Weekly Horoscope: ಫೆಬ್ರವರಿ 19ರಿಂದ ಫೆ.25ರ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?

| Updated By: Digi Tech Desk

Updated on: Feb 19, 2023 | 8:31 AM

2023ರ ಫೆಬ್ರವರಿ 19ರಿಂದ ಫೆಬ್ರವರಿ 25ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

Weekly Horoscope: ಫೆಬ್ರವರಿ 19ರಿಂದ ಫೆ.25ರ ವಾರ ಭವಿಷ್ಯದಲ್ಲಿ ಯಾವ ರಾಶಿಗೆ ಏನು ಫಲ?
ಪ್ರಾತಿನಿಧಿಕ ಚಿತ್ರ
Image Credit source: www.india.com
Follow us on

ಪ್ರತಿ ವಾರ ಆರಂಭವಾಗುತ್ತಿದ್ದಂತೆ ಪ್ರತಿಯೊಬ್ಬರಿಗೂ ಈ ವಾರ ಭವಿಷ್ಯ(Weekly Horoscope) ಹೇಗಿರುತ್ತದೆ ಎನ್ನುವ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಹಾಗೂ ಕುತೂಹಲವಿರುತ್ತದೆ. ಅದರಂತೆ 2023ರ ಫೆಬ್ರವರಿ 19ರಿಂದ ಫೆಬ್ರವರಿ 25ರ ವರೆಗಿನ ವಾರ ಭವಿಷ್ಯದಲ್ಲಿ (Weekly Horoscope) ಯಾವ ರಾಶಿಗೆ ಏನು ಫಲ? ಎನ್ನುವುದನ್ನು ತಿಳಿಯಿರಿ.

ಮೇಷ: ಈ ವಾರವು ಅನುಕೂಲಕರವೆಂದೇ ಹೇಳಬೇಕಾಗಿದೆ. ಉದ್ಯೋಗದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವಿರಿ. ಕೌಟುಂಬಿಕ ಕಲಹಗಳು ಸ್ವಲ್ಪ ನಡೆಯಲಿವೆ ಈ ವಾರದಲ್ಲಿ. ಉದ್ಯಮಿಗಳಾಗಿದ್ದರೆ ನೀವು ಲಾಭವನ್ನು ಗಳಿಸುವಿರಿ. ಏಕಾದಶದ ಶನಿಯು ನಿಮಗೆ ಅನೇಕ ಸಕಾರಾತ್ಮಕವಾಗಿ ಇರುವನು. ಸಂಪತ್ತಿನ ಹಾಗೂ ಅಧಿಕಾರದ ಹಾದಿಯನ್ನು ತೋರಿಸಿಕೊಡುವನು. ದಿನಸಿ ವ್ಯಾಪಾರಿಗಳು ಹೆಚ್ಚು ಲಾಭವನ್ನು ಗಳಿಸುವರು. ಭೂಮಿಯ ವ್ಯವಹಾರದಲ್ಲಿ ಲಾಭವನ್ನು ಕುಜನು ತರುವನು. ಗುರುದರ್ಶನ ಹಾಗೂ ಆಶೀರ್ವಾದವನ್ನು ಪಡೆಯಿರಿ. ಲಕ್ಷ್ಮೀಸ್ತೋತ್ರವನ್ನು ಪಠಿಸಿ.

ವೃಷಭ: ಈ ವಾರ ನವಮದಲ್ಲಿರುವ ಚಂದ್ರನು ಆದರ ಮನ್ನಣೆಯನ್ನು ಕೊಡಿಸುವನು. ದಶಮದಲ್ಲಿರುವ ಶನಿ ಹಾಗೂ ಸೂರ್ಯರು ಉದ್ಯೋಗದಲ್ಲಿ ಶ್ರೇಯಸ್ಸನ್ನು ಕೊಡುವರು. ಏಕಾದಶದಲ್ಲಿರುವ ಗುರು ಹಾಗೂ ಶುಕ್ರರು ಅಪೂರ್ವವಾದ ಸಂಪತ್ತಿನ ಮಾರ್ಗವನ್ನು ತೋರಿಸುತ್ತಾರೆ. ಷಷ್ಠದ ಕೇತುವು ಅನಾರೋಗ್ಯದಿಂದ ನಿಮ್ಮನ್ನು ಮುಕ್ತಗೊಳಿಸುತ್ತಾನೆ. ವಿವಾಹಸಂಬಂಧಗಳು ಮಾತುಕತೆಯಲ್ಲಿಯೇ ನಿಲ್ಲಬಹುದು. ದ್ವಾದಶದ ರಾಹುವುದು ವಂಚನೆಯಿಂದ ಹಣವನ್ನು ನಾಶಮಾಡಿಸುವನು. ಸಾಂಬಸದಾಶಿವನ ಆರಾಧನೆ ಮಾಡಿ.

ಮಿಥುನ: ಈ ವಾರವು ಮಿಶ್ರಫಲವು ಇರಲಿದೆ. ಅಪೂರ್ವವಾದ ಯೋಜನೆಯನ್ನು ನೀವಿಂದು ಇಡಲಿದ್ದೀರಿ. ಕಛೇರಿಯಿಂದ ಉತ್ತಮ ಪ್ರಶಂಸೆಯೂ ಸಿಗಲಿದೆ. ಕುಟುಂಬದವರಿಗೆ ಇಂದು ನೆರವಾಗುವಿರಿ. ನಿಮ್ಮ ಮಾತುಗಳನ್ನು ಅರ್ಥಮಾಡಿಕೊಳ್ಳಲಾಗದೇ ಮನೆಯಲ್ಲಿ ಕಡೆಗಣಿಸಬಹುದು. ಸಾಪ್ಟ್ ವೇರ್ ಉದ್ಯೋಗಿಗಳು ಅಥವಾ ಕೈಗಾರಿಕೆಯಲ್ಲಿ ಕೆಲಸ ಮಾಡುವವರಿಗೆ ಕೆಲಸದಿಂದ ಬಿಡುವ ಭಯವು ಇರಲಿದೆ. ಉದ್ವೇಗಕ್ಕೆ ಒಳಗಾಗದೇ ಇರಲು ಪ್ರಯತ್ನಿಸಿ. ನಿಮ್ಮ ಬಗ್ಗೆ ಹಲವು ತರದ ಮಾತುಗಳು ಕೇಳಿಬರಬಹುದು. ಕಾಲಕ್ಕಾಗಿ ಕಾಯಿರಿ. ಮಹಾವಿಷ್ಣುವನ್ನು ಧ್ಯಾನಿಸಿ.

ಕಟಕ: ಅಷ್ಟಮದಲ್ಲಿರುವ ಶನಿಯಿಂದ ನಿಮಗೆ ವಿವಿಧರೀತಿಯ ಒತ್ತಡಗಳು, ಉದ್ವೇಗ, ಸಿಣಮಟ್ಟು, ಹತಾಶೆಗಲಕು ಆಗಬಹುದು. ನಿಮ್ಮ ವೇಗಕ್ಕೆ ತಕ್ಕಂತೆ ಕೆಲಸಗಳೂ ಆಗದೇ ಇರಬಹುದು. ಉದ್ಯೋಗದ ಸ್ಥಳ ಬದಲಾವಣೆ ಯಾಗಬಹುದು. ನವಮದಲ್ಲಿ ಶುಭರಾದ ಶುಕ್ರ ಮತ್ತು‌ ಗುರುವು ಇರಲಿದ್ದಾರೆ. ನಿಮ್ಮ ಎಲ್ಲ ಸಂಕಟವನ್ನು ಒಂದೊಂದಾಗಿಯೇ ಕಡಿಮೆ ಮಾಡುವವರಿದ್ದಾರೆ. ಸಪ್ತಮದ ಬುಧನು ವಿವಾಹದ ಮಾರುಕತೆಗೆ ಸಹಾಯ ಮಾಡುವನು. ತಂತ್ರಜ್ಞಾನರಿದ್ದರೆ ಏಕಾದಶದ ಕುಜನು ಧನಲಾಭವನ್ನೂ ಪದೋನ್ನತಿಯನ್ನೂ ಕೊಡಯವನು. ಅಶ್ವತ್ಥವೃಕ್ಷಕ್ಕೆ ಮೂರು ಬಾರಿ ಪ್ರದಕ್ಷಿಣೆ ಮಾಡಿ ಬನ್ನಿ.

ಸಿಂಹ: ಅಷ್ಟಮಕ್ಕೆ ಚಂದ್ರನ ಗಮನವಾದಾಗ ಮಾನಸಿಕಕ್ಷೋಭೆಗಳು ಉಂಟಾಗಲಿದೆ‌. ಅಷ್ಟಮದಲ್ಲಿಯೇ ಗುರುವು ಆರ್ಥಿಕಮುಗ್ಗಟ್ಟನ್ನು ತರುವನು. ‌ಅಷ್ಟಮದಲ್ಲಿರುವ ಶುಕ್ರನು ಆಲಂಕಾರಿಕ ಅಥವಾ ಶೋಕಿಗೋಸ್ಕರ ಸಂಪತ್ತಿನ ವ್ಯಯವನ್ನು ಮಾಡಿಸುವನು. ವಾಹನದಿಂದ ಲಾಭ ಇದೆ. ಹೊಸ ವಾಹನವನ್ನು ಖದಲರೀದಿಸಬಹುದು. ಷಷ್ಠದಲ್ಲಿರುವ ಬುಧನು ಪ್ರಯಾಣವನ್ನು ಮಾಡಿಸುವನು. ತೃತೀಯದ ಕೇತುವು ಅನಪೇಕ್ಷಿತ ಕಾರ್ಯಗಳಿಗೆ ಪ್ರೇರಣೆ ನೀಡುವನು. ದಶಮದ ಕುಜನು ಪರಿಶ್ರಮದ ಕೆಲಸಕ್ಕೆ ತೊಡಗಿಸುವನು. ಶಮೀವೃಕ್ಷವನ್ನು ಪೂಜಿಸಿ, ಅದರ ಬುಡದ ಮಣ್ಣನ್ನು ತಿಲಕವಾಗಿಸಿಕೊಳ್ಳಿ.

ಕನ್ಯಾ: ಸಪ್ತಮದಲ್ಲಿರುವ ಗುರುವು ಹಾಗೂ ಶುಕ್ರರು ಉತ್ತಮ‌ಕುಲದ ಹಾಗೂ ಸುಂದರ ರೂಪದ, ಒಳ್ಳೆಯ ಸ್ವಭಾವದ ಸ್ತ್ರೀಯ ಜೊತೆ ನಿಮ್ಮ ವಿವಾಹವನ್ನು ಮಾಡಿಸುವನು. ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳುವ ಮನಸ್ಸು ಮಾಡುವಿರಿ. ನಿದ್ರೆಯನ್ನು ಹೆಚ್ಚು ಅಪೇಕ್ಷಿಸಬಹುದು. ಆರೋಗ್ಯದಲ್ಲಿ ಆದ ಸಣ್ಣ ವ್ಯತ್ಯಸವನ್ನೂ ಗಣನೆಗೆ ತೆಗದುಕೊಳ್ಳದೇ ಸೂಕ್ತ ಚಿಕಿತ್ಸೆಯನ್ನು ಪಡೆಯಿರಿ. ಎಲ್ಲದಕ್ಕೂ ಕಾರಣವನ್ನು ಹುಡಕಬೇಡಿ. ಇದ್ದಿರಬೇಕೆಂದಿಲ್ಲ. ಎಕ್ಕದ ಗಿಡಕ್ಕೆ ನೀರುಣಿಸಿ ನಮಸ್ಕರಿಸಿ.

ತುಲಾ: ಚತುರ್ಥದಲ್ಲಿ ಬುಧನಿದ್ದು ಕುಟುಂಬಸೌಖ್ಯವನ್ನು ಕೊಡುವನು. ಪಂಚಮದಲ್ಲಿ ಸೂರ್ಯ ಮತ್ತು ಶನಿಯಿದ್ದರೆ ಮಕ್ಕಳ ಸೌಖ್ಯವನ್ನು ಕೊಡುವನು. ಸರಕಾರಿ ಉದ್ಯೋಗವನ್ನು ನೀಡುವನು. ಷಷ್ಠದಲ್ಲಿರುವ ಗುರುವು ವಿವಾಹವನ್ನು ಮಾಡಿಸುವನು‌. ಅಷ್ಟಮದಲ್ಲಿರುವ ಕುಜನು ಯಂತ್ರಗಳಿಂದ ನೋವು‌ ಕೊಟ್ಟಾನು. ಸ್ವಸ್ಥಾನದಲ್ಲಿರುವ ಕೇತುವು ದೇಹಾರೋಗ್ಯವನ್ನು ಕೊಡಿಸುವನು. ವೃತ್ತಿ ಸಂಬಂಧವಾಗ ಕಿರುಕುಳಗಳನ್ನು ಕಡಿಮೆ ಮಾಡುತ್ತಾನೆ. ಪಂಚಮದ ಶನಿಯು ಮಕ್ಕಳ ಮೇಲೆ ವೈರಾಗ್ಯವನ್ನು ನೀಡಿಯಾನು.‌ ಷಷ್ಠದಲ್ಲಿರುವ ಗುರುವಿನಿಂದ ಅಪಮಾನವನ್ನೇ ಪಡೆಯಬೇಕಾದೀತು. ತಾಳ್ಮೆಯನ್ನು ಇಟ್ಟುಕೊಂಡಷ್ಟೂ ಶ್ರೇಯಸ್ಸಿದೆ. ಖದಿರ ವೃಕ್ಷಕ್ಕೆ ನೀರಿಣಿಸಿ, ನಮಸ್ಕರಿಸಿ.

ವೃಶ್ಚಿಕ: ಚತುರ್ಥದ ಶನಿಯಿಂದ ನಿಮಗೆ ಸ್ವಲ್ಪ ಹಿನ್ನಡೆಯಾಗಲಿದೆ. ಪಂಚಮದ ಗುರುವು ಮಕ್ಕಳಿಂದ ಸಂತೋಷವನ್ನು ನೀಡುವನು. ಷಷ್ಠದಲ್ಲಿರುವ ರಾಹುವು ರೋಗವನ್ನು ಶಮನಗೊಳಿಸುವನು ಅಥವಾ ದೀರ್ಘಕಾಲದಿಂದ ಕಾಡುವ ರೋಗಶಮನಕ್ಕೆ ಸೂಕ್ತ ಮಾರ್ಗವನ್ನೂ ತೋರಿಸುವನು. ಅವಿವಾಹಿತರಿಗೆ ವಿವಾಹ ಯೋಗ ಇದೆ. ಮಕ್ಕಳಿಂದ ಶುಭ ಸುದ್ದಿ ಕೇಳುತ್ತೀರಿ. ಅರ್ಹರಿಗೆ ಉನ್ನತ ಶಿಕ್ಷಣ ಪ್ರಾಪ್ತಿಯಾಗುವುದು. ವಿದೇಶಪ್ರಯಾಣದ ಯೋಗ ಇದೆ.‌ ತೃತೀಯದಲ್ಲಿರುವ ಬುಧನು ಬಂಧುಗಳಿಂದ ಸಹಾಯ ಸಹಕಾರಗಳನ್ನು ಕೊಡಿಸುತ್ತಾನೆ. ಅಶ್ವತ್ಥವೃಕ್ಷಕ್ಕೆ ಪ್ರದಕ್ಷಿಣೆ ಬನ್ನಿ.

ಧನಸ್ಸು: ತೃತೀಯದಲ್ಲಿ ಶನಿಯು ಇದ್ದಾನೆ. ಸೂರ್ಯನೂ ಅಲ್ಲಿಯೇ ಇರುವನು.‌ ತಂದೆ ಮತ್ತು ಮಕ್ಕಳ‌ನಡುವೆ ಪೈಪೋಟಿಗಳು, ಬಲಾಬಲ ಪ್ರದರ್ಶನಗಳು ನಡೆಯಲಿವೆ. ಸ್ವಂತ ಆಸ್ತಿಯೊಂದನ್ನು ಖರೀದಿಸುವಿರಿ. ಹಲವು ದಿನಗಳಿಂದ ಬರದೇ ಇದ್ದ ಹಣವು ಬರುತ್ತದೆ. ಚತುರ್ಥದಲ್ಲಿರುವ ಗುರು ಅನುಕೂಲಕರನಲ್ಲ. ಪಂಚಮದ ರಾಹವೂ ನಿಮ್ಮ ಪ್ರಭಾವವನ್ನು ಕಡಿಮೆಗೊಳಿಸುವನು. ಮಕ್ಕಳಿಂದ ನಿಷ್ಠುರ ವಾಗಬೇಕಾದೀತು. ಷಷ್ಠದ ಕುಜನು ಭುಇಮಿ ಲಾಭವನ್ನೂ ಅಥವಾ ಭೂಮಿಯಿಂದ ಲಾಭವನ್ನೂ ಮಾಡಿಸಿಯಾನು. ಏಕಾದಶದಲ್ಲಿರುವ ಕೇತುವೂ ಕೂಡ ಆರ್ಥಿಕವಾಗಿ ಲಾಭವನ್ನು ಕೊಡುತ್ತಾನೆ. ‌ಗೋಗ್ರಾಸವನ್ನು ನೀಡಿ.

ಮಕರ: ಈ ವಾರವು ನಿಮಗೆ ಕತ್ತಿಯ ಅಲಗಿನಂತೆ ಇರಲಿದೆ. ಅವಕಾಶಗಳು ಸಾಕಷ್ಟು ಬಂದರೂ ಆಯ್ಕೆಯ ಗೊಂದಲವು ನಿಮಗೆ ಇರಲಿದೆ‌. ಪ್ರಥಮದಲ್ಲಿಯೇ ಇರುವ ಬುಧನು ರಕ್ಷಕನಾಗಿರುತ್ತಾನೆ. ದ್ವಿತೀಯದದಲ್ಲಿರುವ ಶನಿಯು ಸಾಡೇಸಾಥ್ ಕೊನೆಯ ಭಾಗದಲ್ಲಿದ್ದು ನಿಮಗೆ ಪ್ರಭಾವವನ್ನು ಕಡಿಮೆ ಮಾಡುವನು. ಇದರಿಂದ ನೀವು ಸ್ವಲ್ಪ ನಿರಾಳವಾಗಿರಬಹುದು. ತೃತೀಯದ ಶುಕ್ರನು ಗುರುವಿನ ಜೊತೆ ಸೇರಿ ಸಾಹೋದರ್ಯಕ್ಕೆ ಪುಷ್ಟಿಯನ್ನು ಕೊಡುವನು. ಆರ್ಥಿಕತೆಯಲ್ಲಿಯೂ ಉತ್ತಮ ಹರಿವನ್ನು ಕೊಡುವನು. ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಇದೆ. ಉತ್ತರಣೆಯ ಗಿಡಕ್ಕೆ ನೀರೆರೆಯಿರಿ.

ಕುಂಭ: ದ್ವಿತೀಯದಲ್ಲಿ ಶುಕ್ರ ಹಾಗೂ ಗುರುವು ಇರಲಿದ್ದಾರೆ‌. ಆರ್ಥಿಕವಾದ ನಷ್ಟಗಳೇನೂ ಆಗದಿದ್ದರೂ ಲಾಭವು ಅಷ್ಟಕ್ಕಷ್ಟೇ. ಇದು ನಿಮಗೆ ಕೊಂಚ ಮನಃಶಾಂತಿ ಕೊಡಬಹುದು. ಆದರೆ ಬೇರೆ ಎಲ್ಲ ಗ್ರಹಗಳೂ ಈಗ ನಿಮಗೆ ಅನನುಕೂಲವಾಗಿದ್ದಾರೆ. ತೃತೀಯದಲ್ಲಿರುವ ಗುರು ಅಷ್ಟು ಅನುಕೂಲಕರನಲ್ಲ. ಪ್ರತಿಯೊಂದು ಹೆಜ್ಜೆಯನ್ನು ಯೋಚಿಸಿ ಇಡಿ. ಜಾಗರೂಕತೆಯಿಂದ ನಡೆಯಿರಿ. ತೃತೀಯದ ಕುಜನು ನಿಮಗೆ ಬಲವನ್ನು, ಆತ್ಮಸ್ಥೈರ್ಯವನ್ನು ಕೊಡಬಲ್ಲ. ಏಕಾದಶದ ಬುಧ ಕೂಡ ಸ್ವಲ್ಪ ಶುಭಫಲ ಕೊಡುತ್ತಾನೆ. ದುರ್ಗಾದೇವಿಯ ಸ್ತೋತ್ರವನ್ನು ಮಾಡಿ.

ಮೀನ: ವಿಪರೀತ ಹಣಕಾಸಿನ ಏರುಪೇರು, ವೃಥಾ ಜಗಳ ಮನಸ್ತಾಪ ಯಾವುದೇ ಕೆಲಸಕಾರ್ಯದಲ್ಲಿ ಹಿನ್ನಡೆ ಇವೆಲ್ಲವೂ ಇರುತ್ತದೆ. ಎಲ್ಲ ಕೆಲಸಗಳೂ ನಿಧಾನವಾದಂತೆ ಅನ್ನಿಸುತ್ತದೆ. ಸಾಡೆಸಾಥ್ ಶನಿಯ ಪ್ರಭಾವವು ಸಣ್ಣ ರೂಪದಲ್ಲಿ ತಿಳಿಯಲಾರಂಭಿಸಿದೆ. ಪ್ರಾರಂಭ ಕಾಲ. ನಿಮ್ಮ ಉತ್ತಮ ಕೆಲಸಗಳೂ ನಗಣ್ಯವಾಗುತ್ತವೆ. ಇದರಿಂದ ನಿಮ್ಮ ಮನಸ್ಸು ಕುಗ್ಗುವುದು. ಮನೆಯವರಿಗೂ ನಿಮ್ಮ ಬಗ್ಗೆ ಕಾಳಜಿ ಇಲ್ಲ ಎಂದು ನಿಮಗೆ ಅನಿಸುತ್ತದೆ. ಶನಿಯು‌ ನಮ್ಮ ಪ್ರಾಕ್ತನ ಕರ್ಮವನ್ನು ಕರಗಿಸುತ್ತಾನೆ ಎನ್ನುವ ಮಾತು ಗೊತ್ತಿರಲಿ. ಆಂಜನೇಯನ ಆರಾಧನೆಯನ್ನು ಮಾಡಿ. ಹನುಮಾನ್ ಚಾಲೀಸ್ ಪಠಿಸಿ.

ಲೇಖನ: ಲೋಹಿತಶರ್ಮಾ, ಇಡುವಾಣಿ

Published On - 6:10 am, Sun, 19 February 23