Horoscope: ದಿನ ಭವಿಷ್ಯ; ಅನವಶ್ಯಕ ಚಿಂತನೆಯಿಂದ ನಿಮ್ಮ ಆತ್ಮವಿಶ್ವಾಸವನ್ನು ಹಾಳುಮಾಡಿಕೊಳ್ಳುವಿರಿ
ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಮೇ 26 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮೇ 26) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ಕೃತ್ತಿಕಾ, ಮಾಸ: ವೈಶಾಖ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ತೃತೀಯಾ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ಸಾಧ್ಯ, ಕರಣ: ವಣಿಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 04 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 55 ನಿಮಿಷಕ್ಕೆ, ರಾಹು ಕಾಲ ಸಂಜೆ 05:19 ರಿಂದ 06:56 ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:30 ರಿಂದ 02:06ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:43 ರಿಂದ 05:19ರ ವರೆಗೆ.
ಧನು ರಾಶಿ : ಇಂದು ನೀವು ಮಾಡಲೇಬೇಕಾದ ಕೆಲಸವನ್ನು ಮಾಡದೇ ಆಲಸ್ಯದಿಂದ ಕಳೆಯುವಿರಿ. ಆಸ್ತಿಯ ವಿಚಾರದಲ್ಲಿ ನಿಮಗೆ ಅಕ್ಕಪಕ್ಕದವರ ಜೊತೆ ಅಸಮಾಧಾನ ವ್ಯಕ್ತವಾಗುವುದು. ಪ್ರಾಣಿಗಳ ಜೊತೆ ಸಮಯವನ್ನು ಕಳೆಯುವ ಮನಸ್ಸು ಮಾಡುವಿರಿ. ಊರಿನ ಉತ್ಸವದಲ್ಲಿ ಭಾಗಿಯಾಗುವಿರಿ. ರಾಜಕೀಯ ವ್ಯಕ್ತಿಗಳಾಗಿದ್ದರೆ ಇಂದು ಜನಸೇವೆಯನ್ನು ಮಾಡುವಿರಿ. ಮಕ್ಕಳು ನಿಮ್ಮನ್ನು ಇಷ್ಟ ಒಡುವರು. ಅವರ ಜೊತೆ ಕಾಲ ಕಳೆಯಿರಿ. ಹಿರಿಯ ಅಧಿಕಾರಿಗಳ ಜೊತೆ ಸ್ನೇಹದಿಂದ ಮಾತನಾಡಿ ವಿಶ್ವಾಸ ಗಳಿಸುವಿರಿ. ನಿಮಗೆ ಆಗದವರನ್ನು ದೂರುವುದು ಬೇಡ. ಇಂದು ಬರುವ ಹಣದ ಆಧಾರದ ಮೇಲೆ ನೀವು ಯಾವ ವ್ಯವಹಾರವನ್ನೂ ಮಾಡುವುದು ಬೇಡ. ವಾಹನವನ್ನು ಚಾಲಾಯಿಸುವಾಗ ಅನೇಕ ಸಕಾರಾತ್ಮಕ ಯೋಚನೆಗಳು ಇರಲಿ. ಸಂಗಾತಿಯ ಆಯ್ಕೆಯಲ್ಲಿ ನಿಮಗೆ ಅನೇಕ ಗೊಂದಲಗಳು ಬರುವುದು. ಸ್ವತಂತ್ರವಾದ ಆಲೋಚನೆಯು ಇಲ್ಲದೇ ಹೋದರೆ ಕಷ್ಟವಾದೀತು.
ಮಕರ ರಾಶಿ : ಇಂದು ಕುಟುಂಬದವರ ಮಾತಿನ ಅಲಕ್ಷ್ಯದಿಂದ ತೊಂದರೆಯಾದಂತೆ ಅನ್ನಿಸುವುದು. ಹಿರಿಯರಿಗೆ ತೊಂದರೆಯನ್ನು ಕೊಡಲು ಹೋಗಬೇಡಿ. ಯಶಸ್ಸು ನಿಮಗೆ ಬೇಡವೆಂದೆನಿಸಬಹುದು. ಯಾರ ಜೊತೆಗೂ ಇರಲು ನೀವು ಇಷ್ಟಪಡುವುದಿಲ್ಲ. ನಿದ್ರೆಯಲ್ಲಿ ಬಿದ್ದ ದುಶಸ್ವಪ್ನವು ನಿಮ್ಮನ್ನು ಚಿಂತೆಗೆ ತಳ್ಳುವುದು. ನಿಮ್ಮದಲ್ಲದ್ದನ್ನು ಹಿಂದಿರುಗಿಸಿ. ಗೃಹನಿರ್ಮಾಣ ಕಾರ್ಯವನ್ನು ಆರಂಭಿಸಬಹುದು. ನಿಮ್ಮ ಕೆಲಸಕ್ಕೆ ಯೋಗ್ಯವಾದ ಪ್ರಶಂಸೆಗಳು ಸಿಗಲಿವೆ. ಅಹಾರದಿಂದ ಆರೋಗ್ಯವು ಕಡುವುದು. ಇನ್ನೊಬ್ಬರ ಬಗ್ಗೆ ಸಲ್ಲದ ಮಾತುಗಳನ್ನು ಆಡುವಿರಿ. ಅನವಶ್ಯಕವಾಗಿ ಚಿಂತನೆಯಿಂದ ನಿಮ್ಮ ಆತ್ಮವಿಶ್ವಾಸವನ್ನು ನೀವೇ ಹಾಳುಮಾಡಿಕೊಳ್ಳುವಿರಿ. ಇಂದು ನೀವು ನಿರೀಕ್ಷಿಸಿದಷ್ಟು ಸಂಪತ್ತು ಸಿಗದೇ ಹೋದೀತು. ಸಹೋದ್ಯೋಗಿಗಳ ವರ್ತನೆಯಿಂದ ಸಿಟ್ಟಾಗುವ ಸಾಧ್ಯತೆ ಇದೆ. ಭೋಗವಸ್ತುಗಳನ್ನು ಖರೀದಿ ಮಾಡುವಿರಿ.
ಕುಂಭ ರಾಶಿ : ಇಂದು ನಿಮ್ಮ ಅಧಿಕವಾದ ಮಾತು ಕೇಳುವವರಿಗೆ ಹಿಂಸೆ ಕೊಡುವುದು. ಆಪ್ತರ ಜೊತೆ ಮಾತುಕತೆಗಳು ಆಗಬಹುದು. ಮನಸ್ಸಿಗೆ ಹಿತವಾದ ಕೆಲಸವನ್ನು ಮಾಡಿ. ಇಲ್ಲವಾದರೆ ಕೊರಗಬೇಕಾದೀತು. ಉತ್ತಮ ಆಹಾರವನ್ನು ಸೇವಸಲಿದ್ದೀರಿ. ಅಹಿತಕರವಾದ ಘಟನೆಯು ನಿಮ್ಮನ್ನು ಸ್ತಬ್ಧಗೊಳಿಸಬಹುದು. ನೂತನವಸ್ತ್ರಗಳ ಖರೀದಿಯನ್ನು ಮಾಡುವಿರಿ. ಉತ್ತಮವಾದ ಆಲೋಚನೆಗಳು ನಿಮಗೆ ಬರಲಿದ್ದು ಅದನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿ. ದೇಹಕ್ಕೆ ತೊಂದರೆ ಮಾಡಿಕೊಳ್ಳುವ ಸನ್ನಿವೇಶವಿರಲಿದೆ. ಮನೆಯ ಬದಲಾವಣೆಯನ್ನು ಮಾಡುವಿರಿ. ಯಾವುದೇ ಪ್ರಭಾವಕ್ಕೆ ಒಳಗಾಗದೆ ಸ್ವಂತ ನಿರ್ಧಾರಕ್ಕೆ ಬದ್ಧರಾಗುವಿರಿ. ಭೂ ವ್ಯವಹಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ಚರ ಆಸ್ತಿಯನ್ನು ಮಾರಾಟ ಮಾಡಿ ಹಣದ ಗಳಿಸುವಿರಿ. ನಿಮ್ಮ ಕಾರ್ಯವು ನಿಮಗೆ ಭಯವನ್ನು ಕೊಡುವುದು. ಇದರಿಂದ ಅಪಮಾನವು ಆಗುವುದು.
ಮೀನ ರಾಶಿ : ಇಂದು ಸುತ್ತಾಟಕ್ಕೆಂದು ಮಕ್ಕಳ ಜೊತೆ ಹೋಗಲಿದ್ದೀರಿ. ಕಡಿಮೆ ವೆಚ್ಚದಲ್ಲಿ ಹೆಚ್ಚು ಸಂಪಾದಿಸುವ ಯೋಜನೆಯನ್ನು ಹಾಕಿಕೊಳ್ಳುವುದಕ್ಕೆ ಎಲ್ಲಿಂದಲಾದರೂ ನಿಮಗೆ ಐಡಿಯಾ ಸಿಗಬಹುದು. ಹಿರಿಯರ ಹಾರೈಕೆ ನಿಮಗೆ ಸಿಗಲಿದೆ. ಕಛೇರಿಯ ಕೆಲಸಕ್ಕೂ ಸಮಯ ಸಿಗದೇ ಒತ್ತಡದಲ್ಲಿ ಇರುವಿರಿ. ಕಲಹವಾಗಿ ಸಂಗಾತಿಯಿಂದ ದೂರವಿರಬೇಕಾದೀತು. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಸಾವಾಗಲಿದೆ. ಕೃಷಿಯಲ್ಲಿ ಇಂದು ಎಂದಿಗಿಂತ ಉತ್ಸಾಹದಿಂದ ಪಾಲ್ಗೊಳ್ಳುವಿರಿ. ಖರ್ಚನ್ನು ಕಡಿಮೆ ಮಾಡಿಕೊಳ್ಳಿ. ವಿದ್ಯಾರ್ಥಿಗಳ ಕ್ರಿಯಾಶೀಲ ವ್ಯಕ್ತಿತ್ವದಿಂದ ಎಲ್ಲರ ಗಮನವನ್ನು ಸೆಳೆಯುವರು. ಆಪ್ತರ ಬಗ್ಗೆ ನಿಮ್ಮ ಅಭಿಪ್ರಾಯ ಬದಲಾಗಬಹುದು. ಪ್ರೀತಿಪಾತ್ರರಿಗೆ ಸಮಯ ವ್ಯರ್ಥ ಮಾಡುವಿರಿ. ಪ್ರೇಮವು ಯಾರಿಂದಲೋ ಬಹಿರಂಗವಾಗುವುದು. ಮಹಿಳಾ ಉದ್ಯೋಗಿಗಳು ಹೆಚ್ಚಿನ ಸ್ಥಾನವನ್ನು ಪಡೆಯುವಿರಿ. ಯಾರನ್ನೂ ದೂರುವ ಅವಶ್ಯಕತೆ ಇಲ್ಲ. ನಿಮ್ಮ ಕೆಲಸವನ್ನು ಸರಿ ಮಾಡಿಕೊಂಡು ಹೋಗುವಿರಿ.
-ಲೋಹಿತ ಹೆಬ್ಬಾರ್-8762924271 (what’s app only)




