ಇದು ಜನವರಿ ತಿಂಗಳ ಮೂರನೇ ವಾರವಿದಾಗಿದೆ. ೧೨-೦೧-೨೦೨೫ ರಿಂದ ೧೮-೦೧-೨೦೨೫ರವರೆಗೆ ಇರಲಿದೆ. ಸೂರ್ಯನು ಮಕರ ರಾಶಿಯನ್ನು ಪ್ರವೇಶ ಮಾಡಲಿದ್ದಾನೆ. ಶನಿಯ ಸ್ಥಾನವಾದ ಕಾರಣ ಕ್ಲೀಷೆಗಳಿಂದ ಅಲ್ಪ ತೊಡಕಾದರೂ ಗುರುವಿನ ದೃಷ್ಟಿಯಿಂದ ಅದು ಕಡಿಮೆಯಾಗಲಿದೆ. ಆತಂಕವನ್ನು ಅರೆಕ್ಷಣದಲ್ಲಿ ದೂರಮಾಡಿಕೊಳ್ಳುವಿರಿ. ಸಕಲರಿಗೂ ಈ ವಾರ ಶುಭವಾಗಲಿ.
ಮೇಷ ರಾಶಿ: ರಾಶಿ ಚಕ್ರದ ಮೊದಲನೇ ರಾಶಿಯವರಿಗೆ ಜನವರಿ ತಿಂಗಳ ಮೂರನೇ ವಾರದಲ್ಲಿ ಮಿಶ್ರಫಲವಿದೆ. ಸೂರ್ಯನು ದಶಮಸ್ಥಾನಕ್ಕೆ ಬರಲಿದ್ದು ಉದ್ಯೋಗದಲ್ಲಿ ಒತ್ತಡ ಹೆಚ್ಚು. ಮಕ್ಕಳಿಂದ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು ಅದು ನಿಮಗೆ ತುಂಬಾ ಹೆಮ್ಮೆ ತರುತ್ತದೆ. ವಿದ್ಯಾರ್ಥಿಯಾಗಿದ್ದರೆ ಶಿಕ್ಷಣದಲ್ಲಿ ಯಾವುದೇ ಅಡೆತಡೆಗಳು ಈ ವಾರ ಬಗೆಹರಿಯಬಹುದು. ವೈವಾಹಿಕ ಜೀವನದಲ್ಲಿ ನೀವು ಪ್ರೀತಿಯನ್ನು ಅನುಭವಿಸುವಿರಿ. ವೃತ್ತಿಯ ಕಾರ್ಯಕ್ಕೆ ಅನ್ಯರ ಸಹಕಾರವನ್ನು ಕೇಳುವಿರಿ. ಕೆಲವು ದಿನಗಳವರೆಗೆ ಪಟ್ಟಣದಿಂದ ಹೊರಗೆ ಹೋಗಲು ಯೋಜಿಸಬಹುದು. ವಾರವು ಉದ್ಯೋಗಿಗಳಿಗೆ ತುಂಬಾ ಒಳ್ಳೆಯದು. ಕಷ್ಟಪಟ್ಟು ಕೆಲಸ ಮಾಡುತ್ತೀರಿ ಮತ್ತು ನಿಮ್ಮ ವಿರೋಧಿಗಳಿಗೆ ಕಠಿಣ ಸ್ಪರ್ಧೆಯನ್ನು ನೀಡುತ್ತೀರಿ. ಹಣದ ದೃಷ್ಟಿಯಿಂದ ವಾರವೂ ಉತ್ತಮವಾಗಿರುತ್ತದೆ. ನಿಮ್ಮ ವೆಚ್ಚಗಳು ಕಡಿಮೆ ಇರುತ್ತದೆ. ಉಳಿತಾಯ ಸದ್ಯದ ಸ್ಥಿತಿಯಲ್ಲಿ ಸಾಧ್ಯವಾಗುತ್ತದೆ.
ವೃಷಭ ರಾಶಿ: ರಾಶಿ ಚಕ್ರದ ಎರಡನೇ ರಾಶಿಯವರಿಗೆ ಈ ವಾರದಲ್ಲಿ ಶುಭ. ರಾಶಿಯ ಅಧಿಪತಿ ದಶಮದಲ್ಲಿ ಇದ್ದು ಕಲಾತ್ಮಕ ವಿಚಾರಕ್ಕೆ ಹೆಚ್ಚು ಪುಷ್ಟಿಕೊಡುವನು. ರವಿಯು ನವಮದಲ್ಲಿ ಇದ್ದು ನಿಮಗೆ ಉನ್ನತ ಸ್ಥಾನದಿಂದ ಗೌರವ ಸಿಗಲಿದೆ. ಕೆಲವು ಅತಿಥಿಗಳು ಅನಿರೀಕ್ಷಿತವಾಗಿ ಮನೆಗೆ ಬರಬಹುದು. ನಿಮ್ಮನ್ನು ಸಾಕಷ್ಟು ಕಾರ್ಯಕ್ಕೆ ಕಳುಹಿಸುತ್ತದೆ. ವೃತ್ತಿಯಲ್ಲಿ ನಿಮ್ಮ ಆತಂಕವು ಹೆಚ್ಚಾಗುವುದು. ಎಲ್ಲವನ್ನೂ ನಿರ್ವಹಿಸುವ ಸಾಮರ್ಥ್ಯ ನಿಮ್ಮಲ್ಲಿ ಇದೆ. ಪ್ರೀತಿಯ ಬಗ್ಗೆ ಮಾತನಾಡುತ್ತಾ ಸಂಗಾತಿಯ ಸ್ವಭಾವದಲ್ಲಿ ಬದಲಾವಣೆಯನ್ನು ನೋಡುತ್ತೀರಿ. ಶ್ರಮಕ್ಕೆ ತಕ್ಕ ಫಲ ಕಾಣಿಸದು ಎಂಬ ಫಲಾಪೇಕ್ಷೆ ಇರುವುದು. ಕೆಲಸದ ಸ್ಥಳದಲ್ಲಿ ಪರಿಸ್ಥಿತಿ ಅನುಕೂಲವಾಗಿರುವುದು. ಕಷ್ಟಪಟ್ಟು ಕೆಲಸ ಮಾಡುತ್ತೀರಿ ಮತ್ತು ನಿಮ್ಮ ಉತ್ಸಾಹವನ್ನು ಪರಿಗಣಿಸಿ ಹಿರಿಯರು ಮುಂದುವರಿಯಲು ನಿಮ್ಮನ್ನು ಪ್ರೋತ್ಸಾಹಿಸಬಹುದು. ದುರ್ಗಾರಾಧನೆಗೆ ಸಮಯವನ್ನು ಕೊಡಿ.
ಮಿಥುನ ರಾಶಿ: ಈ ತಿಂಗಳ ಮೂರನೇ ವಾರದಲ್ಲಿ ನಿಮಗೆ ಮಿಶ್ರಫಲವಿದೆ. ತಂದೆಯ ಬಗ್ಗೆ ಸದ್ಭಾವ ಇರದು. ಆದರೆ ಗೌರವವನ್ನು ಕೊಡುವಿರಿ. ಬುಧನು ಸಪ್ತಮದಲ್ಲಿ ಇರುವ ಕಾರಣ ಆತ್ಮಸಂತೋಷದಲ್ಲಿ ಯಾವುದೇ ತೊಡಕಾಗದು. ಯಾವುದೇ ನಕಾರಾತ್ಮಕ ವಿಚಾರಕ್ಕೂ ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ಆದರೆ ನಿಮ್ಮ ತಿಳುವಳಿಕೆಯ ಜೊತೆ ಅವುಗಳನ್ನು ನಿಭಾಯಿಸಿ. ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಲು ನಿಮಗೆ ಸಾಧ್ಯವಾಗುವುದಿಲ್ಲ. ಕೆಲಸಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳವರೆಗೆ ಮನೆಯಿಂದ ದೂರವಿರಬೇಕಾಗಬಹುದು. ಎಲ್ಲವನ್ನೂ ಬಿಟ್ಟರೂ ನಿಮ್ಮನ್ನು ಕೆಲವು ಸಂಗತಿಗಳು ಬಿಡಲಾರವು. ನಿಮ್ಮ ಕೆಲಸವನ್ನು ನೀವು ಪ್ರಾಮಾಣಿಕವಾಗಿ ಮತ್ತು ಗಂಭೀರವಾಗಿ ಪೂರ್ಣಗೊಳಿಸುವಿರಿ. ಈ ಸಮಯದಲ್ಲಿ, ನಿಮ್ಮ ವೆಚ್ಚಗಳು ಹೆಚ್ಚಾಗುವುದು. ರಾಮರಕ್ಷಾಸ್ತೋತ್ರವನ್ನು ಪಠಿಸಿ.
ಕರ್ಕಾಟಕ ರಾಶಿ; ಜನವರಿಯ ಮೂರನೇ ವಾರದಲ್ಲಿ ನಿಮಗೆ ಶುಭ. ರವಿತು ಸಪ್ತದಲ್ಲಿದ್ದು ದಾಂಪತ್ಯದ ವೈಮನಸ್ಯವನ್ನು ದೂರಮಾಡುವನು. ಅತಿಯಾದ ಸಂತೋಷದಿಂದ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದು. ನಿಮ್ಮ ಮನೆಯ ವಾತಾವರಣ ಶಾಂತವಾಗಿರುತ್ತದೆ. ಕುಟುಂಬಗಳ ನಡುವಿನ ಪರಸ್ಪರ ಸಮನ್ವಯವು ಮೊದಲಿಗಿಂತ ಉತ್ತಮವಾಗಿರುತ್ತದೆ. ಹೆತ್ತವರ ಜೊತೆ ನೀವು ಉತ್ತಮ ಸಮಯವನ್ನು ಕಳೆಯುವಿರಿ. ಹಣದ ಪರಿಸ್ಥಿತಿ ಉತ್ತಮವಾಗಿರುತ್ತದೆ. ವಾರದ ಕೊನೆಯಲ್ಲಿ ಮನಸ್ಸಿನಲ್ಲಿ ಸ್ವಲ್ಪ ಸಂದಿಗ್ಧತೆ ಉಂಟಾದರೂ ಅದು ನಿಮ್ಮನ್ನು ತುಂಬಾ ಪ್ರಕ್ಷುಬ್ಧಗೊಳಿಸದು. ಮನಸ್ಸಿಗೆ ಬೇಕಾದ ನೆಮ್ಮದಿ ಇರದು. ಆರೋಗ್ಯದ ವಿಷಯದಲ್ಲಿ ಈ ಸಮಯದಲ್ಲಿ ನಿಮ್ಮ ಬಗ್ಗೆ ನೀವು ಕಾಳಜಿವಹಿಸಬೇಕು. ಸುವಸ್ತುವನ್ನು ದಾನವಾಗಿ ನೀಡಿ.
ಸಿಂಹ ರಾಶಿ: ರಾಶಿ ಚಕ್ರದ ಐದನೇ ರಾಶಿಯವರಿಗೆ ಸೂರ್ಯನ ಬದಲವಾಣೆ ಮಿಶ್ರಫಲವನ್ನು ಕೊಡುವುದು. ರಾಶಿಯ ಅಧಿಪತಿ ಷಷ್ಠದಲ್ಲಿ ಇದ್ದು ನೀವೇ ನಿಮಗೆ ಶತ್ರುಳಾಗುವಿರಿ. ತಪ್ಪು ಹೆಜ್ಜೆಗಳು ನಿಮ್ಮ ದಿಕ್ಕನ್ನು ತಪ್ಪಿಸುವುವು. ನಿಮ್ಮ ಸಂಗಾತಿಯಿಂದ ತಪ್ಪುಗ್ರಹಿಕೆಯು ಹೆಚ್ಚಾಗಬಹುದು. ಇದೇ ನಿಮ್ಮ ನಡುವಿನ ಅಂತರಕ್ಕೆ ಕಾರಣವಾಗುತ್ತದೆ. ನಿಮ್ಮ ಸಂಬಂಧವನ್ನು ಸುಧಾರಿಸಲು ಬಯಸಿದರೆ ಸಂಗಾತಿಯನ್ನು ಅನುಮಾನಿಸುವುದನ್ನು ತಪ್ಪಿಸಿ ಮತ್ತು ಮೊದಲು ಅವರನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಪೋಷಕರ ಜೊತೆಗಿನ ಸಂಬಂಧ ಉತ್ತಮವಾಗಿರುತ್ತವೆ. ಹಣದ ಪರಿಸ್ಥಿತಿ ತೃಪ್ತಿಕರವಾಗಿರುತ್ತದೆ. ನೀವು ಹೂಡಿಕೆ ಮಾಡಲು ಬಯಸಿದರೆ, ಸಮಯವು ಅನುಕೂಲಕರವಾಗಿರುತ್ತದೆ. ನೀವು ಯಾವುದೇ ಅಮೂಲ್ಯ ವಸ್ತುವನ್ನು ಖರೀದಿಸಬಹುದು. ಆದಿತ್ಯಹೃದಯ ಪಠನದಿಂದ ನೆಮ್ಮದಿ.
ಕನ್ಯಾ ರಾಶಿ: ಈ ರಾಶಿಯವರಿಗೆ ಜನವರಿ ತಿಂಗಳ ಮೂರನೇ ವಾರದಲ್ಲಿ ಸೂರ್ಯನ ಬದಲಾವಣೆ ಶುಭ ತರುವುದು. ವೈದ್ಯ ವೃತ್ತಿಯಲ್ಲಿ ಇರುವವರಿಗೆ ಉನ್ನತ ಸ್ಥಾನ, ಪ್ರಶಂಸೆಗಳನ್ನು ಪಡೆಯಬಹುದು. ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೀರ್ತಿ ಹೆಚ್ಚಾಗುವುದು. ಹಣಕಾಸಿನ ವಿಷಯಗಳಲ್ಲಿ ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಬೇಕಾಗುತ್ತದೆ. ಹಣವು ದೀರ್ಘಕಾಲದವರೆಗೆ ಸಿಲುಕಿಕೊಂಡಿದ್ದರೆ ವಿಷಯವನ್ನು ಶಾಂತವಾಗಿ ಬಗೆಹರಿಸಲು ಪ್ರಯತ್ನಿಸಬೇಕು. ಕಡಿಮೆ ಸಮಯದಲ್ಲಿ ಹೆಚ್ಚು ಲಾಭ ಗಳಿಸುವ ಪರಿಸ್ಥಿತಿಯಲ್ಲಿ ನೀವು ಸಿಲುಕಿಕೊಳ್ಳಬಹುದು. ಬಂಧುಗಳಿಂದ ನಿಮಗೆ ಸಮಾಧಾನ ಸಿಗಲಿದೆ. ಎಲ್ಲ ಅಂಶಗಳನ್ನು ಪರಿಶೀಲಿಸಿದ ಅನಂತರವೇ ಅವಸರದಿಂದ ಮತ್ತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳದಿರುವುದು ಉತ್ತಮ. ಪ್ರೀತಿಯ ವಿಷಯಗಳಲ್ಲಿ ವ್ಯಕ್ತಿಯೊಂದಿಗೆ ನಿಮ್ಮ ನಿಕಟತೆ ಹೆಚ್ಚಾಗುತ್ತದೆ. ಸಂಗಾತಿಯ ಜೊತೆ ನಿಮ್ಮ ಭಿನ್ನಾಭಿಪ್ರಾಯಗಳು ಮುಂದುವರಿಯುತ್ತವೆ.
ತುಲಾ ರಾಶಿ: ರಾಶಿ ಚಕ್ರದ ಏಳನೇ ರಾಶಿಯವರಿಗೆ ಈ ವಾರ ಸೂರ್ಯನ ಬದಲಾವಣೆ ಶುಭಕರವೇ. ಕುಟುಂಬದ ಹಿರಿಯರಿಗೆ ಗೌರವ ಸಿಗಲಿದೆ. ತಂದೆಗೆ ಸಂತೋಷವನ್ನು ಕೊಡುವಿರಿ. ವಾತಾವರಣದ ಬದಲಾವಣೆಗಳು ನಿಮ್ಮ ದೇಹ ಹಾಗೂ ಮನಸ್ಸಿನ ಮೇಲೆ ವಿರುದ್ಧ ಪ್ರಭಾವವನ್ನು ಬೀರುತ್ತವೆ. ನೀವು ಸುದೀರ್ಘ ಪ್ರವಾಸವನ್ನು ಯೋಜಿಸುತ್ತೀರಿ. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ಗಮನ ಹೆಚ್ಚು ಹೋಗಬೇಕಾಗುವುದು. ಮನಸ್ಸು ಭೋಗ ವಸ್ತುಗಳ ಕಡೆ ಗಮನಕೊಡದು. ಸಂಘರ್ಷಕ್ಕೆ ಕಾರಣವಾಗಬಹುದಾದ ತಪ್ಪು ತಿಳುವಳಿಕೆಯನ್ನು ತಪ್ಪಿಸಲು ನಿಮ್ಮ ವ್ಯಾಪಾರದಲ್ಲಿ ಸ್ಪಷ್ಟವಾಗಿ ಸಂವಹನ ನಡೆಸಲು ಪ್ರಯತ್ನಿಸಿ. ಈ ವಾರ ವಿದ್ಯಾರ್ಥಿಗಳಿಗೆ ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ಉತ್ತಮ ವರ್ತನೆ ಮತ್ತು ತಾಳ್ಮೆ ಕೀಲಿಗಳಾಗಿವೆ.
ವೃಶ್ಚಿಕ ರಾಶಿ: ಜನವರಿ ತಿಂಗಳ ಮೂರನೇ ವಾರದಲ್ಲಿ ರಾಶಿ ಚಕ್ರದ ಎಂಟನೇ ರಾಶಿಯವರಿಗೆ ಸೂರ್ಯನ ಸ್ಥಾನ ಬದಲಾವಣೆಯಿಂದ ಶುಭ. ತೃತೀಯ ಸ್ಥಾನಕ್ಕೆ ಹೋದಕಾರಣ ಸಾಮರ್ಥ್ಯವೃದ್ಧಿಗೆ ಅವಕಾಶ ಹೆಚ್ಚು. ಸುಪ್ತಪ್ರತಿಭೆಗಳ ಅನಾವರಣವಾಗಲಿದೆ. ರಾಶಿಯ ಅಧಿಪತಿ ನೀಚನಾಗಿ ನಿಮ್ಮನ್ನು ಮತ್ತಾವುದೋ ಕಾರ್ಯಕ್ಕೆ ಕರೆದೊಯ್ಯಬಹುದು. ಕೆಲವೊಂದು ಸ್ವಂತ ವ್ಯವಹಾರಗಳಿಗೆ ಮಧ್ಯವರ್ತಿಗಳನ್ನು ದೂರವಿಡುವುದು ಒಳ್ಳೆಯದು. ಸಿದ್ಧಪಡಿಸಿದ ಆಹಾರವನ್ನು ತಯಾರಿಸುವವರಿಗೆ ಮಾರುಕಟ್ಟೆ ವಿಸ್ತರಣೆಯನ್ನು ಮಾಡುವಿರಿ. ಅತಿಯಾದ ಆಲಸ್ಯ ಮತ್ತು ಅಹಂಕಾರ ನಿಮ್ಮನ್ನು ವ್ಯವಹಾರಗಳಿಂದ ಹೊರಗಿಡುತ್ತದೆ. ಸಂಗಾತಿಯ ಆದಾಯದಲ್ಲಿ ಹೆಚ್ಚಳ ಕಾಣಬಹುದು. ದಿನಸಿ ದಾಸ್ತಾನುದಾರರಿಗೆ ತಕ್ಷಣದ ಲಾಭ ದೊರೆಯಬಹುದು. ಸುಬ್ರಹ್ಮಣ್ಯನಲ್ಲಿ ಶರಣಾಗಿ.
ಧನು ರಾಶಿ: ಈ ತಿಂಗಳ ಮೂರನೇ ವಾರದಲ್ಲಿ ನಿಮ್ಮ ರಾಶಿಯಲ್ಲಿದ್ದ ಸೂರ್ಯನು ದ್ವಿತೀಯಕ್ಕೆ ಹೋಗುವನು. ಸರ್ಕಾರಿ ಕಚೇರಿಗಳಿಗೆ ಹೆಚ್ಚು ಅಲೆದಾಟವಾದರೂ ಕಡಿಮೆಯಾಗಿ ಬೇಗ ಕೆಲಸವೂ ಹಾಗೂ ಬರಬೇಕಾದ ಹಣವೂ ಬರಲಿದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ಮುಟ್ಟುತ್ತದೆ. ಸಂತೋಷಕ್ಕಾಗಿ ಅಧಿಕ ಪ್ರಯತ್ನವಿರುವುದು. ಕಾರ್ಯದ ಒತ್ತಡಗಳ ನಡುವೆ ಕುಟುಂಬದಲ್ಲಿನ ಆಗುಹೋಗುಗಳತ್ತ ಗಮನಹರಿಸುವುದು ಒಳ್ಳೆಯದು. ಹಳೆಯ ಸ್ನೇಹಿತರ ಸಂಪರ್ಕ ದೊರೆತು ಸಂತೋಷಪಡುವಿರಿ. ಲೆಕ್ಕ ಪತ್ರಗಳನ್ನು ಪರಿಶೀಲನೆ ಮಾಡುವವರಿಗೆ ಹೆಚ್ಚು ಕೆಲಸ ದೊರೆಯುತ್ತದೆ. ಷೇರು ವ್ಯವಹಾರಗಳಲ್ಲಿ ಅಷ್ಟು ಏಳಿಗೆ ಇರುವುದಿಲ್ಲ. ಕೆಲವರಿಗೆ ಸೂಕ್ತ ವೈವಾಹಿಕ ಸಂಬಂಧ ದೊರೆಯುವ ಸಾಧ್ಯತೆ ಇದೆ. ಹಿರಿಯರಿಂದ ನಿಮ್ಮ ಪರಂಪರೆಯ ಬಗ್ಗೆ ಹೆಚ್ಚಿನ ತಿಳಿವಳಿಕೆ ದೊರೆಯುತ್ತದೆ. ಗೋಪೂಜೆಯಿಂದ ಮಾನಸಿಕ ನೆಮ್ಮದಿ.
ಮಕರ ರಾಶಿ; ರಾಶಿ ಚಕ್ರದ ಹತ್ತನೇ ರಾಶಿಯವರಿಗೆ ಈ ವಾರ ರವಿಯು ನಿಮ್ಮ ರಾಶಿಗೆ ಬರುವುದರಿಂದ ನಿಮ್ಮಲ್ಲಿರುವ ದಿವ್ಯತ್ವ ಜಾಗರೂರಕವಾಗುವುದು. ಅಸಾಧ್ಯವನ್ನೂ ಸಾಧಿಸುವೆನೆಂಬ ಆತ್ಮಬಲ ಬರುವುದು. ಅಧಿಕಾರಿಗಳನ್ನು ಭೇಟಿ ಮಾಡುವ ಮೂಲಕ ಉದ್ಯೋಗದಲ್ಲಿ ವರ್ಚಸ್ಸನ್ನು ಹೆಚ್ಚು ಮಾಡಿಕೊಳ್ಳುವಿರಿ. ಆದಾಯವು ನಿರೀಕ್ಷಿತ ಮಟ್ಟದಲ್ಲಿದ್ದರೂ ಬಂಧುಗಳ ಕಾರಣದಿಂದ ಖರ್ಚು ಅದನ್ನು ಮೀರಿರುತ್ತದೆ. ಸಂಸಾರದಲ್ಲಿ ಕಲಹ ಏರ್ಪಡಬಹುದು. ಪಿತ್ತಪ್ರಕೋಪವು ಔಷಧೋಪಚಾರದಿಂದ ಕಡಿಮೆಯಾಗುವುದು. ವಿದೇಶದಲ್ಲಿದ್ದು ಸಂಗಾತಿಯನ್ನು ಅರಸುತ್ತಿರುವವರಿಗೆ ಈಗ ಸಂಗಾತಿ ಸಿಗುವ ಸಾಧ್ಯತೆ ಇದೆ. ಕೃಷಿ ಸಂಬಂಧಿತ ವ್ಯವಹಾರಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆ ಕಾಣಬಹುದು. ಸರ್ಕಾರಿ ಉದ್ಯೋಗದವರಿಗೆ ಮಾನ್ಯತೆ ದೊರೆಯುವ ಸಾಧ್ಯತೆ ಇದೆ.
ಕುಂಭ ರಾಶಿ: ಇದು ಜನವರಿಯ ಮೂರನೇ ವಾರವಾಗಿದ್ದು ರವಿಯು ದ್ವಾದಶಕ್ಕೆ ಬರಲಿದೆ. ತಂದೆಯ ಕಾರಣಕ್ಕೆ ಖರ್ಚಾಗುವುದು. ಆದರೆ ಒಳ್ಳೆಯ ಮನಸ್ಸಿನಿಂದ ತಂದೆಯ ಆರೋಗ್ಯವನ್ನು ನೋಡಿಕೊಳ್ಳುವಿರಿ. ಭೂಮಿಯಿಂದ ಸಿಗುವ ವಸ್ತುಗಳನ್ನು ವಿಶೇಣವಾಗಿ ತೈಲ ವಸ್ತುಗಳನ್ನು ಮಾರಾಟ ಮಾಡುವವರಿಗೆ ಉತ್ತಮ ಲಾಭವಾಗುವ ಸಾಧ್ಯತೆ ಇದೆ. ಸರ್ಕಾರದಿಂದ ಬರಬೇಕಾದ ಹಳೆ ಬಾಕಿಗಳು ಈಗ ಬಂದು ಸೇರುತ್ತವೆ. ನಿಮ್ಮ ಕೆಲಸಗಳಿಗೆ ಹೆಚ್ಚು ಆದ್ಯತೆ ನೀಡಿರಿ. ಸಾಹಸ ಕಲಾವಿದರಿಗೆ ಯಶಸ್ಸು ಸಿಗುತ್ತದೆ. ಹಣದ ಒಳಹರಿವು ತೃಪ್ತಿಕರವಾಗಿರುತ್ತದೆ. ಸಂಗಾತಿಗೆ ಸಮಯ ಕೊಡಲಾಗದೇ ಇರುವುದರಿಂದ ಬೇಸರಗೊಳ್ಳಬಹುದು. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವವರಿಗೆ ಅವಕಾಶ ಒದಗುತ್ತದೆ. ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಚೇತರಿಕೆ ಕಂಡು ಸಂತಸವಾಗುತ್ತದೆ. ರುದ್ರಾಭಿಷೇಕವನ್ನು ಮಾಡಿಸಿ.
ಮೀನ ರಾಶಿ: ಜನವರಿಯ ಮೂರನೇ ವಾರದಲ್ಲಿ ಸೂರ್ಯನ ಬದಲಾವಣೆ ವಿಶೇಷಾಗಿದ್ದು ಏಕಾದಶ ಸ್ಥಾನಕ್ಕೆ ಬರಲಿದ್ದಾನೆ. ಗುರುವಿನ ದೃಷ್ಟಿಯೂ ಇರುವ ಕಾರಣ ಮಕ್ಕಳಿಂದ ಧನಾಗಮವಾಗಲಿದೆ. ಉನ್ನತ ಸ್ಥಾನಮಾನವನ್ನು ಪಡೆಯಲು ಇದು ಸಕಾಲ. ಇತರರ ಕಷ್ಟಗಳಿಗೆ ನೆರವಾಗುವುದನ್ನು ಬೆಳೆಸಿಕೊಳ್ಳಿರಿ. ವೈದ್ಯರಿಗೆ ತಮ್ಮ ವೃತ್ತಿಯಲ್ಲಿ ಹೆಚ್ಚಿನ ಸಮಯವನ್ನು ಕಳೆಯಬೇಕಾದ ಅನಿವಾರ್ಯವಿದೆ. ಕೆಲವರಿಗೆ ಸಂಸ್ಥೆ ಮುಖಾಂತರ ತರಬೇತಿಗಾಗಿ ದೂರ ಪ್ರಯಾಣ ಮಾಡಬೇಕಾಗಬಹುದು. ಸರ್ಕಾರಿ ಸೇವೆಯನ್ನು ಮಾಡುವವರಿಗೆ ಅವಕಾಶ ಸಿಗಲಿದೆ. ಧನ ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ಆಪ್ತ ಬಂಧುಗಳು ಯಾರೋ ಮಾಡಿದ ತಪ್ಪನ್ನು ನಿಮ್ಮ ಮೇಲೆ ಹಾಕಲು ಯತ್ನಿಸುವರು ಎಚ್ಚರದಿಂದಿರಿ. ವೃತ್ತಿಯಲ್ಲಿ ಬರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಕ್ರಮವನ್ನು ತೆಗೆದುಕೊಳ್ಳುವಿರಿ. ನಾಗಬಿಂಬವನ್ನು ದೇವರಿಗೆ ಅರ್ಪಿಸಿ.
ಲೋಹಿತಶರ್ಮಾ, ಇಡುವಾಣಿ