ಈ ವಾರ ಸೂರ್ಯ, ಶುಕ್ರರು ರಾಶಿಯನ್ನು ಬದಲಾಯಿಸಲಿದ್ದಾರೆ; 12 ರಾಶಿಯವರ ಮೇಲೆ ಪ್ರಭಾವ

| Updated By: Rakesh Nayak Manchi

Updated on: Mar 10, 2024 | 10:33 PM

ಈ ವಾರವು ಸೂರ್ಯ ಹಾಗೂ ಶುಕ್ರರು ರಾಶಿಯನ್ನು ಬದಲಾಯಿಸಲಿದ್ದಾರೆ. ಈ ಗ್ರಹಗಳು ಹನ್ನೆರಡು ರಾಶಿಗಳ ಮೇಲೆ‌ ಸಕಾರಾತ್ಮಕವಾಗಿಯೂ ನಕಾರಾತ್ಮಕವಾಗಿಯೂ ಪರಿಣಾಮವನ್ನು ಬೀರಲಿವೆ. ಅದಕ್ಕೆ ಬೇಕಾದ ಆಚಣೆಗಳಿಂದ ಬರಬಹುದಾದ ಅನನುಕೂಲವನ್ನು ಪರಿಹರಿಸಿಕೊಳ್ಳಿ.

ಈ ವಾರ ಸೂರ್ಯ, ಶುಕ್ರರು ರಾಶಿಯನ್ನು ಬದಲಾಯಿಸಲಿದ್ದಾರೆ; 12 ರಾಶಿಯವರ ಮೇಲೆ ಪ್ರಭಾವ
ಈ ವಾರ ಸೂರ್ಯ, ಶುಕ್ರರು ರಾಶಿಯನ್ನು ಬದಲಾಯಿಸಲಿದ್ದಾರೆ; 12 ರಾಶಿಯವರ ಮೇಲೆ ಪ್ರಭಾವ
Image Credit source: ganeshaspeaks
Follow us on

ಈ ವಾರವು ಸೂರ್ಯ ಹಾಗೂ ಶುಕ್ರರು ರಾಶಿಯನ್ನು ಬದಲಾಯಿಸಲಿದ್ದಾರೆ. ಈ ಗ್ರಹಗಳು ಹನ್ನೆರಡು ರಾಶಿಗಳ ಮೇಲೆ‌ ಸಕಾರಾತ್ಮಕವಾಗಿಯೂ ನಕಾರಾತ್ಮಕವಾಗಿಯೂ ಪರಿಣಾಮವನ್ನು ಬೀರಲಿವೆ. ಅದಕ್ಕೆ ಬೇಕಾದ ಆಚಣೆಗಳಿಂದ ಬರಬಹುದಾದ ಅನನುಕೂಲವನ್ನು ಪರಿಹರಿಸಿಕೊಳ್ಳಿ.

ಮೇಷ ರಾಶಿ : ಮಾರ್ಚ್ ತಿಂಗಳ ಎರಡನೇ ವಾರವು ಇದಾಗಿದೆ. ಗ್ರಹಗಳ ಪರಿವರ್ತನೆಯು ನಿಮ್ಮ‌ ಮೇಲೆ ಉತ್ತಮ‌ ಪರಿಣಾಮದ ಜೊತೆ ಸ್ವಲ್ಪ ಮಟ್ಟಿನ ಏರಿಳಿತವೂ ಇರಲಿದೆ.‌ ಧೈರ್ಯದಿಂದ‌ ಮುನ್ನಡೆದು ಸಾಧಿಸುವುದು ಮುಖ್ಯ. ನಿಮ್ಮ ರಾಶಿಯಲ್ಲಿಯೇ ಗುರುವು ಇರುವುದು ಮಾನಸಿಕವಾಗಿ ದೃಢತೆಯನ್ನು ಕೊಡುವನು. ದ್ವಾದಶದಲ್ಲಿ ಬುಧನು ನೀಚನಾಗಿದ್ದಾನೆ. ಬಂಧುಗಳಿಂದ‌ ಕಷ್ಟವಾಗಬಹುದು. ಏಕಾದಶದಲ್ಲಿ ಶುಕ್ರ ಹಾಗೂ ಕುಜರು ಸಂಗಾತಿಯಿಂದ ಲಾಭವನ್ನು ನಿರೀಕ್ಷಿಸಬಹುದು. ಸುಬ್ರಹ್ಮಣ್ಯನ ಆರಾಧನೆಯಿಂದ ನೆಮ್ಮದಿಯು ಸಿಗುವುದು.

ವೃಷಭ ರಾಶಿ : ತಿಂಗಳ ಎರಡನೇ ವಾರವು ಅನನುಕೂಲವಾಗಲಿದೆ. ಏಕಾದಶದಲ್ಲಿ ಸೂರ್ಯ, ಬುಧ, ರಾಹುವಿದ್ದರೂ ಬುಧನು ನೀಚನಾದ ಕಾರಣ ಬಂಧುಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ. ದ್ವಾದಶದಲ್ಲಿ ಗುರುವು ಸದ್ಯ ಅನನುಕೂಲನಾಗಿದ್ದು ನಿಮ್ಮ ಪ್ರಯತ್ನಕ್ಕೆ ಪೂರ್ಣ ಫಲವು ಸಿಗದು. ದಶಮದಲ್ಲಿ ಶುಕ್ರ, ಕುಜ, ಶನಿಗಳು ಉದ್ಯೋಗದಲ್ಲಿ ಶಿಸ್ತನ್ನು ಪಾಲಿಸುವಿರಿ. ಹೊಸ ಉದ್ಯೋಗದ ಬಗ್ಗೆಯೂ ಆಲೋಚನೆ ಇರುವುದು. ವಿದ್ಯಾಭ್ಯಾಸಕ್ಕೆ ಅಡ್ಡಿಗಳು ಬರಬಹುದು.

ಮಿಥುನ ರಾಶಿ : ಈ ರಾಶಿಯವರಿಗೆ ಈ ತಿಂಗಳ ಎರಡನೇ ವಾರದ ಗ್ರಹಗತಿಗಳು ಅಲ್ಪ ಅನುಕೂಲವನ್ನು ಮಾಡಲಿವೆ. ನವಮದಲ್ಲಿ ಶುಕ್ರ, ಕುಜರು ಶನಿಯ ಜೊತೆಗಿದ್ದಾರೆ. ಸಂಗಾತಿಯಿಂದ ಹೆಚ್ಚಿನ ಲಾಭವು ಸಿಗಲಿದೆ. ದಶಮದಲ್ಲಿ ಸೂರ್ಯ, ಬುಧ, ರಾಹುವು ಇರುವ ಕಾರಣ ಉದ್ಯೋಗದಲ್ಲಿ ಪ್ರಗತಿ ಅಷ್ಟಾಗಿರದು. ಗುರುವು ಏಕಾದಶದಲ್ಲಿ ಇದ್ದು ಅನನುಕೂಲತೆಯು ಕಡಿಮೆ‌ ಆಗಲಿದೆ. ಕೇತವು ಚತುರ್ಥದಲ್ಲಿ ಇರುವುದು ತಾಯಿಯ ಆರೋಗ್ಯದಲ್ಲಿ ತೊಂದರೆಯಾಗಬಹುದು. ಗಣಪತಿಯ ಸ್ತೋತ್ರವನ್ನು ಮಾಡಿ.

ಕಟಕ ರಾಶಿ : ಮಾರ್ಚ್ ತಿಂಗಳ ಎರಡನೇ ವಾರವು ಇದಾಗಿದ್ದು ಮಿಶ್ರ‌ಫಲವು ಇರುವುದು. ಅಷ್ಟಮದಲ್ಲಿ ಶುಕ್ರ, ಕುಜ ಹಾಗೂ ಶನಿಯು ಇರಲಿದ್ದು ಸಂಗಾತಿಯ ಮಾನಸಿಕ ಸ್ಥಿತಿಯು ಬದಲಾಗುವುದು. ಶತ್ರುಗಳಂತೆ ಕಾಣಿಸಬಹುದು. ಬುಧನು ನೀಚ ಸ್ಥಾನದಲ್ಲಿ ಇರುವುದರಿಂದ ಬಂಧುಗಳ ವಿಚಾರದಲ್ಲಿ ಪರಸ್ಪರ ಸದ್ಭಾವದ ಕೊರತೆ ಕಾಣಿಸುವುದು. ಉದ್ಯೋಗದಲ್ಲಿ ಯಾವುದೇ ಏರಿಳಿತಗಳು ಹೆಚ್ಚಾಗಿರದು. ನಿಮ್ಮ ಸಾಮರ್ಥ್ಯವನ್ನು ತೋರಿಸಲು ಯಾವುದೋ ಮಾರ್ಗವನ್ನು ಅನುಸರಿಸುವಿರಿ. ಗ್ರಹನಾಯಕನಾದ ಸೂರ್ಯನ ಅನುಗ್ರಹ ಪಡೆಯಿರಿ.

ಸಿಂಹ ರಾಶಿ : ಈ ತಿಂಗಳ ಎರಡನೇ ವಾರವು ನಿಮಗೆ ಮಿಶ್ರಫಲದಾಯಕವಾಗಿದೆ. ದ್ವಾದಶದಲ್ಲಿ ಕೇತು, ಸಪ್ತಮದಲ್ಲಿ ಶುಕ್ರ, ಕುಜ, ಶನಿ, ಅಷ್ಟಮದಲ್ಲಿ ರಾಹು, ಸೂರ್ಯ, ಬುಧರು ಇದ್ದಾರೆ. ಪ್ರೇಮಿಗಳ ವಿವಾಹವು ಹಲವರ ವಿರೋಧದ ನಡುವೆಯೂ ನಡೆಯಲಿದೆ. ಬಂಧುಗಳ ಆರೋಗ್ಯ ಕೆಡುವುದು. ತಂದೆಯ ಹದಗೆಟ್ಟ ಆರೋಗ್ಯಕ್ಕೆ ಚಿಕಿತ್ಸೆ ಅಗತ್ಯ. ಮಾತನ್ನು ನಿಮಗೆ ಅನುಕೂಲಗುವಂತೆ ಮಾಡಿಕೊಳ್ಳಿ. ನವಮದಲ್ಲಿ ಇರುವ ಗುರುವಿನಿಂದ ಹಿರಿಯರ ಪ್ರೀತಿ ಸಿಗುವುದು. ಗೌರೀಶಂಕರರ ಉಪಾಸನೆ ಮಾಡಿ.‌ ಮನಸ್ಸು ನೆಮ್ಮದಿಯನ್ನು ಕಾಣುವುದು.

ಕನ್ಯಾ ರಾಶಿ : ಈ ತಿಂಗಳ ಎರಡನೇ ವಾರವು ಇದಾಗಿದ್ದು ಅಶುಭಫಲವು ಹೆಚ್ಚು ಕಾಣಿಸುವುದು. ನಿಮ್ಮ ರಾಶ್ಯಧಿಪತಿಯಾದ ಬುಧನು ನೀಚಸ್ಥಾನದಲ್ಲಿ ಇದ್ದು ಹಲವು ಅನನುಕೂಲವನ್ನು ಮಾಡಿಸುವನು. ನಿಶ್ಚಿತವಾದ ವಿವಾಹವು ಮುರಿದುಹೋಗಬಹುದು. ಬಂಧುಗಳು ನಿಮ್ಮ ಬಗ್ಗೆ ಸದಭಿಪ್ರಾಯವನ್ನು ಕಳೆದುಕೊಳ್ಳುವರು. ನಿಮ್ಮ ರಾಶಿಯಲ್ಲಿಯೇ ಕೇತುವು ಇರುವುದು ದೈಹಿಕವಾದ ತೊಂದರೆಗಳು ಕಾಣಿಸಿಕೊಳ್ಳುವವುದು.‌ ಶತ್ರುಬಾಧೆಯನ್ನು ಎದುರಿಸುವ ಅವಶ್ಯಕತೆಯೂ ಇರುವುದು. ಗುರುವೂ ದುರ್ಬಲನಾಗಿದ್ದಾನೆ. ನವಗ್ರಹ ಸ್ತೋತ್ರವನ್ನು ಪಠಿಸಿ, ನವಗ್ರಹಧಾನ್ಯವನ್ನು ದಾನ ಮಾಡಿ.

ತುಲಾ ರಾಶಿ : ಈ ರಾಶಿಯವರಿಗೆ ಮಾರ್ಚ್ ತಿಂಗಳ ಎರಡನೇ ವಾರವು ಸ್ವಲ್ಪ ಅನನುಕೂಲವು ಆಗಬಹುದು. ಎಲ್ಲ ಗ್ರಹಗಳೂ ಅನುಕೂಲದಲ್ಲಿ ಇದ್ದರೂ ಸಣ್ಣ ತೊಂದರೆಗಳು ಯಾವ ಕಡೆಯಿಂದಲಾದರೂ ಬರಬಹುದು. ಬಂಧುಗಳು ನಿಮ್ಮ ಮಾತಿನಿಂದ ಶತ್ರುಗಳಾಗುವರು. ನಿಮ್ಮ ಕಾರ್ಯಕ್ಕೆ ವಿಘ್ನವನ್ನು ಅವರೇ ಕೊಡುವರು. ಎಚ್ಚರಿಕೆಯಿಂದ ನಿಭಾಯಿಸುವ ಅಗತ್ಯವಿದೆ. ದ್ವಾದಶದಲ್ಲಿ ಕೇತುವುದು ಬೇಡ ಕಾರ್ಯಕ್ಕೆ ಸುಮ್ಮನೆ ಸಂಪತ್ತನ್ನು ವ್ಯರ್ಥಮಾಡಿಸುವನು. ವಿದ್ಯಾರ್ಥಿಗಳು ಪ್ರೇಮದಲ್ಲಿ ಬೀಳುವ ಸಾಧ್ಯತೆ ಇದೆ. ನಿಮ್ಮ ಸ್ಥಿರವಾದ ಮನಸ್ಸೂ ಚಂಚಲವಾಗುವುದು. ಲಲಿತಾತ್ರಿಪುರಸುಂದರಿಯ ಆರಾಧನೆಯನ್ನು ಮಾಡಿ.

ವೃಶ್ಚಿಕ ರಾಶಿ : ಈ ತಿಂಗಳ ಎರಡನೇ ವಾರವು ಈ ರಾಶಿಯವರಿಗೆ ಮಿಶ್ರಫಲವಿದೆ. ಚತುರ್ಥದಲ್ಲಿ ಶುಕ್ರ ಹಾಗೂ ಕುಜರು ಶನಿಯ ಜೊತೆ ಇರುವ ಕಾರಣ ಮನೆಯ ಕೆಲಸವು ನಿಧಾನವಾಗುವುದು. ಪಂಚಮದಲ್ಲಿ ಸೂರ್ಯ ಹಾಗೂ ಬುಧರು ರಾಹುವಿನ ಜೊತೆ ಇದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಅಡೆತಡೆಗಳು ಬರಬಹುದು. ಬುದ್ಧಿಯೂ ಯಾವುದನ್ನೂ ಸೂಚಿಸದೇ ಇರಬಹುದು. ಷಷ್ಠದಲ್ಲಿ ಗುರುವಿರುವುದು ನಿಮಗೆ ಅನುಕೂಲವಲ್ಲ. ಏಕಾದಶದಲ್ಲಿರುವ ಕೇತುವು ಪರಿಶ್ರಮದಿಂದ ಸಂಪಾದನೆಯಾಗುವುದು. ಗುರುವಿನ ದರ್ಶನ, ಅನುಗ್ರಹದ ಅಗತ್ಯವು ಹೆಚ್ಚಿರುವುದು.

ಧನು ರಾಶಿ : ತಿಂಗಳ ಎರಡನೇ ವಾರವಾಗಿದೆ. ಗ್ರಹಗತಿಗಳು ಬದಲಾವಣೆಯಾಗಿ ಮಿಶ್ರಫಲವು ಸಿಗಲಿದೆ. ತೃತೀಯದಲ್ಲಿ ಶುಕ್ರ, ಕುಜ ಹಾಗೂ ಶನಿಯು ಇದ್ದು ತಂತ್ರಜ್ಞರಿಗೆ ಹೆಚ್ಚು ಅನುಕೂಲಕರವಾಗಿದೆ. ಸೂರ್ಯ, ಬುಧ ಹಾಗೂ ರಾಹುವು ಚತುರ್ಥದಲ್ಲಿ ಇರುವುದರಿಂದ ಕೌಟುಂಬಿಕ ಸ್ಥಳಗಳಲ್ಲಿ ಹೊಂದಾಣಿಕೆ ಕಡಿಮೆಯಾಗಲಿದೆ. ಬಂಧುಗಳ ಕಿರಿಕಿರಿ ಅಧಿಕವಾದೀತು. ಪಂಚಮದಲ್ಲಿ ಗುರುವು ಇರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಪೂರಕ ವ್ಯವಸ್ಥೆಯನ್ನು ಮಾಡಿಸುವಿರಿ. ದಶಮದಲ್ಲಿ ಕೇತುವು ನಿಮ್ಮ ಕಾರ್ಯದಲ್ಲಿ ಮಾನಸಿಕ ಅಸಮತೋಲನವನ್ನು ಮಾಡಿಸಬಹುದು. ವಿಷ್ಣುವಿನ ಸ್ಮರಣೆ ಅಗತ್ಯ.

ಮಕರ ರಾಶಿ : ಈ ತಿಂಗಳ ಎರಡನೇ ವಾರವು ಗ್ರಹಗತಿಗಳ ಬದಲಾವಣೆಯಿಂದ ನಿಮ್ಮ ಮೇಲೆ‌ ಪರಿಣಾಮ ಬೀರಲಿದೆ. ದ್ವಿತೀಯದಲ್ಲಿ ಶುಕ್ರ, ಕುಜ, ಶನಿ ಇದ್ದರೆ, ತೃತೀಯದಲ್ಲಿ ಸೂರ್ಯ, ಬುಧ, ರಾಹುಗಳಿದ್ದಾರೆ. ಇನ್ನು ಚತುರ್ಥದಲ್ಲಿ ಗುರುವು ಇದ್ದಾನೆ. ನವಮದಲ್ಲಿ ಕೇತು. ಹೀಗೆ ಈ ವಾರದ ಗ್ರಹಗತಿಗಳಿದ್ದು ಬುಧನು ನೀಚನಾಗಿದ್ದಾನೆ. ಹಾಗಾಗಿ ಬಂಧುಗಳ ಸಹಕಾರವು ನಿಮಗೆ ಆಗದು. ನೀವು ಎಂತಹ ಬುದ್ಧಿವಂತರಾದರೂ ಈ ವಾರದ ಬೂದಿ ಮುಚ್ಚಿದ ಕೆಂಡದಂತೆ ಇರಬೇಕಾಗುವುದು. ದ್ವಿತೀಯದಲ್ಲಿ ಶುಕ್ರ ಹಾಗೂ ಕುಜರು ಇದ್ದುದರಿಂದ ನಿಮಗಿಂತ ಕಡಿಮೆ‌ ವಿದ್ಯಾವಂತರ ಜೊತೆ ಪ್ರೇಮವಾಗಲಿದೆ. ಲಕ್ಷ್ಮೀನಾರಾಯಣರ ಸ್ತೋತ್ರವನ್ನು ಮಾಡಿ.

ಕುಂಭ ರಾಶಿ : ಇದು ತಿಂಗಳ ಎರಡನೇ ವಾರವಾಗಿದೆ. ನಿಮ್ಮ ರಾಶಿಯಲ್ಲಿ ಶುಕ್ರ, ಕುಜ ಹಾಗೂ ಶನಿಯು ಇದ್ದಾರೆ. ದ್ವಿತೀಯದಲ್ಲಿ ಸೂರ್ಯ, ಬುಧ, ರಾಹುವಿದ್ದರೆ, ತೃತೀಯದಲ್ಲಿ ದೇವಗುರು ಬೃಹಸ್ಪತಿ ಇದ್ದಾನೆ. ಹಾಗೆಯೇ ಅಷ್ಟಮದಲ್ಲಿ ಕೇತುವು ಇರಲಿದ್ದಾನೆ. ದ್ವಿತೀಯದಲ್ಲಿ ಬುಧನಿದ್ದು ನೀಚನಾಗಿದ್ದಾನೆ. ಸ್ಥಾನ ಉತ್ತಮವಿದ್ದರೂ ಜೊತೆಗಿರುವವರೂ ಉತ್ತಮರಿದ್ದರೂ ನಿಮಗೆ ಕಿರಿಕಿರಿ ಎನಿಸುವುದು. ಕುಜ ಶುಕ್ರರ ಯೋಗವು ಪ್ರೇಮಿಗಳಿಗೆ ಹಿರಿಯರಿಂದ ಒಪ್ಪಿಗೆ ಸಿಗುವುದು. ಗುರುಬಲವು ಕಡಿಮೆ ಇದ್ದುದರಿಂದ ನಿಮ್ಮ ಸಾಮರ್ಥ್ಯ ಕುಗ್ಗುವುದು. ‌ಎಣಿಸಿದಷ್ಟು ವೇಗವು ನಿಮ್ಮ ಯೋಜನೆಗೆ ಸಿಗದು.

ಮೀನ ರಾಶಿ : ಇದು ಮಾರ್ಚ್ ತಿಂಗಳ‌ ಎರಡನೇ ವಾರವಾಗಿದೆ. ಕೆಲವು ಗ್ರಹಗಳು ಬದಲಾವಣೆಯಾಗಲಿದೆ. ಸೂರ್ಯ ಬುಧ, ರಾಹುಗಳು ಈ‌ ರಾಶಿಯಲ್ಲಿ ಇರಲಿವೆ. ಅಷ್ಟೇ ಅಲ್ಲದೇ ದ್ವಾದಶದಲ್ಲಿ ಶುಕ್ರ, ಕುಜ ಹಾಗೂ ಶನಿಯರ ಸಮಾಗಮವೂ ಅಗಲಿದೆ. ದ್ವಿತೀಯದಲ್ಲಿ ಗುರುವಿದ್ದಾನೆ. ಬುಧನು‌ ವ್ಯಯದಲ್ಲಿ‌ ಇರುವುದರಿಂದ ವಿದ್ಯಾಭ್ಯಾಸದಲ್ಲಿ ಹಿನ್ನಡೆಯಗಲಿದೆ. ಮಾತಿನ ಮೇಲೆ ಹಿಡಿತ ಅವಶ್ಯಕ‌. ಏನನ್ನೋ‌ ಹೇಳಲು ಹೋಗಿ ಮತ್ತೇನನ್ನೋ ಹೇಳುವಿರಿ. ಕುಜ ಹಾಗೂ ಶುಕ್ರರು ದ್ವಾದಶದಲ್ಲಿ ಇರುವುದರಿಂದ ಪ್ರೇಮವು ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ.‌ ಇಲ್ಲವೇ ಪ್ರೇಮಕ್ಕೆ‌ ಭಂಗವುಂಟಾಗುವುದು. ಲಕ್ಷೀನಾರಯಣರ ಅನುಗ್ರಹದ ಅವಶ್ಯಕತೆ ಇದೆ.

-ಲೋಹಿತ ಹೆಬ್ಬಾರ್ – 8762924271 (what’s app only)

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:30 pm, Sun, 10 March 24