Daily Horoscope: ಅವಿವಾಹಿತರಿಗೆ ವಿವಾಹದ ಚಿಂತೆ ಹೆಚ್ಚಾಗುವುದು

07 ಡಿಸೆಂಬರ್​​ 2024: ಶನಿವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ನಿಮ್ಮ ಸಣ್ಣ ಬದಲಾವಣೆಯು ಪ್ರೀತಿಪಾತ್ರರ ಅರಿವಿಗೆ ಬರುವುದು. ವಿದ್ಯಾರ್ಥಿಗಳು ಕಲಿತದ್ದನ್ನೇ ಕಲಿಯಬೇಕಾದ ಅನಿವಾರ್ಯತೆ ಬಂದೀತು. ಅಧಿಕಾರ ತಪ್ಪುವ ಸಾಧ್ಯತೆ ಇದೆ. ಹಾಗಾದರೆ ಡಿಸೆಂಬರ್ 07ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಅವಿವಾಹಿತರಿಗೆ ವಿವಾಹದ ಚಿಂತೆ ಹೆಚ್ಚಾಗುವುದು
ಅವಿವಾಹಿತರಿಗೆ ವಿವಾಹದ ಚಿಂತೆ ಹೆಚ್ಚಾಗುವುದು
Updated By: ಗಂಗಾಧರ​ ಬ. ಸಾಬೋಜಿ

Updated on: Dec 07, 2024 | 12:10 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಜ್ಯೇಷ್ಠಾ, ಮಾಸ: ಮಾರ್ಗಶಿರ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ವ್ಯಾಘಾತ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 46 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 02 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 09:35 ರಿಂದ 10:59ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 01:49 ರಿಂದ 03:13 ರವರೆಗೆ, ಗುಳಿಕ ಕಾಲ 06:47ರಿಂದ 08:11 ರವರೆಗೆ.

ಮೇಷ ರಾಶಿ: ಹಲವರಿಂದ ಹೇಳಿದ್ದನ್ನೇ ಹೇಳಿಸಿಕೊಳ್ಳಬೇಕಾಗುವುದು. ಎಂತಹ ಎತ್ತರವನ್ನೇ ಏರಿದರೂ ನಿಮ್ಮ ಮೂಲ ಸ್ಥಾನದ ಬಗ್ಗೆ ಪ್ರೀತಿ ಇರಲಿ. ಹಣಕಾಸಿನ ವಿಷಯದಲ್ಲಿ ನೀವು ಎಷ್ಟೇ ಎಚ್ಚರದಿಂದ ಇದ್ದರೂ ವ್ಯಯವಾಗುವ ಸಾಧ್ಯತೆ ಹೆಚ್ಚು ಇರಲಿದೆ. ನಿಮ್ಮ ಸ್ಥಿರಾಸ್ತಿಯ ಮಾರಾಟಕ್ಕೆ ಹೆಚ್ಚು ಓಡಾಟ ಮಾಡಬೇಕಾದೀತು. ಮನಸ್ಸಿನ ನೋವಿಗೆ ಮದ್ದರೆಯಲಾಗದು. ಬಂಧುಗಳು ಮನೆಗೆ ಬಂದ ಕಾರಣ ಖರ್ಚು ಹೆಚ್ಚಾದೀತು. ನಿಮ್ಮ ಸಣ್ಣ ಮನಸ್ಸನ್ನು ಅವರಿಗೆ ತೋರಿಸಬೇಡಿ. ಉನ್ನತ ಅಧ್ಯಯನವನ್ನು ಬಯಸಿ ಬೇರೆ ಕಡೆಗೆ ತೆರಳುವಿರಿ. ನಿಮ್ಮ ನಿರೀಕ್ಷೆಯ ಗುರಿಯನ್ನು ತಲುಪುವುದು ಕಷ್ಟವಾಗಬಹುದು. ನಿಮ್ಮ ಸಂಗಾತಿಯ ವಿಚಾರದಲ್ಲಿ ಪ್ರೀತಿಯು ಅಧಿಕವಾಗಿರುವುದು.‌ ಬಂಧುಗಳ ಸಲಹೆಯು ನಿಮ್ಮನ್ನು ದಾರಿ ತಪ್ಪಿಸಬಹುದು. ಆರ್ಥಿಕ ವ್ಯವಹಾರವನ್ನು ಮೊದಲೇ ಸರಿಮಾಡಿಕೊಳ್ಳುವುದು ಉತ್ತಮ. ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನೀವು ಹೆಚ್ಚು ಶ್ರಮವಹಿಸಬೇಕು. ನಿಮ್ಮ ಸಾಹಸದ ಬಗ್ಗೆ ಜನರು ಮಾತನಾಡಿಕೊಳ್ಳಬಹುದು.

ವೃಷಭ ರಾಶಿ: ವಿದೇಶೀ ವ್ಯವಹಾರದಲ್ಲಿ ತೊಡಗುವ ಅವಕಾಶ ಸಿಗವುದು. ನಿಮ್ಮ ಸಂಧಾನದ ಮಾತುಗಳು ನಿಷ್ಫಲವಾಗಬಹುದು. ಬಹಳ ಹಳೆಯ ಗೆಳೆಯನವಾದರೂ ಹಂಚಿಕೊಳ್ಳುವಷ್ಟು ಆಪ್ತತೆ ಬಾರದು. ಆರ್ಥಿಕ ವಿಚಾರವಾಗಿ ದಾಂಪತ್ಯದಲ್ಲಿ ವಿರಸ ಉಂಟಾಗಬಹುದು. ವಿದೇಶ ಪ್ರಯಾಣಕ್ಕೆ ನೀವು ಸಮಯವನ್ನು ಹೊಂದಿಸಿಕೊಳ್ಳುವಿರಿ. ನೀವು ಎಣಿಸಿದ್ದನ್ನು ಬಂಧುಗಳು ಮಾಡಿಕೊಡುವರು. ನಿಮಗೆ ಬೇರೆ ಬೇರೆ ಮೂಲಗಳಿಂದ ಸಂಪಾದನೆಗೆ ಇಂದು ಅವಕಾಶಗಳು ಸಿಗುವುದು. ನಿಮಗೆ ಆಗದ ಕಾರ್ಯಕ್ಕೆ ಬದಲಿ ವ್ಯವಸ್ಥೆ ಮಾಡುವಿರಿ. ಇನ್ನೊಬ್ಬರ ಕ್ಷೇಮವನ್ನು ವಿಚಾರಿಸಿ ಅವರ ಜೊತೆ ಭಾಗಿಯಾಗುವಿರಿ. ನಿಮ್ಮ ಕೆಲಸಗಳಿಗೇ ನೀವು ಇಂದು ಹೆಚ್ಚು ಪ್ರಾಮುಖ್ಯ ನೀಡಿ ಮುಗಸಿಕೊಳ್ಳುವಿರಿ. ಬಹಳ ದಿನಗಳ ಸಂತಾನದ ಸುಖದ ನಿರೀಕ್ಷೆಯಲ್ಲಿ ಸಫಲರಾಗುವುದು.‌ ಸಾಹಸದ‌ ಕಾರ್ಯಗಳಲ್ಲಿ ಜಾಗರೂಕತೆ ಅವಶ್ಯಕ. ಆಪ್ತರಿಂದ ನಿಮ್ಮ ಸಂಪತ್ತನ್ನು ಪಡೆದುಕೊಳ್ಳುವಿರಿ. ಪರಿಚಯವಿಲ್ಲದ ಜನರಿಂದ ನೀವು ಅಂತರವನ್ನು ಕಾಯ್ದುಕೊಳ್ಳುವಿರಿ.

ಮಿಥುನ ರಾಶಿ: ಕೊಡಬೇಕಾದ ಹಣವನ್ನು ನೀಡಿ ನಂಬಿಕೆಯನ್ನು ಉಳಿಸಿಕೊಳ್ಳುವಿರಿ. ಅನಿರೀಕ್ಷಿತ ಕೊಡುಗೆಗಳಿಂದ ನಿಮಗೆ ಸಂತೋಷವಾಗಲಿದೆ. ಉದ್ಯೋಗದಲ್ಲಿ ಎಲ್ಲಿಗಾದರೂ ಪ್ರಯಾಣ ಮಾಡುವ ಅವಕಾಶ ಬರುವುದು. ಪಾಲುದಾರಿಕೆಯಲ್ಲಿ ಕಲಹವು ಶುರುವಾಗಬಹುದು. ಯಂತ್ರಗಳ ಮಾರಾಟದಿಂದ ಹೆಚ್ಚಿನ ಲಾಭಾಂಶವನ್ನು ಪಡೆಯುವಿರಿ. ಸಹೋದ್ಯೋಗಿಗಳ ಕಿರಿಕಿರಿಯಿಂದ ಉದ್ಯೋಗವನ್ನು ಬದಲಿಸುವಿರಿ. ಇಂದು ಸ್ತ್ರೀಯರಿಗೆ ಅನಿರೀಕ್ಷಿತ ತೊಂದರೆಗಳು ಇರಲಿದೆ. ಅನಾರೋಗ್ಯವು ನಿಮ್ಮ ಉತ್ಸಾಹವನ್ನು ಕಡಿಮೆ ಮಾಡುವುದು. ನೆರೆಹೊರೆಯರ ಜೊತೆ ವಾಗ್ವಾದ‌ ಮಾಡುವಿರಿ. ಸರ್ಕಾರದ ಕಡೆಯಿಂದ ನಿಮ್ಮ ಕೆಲಸಕ್ಕೆ ಒಪ್ಪಿಗೆ ಸಿಗುವುದು. ಉದ್ಯೋಗದಲ್ಲಿ ಉದ್ವೇಗಕ್ಕೆ ಒಳಗಾಗುವ ಸಾಧ್ಯತೆ ಇದೆ.‌ ಉದ್ಯೋಗದ ಮಿತ್ರರು ಇಂದು ಸಿಗವರು. ಆದಾಯವು ನಿಮ್ಮ ಯೋಜನೆಯಷ್ಟು ಇದ್ದರೂ ಆದಾಯವು ಹೆಚ್ಚಿನ ಖರ್ಚಿಗೆ ಕಾರಣವಾಗುವುದು. ನಿಮ್ಮ ಆಪ್ತರ ಜೊತೆ ಕೆಲವು ಸಂತೋಷದ ಕ್ಷಣಗಳನ್ನು ಕಳೆಯುವಿರಿ.

ಕರ್ಕಾಟಕ ರಾಶಿ: ಸ್ನೇಹದಿಂದ ಮೋಸ ಹೋಗುವ ಸಾಧ್ಯತೆ ಇದೆ. ನಿಮ್ಮ ಕಾರ್ಯದ ಕೌಶಲ್ಯತೆಯು ಸಹೋದ್ಯೋಗಿಗಳಿಗೆ ಇಷ್ಟವಾಗುವುದು. ದೂರ ಪ್ರಯಾಣವನ್ನು ನೋವು ಹೆಚ್ಚು ಇಷ್ಟಪಡುವಿರಿ. ತಂದೆಯಿಂದ ಸಹಕಾರವನ್ನು ಪಡೆಯುವಿರಿ. ನಿಮ್ಮ ನೇರ ಮಾತಿನಿಂದ ತೊಂದರೆ ಆಗಬಹುದು. ಒತ್ತಡದ ಕಾರಣಕ್ಕೆ ಸಿಟ್ಟಾಗುವಿರಿ. ವ್ಯರ್ಥ ಓಡಾಟದಿಂದ ಬೇಸರವಾಗುವುದು. ನಿಮ್ಮ ಇಂದಿನ ತುರ್ತು ಕಾರ್ಯಗಳನ್ನು ಮುಂದೂಡುವಿರಿ. ಲಾಭ ಬರುವ ಕಾರ್ಯದಲ್ಲಿ ಮಾತ್ರ ಇಚ್ಛೆಯು ಇರುವುದು. ಮನಸ್ಸಿನ ಚಾಂಚಲ್ಯವನ್ನು ಧ್ಯಾನದಿಂದ ಸರಿ ಮಾಡಿಕೊಳ್ಳಿ. ಬಂಧುಗಳು ನಿಮಗೆ ಆರ್ಥಿಕ ಸಹಾಯವನ್ನು ಮಾಡಲು ಬಂದರೂ ಸ್ವಾಭಿಮಾನದಿಂದ ನಿರಾಕರಿಸುವಿರಿ. ಸರ್ಕಾರದ ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ ಸಿಗಬಹುದು. ನಿಮ್ಮವರ ಏಳ್ಗೆಯನ್ನು ಸಹಿಸುವುದು ನಿಮಗೆ ಕಷ್ಟವಾದೀತು. ನಿಮ್ಮ ವೃತ್ತಿಜೀವನಕ್ಕೆ ಮುಖ್ಯವಾದ ಜನರು ಇಂದು ನಿಮಗೆ ಸ್ವಲ್ಪ ತೊಂದರೆ ನೀಡಬಹುದು.

ಸಿಂಹ ರಾಶಿ: ಇಂದು ಅಪರಿಚಿತರ ಜೊತೆ ವಿವಾದವನ್ನು ಮಾಡಿಕೊಳ್ಳುವಿರಿ. ಅವಿವಾಹಿತರಿಗೆ ವಿವಾಹದ ಚಿಂತೆ ಹೆಚ್ಚಾಗುವುದು. ಮಕ್ಕಳಿಂದ ನಿಮಗೆ ಕೀರ್ತಿಯು ಪ್ರಾಪ್ತವಾಗುವುದು. ಮಾತಿನಿಂದ ಆಪ್ತರನ್ನು ದೂರ ಮಾಡಿಕೊಳ್ಳುವಿರಿ. ಆಕಸ್ಮಿಕವಾಗಿ ಅಧಿಕಾರವು ಸಿಗಬಹುದು. ಪರಿಚಿತರ ವಿವಾಹಕ್ಕೆ ಓಡಾಟ ಮಾಡಿ ಸಫಲರಾಗುವಿರಿ. ನಿಮ್ಮ ಸಂಪತ್ತಿನ ರಹಸ್ಯವನ್ನು ಮೈಮರೆತು ಹೇಳುವಿರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿ ಹಣವನ್ನು ವ್ಯಯ ಮಾಡುವಿರಿ. ವಾಹನವನ್ನು ಸರಿ ಮಾಡಿಸಲು ಹಣವು ಖರ್ಚಾಗಲಿದೆ. ಇಂದು ಸಂಗಾತಿಯ ಪ್ರೀತಿಯನ್ನು ನೀವು ಹೆಚ್ಚು ಅನುಭವಿಸುವಿರಿ. ನಿಮ್ಮ ಕಂಡು ಅಸೂಯೆ ಪಡುವವರಿಗೆ ನೀವು ಇನ್ನಷ್ಟು ತುಪ್ಪ ಸುರಿಯುವುದು ಬೇಡ. ಎಲ್ಲ ಸಂದರ್ಭದಲ್ಲಿಯೂ ವಾತಾವರಣವು ನಿಮ್ಮ ಪರವಾಗಿಯೇ ಇರುತ್ತದೆ ಎಂದುಕೊಳ್ಳಬೇಡಿ. ನೀವು ಇಂದು ಕಾನೂನಿಗೆ ಸಂಬಂಧಿಸಿದ ವಿಷಯಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು.

ಕನ್ಯಾ ರಾಶಿ: ನಿಮ್ಮ ಸಣ್ಣ ಬದಲಾವಣೆಯು ಪ್ರೀತಿಪಾತ್ರರ ಅರಿವಿಗೆ ಬರುವುದು. ವಿದ್ಯಾರ್ಥಿಗಳು ಕಲಿತದ್ದನ್ನೇ ಕಲಿಯಬೇಕಾದ ಅನಿವಾರ್ಯತೆ ಬಂದೀತು. ಅಧಿಕಾರ ತಪ್ಪುವ ಸಾಧ್ಯತೆ ಇದೆ. ಉದ್ಯೋಗವನ್ನು ಬಿಟ್ಟು ಭೂಮಿಯ ವ್ಯವಹಾರದಲ್ಲಿ ತೊಡಗಿಕೊಳ್ಳುವಿರಿ. ಪ್ರಯಾಣದಲ್ಲಿ ಯಾವುದೇ ತೊಂದರೆಗಳು ಬಾರದು. ಕೆಲವು ಜನರ ಭೇಟಿಯು ನಿಮಗೆ ಖುಷಿ ಕೊಡುವುದು. ನಕಾರಾತ್ಮಕ ಚಿಂತನೆಯನ್ನು ಹೆಚ್ಚಿಸಲು ನಿಮ್ಮ ಸುತ್ತ ಅಂತಹ ವಾತಾವರಣವು ಇರುವುದು. ಅವುಗಳಿಗೆ ಕಿವಿಗೊಡದೇ ಕಾನೂನು ಪ್ರಕ್ರಿಯೆಯನ್ನು ಮಾಡಿ. ಮಕ್ಕಳಿಗಾಗಿ ಮಾಡಿದ ಖರ್ಚು ನಿಮಗೆ ಸಾರ್ಥಕ ಎನಿಸಬಹುದು. ಸಂಗಾತಿಗೆ ನಿಮ್ಮ ಉಡುಗೊರೆಯು ಇಷ್ಟವಾಗದು.‌ ಕಷ್ಟ ಎನ್ನುವ ಯೋಚನೆಯನ್ನು ತಕೆಯಿಂದ ತೆಗೆಯಬೇಕು. ನಿಮ್ಮ ನಂಬಿಕೆಯನ್ನು ನೀವು ಎಲ್ಲರೆದುರು ಸಮರ್ಥಿಸಿಕೊಳ್ಳುವಿರಿ. ಅಪರಿಚಿತರು ನಿಮ್ಮ ವಿವರಗಳನ್ನು ಪಡೆಯುವರು. ಕಠಿಣ ಪರಿಶ್ರಮಕ್ಕೆ ಸರಿಯಾಗಿ ಯಶಸ್ಸು ಸಿಗುತ್ತದೆ.