Weekly Horoscope in Kannada: ವಾರ ಭವಿಷ್ಯ: ಮೇ​ 26 ರಿಂದ ಜೂನ್ 01 ರವರೆಗೆ ನಿಮ್ಮ ಭವಿಷ್ಯ ಹೀಗಿದೆ

ಮೇ ತಿಂಗಳ ಕೊನೆಯ ಅಂದರೆ 26 ರಿಂದ ಜೂನ್​ 01ರವರೆಗೆ ಇರಲಿದ್ದು ಶುಕ್ರನ ಸಂಚಾರವು ಎಲ್ಲ ರಾಶಿಗಳ ಮೇಲೂ ಪರಿಣಾಮ ಬೀರಲಿದೆ. ಸ್ವಕ್ಷೇತ್ರಕ್ಕೆ ಪ್ರವೇಶವಾದ ಕಾರಣ ಹೆಚ್ಚು ಉತ್ತಮ ಫಲವೇ ಇರಲಿದೆ. ಎಲ್ಲ ಗ್ರಹರೂ ಶುಭಫಲವನ್ನೇ ನಿಮಗೆ ಕೊಡಲಿ ಎಂಬುದು ಹಾರೈಕೆ.

Weekly Horoscope in Kannada: ವಾರ ಭವಿಷ್ಯ: ಮೇ​ 26 ರಿಂದ ಜೂನ್ 01 ರವರೆಗೆ ನಿಮ್ಮ ಭವಿಷ್ಯ ಹೀಗಿದೆ
ದಿನಭವಿಷ್ಯ
Updated By: ಕಿರಣ್ ಹನುಮಂತ್​ ಮಾದಾರ್

Updated on: May 25, 2024 | 9:31 PM

ಮೇ ತಿಂಗಳ ಕೊನೆಯ ಅಂದರೆ 26 ರಿಂದ ಜೂನ್​ 01ರವರೆಗೆ ಇರಲಿದ್ದು ಶುಕ್ರನ ಸಂಚಾರವು ಎಲ್ಲ ರಾಶಿಗಳ ಮೇಲೂ ಪರಿಣಾಮ ಬೀರಲಿದೆ. ಸ್ವಕ್ಷೇತ್ರಕ್ಕೆ ಪ್ರವೇಶವಾದ ಕಾರಣ ಹೆಚ್ಚು ಉತ್ತಮ ಫಲವೇ ಇರಲಿದೆ. ಎಲ್ಲ ಗ್ರಹರೂ ಶುಭಫಲವನ್ನೇ ನಿಮಗೆ ಕೊಡಲಿ ಎಂಬುದು ಹಾರೈಕೆ.

ಮೇಷ ರಾಶಿ : ಇದು ರಾಶಿ ಚಕ್ರದ ಮೊದಲ ರಾಶಿಯಾಗಿದ್ದು ಈ ವಾರವು ಶುಭಫಲವು ಇರುವುದು. ದ್ವಿತೀಯದಲ್ಲಿ ಶುಕ್ರ, ಬುಧ, ಸೂರ್ಯ, ಗುರುವಿರುವುದು ಸಕಾರಾತ್ಮಕವಾಗಿ ನೀವು ಇರುವಿರಿ.‌ ಸೋಲನ್ನೂ ಸಕಾರಾತ್ಮಕವಾಗಿ ತೆಗೆಸುಕೊಳ್ಳುವ ಮನಃಸ್ಥಿತಿ ಇರಲಿದೆ. ಸಂಪತ್ತುನ್ನು ಸರಿಯಾಗಿ ಯೋಜನೆ ಮಾಡಿ ಗಳಿಸುವಿರಿ. ಸಂಗಾತಿಯ ಬಗ್ಗೆ ಕಳಕಳಿ ಅಧಿಕವಾಗಿರುವುದು. ನಿಮ್ಮ ಮಾತೂ ನಡೆಯಲಿದೆ. ಕಾರ್ತಿಕೇಯನ ಸ್ಮರಣೆಯು ನಿಮಗೆ ಬೇಕಾದ ಮಾರ್ಗವನ್ನು ತೋರಿಸುವುದು.

ವೃಷಭ ರಾಶಿ : ಈ ವಾರ ರಾಶಿ ಚಕ್ರದ ಎರಡನೇ ರಾಶಿಯವರಿಗೆ ಮಿಶ್ರಫಲವು ಇರಲಿದೆ.‌ ಮಾನಸಿಕವಾಗಿ ದೃಢರಾದರೂ ದೈಹಿಕವಾಗಿ ದುರ್ಬಲರಾಗುವಿರಿ. ಕಫದಿಂದ ನೀವು ಬಳಲಬೇಕಾಗುವುದು. ಅಲಂಕಾರಕ್ಕೆ ಹೆಚ್ಚು ಮಹತ್ತ್ವವನ್ನು ಕೊಡುವಿರಿ. ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚು ಸಮಯ ಕೊಡಬೇಕಾಗುವುದು. ಸಂಗಾತಿಯ ಸಹಕಾರವು ನಿಮ್ಮ ಕಾರ್ಯಕ್ಕೆ ಸಿಗುವುದು. ಮಹಾಲಕ್ಷ್ಮಿ ಉಪಾಸನೆಯನ್ನು ಅನನ್ಯ ಭಕ್ತಿಯಿಂದ ಮಾಡಿ.

ಮಿಥುನ ರಾಶಿ : ಈ ರಾಶಿಯವರಿಗೆ ಈ ವಾರವು ಅಶುಭವಾರ. ದ್ವಾದಶದಲ್ಲಿ ಇರುವ ಸೂರ್ಯ, ಬುಧ, ಗುರು, ಶುಕ್ರರು ಪ್ರತಿಕೂಲವನ್ನೇ ಸೃಷ್ಟಿಸುವರು. ಯಾವುದೇ ಸಂದರ್ಭದಲ್ಲಿಯೂ ದೈವವನ್ನು ಮರೆಯದೇ ಹೆಜ್ಜೆ ಇಡುವುದು ಅನಿವಾರ್ಯವಾಗುವುದು. ದೈವ ಕಾರ್ಯವನ್ನು ಹೆಚ್ಚು ಮಾಡುವುದು ಅಗತ್ಯ. ಗುರುವಿನ ದರ್ಶನವನ್ನು ಮಾಡಿ, ಆಶೀರ್ವಾದ ಪಡೆಯುವುದು ನಿಮ್ಮ ಆತಂಕವನ್ನು ದೂರಮಾಡುವುದು.

ಕರ್ಕ ರಾಶಿ : ರಾಶಿ ಚಕ್ರದ ನಾಲ್ಕನೇ ರಾಶಿಗೆ ಈ ವಾರ ಶುಭದ ವಾರವೇ ಆಗಿದೆ. ಏಕಾದಶದಲ್ಲಿ ಇರುವ ನಾಲ್ಕು ಗ್ರಹರೂ ಉತ್ತಮ ಫಲವನ್ನೇ ಕೊಡುವರು. ಅದರಲ್ಲಿಯೂ ಶುಕ್ರನು ಹೆಚ್ಚಿನ ಆದಾಯವನ್ನು ತಂದುಕೊಡುವನು. ಭೋಗವನ್ನು ಅನುಭವಿಸುವಂತೆ ಮಾಡುವನು. ದೈವವೂ ನಿಮ್ಮನ್ನು ಸತ್ಕಾರ್ಯಕ್ಕೆ ಪ್ರೇರಿಸುವುದು. ಸಕಾರಾತ್ಮಕವಾಗಿ ಆಲೋಚನೆ ಮಾಡುವಿರಿ.

ಸಿಂಹ ರಾಶಿ : ಮೇ ತಿಂಗಳ ಕೊನೆಯ ವಾರವು ಮಿಶ್ರಫಲದ ವಾರವಾಗಿದೆ. ಉದ್ಯಮದ ಸ್ಥಾನದಲ್ಲಿ ನಿಮಗೆ ಸಿಗಲಿದೆ. ಸರ್ಕಾರದ ಉದ್ಯೋಗದಲ್ಲಿ ಸ್ಥಾನಮಾನ ಮಾಡಲು ಅವಕಾಶ ಇರುವುದು. ಸ್ತ್ರೀಯರಿಂದ ಅನುಕೂಲತೆಗಳು ಹೆಚ್ಚಿರುವುದು. ವಿನ್ಯಾಸಕಾರರು, ಕಲಾವಿದರು ಹೆಚ್ಚಿನ ಪ್ರಸಿದ್ಧಿಯನ್ನು ಪಡೆಯುವರು. ಸಂಪತ್ತನ್ನೂ ಗಳಿಸುವರು. ಸ್ವಂತ ಉದ್ಯಮವು ಊರ್ಜಿತವಾಗಲೂ ಇದು ಸಕಾಲವಾಗಲಿದೆ.

ಕನ್ಯಾ ರಾಶಿ : ಮೇ ತಿಂಗಳ ಕೊನೆಯ ವಾರ ನಿಮಗೆ ಶುಭದ ವಾರವೇ ಆಗಿದೆ. ಶುಕ್ರನ ಸ್ಥಾನ ಬದಲಾವಣೆಯಿಂದ ಜೀವನದಲ್ಲಿ ಅನೇಕ ಬದಲಾವಣೆ ಸಾಧ್ಯ. ಬರಬೇಕಾದ ಸಂಪತ್ತು ನಿಮ್ಮ ಕೈ ಸೇರುವ ಕಾಲ.‌ ಅನೇಕ ಕಡೆಗಳಿಂದ ನಿಮಗೆ ನಾನಾ ಪ್ರಕಾರದ ಸಂಪತ್ತುಗಳು ನಿಮ್ಮ ಬಳಿ ಬರಲಿವೆ. ಪ್ರತಿಭೆಗೂ ಸೂಕ್ತಸ್ಥಾನಮಾನವನ್ನು ಪಡೆಯುವುದು ಖುಷಿಕೊಡುವುದು. ತಂದೆಯ ಕಡೆಯಿಂದ ಸಿಗುವ ಸಂಪತ್ತು ಸಿಗುವುದು. ಈ ವಾರವು ಅತ್ಯುತ್ಸಾಹದ ವಾರವೂ ಆಗುವುದು. ಧರ್ಮ ಕಾರ್ಯದಲ್ಲಿ ಹೆಚ್ಚು ಪ್ರವೃತ್ತಿ ಇರಲಿದ್ದು, ದಾನವನ್ನೂ ಮಾಡುವ ಮನಸ್ಸಾಗುವುದು.

ತುಲಾ ರಾಶಿ : ಈ ವಾರವು ಮೇ ತಿಂಗಳ ಶುಕ್ರನು ಅಷ್ಟಮಸ್ಥಾನಕ್ಕೆ ಬರುವುದರಿಂದ ವಾಹನ ಅಪಘಾತ, ಆರ್ಥಿಕ ನಷ್ಟವು ಬೇರೆ ಬೇರೆ ಕಡೆಗಳಿಂದ ಬರಲಿದೆ. ಇದೆಲ್ಲವೂ ನಿಮ್ಮ ಭೋಗವಸ್ತುವೇ ಆಗಿದೆ. ಸೃಜನಾತ್ಮಕ ಕೆಲಸಕ್ಕೆ ಆದ್ಯತೆ ಕಡಿಮೆಯಾಗುತ್ತದೆ. ಒತ್ತಡಗಳಿಂದ ನಿಮ್ಮ ಪ್ರತಿಭೆಯನ್ನು ತೋರಿಸಲು ಸಾಧ್ಯವಾಗದು. ಸ್ತ್ರೀಯರು ನಿಮ್ಮ ಬಗ್ಗೆ ಅಪಪ್ರಚಾರ ಮಾಡಲಿದ್ದು, ಅದನ್ನು ನಿವಾರಿಸಲು ಸಾಧ್ಯವಾಗದು. ಕಲೆಯಲ್ಲಿಯೂ ಆಸಕ್ತಿ ಕಡಿಮೆ ಆಗುವುದು. ಏನೂ ಬೇಡ ಎನಿಸುವುದು.

ವೃಶ್ಚಿಕ ರಾಶಿ : ರಾಶಿ ಚಕ್ರದ ಎಂಟನೇ ರಾಶಿಗೆ ಈ ವಾರ ಶುಭದ ವಾರವಾಗಲಿದೆ. ವಿವಾಹಕ್ಕೆ ಯೋಗ್ಯವಾದ ಸ್ಥಾನವು ಪ್ರಾಪ್ತಿಯಾಗುವುದು. ಎಲ್ಲ ಕಾರ್ಯಗಳಲ್ಲಿಯೂ ಬಹಳ ಉತ್ಸಾಹದಿಂದ ಸರಿಯಾಗಿ ಆಗಲಿದೆ. ವ್ಯಾಪಾರ ವರ್ಗದವರು ಈ ವಾರ ತಮ್ಮ ಸರ್ಕಾರಿ ದಾಖಲೆಗಳನ್ನು ದೃಢೀಕರಿಸಬೇಕು ಮತ್ತು ಹಣದ ವ್ಯವಹಾರದಲ್ಲಿ ಕಾಗದದ ಕೆಲಸಗಳನ್ನು ಮಾಡಬೇಕು. ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಕುಟುಂಬವೂ ಸುಖದಿಂದ‌ ಇರಲಿದೆ. ಸಂಗಾತಿಯ ಜೊತೆ ಇದ್ದ ಮನಸ್ತಾಪವೂ ದೂರವಾಗಲಿದೆ. ಅನಾರೋಗ್ಯವೂ ಕಡಿಮೆಯಾಗುವುದು.

ಧನು ರಾಶಿ : ಈ ವಾರ ಈ ರಾಶಿಯವರಿಗೆ ಶುಭವೆನ್ನಲಾಗದು. ಶುಕ್ರನ ಬದಲಾವಣೆಯು ನಿಮಗೆ ಕಷ್ಟವಾಗುವುದು. ಸ್ತ್ರೀಯರಿಂದ ಸಿಗಬೇಕಾದ ಯಾವ ಸಹಾಯವೂ ಸಿಗದೇ ಅವರೇ ನಿಮ್ಮನ್ನು ದ್ವೇಷಿಸುವರು. ಆರ್ಥಿಕತೆಯ ಅಸಮತೋಲವು ಎದ್ದು ತೋರುವುದು. ಏನೂ ಮಾಡಲಾಗದ ಸ್ಥಿತಿ ನಿಮ್ಮದಾಗಬಹುದು. ಏಕೆಂದರೆ ಅದು ವಿವಾದವನ್ನು ಇನ್ನಷ್ಟು ಹೆಚ್ಚಿಸಬಹುದು. ಯುವಕರ ಒಡನಾಟದ ಪರಿಣಾಮ ಅವರ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಮನೆಯಲ್ಲಿ ಕಫಕ್ಕೆ ಸಂಬಂಧಿಸದ ರೋಗವು ಬರುವುದು. ಕಣ್ಣಿನ ರೋಗವು ಕಾಣಿಸಿಕೊಳ್ಳುವುದು. ವಾಹನದಿಂದ ಅಸೌಖ್ಯವು ಸಿಗವುದು.

ಮಕರ ರಾಶಿ : ಮೇ ತಿಂಗಳ ಕೊನೆಯ ವಾರದಲ್ಲಿ ಶುಕ್ರನ ಚಲನೆ ಇರಲಿದೆ. ಹೆಣ್ಣು ಮಕ್ಕಳಿರುವವರ ಮನೆಯಲ್ಲಿ ಆನಂದವು ಹೆಚ್ಚಿರುವುದು. ಅವರಿಗೆ ಬೇಕಾದ ವಸ್ತುಗಳನ್ನು ಕೊಡಿಸುವಿರಿ. ಈ ವಾರ ಗುರಿಯನ್ನು ತಲುಪಲು, ಸಾಕಷ್ಟು ಶ್ರಮದ ಅಗತ್ಯವಿರಲಿದೆ. ದೂರಸಂಪರ್ಕ ವ್ಯವಹಾರ ಮಾಡುವ ಉದ್ಯಮಿಗಳು ಈ ಬಾರಿ ಸ್ವಲ್ಪ ನಿರಾಸೆಯನ್ನು ಎದುರಿಸಬೇಕಾಗುತ್ತದೆ. ಸ್ವಲ್ಪ ಯೋಚಿಸಿ ವ್ಯಾಪಾರ ಮಾಡಿ. ವಿದ್ಯಾಭ್ಯಾಸದಲ್ಲಿ ಅತಿಯಾದ ಆತ್ಮವಿಶ್ವಾಸ ಬೇಡ. ಸಹಜವಾಗಿ ನಿಮ್ಮ ಓದು ಇರಲಿ. ನಿಮಗೆ ತೊಂದರೆಯಾಗುವ ಅಂಶಗಳಿಂದ ದೂರವಿರಿ. ಯಾರನ್ನೂ ಬಲವಂತವಾಗಿಸದೇ ಅವರಷ್ಟಕ್ಕೆ ಅವರನ್ನು ಇರುವಂತೆ ಮಾಡಿ.

ಕುಂಭ ರಾಶಿ : ಈ ತಿಂಗಳ ಕೊನೆಯ ವಾರವು ಇದಾಗಿದ್ದು ಕೆಲವು ಬದಲಾವಣೆಯನ್ನು ಗಮನಿಸಬಹುದಾಗಿದೆ. ಕೆಲಸಗಳನ್ನು ಉನ್ನತ ಅಧಿಕಾರಿಗಳ ಕಣ್ಗಾವಲಿನಲ್ಲಿಯೇ ಮಾಡಬೇಕಾಗುವುದು. ದೋಷ ಬಾರದಂತೆ ತಮ್ಮ ಎಲ್ಲಾ ಕೆಲಸಗಳನ್ನು ಜಾಗರೂಕತೆಯಿಂದ ಮಾಡಬೇಕು. ತಂತ್ರಾಂಶಗಳ ವ್ಯಾಪಾರವು ಚೆನ್ನಾಗಿ ಆಗುವುದು. ವಾಹನದಿಂದ ನಿಮಗೆ ಸುಖವು ಸಿಗಲಿದೆ. ಈ ವಾರ ನೀವು ತುಲನಾತ್ಮಕವಾಗಿ ಒಳ್ಳೆಯದನ್ನು ಅನುಭವಿಸುವಿರಿ. ನಿಮ್ಮ ಗಂಭೀರ ಮಾತು ಜನರನ್ನು ಆಕರ್ಷಿಸುತ್ತದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ ಹೆಚ್ಚಾಗುತ್ತದೆ. ಸಣ್ಣಪುಟ್ಟ ಖಾಯಿಲೆಯಲ್ಲೂ ಜಾಗೃತರಾಗಿರಬೇಕು. ಯಾವುದನ್ನೂ ಈ ವಾರ ಸೀದಾ ನಂಬಿ ಕೆಲಸ ಮಾಡಬೇಡಿ. ಮಾನದಂಡವು ಎಲ್ಲದಕ್ಕೂ ಇರಲಿ.

ಮೀನ ರಾಶಿ : ಮೇ ತಿಂಗಳ ಕೊನೆಯ ವಾರವು ಇದಾಗಿದ್ದು, ಶುಕ್ರನ ಸ್ಥಾನಪಲ್ಲಟದಿಂದ ಕೆಲವು ಬದಲಾವಣೆಗಳು ಈ ರಾಶಿಯವರಿಗೆ ಆಗಲಿದೆ. ಶುಕ್ರನ ಸ್ವಕ್ಷೇತ್ರವಾದುದರಿಂದ ಹೆಚ್ಚು ಬಲವುಳ್ಳವನಾಗಿದ್ದಾನೆ. ಬಲದಿಂದ ಏನನ್ನಾದರೂ ಸಾಧಿಸಿಕೊಂಡು ಅನುಭವಿಸುವ ಸಾಧ್ಯತೆ ಇದೆ. ಸೂರ್ಯ ಹಾಗು ಗುರು, ಬುಧರ ಸಮಾಗಮವಾಗಲಿದ್ದು ಜಾಣ್ಮೆಯಿಂದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಜವಾಬ್ದಾರಿಗಳ ಹೊರೆ ಮತ್ತು ಸೋಮಾರಿತನವು ನಿಮಗೆ ಕೆಲಸವನ್ನು ಮಾಡಲು ಬಿಡುವುದಿಲ್ಲ. ಯೋಜನೆಯೊಂದಿಗೆ ನೀವು ಆಲಸ್ಯವನ್ನು ಬಿಟ್ಟು ಮುನ್ನಡೆಯುವ ಮೂಲಕ ಯಶಸ್ಸನ್ನು ಪಡೆಯುತ್ತೀರಿ. ಧಾನ್ಯದ ವ್ಯಾಪಾರ ಮಾಡುವ ವ್ಯಾಪಾರಿಗಳು ತಮ್ಮ ಸರಕುಗಳ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕಾಗುವುದು. ದೊಡ್ಡ ವ್ಯವಹಾರಗಳ ಸಾಧ್ಯತೆಯಿದೆ.

-ಲೋಹಿತ ಹೆಬ್ಬಾರ್-8762924271 (what’s app only)