Weekly Career Horoscope: ಸೆ. 21 ರಿಂದ 27 ರವರೆಗೆ 12 ರಾಶಿಗಳ ಉದ್ಯೋಗ ಭವಿಷ್ಯ

ಸೆಪ್ಟೆಂಬರ್ 21 ರಿಂದ 27 ರವರೆಗೆ ಗ್ರಹಗಳ ಸ್ಥಾನ ಬದಲಾವಣೆಯು ಎಲ್ಲಾ ರಾಶಿಗಳ ಮೇಲೆ ವಿಭಿನ್ನ ಪರಿಣಾಮ ಬೀರಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಏರಿಳಿತಗಳನ್ನು ಅನುಭವಿಸಬಹುದು. ಕೆಲವು ರಾಶಿಗಳಿಗೆ ಉತ್ತಮ ಅವಕಾಶಗಳು ಸಿಗಬಹುದು, ಆದರೆ ಇತರರಿಗೆ ಸವಾಲುಗಳನ್ನು ಎದುರಿಸಬೇಕಾಗಬಹುದು. ವಿವರ ತಿಳಿಯಲು ಮುಂದೆ ಓದಿ.

Weekly Career Horoscope: ಸೆ. 21 ರಿಂದ 27 ರವರೆಗೆ 12 ರಾಶಿಗಳ ಉದ್ಯೋಗ ಭವಿಷ್ಯ
ಸಾಂದರ್ಭಿಕ ಚಿತ್ರ
Edited By:

Updated on: Sep 20, 2025 | 9:00 PM

21-9-2025ರಿಂದ 27-09-2025 ರವರಗೆ ಗ್ರಹಗತಿಗಳ ಸಣ್ಣ ಬದಲಾವಣೆಯಿಂದ ನಿಮ್ಮ‌ ಬದುಕಿನಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಇವೆಲ್ಲ ಆಕಸ್ಮಿಕ ಎಂದು ಭಾವಿಸಿದರೂ ಅದರ ಹಿಂದೆ ಗ್ರಹಗಳ ಗತಿ ಎನ್ನುವುದು ಸುಳ್ಳಲ್ಲ. ಅವುಗಳೇ ಎಲ್ಲವನ್ನೂ ಮಾಡಿಸುವ‌ ಕಾರಣ ನಿಮಿತ್ತ ಎಲ್ಲರೂ. ಉದ್ಯೋಗ, ಉದ್ಯಮ‌ ಎರಡೂ ದೈವಾನುಕೂಲ ಹಾಗೂ ಪುರುಷ ಪ್ರಯತ್ನದಿಂದ ಆಗುವ ಕಾರಣ ಮನುಷ್ಯನೂ ಅದಕ್ಕೆ ಬೇಕಾದ ಕ್ರಿಯಾ ಯೋಜನೆಯನ್ನು ಸಿದ್ಧ ಮಾಡಿಕೊಂಡರೆ ಯಶಸ್ಸು ಖಂಡಿತ.

ಮೇಷ ರಾಶಿ

ಸಪ್ಟೆಂಬರ್ ತಿಂಗಳ ನಾಲ್ಕನೇ ವಾರ ಈ ರಾಶಿಯವರಿಗೆ ಉದ್ಯೋಗದಲ್ಲಿ ಅಥವಾ ಉದ್ಯಮದಲ್ಲಿ ನಷ್ಟ. ಒಂದು ಕಡೆ ಸಮಯ ನಷ್ಟ ಹಾಗೂ ಆರ್ಥಿಕ‌ ನಷ್ಟವೂ ಆಗಲಿದೆ. ಕಾರ್ಯಕ್ಕೆ ಸರಿಯಾಗಿ ಹಣವೂ ದೊರೆಯದು. ಆದರೂ ತಂದೆಯು ನಿಮಗೆ ಧೈರ್ಯ ಹೇಳುವರು, ಬಂಧುಗಳೂ ಜೊತೆ ಇರುವರು. ಆದರೂ ಸಮಾಧಾನ ಇರದು.

ವೃಷಭ ರಾಶಿ

ರಾಶಿ ಚಕ್ರದ ಎರಡನೇ ರಾಶಿಗೆ ಈ ವಾರ ಉದ್ಯೋಗದಲ್ಲಿ ಲಾಭ. ದಶಮಾಧಿಪತಿ ಶನಿಯು ಏಕಾದಶದಲ್ಲಿದ್ದು ಉನ್ನತ ಸ್ಥಾನಕ್ಕೆ ಪ್ರಯತ್ನಿಸಿದರೆ ಸಿಗಲಿದೆ. ಗುರುವಿನ ದೃಷ್ಟಿಯೂ ಕರ್ಮಸ್ಥಾನದಲ್ಲಿ ಇದ್ದು ದೊಡ್ಡ ಕಂಪೆನಿಯಲ್ಲಿ ಉದ್ಯೋಗ ಪ್ರಾಪ್ತಿ ಅಥವಾ ಉದ್ಯೋಗವನ್ನು ಮುಂದುವರಿಸುವಿರಿ. ರಾಹು ದಶೆ ನಿಮ್ಮ ಉದ್ಯೋಗ, ಉದ್ಯಮಕ್ಕೆ ಪೂರಕವಾಗುವುದು.

ಮಿಥುನ ರಾಶಿ

ಈ ತಿಂಗಳ ನಾಲ್ಕನೇ ವಾರದಲ್ಲಿ ನಿಮಗೆ ಶುಭ. ಗುರುವಿನ ಸ್ಥಾನದಲ್ಲಿ ಶನಿ ಇದ್ದು ಗುರಿವಿನ ಅಥವಾ ಅಂಥಹವರ ಸನ್ನಿಧಿಯಲ್ಲಿ ಉದ್ಯೋಗ. ಗುರುತು ಆಜ್ಞೆಯಂತೆ ನೀವು ಉದ್ಯೋಗವನ್ನೂ ಮಾಡಬಹುದು. ಭಾರ, ಪೀಡೆಯಾಗುವ ಕೆಸವನ್ನು ಮಾಡುವಿರಿ. ದುಃಖಗಳು ನಿಮ್ಮ ಉದ್ಯೋಗದಿಂದ ಬರಲಿದೆ. ಗುರುದಶೆ ನಿಮಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಉತ್ತಮ.

ಕರ್ಕಾಟಕ ರಾಶಿ

ನಾಲ್ಕನೇ ರಾಶಿಯಾದ ನಿಮಗೆ ಈ ವಾರ ಉದ್ಯೋಗಾಧಿಪತಿ ಚತುರ್ಥದಲ್ಲಿ. ನಿಮ್ಮ‌ಮನೆಯ ಸಮೀಪದಲ್ಲಿ ಉದ್ಯೋಗ ಸಿಗಲಿದೆ. ಇಂಜಿನಿಯರಿಂಗ್ ಉದ್ಯೋಗ ನಿಮಗೆ ಸೂಕ್ತವಾಗಿದ್ದು, ಹೆಚ್ಚಿನ ಪ್ರಶಂಸೆಯೂ ಸಿಗಲಿದೆ. ಶನಿಯು ನಿಮ್ಮ ಸುಕೃತದ ಫಲವಾಗಿ ಉತ್ತಮ ಸ್ಥಾನದಲ್ಲಿ ಉತ್ತಮ‌ ಕೆಲಸವನ್ನೇ ಕೊಡಿಸುವನು. ಕುಜ ಹಾಗೂ ಶನಿ ದಶೆ ಎರಡರಿಂದ ಶುಭವಾಗಲಿದೆ.

ಸಿಂಹ ರಾಶಿ

ಸಪ್ಟೆಂಬರ್ ತಿಂಗಳ ಈ ವಾರ ನಿಮಗೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಪೂರ್ಣ ಶುಭವಿಲ್ಲ. ಉದ್ಯೋಗಾಧಿಪತಿ ಇದೇ ರಾಶಿಯಲ್ಲಿ ಇರುವ ಕಾರಣ ಕೇತುವೂ ಇದ್ದು ಅಲ್ಪ ಗೊಂದಲ, ವಾಗ್ವಾದಗಳು ಆಗಲಿದೆ. ಈ ವಾರ ನಿಮ್ಮ ಕೆಲಸದಿಂದ ಸ್ಥಾನ ಉಳಿಸಿಕೊಳ್ಳಬೇಕೇ ವಿನಃ ವಾದದಿಂದ ಅಲ್ಲ. ಶನಿಯೂ ಅಷ್ಟಮದಲ್ಲಿದ್ದು ಅಪಮಾನದಿಂದ ದುಃಖ‌ ತರಿಸುವನು. ಶುಕ್ರನನ್ನೂ ಅಥವಾ ಗಣಪತಿಯನ್ನು ಉಪಾಸನೆ ಮಾಡುವುದು ಅನಿವಾರ್ಯ.

ಕನ್ಯಾ ರಾಶಿ

ಬುಧಾಧಿಪತ್ಯದ ಈ ರಾಶಿ ಈ ವಾರ ಶುಭ. ಪಾಲುದಾರಿಕೆಯ ಉದ್ಯೋಗ ಉತ್ತಮ‌ ಯಶಸ್ಸು ಕೊಡಲಿದೆ. ಸರ್ಕಾರದ ಸಹಾಯವೂ ಸಿಗುವ ಭರವಸೆ ನಿಮಗೆ ಗೊತ್ತಾಗುವುದು. ಪ್ರಯತ್ನವನ್ನು ಮಾಡುವಿರಿ. ಈ ವಾರ ಟ್ಯೂಷನ್ ಮೊದಲಾದ ಬೋಧನಾ ಉದ್ಯೋಗದಲ್ಲಿ ತೊಡಗಿದ್ದರೆ ಶ್ರೇಯಸ್ಸು ಪ್ರಾಪ್ತಿ. ಆರ್ಥಿಕತೆ ನಿಮ್ಮನ್ನು ಅರಸಿ ಬರುವುದು. ಉದ್ಯೋಗವು ಹೆಚ್ಚು ಶ್ರಮವನ್ನು ಬೇಡುವುದು.

ತುಲಾ ರಾಶಿ

ಸಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ಏಳನೇ ರಾಶಿಯವರಿಗೆ ಮಿಶ್ರಫಲ. ಉದ್ಯೋಗದ‌ ಸ್ಥಳದಲ್ಲಿ ಚಂಚಲತೆ ಇರುವುದು. ನೀರು ಹಾಲು, ತುಪ್ಪ ಮೊದಲಾದ ದ್ರವ ಪದಾರ್ಥಗಳ ರಪ್ತು ಆಮದಿನಿಂದ ಲಾಭ ಹೆಚ್ಚು. ಕೃಷಿ ಚಟುವಟಿಕೆಗಳನ್ನು ಹೆಚ್ಚು ಮಾಡುವಿರಿ, ಆಸಕ್ತಿ ಇದ್ದವರಿಗೆ ಅಧಿಕ‌ ಸಮಯವೂ ಸಿಗಲಿದೆ. ಚಂದ್ರ ದಶೆ ಉತ್ತಮ.

ವೃಶ್ಚಿಕ ರಾಶಿ

ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಈ ವಾರ ಉದ್ಯೋಗದಲ್ಲಿ ಪೂರ್ಣ ಪ್ರಗತಿ ಕಾಣಿಸುವುದು. ಉದ್ಯೋಗಾಧಿಪತಿ ನವಮದಲ್ಲಿ ಇದ್ದಾನೆ. ಪೂರ್ವಜರ ಪುಣ್ಯ ನಿಮಗೆ ಬರಲಿದೆ. ಯಾರಾದರೂ ನಿಮ್ಮ ಸಹಾಯಕ್ಕೆ ಅನಿರೀಕ್ಷಿತವಾಗಿ ಬರುವರು. ಈ ವಾರ ಭೂ ಸಂಬಂಧವಾದ ಉದ್ಯಮಕ್ಕೆ ಮಕ್ಕಳಿಂದ‌ ಪರೋಕ್ಷ ಸಹಾಯ ಪ್ರಾಪ್ತಿಯಾದರೂ ಅನಂತರ ಕಲಹಕ್ಕೂ ಕಾತಣವಾಗಲಿದೆ. ರವಿ ದಶೆ ನಿಮಗೆ ಸದ್ಯ ಉತ್ತಮ. ವೈದ್ಯಕೀಯ ಕ್ಷೇತ್ರದಲ್ಲಿ ಲಾಭ.

ಧನು ರಾಶಿ

ಗುರುವಿನ ಆಧಿಪತ್ಯವುಳ್ಳ ರಾಶಿಗೆ ಈ ವಾರ ಉದ್ಯೋಗಕ್ಕೆ ಸಂಬಂಧಿಸಿದಂತೆ ಶುಭ. ಗುರುವು ಬುಧನ ರಾಶಿಯಲ್ಲಿ, ಬುಧನು ಉಚ್ಚ ಹಾಗೂ ಸ್ವಕ್ಷೇತ್ರದಲ್ಲಿ ಇರುವ ಕಾರಣ ಮಾಡುವ ಉದ್ಯೋಗದಲ್ಲಿ ಮನಸ್ಸು ಬದಲಾವಣೆ ಮಾಡುವುದು ಬೇಡ. ಸಣ್ಣ ಪುಟ್ಟ ಕಿರಿಕಿರಿಗಳು ಸಹಜವೇ. ಗಂಭೀರವಾಗಿ ಪರಿಗಣಿಸದೇ ಕಾರ್ಯದಲ್ಲಿ ಮಗ್ನರಾಗಿ.‌ ಶನಿಯೂ ಚತುರ್ಥದಲ್ಲಿ ಇದ್ದು ನಿಮ್ಮನ್ನು ಉದ್ಯೋಗಕ್ಕಾಗಿ ಕುಟುಂಬದಿಂದ ದೂರ ಇರಿಸುವನು. ವಿದೇಶ ಗಮನವೂ ಅನಿವಾರ್ಯ ಆಗುವುದು.

ಮಕರ ರಾಶಿ

ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಈ ವಾರ ಶುಕ್ರನು ಅಷ್ಟಮದಲ್ಲಿದ್ದು ನಿಮಗೆ ಅಶುಭವನ್ನು ಸೂಚಿಸುವನು. ಸ್ತ್ರೀಯರ ವಿಚಾರದಲ್ಲಿ ಜಾಗರೂಕತೆ ಬೇಕು. ಎಲ್ಲರೂ ನಿಮ್ಮನ್ನು ಅಪಮಾನ ಮಾಡಬಹುದು.‌ ನಿಮಗೆ ಗುರುವಿನ ಬಲ, ದೃಷ್ಟಿ ಇಲ್ಲದೇ ಇದ್ದರೂ ಉದ್ಯೋಗಾಧಿಪತಿ ಮೇಲಿದ್ದ ಕಾರಣ ಅತಿಯಾದ ಮಾನಸಿಕ‌ ತೊಂದರೆಯನ್ನು ಅನುಭವಿಸಬೇಕಾಗಿಲ್ಲ.

ಕುಂಭ ರಾಶಿ

ಶನಿಯ ಆಧಿಪತ್ಯದ ರಾಶಿಯಾಗಿದ್ದು ಈ ವಾರ ನಿಮಗೆ ಉದ್ಯೋಗಾಧಿಪತಿಯು ನವಮದಲ್ಲಿ ಇದ್ದು ಅನ್ಯರಿಗೆ ಉದ್ಯೋಗವನ್ನು ಕೊಡುವ ಹಂತಕ್ಕೂ ಹೋಗುವಿರಿ. ನಿಮಗೆ ಈ ವಾರ ಉಪಯೋಗಕ್ಕೆ ಬರಲಿದೆ. ನಿಮ್ಮ ಪ್ಲಾನ್ ಯಶಸ್ವಿಯಾಗಿ ಸಂತೋಷವಾಗಲಿದೆ. ಉದ್ಯೋಗದಿಂದ ಧನ ಪ್ರಾಪ್ತಿ ಎಂದಿದ್ದರೂ ನಿಮಗೆ ಭರವಸೆ ಬರದೇ ಇರದಲು ಕಾರಣ ರಾಹು. ಬೌದ್ಧಿಕವಾಗಿ ನಿಮ್ಮನ್ನು ಹಿಡಿದಿಡುವನು.

ಮೀನ ರಾಶಿ

ರಾಶಿ ಚಕ್ರದ ಕೊನೆಯ ರಾಶಿಯ ಅಧಿಪತಿ ಗುರುವಾಗಿದ್ದು, ಉದ್ಯಮಾಧಿಪತಿಯೂ ಆಗಿದ್ದಾನೆ. ನಿಷ್ಠೆಯಿಂದ ನಿಮ್ಮ ಕೆಲಸವನ್ನು ಮಾಡಿ. ಅಲ್ಲಿ ಯಾವುದೇ ವಂಚನೆ ಮಾಡುವ ಮನಸ್ಸೂ ಇರದು. ಲಾಭದ ನಿರೀಕ್ಷೆಗಿಂತ ಖ್ಯಾತಿಯನ್ನು, ಉದ್ಯಮದ ಪ್ರತಿಷ್ಠೆಯೇ ಮುಖ್ಯವಾಗಿಲಿದೆ. ಧಾರ್ಮಿಕಕ್ಕೆ ಸಂಬಂಧಿಸಿ ವೃತ್ತಿಗೆ ಹೆಚ್ಚು ಅನುಕೂಲತೆ ಇದೆ. ಗುರು ದಶೆ ಉತ್ತಮ ಜೀವನಕ್ಕೆ ಸಹಕಾರಿ.