
ಜುಲೈ ತಿಂಗಳ ಕೊನೆಯ ವಾರ 27-07-2025ರಿಂದ 02-08-2025 ರವರೆಗೆ ಇರಲಿದೆ. ಕುಜನ ಸ್ಥಾನ ಬದಲಾಗಿದ್ದು ಶತ್ರುವಿನ ರಾಶಿಯಲ್ಲಿ ಇರುವನು. ಬಲ ಪ್ರದರ್ಶನಕ್ಕೆ ತೊಂದರೆ, ಮನಸ್ತಾಪದಿಂದ ಕಲಹ, ಭೂಮಿಯ ಉತ್ಪನ್ನ ಅಥವಾ ವ್ಯವಹಾರದಲ್ಲಿ ಅತೃಪ್ತಿ, ಐಟಿ ಉದ್ಯೋಗಿಗಳಿಗೆ ಶ್ರೇಯಸ್ಸು ಇರಲಿದೆ. ಭೂವರಾಹ ಮಂತ್ರ, ಗುಹಸ್ತೋತ್ರದಿಂದ ಬಲ, ಭೂಮಿಯನ್ನು ಉಳಿಕೊಂಡು ಮುಂದಿನ ಕಾರ್ಯಕ್ಕೆ ತೆರಳಬಹುದು.
ಮೇಷ ರಾಶಿ: ಜುಲೈ ತಿಂಗಳ ಕೊನೆಯ ವಾರದಲ್ಲಿ ನಿಮಗೆ ಶುಭ. ಕುಜನು ಷಷ್ಠದಲ್ಲಿ ಇದ್ದು ಭೂಮಿಯ ಕಾರಣದ ಶತ್ರುತ್ವ ನಿವಾರಣೆಯಾಗುವುದು. ನಿಮ್ಮ ಚರ ಸಂಪತ್ತನ್ನು ಜೋಪಾನ ಮಾಡಿಕೊಳ್ಳಿ. ಸ್ನೇಹಿತರಿಂದ ಲಾಭವು ನಿಮಗೆ ಸಿಗಲಿದೆ. ಬಾಂಧವ್ಯದಲ್ಲಿ ಸಾಮರಸ್ಯ ಇರದು. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗಬಹುದು. ಆರಾಮಾಗಿ ಇರಲು ಹೆಚ್ಚು ಇಷ್ಟಪಡುವಿರಿ. ಕಾನೂನಿಗೆ ಸಂಬಂಧಿಸಿದ ಅಂಶಗಳನ್ನು ಸರಿ ಮಾಡಿಕೊಂಡು ದಾಖಲೆಗಳನ್ನು ನಿರ್ಮಿಸಿಕೊಳ್ಳಿ. ಅತಿಯಾದ ಆಯಾಸವನ್ನು ಮಾಡಿಕೊಳ್ಳಲು ಹೋಗುವುದು ಬೇಡ. ಕಛೇರಿಯಲ್ಲಿ ಸಹೋದ್ಯೋಗಿಗಳ ಸಹಾನುಭೂತಿಯು ಸಿಗಲಿದೆ. ಸಂಬಂಧಗಳನ್ನು ಬಳಸಿಕೊಂಡು ಕೆಲಸವನ್ನು ಮಾಡುವಿರಿ. ಆರ್ಥಿಕತೆಯ ವಿಚಾರವು ನಿಮಗೆ ಪೂರ್ಣವಾಗಿ ತಿಳಿಯದು.
ವೃಷಭ ರಾಶಿ: ಎರಡನೇ ರಾಶಿಯವರಿಗೆ ಈ ವಾರ ನೋವನ್ನು ನುಂಗಿ ಬದುಕುವ ಕಲೆಯನ್ನು ನೀವು ಅರ್ಥಮಾಡಿಕೊಳ್ಳುವಿರಿ. ಮಕ್ಕಳ ಬಗ್ಗೆ ಅತಿಯಾದ ಚಿಂತೆ. ಯಾರನ್ನೂ ನೋಯಿಸುವುದು ನಿಮಗೆ ಇಷ್ಟವಾಗದು. ನೂತನ ವಸ್ತುಗಳನ್ನು ಪಡೆಯಲಿದ್ದೀರಿ. ಮನೋರಂಜನೆಯಲ್ಲಿ ನಿಮ್ಮ ಹೆಚ್ಚಿನ ಸಮಯವು ಕಳೆಯಲಿದೆ. ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಆಸ್ತಿ ಪಡೆಯಲು ನ್ಯಾಯಾಲಯ ಮೊರೆ. ಕಛೇರಿಯ ಕೆಲಸವನ್ನು ಕಾರಣಾಂತರಗಳಿಂದ ಮುಂದೂಡುವಿರಿ. ನಿಮ್ಮ ಸ್ವಭಾವವನ್ನು ಸರಿ ಮಾಡಿಕೊಳ್ಳಬೇಕು ಎಂದನಿಸಬಹುದು. ಅಧಿಕಾರಿಗಳ ಬೆಂಬಲವು ನಿಮಗೆ ಬಲವನ್ನು ಕೊಟ್ಟೀತು. ಕೆಲವು ಅವಕಾಶಗಳನ್ನು ನೀವೇ ಬಿಟ್ಟು ಹಾಳು ಮಾಡಿಕೊಳ್ಳುವಿರಿ.
ಮಿಥುನ ರಾಶಿ: ಏಕಾದಶ ಹಾಗೂ ಷಷ್ಠಾಧಿಪತಿ ಕುಜ ಚತುರ್ಥದಲ್ಲಿ ಇದ್ದು ಬಾಂಧವ್ಯ ಮಾತಿನಿಂದ ಹಾಳಾಗುವುದು. ತಾಯಿಯ ಮೇಲೆ ಪ್ರೀತಿ ಕಡಿಮೆಯಾಗಲಿದೆ. ಹೊಸ ಉದ್ಯಮವನ್ನು ಆರಂಭಿಸಲು ಧೈರ್ಯವು ಸಾಲದು. ಇನ್ನೊಬ್ಬರ ಜೊತೆ ಸೇರಿ ಮುಂದುವರಿಸುವುದು ನಿಮ್ಮ ಉತ್ತಮ ಆಯ್ಕೆ ಆಗಬಹುದು. ಮಕ್ಕಳಿಂದ ಉದ್ಯಮಕ್ಕೆ ಸಹಾಯವು ಸಿಗಬಹುದು. ಈ ವಾರ ದಾಂಪತ್ಯ ಜೀವನದಲ್ಲಿ ನಿಮ್ಮ ಸ್ಥಾನವು ಮುಖ್ಯವಾಗಿ ಇರಲಿದೆ. ಹೊಂದಾಣಿಕೆಯ ಮನೋಭಾವವು ಮುಖ್ಯವಾಗುವುದು. ಸಂಗಾತಿಯ ಜೊತೆ ಹಣವನ್ನು ಉಳಿಸಿಕೊಳ್ಳುವ ನಾನಾ ಪ್ರಯತ್ನಗಳನ್ನು ಮಾಡುವಿರಿ. ನಿಮ್ಮ ವರ್ತನೆಯು ಗಾಂಭೀರ್ಯದಿಂದ ಇರಲಿದೆ. ಅನಾರೋಗ್ಯದ ಸಮಸ್ಯೆಯನ್ನು ನೀವು ನಿರ್ಲಕ್ಷ್ಯ ಮಾಡುವುದು ಬೇಡ.
ಕರ್ಕಾಟಕ ರಾಶಿ: ಜುಲೈ ತಿಂಗಳ ಕೊನೆಯ ವಾರದಲ್ಲಿ ದಾಂಪತ್ಯದಲ್ಲಿ ಹೊಂದಾಣಿಕೆ ಸುಲಭವಾಗದು. ಗಂಡಾಂತರದಿಂದ ಪಾರಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಿರಿ. ಮನೆಗೆ ಬೇಕಾದ ಉಪಕರಣಗಳನ್ನು ಖರೀದಿಸುವಿರಿ. ಆಗಬೇಕಾದ ಕೆಲಸಗಳ ಬಗ್ಗೆ ನಿಮಗೆ ಹೆಚ್ಚಿನ ಆತಂಕ ಇರಲಿದೆ. ಈ ವಾರ ಕಳೆದುಕೊಂಡಿದ್ದರೆ ಬಗ್ಗೆ ಹೆಚ್ಚು ಮೋಹವಿರುವುದು. ಗೊಂದಲವನ್ನು ಮಾಡಿಕೊಳ್ಳದೇ ಸರಳವಾಗಿ ಕೆಲಸಗಳನ್ನು ಮಾಡಿಕೊಳ್ಳಿ. ಅಲ್ಪ ಹೂಡಿಯತ್ತ ಗಮನವಿರಲಿದೆ. ಬಿಡುವಿನ ಸಮಯವನ್ನು ಸಂಪಾದನೆಗಾಗಿ ಬಳಸಿಕೊಳ್ಳುವಿರಿ. ಹಿರಿಯರ ಆಶೀರ್ವಾದವು ಸಿಗಲಿದೆ. ಒಂದಕ್ಕಿಂತ ಹೆಚ್ಚು ಕೆಲಸವನ್ನು ಒಟ್ಟಿಗೇ ಮಾಡಲು ಹೋಗುವಿರಿ. ದಾನ ಮಾಡಲು ಮನಸ್ಸು ಹಿಂಜರಿಯಲಿದೆ.
ಸಿಂಹ ರಾಶಿ: ಈ ವಾರ ನಿಮಗೆ ಅಪೂರ್ಣ ಶುಭ. ರಾಶಿಯ ಅಧಿಪತಿ ದ್ವಾದಶದಲ್ಲಿದ್ದು ತಂದೆಯ ಬಗ್ಗೆ ಗೌರವ ಇರದು. ಉದ್ಯೋಗದ ಸ್ಥಳವು ನಿಮಗೆ ಖುಷಿಯ ಸ್ಥಾನವಾಗಲಿದೆ. ಹಳೆಯ ವಸ್ತುಗಳನ್ನು ನೀವು ಮಾರಾಟ ಮಾಡಲಿದ್ದೀರಿ. ಸಂದರ್ಭಕ್ಕೆ ತಕ್ಕಂತೆ ವರ್ತಿಸುವ ಸಂಗಾತಿಯನ್ನು ನೀವು ಇಷ್ಟಪಡಲಾರಿರಿ. ಈ ವಾರ ವ್ಯಾಪರವು ಹೆಚ್ಚಿನ ಲಾಭವನ್ನು ಕೊಟ್ಟರೂ ಸ್ವಲ್ಪಮಟ್ಟಿಗೆ ಖರ್ಚನ್ನು ಮಾಡುವ ಅನಿವಾರ್ಯತೆ ಬರಬಹುದು. ಸಂಗಾತಿಯಿಂದ ಹೊಗಳಿಕೆ ಸಿಗುವುದು. ಹೊರಗಿನ ವಸ್ತುವನ್ನು ಹೆಚ್ಚು ಸೇವಿಸುವಿರಿ. ನಿಮ್ಮ ಪ್ರಯತ್ನವು ಸಫಲತೆಯನ್ನು ಕಾಣುವುದು. ಗುರಿಯನ್ನು ಸೇರುವ ಮಾರ್ಗದ ಬಗ್ಗೆ ಸ್ಪಷ್ಟತೆ ಇರಲಿ. ಉತ್ತಮ ದಿನಗಳ ನಿರೀಕ್ಷೆಯಲ್ಲಿ ನೀವು ಇರುವಿರಿ.
ಕನ್ಯಾ ರಾಶಿ: ರಾಶಿ ಚಕ್ರದ ಆರನೇ ರಾಶಿಯವರಿಗೆ ಈ ವಾರ ಅಶುಭ. ತೃತೀಯ ಹಾಗೂ ಅಷ್ಟಮಾಧಿಪತಿ ಈ ರಾಶಿಯಲ್ಲಿದ್ದು ಸಹೋದರ ಬಗ್ಗೆ ಸದಭಿಪ್ರಾಯ ಇರದು. ವಿದ್ಯಾರ್ಥಿಗಳಿಗೆ ಅಭ್ಯಾಸದ ಬಗ್ಗೆ ಆತಂಕ ಇರಲಿದೆ. ಪರೀಕ್ಷೆಯ ಭಯವು ನಿಮ್ಮ ಅಧ್ಯಯನ ದಿಕ್ಕನ್ನೇ ತಪ್ಪಿಸಬಹುದು. ಭೂಮಿಯ ವ್ಯವಹಾರದಲ್ಲಿ ಲಾಭವಿರದೇ ಕೇಲವ ಓಡಾಟ, ಮಾತುಕತೆಗಳಲ್ಲಿಯೇ ಮುಕ್ತಾಯವಾಗಲಿದೆ. ಮಾತನಾಡಬೇಕಾದ ಸಂಧರ್ಭದಲ್ಲಿ ಮೌನ ವಹಿಸುವಿರಿ. ಕಾಲ್ಪನಿಕ ಜಗತ್ತಿನಿಂದ ಹೊರಬರುವ ದಾರಿಯನ್ನು ಕಂಡುಕೊಳ್ಳಿ. ಹಣದ ಹಿಂದೆ ಎಷ್ಟೇ ಬಿದ್ದರೂ ಸಿಕ್ಕಬೇಕಾದುದು ಮಾತ್ರ ಸಿಗಲಿದೆ. ದಕ್ಕುವುದು ಮಾತ್ರ ಸಿಕ್ಕುತ್ತದೆ. ನಿರುಪಯುಕ್ತ ವಸ್ತುಗಳನ್ನು ಮಾತ್ರ ನೀವು ದಾನ ಮಾಡುವಿರಿ.
ತುಲಾ ರಾಶಿ: ದ್ವಿತೀಯಾಧಿಪತಿಯೂ ಸಪ್ತಮಾಧಿಪತಿಯೂ ಆದ ಕುಜನು ದ್ವಾದಶದಲ್ಲಿ ಇದ್ದು ಹೊರಗಿನಿಂದ ಆಮದು ಮಾಡಿಕೊಳ್ಳುವ ವ್ಯವಹಾರದವರಿಗೆ ಸಂಕಷ್ಟ. ಉದ್ಯೋಗದಲ್ಲಿ ಇರಬೇಕಾದ ಚಾಣಾಕ್ಷತನ ಹಾಗೂ ಮೂಲಭೂತವಾದ ದಾಖಲೆಗಳನ್ನು ಸರಿಯಾಗಿ ಇರಿಕೊಳ್ಳುವುದು ಒಳ್ಳೆಯದು. ಸಮಯವನ್ನು ಹಾಳುಮಾಡದೇ ಕೆಲಸದ ಕಡೆ ಗಮನ ಹೆಚ್ಚಿರಲಿದೆ. ಸ್ಥಿರಾಸ್ತಿಯ ಬಗ್ಗೆ ಹೆಚ್ಚು ಜಾಗರೂಕತೆ ಬೇಕು. ನಿಮ್ಮ ಮನಸ್ಸಿಗೆ ತೋಚಿದ್ದನ್ನು ನೀವು ಮಾಡುವಿರಿ. ಹಿರಿಯರಿಂದ ನಿಂದನೆ ಕೇಳಿಬರುವುದು. ಈ ವಾರ ತಪ್ಪನ್ನು ತಿದ್ದಿಕೊಂಡು ಮುಂದೆ ಸಾಗಲು ಬಯಸುವಿರಿ. ನೆಮ್ಮದಿಯನ್ನು ಬಹಳ ಶ್ರಮದಿಂದ ಪಡೆಯಬೇಕಾಗುವುದು. ವಾಹನದಲ್ಲಿ ಓಡಾಟವನ್ನು ಕಡಿಮೆ ಮಾಡಿ.
ವೃಶ್ಚಿಕ ರಾಶಿ: ರಾಶಿಯ ಅಧಿಪತಿ ಹಾಗೂ ಷಷ್ಠಾಧಿಪತಿಯ ಸ್ಥಾನವು ಏಕಾದಶದಲ್ಲಿದ್ದು ಭೂ ವ್ಯವಹಾರಕ್ಕೆ ಸೂಕ್ತವಾಗಿದೆ. ಸ್ವಂತ ಆರೋಗ್ಯದ ಸುಧಾರಣೆಗೆ ಖರ್ಚು ಮಾಡುವಿರಿ. ಅಸಭ್ಯ ಮಾತುಗಳು ನಿಮಗೆ ಶೋಭೆಯನ್ನು ತರದು. ಈ ವಾರ ಎಲ್ಲರ ಜೊತೆ ಬೆರೆತು ಮಾತನಾಡುವುದನ್ನು ಇಷ್ಟಪಡುವಿರಿ. ಮಕ್ಕಳ ಕಲಿಕೆಗೆ ಬೇಕಾದ ಸಹಕಾರವನ್ನು ಕೊಡುವಿರಿ. ಹಳೆಯ ಪ್ರೇಮ ಪ್ರಕರಣವು ಬೆಳಕಿಗೆ ಬರಬಹುದು. ಭೂ ಉತ್ಪನ್ನದಿಂದ ಅಧಿಕ ಲಾಭ. ನೂತನ ಗೃಹವನ್ನು ಖರೀದಿಸಲಿದ್ದೀರಿ. ನಿಮಗೆ ಸಿಕ್ಕ ಅವಕಾಶಗಳನ್ನು ದುರುಪಯೋಗ ಮಾಡಿಕೊಳ್ಳುವ ಚಿಂತನೆ ಒಳ್ಳೆಯದಲ್ಲ. ಮಾನಸಿಕ ಒತ್ತಡದಿಂದ ಕೆಲಸವು ಬೇಗನೆ ಸಾಕೆನಿಸಬಹುದು. ಎಲ್ಲದರಲ್ಲಿಯೂ ಪ್ರತ್ಯೇಕತೆಯನ್ನು ಬಯಸುವಿರಿ.
ಧನು ರಾಶಿ: ಈ ವಾರ ನಿಮಗೆ ಮಿಶ್ರಫಲ. ಪಂಚಮ ಹಾಗೂ ದ್ವಾದಶಾಧಿಪತಿ ದಶಮದಲ್ಲಿದ್ದು ವೃತ್ತಿಯಲ್ಲಿ ದೂರದ ಬಂಧುಗಳ ಭೇಟಿಯಾಗಲಿದೆ. ಅವರ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ನಿಮ್ಮ ನಡವಳಿಕೆಯು ಅಹಂಕಾರದಂತೆ ತೋರೀತು. ವರ್ತನೆಯನ್ನು ಆದಷ್ಟು ಸಂದರ್ಭಕ್ಕೆ ತಕ್ಕಂತೆ ಇಟ್ಟುಕೊಳ್ಳುವುದು ಉತ್ತಮ. ಕೆಲವರ ಮಾತುಗಳು ನಿಮಗೆ ನೋವನ್ನು ತಂದೀತು. ಹೇಳಿಕೊಳ್ಳದೇ ಒಳಗೇ ಇಟ್ಟುಕೊಳ್ಳುವಿರಿ. ಮಕ್ಕಳ ಉದ್ಯೋಗದಲ್ಲಿ ಬದಲಾವಣೆಯನ್ನು ಮಾಡಿಸುವಿರಿ. ದಿನಗೂಲಿಯವರಿಗೆ ಈ ವಾರ ಕಷ್ಟವು ಎದುರಾಗುವುದು. ಕೆಲಸವನ್ನು ಹೆಚ್ಚು ಹುಡುಕುವ ಸನ್ನಿವೇಶ ಬರಲಿದೆ. ಹಣಕಾಸಿನ ವಿಚಾರದಲ್ಲಿ ಜಾಗರೂಕತೆ ಮುಖ್ಯವಾದೀತು. ನಿಮ್ಮ ಭವಿಷ್ಯದ ಕನಸನ್ನು ಮಿತ್ರರ ಜೊತೆ ಹಂಚಿಕೊಳ್ಳುವಿರಿ.
ಮಕರ ರಾಶಿ: ಈ ತಿಂಗಳ ಕೊನೆಯ ವಾರದಲ್ಲಿ ಚತುರ್ಥ ಹಾಗೂ ಏಕಾದಶಾಧಿಪತಿಯಾದ ಕುಜನು ನವಮ ಸ್ಥಾನವಾದ ಬುಧನ ರಾಶಿಯಲ್ಲಿದ್ದು ನಿಮ್ಮವರ ಮಾತಿನಿಂದ ಇರುಸು ಮುರುಸಾದೀತು. ರಾಜಕೀಯ ವ್ಯಕ್ತಿಗಳಿಂದ ಕೆಲಸವಾಗಲು ಅವರಿಗೆ ಹಣವನ್ನು ಕೊಡುವಿರಿ. ಸ್ನೇಹಿತ ಸಹವಾಸದಿಂದ ದುರಭ್ಯಾಸವನ್ನು ಕಲಿಯುವ ಸಾಧ್ಯತೆ ಇದೆ. ಈ ವಾರ ಆರೋಗ್ಯದ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ವಿಧವಿಧವಾದ ಪ್ರಯತ್ನವನ್ನು ಮಾಡುವಿರಿ. ನಿಮ್ಮ ಯೋಜನೆಗಳು ಹೆಚ್ಚು ಇಷ್ಟವಾಗಲಿದೆ. ನಿಮ್ಮ ಮೇಲೆ ಬರುವ ನಕಾರಾತ್ಮಕ ಮಾತುಗಳನ್ನು ನೀವು ಅಲ್ಲಗಳೆಯುವಿರಿ. ಒಂದೇ ರೀತಿಯ ಕೆಲಸವು ನಿಮಗೆ ನಿರುತ್ಸಾಹ ತರಲಿದೆ. ನೆರೆ-ಹೊರೆಯವರ ಜೊತೆ ಮಾತು ಮಿತವಾಗಿರಲಿ.
ಕುಂಭ ರಾಶಿ: ಜುಲೈ ತಿಂಗಳ ಕೊನೆಯ ವಾರದಲ್ಲಿ ತೃತೀಯ ಹಾಗೂ ದಶಮಾಧಿಪತಿಯಾದ ಕುಜನು ಅಷ್ಟಮದಲ್ಲಿದ್ದು ಭೂಮಿಯ ವಿಚಾರಕ್ಕೆ ಕುಟುಂಬದಲ್ಲಿ ಪರಸ್ಪರ ಜಗಳವಾಗುವ ಸಾಧ್ಯತೆ ಇದೆ. ಕಾನೂನಾತ್ಮಕ ವಿಷಯವನ್ನು ಚರ್ಚಿಸಿ ಮಾಡುವುದು ಉತ್ತಮ. ಕಡಿಮೆ ಖರ್ಚಿನಲ್ಲಿ ನಿಮ್ಮ ಕೆಲಸವು ಮುಗಿಯುವಂತೆ ನೋಡಿಕೊಳ್ಳುವಿರಿ. ಅತಿಯಾದ ಉತ್ಸಾಹ ಹಾಗೂ ಸಿದ್ಧತೆಯಲ್ಲಿರುವ ನಿಮಗೆ ಮನೆಯವರ ಮಾತು ಉತ್ಸಾಹಕ್ಕೆ ಭಂಗವನ್ನು ಮಾಡಿಸಬಹುದು. ಮಾತನಾಡಿ ಸಿಕ್ಕಿಬೀಳುವ ಸಾಧ್ಯತೆ ಇದೆ. ಮಾತಿನ ಮೇಲೆ ಹಿಡಿತವಿರಲಿ. ಅಪರಿಚಿಯ ಸ್ಥಳಗಳ ಬಗ್ಗೆ ಮಾಹಿತಿಯನ್ನು ಪಡೆದು ಮುನ್ನಡೆಯುವುದು ಶ್ರೇಯಸ್ಕರ. ಹಣವಿದ್ದ ಮಾತ್ರಕ್ಕೆ ಎಲ್ಲ ಸಾಧ್ಯವಾಗದು.
ಮೀನ ರಾಶಿ: ಈ ವಾರ ನಿಮಗೆ ಮಿಶ್ರಫಲ. ದ್ವಿತೀಯಾಧಿಪತಿ ಹಾಗೂ ನವಮಾಧಿಪತಿ ಸಪ್ತಮದಲ್ಲಿ ಇದ್ದು ಸಂಗಾತಿ ವಿಚಾರದಲ್ಲಿ ಕೋಪ, ಮಾಡಿದ ಕಾರ್ಯದಲ್ಲಿ ಸಕಾರಾತ್ಮಕವಾಗಿ ಅಂಶವನ್ನೇ ಹೇಳುವುದು, ಕೇಳಿದ್ದನ್ನು ಕೊಡಸದೇ ಸತಾಯಿಸುವುದು ನಡೆಯಲಿದೆ. ಪಾಲುದಾರಿಕೆಯಲ್ಲಿ ಉಂಟಾದ ಗೊದಲ್ಲವನ್ನು ಬಗೆಹರಿಸಿಕೊಂಡು ಮೈತ್ರಿ ಮಾಡಿಕೊಂಡರೆ ಇಬ್ಬರಿಗೂ ಅನುಕೂಲ. ನಿಮ್ಮ ಸ್ಥಿರಾಸ್ತಿ ಪರಿಶೀಲನೆಯನ್ನು ಮಾಡಿಕೊಳ್ಳುವುದು ಉತ್ತಮ. ನಿಮ್ಮ ಕಷ್ಟವನ್ನು ಸ್ನೇಹಿತರ ಜೊತೆ ಹಂಚಿಕೊಳ್ಳುವಿರಿ. ಈ ವಾರ ಏನೇ ಬಂದರೂ ಎದುರಿಸುತ್ತೇನೆ ಎಂಬ ಗಂಡೆದೆ ನಿಮ್ಮದಾಗಲಿದೆ. ನಿಮಗೆ ಕೊಟ್ಟ ಜವಾಬ್ದಾರಿಯನ್ನು ಅತ್ಯಂತ ಕಾಳಜಿಯಿಂದ ಮಾಡುವಿರಿ. ನಿಮ್ಮ ಯಶಸ್ಸು ನಿಮಗೆ ಮುಳುವಾಗಬಹುದು. ಎಚ್ಚರಿಕೆ ಹೆಜ್ಜೆಯನ್ನು ಇಡಿ. ಹಿರಿಯರ ಮಾರ್ಗದರ್ಶನವನ್ನು ಪಡೆಯುವ ಅವಶ್ಯಕತೆ ಇರಲಿದೆ.
– ಲೋಹಿತ ಹೆಬ್ಬಾರ್ – 8762924271 (what’s app only)