AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೀಟೇಲ್ ಹಣದುಬ್ಬರ 37 ಮೂಲಾಂಕಗಳಷ್ಟು ಏರಿಕೆ; ಆಗಸ್ಟ್​ನಲ್ಲಿ ಚಿಲ್ಲರೆ ಹಣದುಬ್ಬರ ದರ ಶೇ. 4.82 ದಾಖಲು

ಸಗಟು ಮಾರಾಟ ದರ ಹಣದುಬ್ಬರ ಆಗಸ್ಟ್​ನಲ್ಲಿ ಶೇ. 9.92 ಇದ್ದರೆ, ರೀಟೇಲ್ ಹಣದುಬ್ಬರ ಶೇ 4.82 ಇದೆ. ಆಹಾರ ಉತ್ಪನ್ನಗಳು, ಇಂಧನ ಹಾಗೂ ವೈಯಕ್ತಿಕ ನಿರ್ವಹಣಾ ವಸ್ತುಗಳ ಬೆಲೆಯಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಚಿಲ್ಲರೆ ಹಣದುಬ್ಬರ ದರ ಏರಿಕೆಯಾಗಿದೆ. ಜುಲೈ ತಿಂಗಳಿನಲ್ಲಿ ಈ ದರವು ಶೇ. 4.45 ರಷ್ಟಿತ್ತು. ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಬಿಡುಗಡೆ ಮಾಡಿರುವ ನೂತನ ಅಂಕಿಅಂಶಗಳು ಈ ಏರಿಕೆಯನ್ನು ದೃಢಪಡಿಸಿವೆ.

ರೀಟೇಲ್ ಹಣದುಬ್ಬರ 37 ಮೂಲಾಂಕಗಳಷ್ಟು ಏರಿಕೆ; ಆಗಸ್ಟ್​ನಲ್ಲಿ ಚಿಲ್ಲರೆ ಹಣದುಬ್ಬರ ದರ ಶೇ. 4.82 ದಾಖಲು
ಹಣImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 14, 2026 | 7:47 PM

Share

ನವದೆಹಲಿ, ಸೆಪ್ಟೆಂಬರ್ 14: ಹೋಲ್​ಸೇಲ್ ಹಣದುಬ್ಬರದ ದತ್ತಾಂಶ ಬಂದ ಬೆನ್ನಲ್ಲೇ ಈಗ ರೀಟೇಲ್ ಹಣದುಬ್ಬರ ವರದಿಯೂ ಬಂದಿದೆ. ಕಳೆದ ಜುಲೈನಲ್ಲಿ ಶೇಕಡಾ 4.45 ರಷ್ಟಿದ್ದ ಚಿಲ್ಲರೆ ಹಣದುಬ್ಬರವು ಆಗಸ್ಟ್‌ನಲ್ಲಿ ಶೇಕಡಾ 4.82 ಕ್ಕೆ ಜಿಗಿಯುವ ಮೂಲಕ ಸತತ ಮೂರನೇ ತಿಂಗಳು ಏರಿಕೆ ಹಾದಿಯಲ್ಲಿದೆ. ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಆಹಾರ ಧಾನ್ಯಗಳು ಹಾಗೂ ದಿನಸಿ ವಸ್ತುಗಳ ಬೆಲೆ ಹೆಚ್ಚಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಕೆಲ ಹೊತ್ತಿನ ಮೊದಲು ಬಿಡುಗಡೆಯಾದ ಸಗಟು ಮಾರಾಟ ದರ ಹಣದುಬ್ಬರ ಬಹುತೇಕ ಎರಡಂಕಿ ಸಮೀಪದಲ್ಲಿದೆ. ಈಗ ರೀಟೇಲ್ ಹಣದುಬ್ಬರ ತುಸು ಏರಿಕೆಯಾಗಿರುವುದು ಅನಿರೀಕ್ಷಿತವೇನಲ್ಲ. ಈ ಹಣದುಬ್ಬರ ದತ್ತಾಂಶದ ಕೆಲ ಮುಖ್ಯಾಂಶಗಳು ಈ ಕೆಳಕಂಡಂತಿವೆ:

  • ಆಹಾರ ಧಾನ್ಯ ಮತ್ತು ತರಕಾರಿ ದರ ಏರಿಕೆ: ಚಿಲ್ಲರೆ ಆಹಾರ ಹಣದುಬ್ಬರವು (Food Inflation) ಜುಲೈನಲ್ಲಿದ್ದ ಶೇ. 5.52 ರಿಂದ ಆಗಸ್ಟ್‌ನಲ್ಲಿ ಶೇ. 5.95 ಕ್ಕೆ ಹೆಚ್ಚಾಗಿದೆ.
  • ಈರುಳ್ಳಿ ಮತ್ತು ಬೆಳ್ಳುಳ್ಳಿ: ಈರುಳ್ಳಿ ಹಣದುಬ್ಬರವು ಜುಲೈನ ಶೇ. 22.54 ರಿಂದ ಆಗಸ್ಟ್‌ನಲ್ಲಿ ಶೇ. 48.27 ಕ್ಕೆ ದುಪ್ಪಟ್ಟಾಗಿದ್ದರೆ, ಬೆಳ್ಳುಳ್ಳಿ ಹಣದುಬ್ಬರ ಶೇ. 43.60 ಕ್ಕೆ ತಲುಪಿದೆ.
  • ಸಕ್ಕರೆ ದರ: ಸಕ್ಕರೆ ಬೆಲೆಯು ಆಗಸ್ಟ್ ತಿಂಗಳಿನಲ್ಲಿ ದಾಖಲೆಯ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.
  • ಟೊಮ್ಯಾಟೋ ಮತ್ತು ಆಲೂಗಡ್ಡೆ ಇಳಿಕೆ: ಟೊಮ್ಯಾಟೋ ದರ ಶೇ. -31.09 ಮತ್ತು ಆಲೂಗಡ್ಡೆ ಶೇ. -13.14 ರಷ್ಟು ಇಳಿಕೆಯಾಗುವ ಮೂಲಕ ಸಾರ್ವಜನಿಕರಿಗೆ ಕೊಂಚ ಸಮಾಧಾನ ತಂದಿದೆ.

ಇದನ್ನೂ ಓದಿ: ಜುಲೈನಲ್ಲಿ ಶೇ. 9.78ರಷ್ಟಿದ್ದ ಸಗಟು ಹಣದುಬ್ಬರ ಆಗಸ್ಟ್ ತಿಂಗಳಲ್ಲಿ ಶೇ. 9.92ಕ್ಕೆ ಏರಿಕೆ; ಇಂಧನ, ಆಹಾರ ದರ ಹೆಚ್ಚಳ ಪ್ರಮುಖ ಕಾರಣ

ಗ್ರಾಮೀಣ ಪ್ರದೇಶದ ಹಣದುಬ್ಬರ ದರವು ಶೇಕಡಾ 5.23 ಕ್ಕೆ ಏರಿಕೆಯಾಗಿದೆ. ನಗರ ಪ್ರದೇಶದ ಹಣದುಬ್ಬರ ದರವು ಶೇಕಡಾ 4.31 ರಷ್ಟಿದೆ. ಆಭರಣ ವಲಯದಲ್ಲಿ ಭಾರಿ ಬೆಲೆ ಏರಿಕೆ ಕಂಡುಬಂದಿದೆ. ಬೆಳ್ಳಿ ಆಭರಣಗಳ ಹಣದುಬ್ಬರ ಶೇ. 107.11 ರಷ್ಟಿದ್ದರೆ, ಚಿನ್ನ ಮತ್ತು ಪ್ಲಾಟಿನಂ ಆಭರಣಗಳ ಹಣದುಬ್ಬರ ಶೇ. 35.53 ರಷ್ಟಿದೆ.

ಆರ್‌ಬಿಐ ಮುನ್ಸೂಚನೆ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ತನ್ನ ಮಧ್ಯಮಾವಧಿ ಗುರಿಯಾದ ಶೇ. 4 ಕ್ಕೆ ಹತ್ತಿರವಿರಿಸಲು ಶ್ರಮಿಸುತ್ತಿದೆ. ಪ್ರಸ್ತುತ ಹಣದುಬ್ಬರ ಏರಿಕೆಯು ಸದ್ಯದ ಮಟ್ಟಿಗೆ ಆಹಾರ ಮತ್ತು ಇಂಧನ ಬೆಲೆಗಳಿಗೆ ಸೀಮಿತವಾಗಿದ್ದು, ಮುಂಬರುವ 3 ನೇ ತ್ರೈಮಾಸಿಕದಲ್ಲಿ (Q3) ಇದು ಗರಿಷ್ಠ ಮಟ್ಟ ತಲುಪಿ ಬಳಿಕ ತಗ್ಗುವ ಸಾಧ್ಯತೆಯಿದೆ ಎಂದು ಆರ್‌ಬಿಐ ನಿರೀಕ್ಷಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ರಿಷಬ್ ಶೆಟ್ಟಿ ಹೊಸ ಸಿನಿಮಾನಲ್ಲಿ ನಟಿಸಲು ನೂಕು ನುಗ್ಗಲು: ವಿಡಿಯೋ ನೋಡಿ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಕಾಂಗ್ರೆಸ್ ಸೇವಾದಳದಿಂದ ಎಡವಟ್ಟು: ಉಲ್ಟಾ ಧ್ವಜ ನೀಡಿ ಅಧಿಕಾರ ಹಸ್ತಾಂತರ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಗಣಪತಿ ಮೂರ್ತಿ ಮೆರವಣಿಗೆಯಲ್ಲಿ ರಾರಾಜಿಸಿದ ಪೈಲಟ್ ಸ್ಮಿತ್ ಮಚ್ಚರ್ ಫೋಟೋ!
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ಶೌಚಾಲಯಕ್ಕೂ ಜಾತಿ ಕೇಳಿದ ಅಧಿಕಾರಿಗಳು: ಪ್ರಜಾಸೇವಾಯಲ್ಲಿ ಕಣ್ಣೀರಿಟ್ಟ ಮಹಿಳೆ
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ನೆಲಮಂಗಲ ಭಾಗದಲ್ಲಿ ಮಿತಿಮೀರಿದ ಕಳ್ಳರ ಹಾವಳಿ: ದೇವರನ್ನೂ ಬಿಡದ ಖದೀಮರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಬಿ.ವೈ.ವಿಜಯೇಂದ್ರ ಸಮ್ಮುಖದಲ್ಲೇ ಕಿತ್ತಾಡಿಕೊಂಡ ಬಿಜೆಪಿ ಮುಖಂಡರು
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ಗದಗ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಆವಿಷ್ಕಾರ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
ದಸರಾ ಸಮಿತಿಯಿಂದ ಕೊಪ್ಪಳ ಶ್ರೀಗಳಿಗೆ ಅಧಿಕೃತ ಆಹ್ವಾನ
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್
SIR ಗೊಂದಲ: ಜೀವಂತ ವ್ಯಕ್ತಿಗಳ ಮರಣ ಪತ್ರ ಪ್ರದರ್ಶಿಸಿದ ಯತ್ನಾಳ್