ಭಾರತದ ಕ್ರಾಂತಿ ಗೌಡ್ ಹಾಗೂ ಇಡೀ ಪಾಕಿಸ್ತಾನ ತಂಡಕ್ಕೆ ದಂಡ ವಿಧಿಸಿದ ಐಸಿಸಿ
ದುಬೈನಲ್ಲಿ ಭಾರತ ಮಹಿಳಾ ಏಷ್ಯಾಕಪ್ ಗೆದ್ದ ನಂತರ, ಕ್ರಾಂತಿ ಗೌಡಗೆ ಐಸಿಸಿ ನೀತಿ ಸಂಹಿತೆ ಉಲ್ಲಂಘನೆಗಾಗಿ (ಆಕ್ರಮಣಕಾರಿ ಸನ್ನೆ) ಪಂದ್ಯ ಶುಲ್ಕದ 10% ದಂಡ ವಿಧಿಸಿತು. ಪಾಕಿಸ್ತಾನ ತಂಡಕ್ಕೆ ನಿಧಾನಗತಿಯ ಓವರ್ ರೇಟ್‌ಗಾಗಿ 5% ದಂಡ ವಿಧಿಸಲಾಯಿತು. ಈ ಘಟನೆಗಳು ಕ್ರಿಕೆಟ್‌ನ ಶಿಸ್ತು ಮತ್ತು ನಿಯಮ ಪಾಲನೆಯ ಮಹತ್ವವನ್ನು ಎತ್ತಿ ತೋರಿಸುತ್ತವೆ, ವಿಜಯದ ನಂತರವೂ ಆಟಗಾರರು ನಿಯಮಗಳಿಗೆ ಬದ್ಧರಾಗಿರಬೇಕು ಎಂಬ ಸಂದೇಶ ನೀಡಿದೆ.

ದುಬೈನಲ್ಲಿ ನಡೆದ ಮಹಿಳಾ ಟಿ20 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ತಂಡ, ಶ್ರೀಲಂಕಾವನ್ನು 72 ರನ್‌ಗಳಿಂದ ಸೋಲಿಸುವ ಮೂಲಕ ದಾಖಲೆಯ 8 ನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಪ್ರಶಸ್ತಿ ಗೆದ್ದ ಸಂತಸದಲ್ಲಿದ್ದ ಭಾರತ ತಂಡದ ಯುವ ವೇಗದ ಬೌಲರ್ ಕ್ರಾಂತಿ ಗೌಡ್ ಅವರ ವಿರುದ್ಧ ಐಸಿಸಿ ಕ್ರಮ ಕೈಗೊಂಡಿದೆ. ಐಸಿಸಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಾಂತಿ ಗೌಡ್ ತಪ್ಪಿತಸ್ಥರೆಂದು ಸಾಭೀತಾಗಿದ್ದು, ಐಸಿಸಿ ಕ್ರಾಂತಿ ಅವರ ಪಂದ್ಯ ಶುಲ್ಕದ 10 ಪ್ರತಿಶತ ಮೊತ್ತವನ್ನು ದಂಡವಾಗಿ ವಿಧಿಸಿದೆ. ಇದರ ಜೊತೆಗೆ ಅವರಿಗೆ ಒಂದು ಡಿಮೆರಿಟ್ ಪಾಯಿಂಟ್ ಕೂಡ ಸೇರಿದೆ. ಇತ್ತ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ನಿಯಮವನ್ನು ಉಲ್ಲಂಘಿಸಿದ ಪಾಕಿಸ್ತಾನ ಮಹಿಳಾ ತಂಡಕ್ಕೆ ಪಂದ್ಯ ಶುಲ್ಕದ 5 ಪ್ರತಿಶತ ಮೊತ್ತವನ್ನು ದಂಡವಾಗಿ ವಿಧಿಸಿದೆ.
ಕ್ರಾಂತಿ ಗೌಡ್ ಮಾಡಿದ ತಪ್ಪೇನು?
ಶ್ರೀಲಂಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಕ್ರಾಂತಿ ಗೌಡ್, ಮೊದಲ ಓವರ್‌ನಲ್ಲಿ ಶ್ರೀಲಂಕಾದ ಆರಂಭಿಕ ಆಟಗಾರ್ತಿ ಇಮೇಷಾ ದುಲಾನಿ ಅವರನ್ನು ಬೌಲ್ಡ್ ಮಾಡಿದರು. ವಿಕೆಟ್ ಪಡೆದ ಉತ್ಸಾಹದಲ್ಲಿ, ಅವರು ಬ್ಯಾಟರ್ ಕಡೆಗೆ ಆಕ್ರಮಣಕಾರಿಯಾಗಿ ಪೆವಿಲಿಯನ್‌ಗೆ ಹಿಂತಿರುಗುವಂತೆ ಸನ್ನೆ ಮಾಡಿದರು. ಇದು ಐಸಿಸಿಯ ಆರ್ಟಿಕಲ್ 2.5 ರ ಲೆವೆಲ್ 1 ಉಲ್ಲಂಘನೆಯಾಗಿದೆ. ಈ ನಿಯಮವು ಆಕ್ರಮಣಕಾರಿ ಅಥವಾ ಬ್ಯಾಟರ್ ಔಟ್ ಆದ ನಂತರ ಅವರನ್ನು ಕೆರಳಿಸುವ ಭಾಷೆ, ಕ್ರಿಯೆಗಳು ಅಥವಾ ಸನ್ನೆಗಳನ್ನು ಬಳಸುವುದನ್ನು ಉಲ್ಲೇಖಿಸುತ್ತದೆ.
India pacer has been found guilty of breaching the ICC Code of Conduct in the Women’s Asia Cup final.
More details ⬇️https://t.co/bPb1AaTvah
— ICC (@ICC) September 14, 2026
ಅದರಂತೆ ಆನ್-ಫೀಲ್ಡ್ ಅಂಪೈರ್‌ಗಳಾದ ಸಲೀಮಾ ಇಮ್ತಿಯಾಜ್ ಮತ್ತು ಶತಿರಾ ಜಾಕಿರ್ ಜೆಸ್ಸಿ, ಮೂರನೇ ಅಂಪೈರ್ ರೋಕಿಯಾ ಸುಲ್ತಾನ ಮತ್ತು ನಾಲ್ಕನೇ ಅಂಪೈರ್ ಹುಮೈರಾ ಫರಾ ಅವರು ಕ್ರಾಂತಿ ಗೌಡ್ ವಿರುದ್ಧ ಐಸಿಸಿಗೆ ದೂರು ನೀಡಿದ್ದರು. ತಾನು ಮಾಡಿರುವ ತಪ್ಪನ್ನು ಕ್ರಾಂತಿ ಗೌಡ್ ಅವರು ಒಪ್ಪಿಕೊಂಡಿದ್ದು, ಶಿಕ್ಷೆಯನ್ನು ಸ್ವೀಕರಿಸಿದ್ದಾರೆ. ಹೀಗಾಗಿ ವಿಚಾರಣೆಯ ಅಗತ್ಯವಿಲ್ಲವೆಂದು ಐಸಿಸಿ ಮಾಹಿತಿ ನೀಡಿದೆ.
ಪಾಕಿಸ್ತಾನ ತಂಡಕ್ಕೆ ಡಬಲ್ ಶಾಕ್ ನೀಡಿದ ಐಸಿಸಿ..!
ಪಾಕಿಸ್ತಾನ ತಂಡಕ್ಕೂ ದಂಡ
ಶುಕ್ರವಾರ ನಡೆದ ಶ್ರೀಲಂಕಾ ವಿರುದ್ಧದ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡವು ನಿಧಾನಗತಿಯ ಓವರ್ ರೇಟ್ ನಿಯಮವನ್ನು ಉಲ್ಲಂಘಿಸಿದಕ್ಕಾಗಿ ದಂಡ ವಿಧಿಸಲಾಗಿದೆ. ಪಂದ್ಯದ ರೆಫರಿ ಜಿ.ಎಸ್. ಲಕ್ಷ್ಮಿ ಅವರ ದೂರಿನನ್ವಯ ಪಾಕಿಸ್ತಾನ ನಿಗದಿತ ಸಮಯ ಮಿತಿಗಿಂತ ಒಂದು ಓವರ್ ಕಡಿಮೆ ಬೌಲ್ ಮಾಡಿದೆ. ಹೀಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಪ್ರತಿ ಓವರ್‌ಗೆ ಪಂದ್ಯ ಶುಲ್ಕದ 5 ಪ್ರತಿಶತದಷ್ಟು ಮೊತ್ತವನ್ನು ದಂಡ ವಿಧಿಸಲಾಗಿದೆ ಎಂದು ಐಸಿಸಿ ಮಾಹಿತಿ ನೀಡಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:37 pm, Mon, 14 September 26




