಿಯನ್ನು ಬಯಸುವಿರಿ. ಹೊಸ ಸಂಬಂಧಗಳು ವ್ಯವಹಾರದಿಂದ ಇಂದು ಆಗಲಿದೆ. ಕೋಪವನ್ನು ಕಡಿಮೆ ಮಾಡಿಕೊಳ್ಳಲು ನಿಮ್ಮ ಸತತ ಪ್ರಯತ್ನವು ಫಲಿಸೀತು. ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿಯನ್ನು ಕಾಣಲು ಸಾಧ್ಯ. ಸಹೋದರರ ಶೀತಲ ಸಮರವು ತಿಳಿಯಾಗಬಹುದು ವ್ಯಾಪಾರದ ನಿರ್ಲಕ್ಷ್ಯದಿಂದ ಅಲ್ಪ ನಷ್ಟವು ಸಂಭವಿಸಬಹುದು.
ಮೀನ ರಾಶಿ: ನಿಮ್ಮ ಬಹಳ ದಿನಗಳ ಚಿಂತೆಗೆ ಇಂದು ಮುಕ್ತಿ ಸಿಗುವುದು. ನೀವು ಜನರ ಆಸೆಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದು, ವ್ಯವಹಾರದಲ್ಲಿ ಅದನ್ನು ಪ್ರಯೋಗಿಸುವಿರಿ. ಇಂದು ಅತಿಯಾಗಿ ಖರ್ಚು ಮಾಡದಿರುವುದು ಒಳ್ಳೆಯದು. ನಿಮ್ಮ ಸಂಗಾತಿಯ ವಿಷಯದಲ್ಲಿ ಅತಿಯಾಗಿ ವರ್ತಿಸದಿರುವುದು ಉತ್ತಮ. ನೀವು ಕುಟುಂಬ ಸದಸ್ಯರಿಂದ ಒತ್ತಡಕ್ಕೆ ಒಳಗಾಗಬಹುದು. ಹಣಕಾಸಿನ ವಿಷಯಗಳಲ್ಲಿ ಜಾಗರೂಕರಾಗಿರಿ. ಆರೋಗ್ಯದ ಬಗ್ಗೆ ಉದಾಸೀನ ಮಾಡಬೇಡಿ. ಸರಕಾರದಿಂದ ಅರ್ಥಿಕ ಬೆಂಬಲ ದೊರೆಯಬಹುದು. ದೂರದ ಮಿತ್ರರ ಸಂಪರ್ಕದಿಂದ ಕೆಲವು ಸಮಸ್ಯೆಗಳು ಬಗೆಹರಿಯಬಹುದು. ತೆರೆದ ಮನಸ್ಸಿನಿಂದ ನೀವು ಯಾವ ಕಾರ್ಯವನ್ನೂ ಮಾಡುವುದೂ ಕಷ್ಟವಾದೀತು. ಅತಿಯಾದ ನಂಬಿಕೆಯು ಹುಸಿಯಾದ ಕಾರಣ ಪಶ್ಚಾತ್ತಾಪಪಡುವಿರಿ.
ಲೋಹಿತ ಹೆಬ್ಬಾರ್ – 8762924271 (what’s app only)