ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು,
ಧನು ಮಾಸ, ಮಹಾನಕ್ಷತ್ರ: ಪೂರ್ವಾಷಾಢ, ಮಾಸ: ಪೌಷ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ಅಷ್ಟಮೀ,
ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಶಿವ, ಕರಣ: ಭವ, ಸೂರ್ಯೋದಯ ಬೆಳಗ್ಗೆ 07 ಗಂಟೆ 00 ನಿಮಿಷಕ್ಕೆ,
ಸೂರ್ಯಾಸ್ತ ಸಂಜೆ 06 ಗಂಟೆ 17 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:28 ರಿಂದ ಸಂಜೆ 04:53ರ ವರೆಗೆ,
ಯಮಘಂಡ ಕಾಲ ಬೆಳಿಗ್ಗೆ 09:50 ರಿಂದ 11:15 ರವರೆಗೆ, ಗುಳಿಕ ಮಧ್ಯಾಹ್ನ 12:39 ರಿಂದ 02:04 ರವರೆಗೆ.
ಮೇಷ ರಾಶಿ: ಲಾಭದ ವ್ಯವಹಾರಕ್ಕಾಗಿ ಇಂದು ಧಾವಂತ ಕಾಣಿಸುವುದು. ಹಣಕಾಸಿನ ಮುಲಾಜಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಮಿತ್ರರು ನಿಮ್ಮಆಸಕ್ತಿಯ ಕ್ಷೇತ್ರವನ್ನು ಬದಲಿಸಬಹುದು. ವಿನಯದಿಂದ ಇದ್ದರೆ ಅಲ್ಪವಾದರೂ ನಿಮಗೆ ಸಹಾಯವಾದೀತು. ಇಂದಿನ ಕಾರ್ಯವನ್ನು ಮುಂದೂಡುವುದು ಬೇಡ. ಪೋಷಕರನ್ನು ಕಡೆಗಣಿಸಿದ್ದು ನಿಮಗೆ ಪಾಪಪ್ರಜ್ಞೆ ಕಾಡಬಹುದು. ಕುಟುಂಬದಲ್ಲಿ ಸಂತಸದ ವಾತಾವರಣವಿರುವಂತೆ ಮಾಡುವಿರಿ. ವಾಹನವನ್ನು ಚಲಾಯಿಸುವಾಗ ಸ್ವಲ್ಪ ಎಚ್ಚರವಿರಲಿ. ಹೊಸ ವ್ಯಾಪಾರದಲ್ಲಿಯೂ ನಿಮಗೆ ಮನಸ್ಸಾಗಬಹುದು. ಯಂತ್ರಗಳಿಂದ ತೊಂದರೆಯಾಗಬಹುದು. ಬಹಳ ಎಚ್ಚರಿಕೆಯಿಂದ ಕಾರ್ಯವನ್ನು ಮಾಡಿ. ಇಂದು ನಿಮ್ಮದೇ ಸ್ವಂತ ಕಾರ್ಯಗಳು ಇರಲಿದ್ದು, ಬೇರೆ ಕೆಲಸಕ್ಕೆ ಮನಸ್ಸು ಕೊಡುವುದು ಕಷ್ಟವಾದೀತು. ಒತ್ತಾಯದಿಂದ ಕೆಲಸವನ್ನು ಮಾಡಬೇಕಾದೀತು. ಹಂಚಿಕೆಯ ಬಗ್ಗೆಯೂ ಸರಿಯಾದ ಆಲೋಚನೆ ಮಾಡುವಿರಿ.
ವೃಷಭ ರಾಶಿ: ನಿಮ್ಮ ವೃತ್ತಿಯ ಸಂಕಟವನ್ನು ಹೇಳಲಾಗದು. ಕ್ಷಮಿಸುವುದೂ ಒಂದು ದೊಡ್ಡಗುಣವೇ. ಯಾರದೋ ಜಗಳದಲ್ಲಿ ಪ್ರವೇಶ ಮಾಡಿ ಅಪಮಾನದಲ್ಲಿ ಸಿಕ್ಕಿಕೊಳ್ಳಬೇಕಾದೀತು. ಬಂಧುಗಳ ಒಡನಾಟ ನಿಮಗೆ ಸಿಗಲಿದೆ. ಸ್ನೇಹಿತರ ಜಗಳದಲ್ಲಿ ತಲೆ ಹಾಕಿ ಅಪಾಯಕ್ಕೆ ಸಿಕ್ಕಿಕೊಳ್ಳುವಿರಿ. ಹೊಸ ವಿಷಯಗಳತ್ತ ಉತ್ಸಾಹವೇ ಇರಲಿದ್ದು, ಇದು ತಾತ್ಕಾಲಿಕ ಅಷ್ಟೇ. ದಾಂಪತ್ಯದಲ್ಲಿನ ವಿರಸದಿಂದ ಮಾನಸಿಕ ಆರೋಗ್ಯವನ್ನು ಕೆಡಿಸುವುದು. ಶ್ರಮದಿಂದ ನ್ಯಾಯಾಲಯಲ್ಲಿ ಗೆಲುವನ್ನು ಸಾಧಿಸುವಿರಿ. ನಿಮ್ಮಲ್ಲಿ ಅನಾರೋಗ್ಯದ ಭಯವು ಇರುವುದು. ಹಿರಿಯರಿಂದ ನಿಮ್ಮ ಜೀವನಕ್ಕೆ ಮಾರ್ಗದರ್ಶನ ಸಿಗಲಿದೆ. ನೌಕರರಿಲ್ಲದೇ ಉದ್ಯಮಕ್ಕೆ ಅಡ್ಡಿಯಾದೀತು. ಉದ್ಯೋಗದ ಕಾರಣಕ್ಕೆ ಇಂದು ನೀವು ಪ್ರಯಾಣವನ್ನು ಮಾಡಬೇಕಾಗುವುದು. ನಿಶ್ಚಿಂತೆಯಿಂದ ಇರಬೇಕೆಂದುಕೊಂಡರೂ ಕೆಲಸಗಳು ಬರುವುದು. ಮಾತಿನ ತಂತ್ರವು ಫಲಿಸುವುದು. ನಿಮ್ಮ ಕಾರ್ಯಗಳಲ್ಲಿ ಸಾವಧಾನತೆ ಇರಲಿದೆ.
ಮಿಥುನ ರಾಶಿ: ಆರೋಗ್ಯದ ತಪಾಸಣೆ ಮಾಡಿಕೊಳಗಳಿ. ಸ್ತ್ರೀಯರಿಗೆ ಈ ದಿನ ಒತ್ತಡ ಹೆಚ್ಚಾಗುವುದು. ಅತಿಯಾದ ಮರೆವಿನ ಸಮಸ್ಯೆಯಿಂದ ವಿದ್ಯಾಭ್ಯಾಸದ ಮೇಲೆ ದುಷ್ಪರಿಣಾಮವನ್ನು ಬೀರುವುದು. ಬಿಂಬದಂತೆ ಪ್ರತಿಬಿಂಬ ಕಾಣಿಸುವುದು. ನಿವೃತ್ತಿಯ ಅಂಚಿನಲ್ಲಿದ್ದು ನಡತೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಒಂದೇ ವಿಚಾರವನ್ನು ಎಲ್ಲರಿಂದಲೂ ಕೇಳಿ ಜಿಗುಪ್ಸೆ ಬಂದೀತು. ಮನೆಮಂದಿಯವರ ಜೊತೆ ಸಿಟ್ಟಗೊಂಡರೆ ನಿಮಗೇ ತೊಂದರೆಯಾದೀತು. ನಿಮ್ಮ ಇಂದಿನ ಕಾರ್ಯದಿಂದ ಕಛೇರಿಯಲ್ಲಿ ನಿರೀಕ್ಷೆ ಮೀರಿ ಪ್ರಶಂಸೆ ಸಿಗುವುದು. ನಿಮ್ಮವರೇ ನಿಮ್ಮ ಯಶಸ್ಸನ್ನು ಸಹಿಸದೇ ತೊಂದರೆ ಕೊಡುವರು. ಹಣವನ್ನು ಸರಿಯಾಗಿ ಸಂಗ್ರಹಿಸಿ, ಕೂಡಿಡಿ. ಸಾಲದಿಂದ ನೀವು ಬೇಗ ಮುಕ್ತರಾಗುವಿರಿ. ಬೆಂಬಲಕ್ಕೆ ನಿಂತವರನ್ನು ಮರೆಯುವುದು ಬೇಡ. ಕೈಲಾದ ಸಹಕಾರವನ್ನು ಮಾಡಿ. ನಿಮ್ಮ ಆತ್ಮವಿಶ್ವಾಸವು ಇತರರಿಗೆ ಅಹಂಕಾರದಂತೆ ತೋರುವುದು. ಅಧಿಕಾರದ ಮಾತುಗಳನ್ನು ಕಡಿಮೆ ಮಾಡಿ.
ಕರ್ಕಾಟಕ ರಾಶಿ: ಕೆಲವರ ಮಾತು ಕಷ್ಟವಾದರೂ ಇಷ್ಟಪಡುವುದು ಅನಿವಾರ್ಯವಾಗುವುದು. ಅಚಾತುರ್ಯವನ್ನು ನೆನಪುಮಾಡಿಕೊಂಡು ಮನಸ್ಸು ಕೆಡುವುದು. ಸತತ ಸೋಲಿನಿಂದ ಉತ್ಸಾಹವೂ ಕುಗ್ಗಬಹುದು. ಗೆಳೆಯರ ಸಹಕಾರವು ನಿಮಗೆ ಬೇಕೆನಿಸುವುದು. ಬೇರೆಯವರಿಗೆ ನಿಮ್ಮ ಬಗ್ಗೆ ನಕಾರಾತ್ಮಕ ಭಾವವು ಇರಬಹುದು. ಗುರಿಯನ್ನು ಬದಲಿಸದೇ ಮುನ್ನುಗ್ಗಿ. ಮಕ್ಕಳಿಗೆ ಪ್ರೋತ್ಸಾಹವನ್ನು ಕೊಟ್ಟು ಪ್ರಗತಿ ಕಾಣಬಹುದು. ನಿಮ್ಮ ಉಳಿಕೆಯ ಹಣದ ಬಗ್ಗೆ ಎಚ್ಚರವಿರಲಿ. ಭೂಮಿಯ ಉತ್ಪನ್ನಗಳಿಂದ ಲಾಭವು ಸಿಗುವುದು. ಆತುರದಲ್ಲಿ ಯಾವ ನಿರ್ಧಾರವನ್ನೂ ಮಾಡದೇ ಯೋಚಿಸಿ ಮುಂದುವರಿಯಬೇಕಾಗುವುದು. ಕುಟುಂಬದಲ್ಲಿ ಬಂದ ಭಿನ್ನಾಭಿಪ್ರಾಯವನ್ನು ನೀವು ಸರಿ ಮಾಡಲು ನೀವು ಸಮರ್ಥರಾಗುವಿರಿ. ಸಮೀಪದ ಬಂಧುಗಳ ವಿಯೋಗವೂ ಆಗಬಹುದು. ನಿಮಗೆ ಇದು ನಂಬಲಾಗದ ವಿಚಾರವೂ, ಸಹಿಸಲು ಅಸಾಧ್ಯವೂ ಆಗಬಹುದು. ಎಲ್ಲವುದನ್ನೂ ತಾನೇ ಮಾಡುವುದು ಎಂಬ ಮನೋಭಾವವಿರುವುದು.
ಸಿಂಹ ರಾಶಿ: ಪರರ ಗೃಹದಲ್ಲಿ ಅಪಮಾನವಾದೀತು. ದೋಷವನ್ನು ಹೇಳುವ ಮೊದಲು ಗುಣಗಳನ್ನು ಹೇಳಿ, ನಿಮ್ಮ ಬಗ್ಗೆ ಭಾವನೆ ಬದಲಾದೀತು. ಆಪ್ತರಿಗೆ ಉಡುಗೊರೆ ಕೊಟ್ಟು ಮನಸ್ತಾಪವನ್ನು ಸರಿ ಮಾಡಿಕೊಳ್ಳುವಿರಿ. ತೊಂದರೆಗೆ ಸಿಕ್ಕಿಕೊಳ್ಳಲು ನಿಮ್ಮ ಮೊಂಡುತನವೇ ಕಾರಣ. ಇದೇ ನಿಮಗೆ ಮುಳುವಾಗಬಹುದು. ಕುಟುಂಬದ ಬಗ್ಗೆ ನಿಮಗೆ ಅಭಿಮಾನದ ಕೊರತೆ ಕಾಣುವುದು. ಸಾಲಗಾರರಿಂದ ಹಿಂಸೆ ಹೆಚ್ಚಾಗುವುದು. ನಿಮಗೆ ಸಿಕ್ಕ ಪ್ರಶಂಸೆಯಿಂದ ಸಹೋದ್ಯೋಗಿಗಳು ತೊಂದರೆಯನ್ನು ಕೊಡಬಹುದು. ಮಿತ್ರರು ನಿಮಗೆ ಬೇಕಾದ ಸಹಾಯ ಮಾಡಲು ಸ್ವಲ್ಪ ಆಲೋಚಿಸುವರು. ಹಣಕಾಸಿನ ವ್ಯವಹಾರದಲ್ಲಿ ಅಪರಿಚಿತರ ಆಗಮನವಾಗಬಹುದು. ಅಧಿಕ ವಿಶ್ವಾಸದಿಂದ ಕಾರ್ಯದ ಹಾನಿಯಾಗಬಹುದು. ಸದ್ಯವಷ್ಟೇ ಸಾಲದಿಂದ ಮುಕ್ತರಾಗಿದ್ದರೂ ಅನಾರೋಗ್ಯದ ಕಾರಣಕ್ಕೆ ಪುನಃ ಸಾಲ ಮಾಡಬೇಕಾಗಿ ಬರಬಹುದು. ನಿಮಗೆ ಯಾರದ್ದಾದರೂ ಮಾತು ಅಧಿಕಾರದಂತೆ ತೋರೀತು.
ಕನ್ಯಾ ರಾಶಿ: ಸಾಲದ ಮುಕ್ತಾಯವನ್ನು ಸರಿಯಾಗಿ ಮಾಡಿಕೊಳ್ಳಿ. ಜೀವನದ ಹೊಸ ಅಧ್ಯಾಯಕ್ಕೆ ಒಳ್ಳೆ ಹೆಜ್ಜೆ ಇರಲಿ. ಮಕ್ಕಳಿಂದ ನಿಮಗೆ ಧನಪ್ರಾಪ್ತಿಯ ಸಂಭವವಿದೆ. ನಿಮಗೆ ಗೊತ್ತಿರುವುದಷ್ಟೇ ಸತ್ಯವಾಗಿ ಇರದು. ಸಂಗಾತಿಯ ಪ್ರೀತಿಯನ್ನು ಹೋಲಿಸಿಕೊಳ್ಳುವುದು ಬೇಡ. ಹೊಸತನಕ್ಕೆ ನೀವು ಒಗ್ಗುವುದು ಕಷ್ಟವಾದೀತು. ನಿಮ್ಮ ನಿಷ್ಠೆಯನ್ನು ಬದಲಾಯಿಸುವುದು ಬೇಡ. ನಿಮ್ಮ ಇಂದಿನ ಸ್ಥಿತಿಯು ಅಭಿವೃದ್ದಿಗೆ ಹಲವಾರು ದಾರಿಗಳನ್ನು ಹುಡುಕುವಿರಿ. ನಿಮಗಿರುವ ಚಂಚಲ ಮನಸ್ಸಿನಿಂದ ನಕಾರಾತ್ಮಕ ಯೋಚನೇಗಳೇ ಕಾಣಿಸಬಹುದು. ಸಂಗಾತಿಯ ಆಯ್ಕೆಯನ್ನು ನಾನಾ ಕಾರಣದಿಂದ ಮುಂದೂಡುವುದು ಸರಿಯಾಗದು. ಆಸ್ತಿಯನ್ನು ಅನ್ಯರಿಗೆ ಕೊಡುವ ಚಿಂತನೆಯೂ ನಿಮ್ಮ ಮನಸ್ಸಿಗೆ ಬರಬಹುದು. ಇಂದು ನೀವು ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಚ್ಛಿಸುವಿರಿ. ವೃತ್ತಿಯ ಸ್ಥಳದಲ್ಲಿ ಪ್ರೇಮವು ಅಂಕುರಿಸುವುದು. ಮಕ್ಕಳಿಂದ ನೀವು ಅನಾದರಕ್ಕೆ ಒಳಗಾಗಬಹುದು. ನೀವು ಕೈಗೊಳ್ಳುವ ಯಾವುದೇ ಕೆಲಸದಲ್ಲಿ ನೀವು ಅಗತ್ಯ ಸಹಾಯವನ್ನು ಪಡೆಯುತ್ತೀರಿ.