
ನವೆಂಬರ್ ತಿಂಗಳ ಮೂರನೇ ವಾರ 16-11-2025 ರಿಂದ 23-11-2025 ರವರೆಗೆ ಇರಲಿದೆ. ರವಿಯ ಸ್ಥಾನ ಬದಲಾವಣೆಯಾಗಲಿದೆ. ನೀಚಸ್ಥಾನದಿಂದ ಮುನ್ನಡೆದು ಸಬಲನಾಗುವನು. ತಂದೆಯ ಆರೋಗ್ಯ ವಿಚಾರ, ಅವರೊಡನೆ ಮನಸ್ತಾಪಗಳು ದೂರಾಗಿ ಯಥಾಸ್ಥಿತಿಗೆ ಕುಟುಂಬ ಮರಳುವುದು. ವೈದ್ಯರು ಹಾಗೂ ಸರ್ಕಾರದ ಅಧಿಕಾರಿಗಳಿಗೆ ಒತ್ತಡ, ಕಿರಿಕಿರಿ ಇವು ಅಧಿಕವಾಗಿದ್ದು ಈಗ ಅದು ಉಪಶಮನವಾಗುವುದು. ಗುರುವಿನ ದೃಷ್ಟಿಯೂ ಸೂರ್ಯನ ಮೇಲೆ ಬರುವ ಕಾರಣ ವಾರ ಹಲವು ಎರಿಳಿತಗಳಿಂದ ಇದ್ದರೂ ಶಾಂತವಾಗಿ ಮುಕ್ತಾಯವಾಗಲಿದೆ.
ಈ ವಾರ ನಿಮ್ಮ ಬಗ್ಗೆ ಕೆಲವು ಅಪಸ್ವರಗಳು ಬಂದರೂ ಆ ಬಗ್ಗೆ ಕಿವಿಗೊಡದೆ ಸ್ಥೈರ್ಯವನ್ನು ಕಾಪಾಡಿಕೊಳ್ಳಿ. ಅಸಂಗತ ಸಮಾಚಾರವನ್ನು ಒಪ್ಪಬೇಕಿಲ್ಲ. ನಿಮ್ಮನ್ನು ಲಕ್ಷಿಸಲು ಸಾಧ್ಯವಾಗದ ದೊಡ್ಡ ವ್ಯಕ್ತಿತ್ವ ನಿಮ್ಮದಾಗುವುದು. ಸ್ವಕೀಯರೇ ನಿಮ್ಮ ನಿಜವಾದ ವೇಗವನ್ನು ಕುಂಠಿತಗೊಳಿಸುವರು. ನಿಮ್ಮ ಪ್ರಯತ್ನವನ್ನು ಇತರರಿಗೂ ತಿಳಿಸುವ ಸಮಯ ಇಂದು. ತಪ್ಪು ಮಾಹಿತಿ ನೀಡಿ ನಿಮ್ಮ ದಾರಿ ತಪ್ಪಿಸಬಹುದು. ಕೆಟ್ಟ ಆಹಾರ ಸೇವನೆಯಿಂದ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಈ ವಾರ ನಿಮ್ಮ ಮೇಲೆ ಅರೋಪವು ಬರುವ ಸಾಧ್ಯತೆ ಇದೆ. ಕೆಲವು ಸಮಸ್ಯೆಯು ನಿಮ್ಮ ಮಾನಸಿಕತೆಯಿಂದಾಗಿಯೇ ಇರುವುದು. ಇದು ಶಾಶ್ವತವಾಗಿ ಇರದು ಎಂಬುದನ್ನು ಮರೆಯಬಾರದು.
ಎರಡನೇ ರಾಶಿಯವರಿಗೆ ಈ ವಾರ ಭವಿಷ್ಯದ ಬಗ್ಗೆ ಇರಬೇಕಾದ ಕಾಳಜಿಯು ಕಡಿಮೆ ಆಗುವುದು. ಸ್ನೇಹಿತರ ಬೆಂಬಲವನ್ನು ನೀವು ಪೂರ್ಣವಾಗಿ ಒಪ್ಪಲಾರಿರಿ. ನಿಮ್ಮ ಕೆಲಸಕ್ಕೆ ಪ್ರಶಂಸೆ ಸಿಗುವುದು. ನಿಮ್ಮ ಏಳಿಗೆ ಕಂಡು ಅಸೂಯೆ ಪಡುವವರ ಸಂಖ್ಯೆ ಹೆಚ್ಚಾಗಲಿದೆ. ಅದಕ್ಕೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕಾರ್ಯದಲ್ಲಿ ಪ್ರವೃತ್ತರಾಗಿ ಕಾರ್ಯದಲ್ಲಿ ನಿಷ್ಠೆಯನ್ನು ತೋರಿಸಿ. ಈ ವಾರ ಅತಿ ಮುಖ್ಯವಾದ ಪ್ರೀತಿಯ ಸುಖದಿಂದ ವಂಚಿತರಾಗುವಿರಿ. ವಿದೇಶಪ್ರಯಾಣದ ಗುಂಗಿನಿಂದ ಹೊರಬನ್ನಿ. ಕುಟುಂಬದ ಪ್ರೋತ್ಸಾಹವು ನಿಮಗೆ ಸಿಗಬಹುದು. ಸಂಗಾತಿಯ ಜೊತೆ ಸಮಯವನ್ನು ಕಳೆಯಬೇಕು ಎನಿಸಬಹುದು. ಶೈಕ್ಷಣಿಕವಾಗಿ ಹೆಚ್ಚಿನ ಪ್ರಗತಿಯನ್ನು ವಿದ್ಯಾರ್ಥಿಗಳು ಸಾಧಿಸುವರು.
ಹೂಡಿಕೆಯ ವಿಚಾರ ಬಂದಾಗ ಆಮೂಲಾಗ್ರ ದೃಷ್ಟಿಯು ಇರಲಿ. ಸುಮ್ಮನೇ ಒಪ್ಪಿಗೆ ಬೇಡ. ಮಾನಸಿಕ ನೋವನ್ನು ಸಹಿಸಲಾಗದು. ನಿಮ್ಮ ಒಳ್ಳೆಯತನವನ್ನು ತಮ್ಮ ವೈಯಕ್ತಿಕ ಲಾಭಕ್ಕಾಗಿ ಬಳಕೆ ಆದೀತು. ಜಾಗರೂಕರಾಗಿ ಜನರಿಂದ ದೂರವಿರುವುದು ಒಳ್ಳೆಯದು. ನಿಮ್ಮದೇ ಆದ ಕುಟುಂಬದಲ್ಲಿ ಹಲವರು ಕಿರಿಕಿರಿ ಮಾಡಬಹುದು. ಹಿಂದೆ ಮುಂದೆ ಯೋಚಿಸದೆ ಏಕಾಏಕಿಯಾಗಿ ಯಾರಿಗೂ ಮಾತು ಕೊಡುವುದು ಬೇಡ. ಈ ವಾರ ಪ್ರತ್ಯಕ್ಷವಾಗಿ ಕಾಣುವ ವ್ಯಕ್ತಿಗಳಿಗೆ ನಿಮ್ಮ ಬಗೆಗಿನ ದೃಷ್ಟಿಕೋನವೇ ಬದಲಾಗುವುದು. ಆರ್ಥಿಕತೆಯ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಕೈಯಲ್ಲಿ ಹಣವಿದ್ದಷ್ಟು ಖರ್ಚು ತಾನಾಗಿಯೇ ಹುಡುಕಿಕೊಂಡು ಬರಲಿದೆ. ಕೃಷಿ ಚಟುವಟಿಕೆಗಳಲ್ಲಿ ನಿಮ್ಮ ಅಸಕ್ತಿ ಹೆಚ್ಚುವುದು. ಅನನುಕೂಲತೆಯನ್ನು ಬಳಸಿಕೊಂಡು ಸಕಾರಾತ್ಮಕವಾಗಿ ಸಾಧಿಸುವಿರಿ.
ಈ ವಾರ ನೀವು ನಿಮಗೆ ಬೇಡದ ಅನವಶ್ಯಕ ವಸ್ತುಗಳನ್ನು ದೂರ ಮಾಡುವಿರಿ. ಸಂಯಮದಿಂದ ವರ್ತಿಸುವುದು ಅವಶ್ಯಕ. ನಿಮ್ಮ ಜೇಬು ತುಂಬಿದಂತೆ ಕಂಡರೂ ಒಳಗೆ ರಂಧ್ರವಿರುವುದು ಗೊತ್ತಾಗದೇ ಹೋಗುವುದು. ಮನಸ್ಸಿಗೆ ಮಂಕು ಕವಿದಂತೆ ಇರುವಿರಿ. ಜೀವನವು ಅಸಾರವಾದುದ್ದು ಎಂಬ ಭಾವವು ಬರಬಹುದು. ಜೀವನದಲ್ಲಿ ಚುರುಕುತನ ಕಂಡುಕೊಳ್ಳಲು ದಾರಿಯನ್ನು ಕಂಡುಕೊಳ್ಳಿ. ಈ ವಾರ ಅಧಿಕಾರಿಗಳ ಮೇಲೆ ಒತ್ತಡವನ್ನು ಹೇರಿ ಕೆಲಸವನ್ನು ಮಾಡಿಸಿಕೊಳ್ಳುವಿರಿ. ನಿಮ್ಮ ವಿಚಾರದಲ್ಲಿ ಅನ್ಯರ ಹಸ್ತಕ್ಷೇಪ, ಮೇಲಧಿಕಾರಿಗಳೊಂದಿಗೆ ಗುಟ್ಟಾಗಿ ನಿಮ್ಮ ಬಗ್ಗೆ ಚಾಡಿ ಮಾತುಗಳು ಒಂದಾದಮೇಲೊಂದು ಬರುವುವು. ನಿಮ್ಮ ಕಾರ್ಯವೇ ಉತ್ತರವಾಗಿರಲಿ. ಬಂಧುಗಳು ನಿಮ್ಮನ್ನು ಪ್ರಶಂಸಿಸಿ ಕಾರ್ಯವನ್ನು ಸಾಧಿಸಿಕೊಳ್ಳುವರು. ವಾಸದ ಸ್ಥಳವನ್ನು ನೀವು ಬದಲಿಸಬೇಕಾಗಬಹುದು.
ಐದನೇ ರಾಶಿಯವರಿಗೆ ಈ ವಾರ ಯಾವುದೇ ಚೌಕಟ್ಟಿಲ್ಲದ ಯೋಜನೆಗೆ ಸರಿಯಾದ ರೂಪವಿರಲಿ. ಯಾರನ್ನೋ ತಪ್ಪಿಗೆ ತಂದು ನಿಲ್ಲಿಸುವ ಅವಶ್ಯಕತೆ ಇರದು. ಮಕ್ಕಳ ವಿವಾಹದ ಚಿಂತೆಯು ಕಾಡಬಹುದು. ಅಧಿಕಾರ ಮತ್ತು ವರ್ಚಸ್ಸು ಹೆಚ್ಚಿಸಿಕೊಳ್ಳುವ ಅವಕಾಶ ಬರುವುದು. ಸಕಾರಾತ್ಮಕ ಯೋಚನೆಯಿಂದ ಮುಂದಡಿ ಇಡಬೇಕಾದೀತು. ನಿಮ್ಮ ಬುದ್ಧಿಶಕ್ತಿಗೆ ತಕ್ಕಂತೆ ಕೆಲಸದಲ್ಲಿ ಜಯವನ್ನು ಸಾಧಿಸುವಿರಿ. ಧೈರ್ಯದಿಂದ ಮುನ್ನಡೆಯುವ ಇಚ್ಛೆಯನ್ನು ಪೂರ್ಣ ಮಾಡಿ. ಸ್ವಂತ ಉದ್ಯೋಗವನ್ನು ನಡೆಸಲು ಚಿಂತಿಸುವುದು ಉತ್ತಮ. ವಂಚನೆಯ ಕರೆಗಳಿಂದ ಆದಷ್ಟು ಎಚ್ಚರವಾಗಿರಿ. ನಿಮ್ಮ ಸುತ್ತಮುತ್ತಲಿನವರಿಂದ ತೊಂದರೆಯಾಗಬಹುದು. ಈ ವಾರ ಹೆಚ್ಚು ನೀವು ಒತ್ತಡದ ಕೆಲಸದಿಂದ ವಿರಾಮ ಪಡೆದುಕೊಳ್ಳಲು ಬಯಸುವಿರಿ. ನಕ್ಷತ್ರಗಳ ಸೌಂದರ್ಯವನ್ನು ಹತ್ತಿರ ಹೋಗಿ ನೋಡಲಾಗದು.
ಇದನ್ನೂ ಓದಿ: ವಾರದ ಉದ್ಯೋಗ ಭವಿಷ್ಯ; ಯಾವ ರಾಶಿಗೆ ಶುಭ, ಯಾರಿಗೆ ಅಶುಭ?
ಆರನೇ ರಾಶಿಯವರಿಗೆ ಈ ವಾರ ನಿಮ್ಮ ಯಶಸ್ಸಿಗೆ ವಿರೋಧಿಗಳು ಅಡ್ಡ ಬರುವರು. ಧೃತಿಗೆಡುವ ಅವಶ್ಯಕತೆ ಇರುವುದಿಲ್ಲ. ಉದ್ವೇಗದಿಂದ ಸಿಟ್ಟುಗೊಂಡು ಹಲವರಿಗೆ ಅಪ್ರಿಯರಾಗುವಿರಿ. ಉದ್ಯೋಗದ ಬದಲಾವಣೆಯ ವಿಚಾರದಲ್ಲಿ ನೀವು ದ್ವಂದ್ವವಿರಲಿದೆ. ಕೆಲಸಗಳು ಬೇಗ ಮುಕ್ತಾಯವಾಗಿ ನಿಶ್ಚಿಂತೆಯಿಂದ ಇರುವಿರಿ. ಮರೆವು ನಿಮಗೆ ವರವಾದಂತೆ ಅನ್ನಿಸುವುದು. ಈ ವಾರ ವಿದ್ಯಾಭ್ಯಾಸಕ್ಕೆ ಮನೆಯನ್ನು ಬಿಟ್ಟು ದೂರವಿಡುವ ಯೋಚನೆ ಮಾಡುವರು. ನಿಮ್ಮ ಆರ್ಥಿಕಲಾಭವು ನಿಮಗೆ ಹೆಚ್ಚು ಸುಖವನ್ನು ಕೊಡಬಹುದು. ಸಂಗಾತಿಯು ನಿಮಗೆ ಬೇಸರವಾಗುವಂತೆ ಮಾತನಾಡಬಹುದು. ಈ ವಾರ ಭವಿಷ್ಯಕ್ಕಾಗಿ ನೀವು ಗಂಭೀರವಾದ ಆಲೋಚನೆಯಲ್ಲಿ ಮುಳುಗುವಿರಿ.
ಮೂರನೇ ವಾರ ಈ ರಾಶಿಯವರಿಗೆ ಮನೆ ಹಾಗೂ ಕಛೇರಿಯ ಜವಾಬ್ದಾರಿಯು ಹೆಚ್ಚಾಗುವುದು. ಹಣಕಾಸಿನ ವಿಚಾರದಲ್ಲಿ ತಜ್ಞರ ಸಲಹೆ ಪಡೆಯಬೇಕಾಗುವುದು. ಆಪತ್ತು ಎದುರಾದಾಗ ಯುಕ್ತಿಯಿಂದ ಕೆಲಸವನ್ನು ಮಾಡಿ. ಈ ವಾರ ಮಾಡಲು ಹೊರಟ ಕೆಲಸದಲ್ಲಿ ಯಶಸ್ಸು ನಿಮ್ಮದಾಗುವುದು. ನಿಮ್ಮ ತಾಳ್ಮೆಯೇ ಗುರಿಯನ್ನು ತಲುಪಲು ಸಹಕಾರಿ. ಒತ್ತಡ ಕಡಿಮೆಯಾಗಿ ಮನೆಯಲ್ಲಿ ನೆಮ್ಮದಿಯಿಂದ ಇರುವಿರಿ. ಈ ವಾರ ಮಕ್ಕಳ ವೃತ್ತಿಯಲ್ಲಿ ಹೆಚ್ಚಿನ ಏಳ್ಗೆಯನ್ನು ಕಂಡು ಸುಖ. ಬರಲಿರುವ ಹಣವನ್ನು ಸರಿಯಾಗಿ ವಿನಿಯೋಗಿಸಿ. ಸ್ಥಿರಾಸ್ತಿಯಲ್ಲಿ ಲಾಭವನ್ನು ಪಡೆಯಲು ತಂತ್ರವನ್ನು ಬಳಸುವಿರಿ. ಮಕ್ಕಳ ವಿಚಾರದಲ್ಲಿ ನೀವು ಬಹಳ ಮೃದು ಸ್ವಭಾವವಿರುವುದು.
ಈ ರಾಶಿಯವರಿಗೆ ಮೂರನೇ ವಾರದಲ್ಲಿ ಮಕ್ಕಳ ಬಗೆಗೆ ಎಷ್ಟೇ ಚಿಂತಿಸಿದರೂ ಪರಿಹಾರ ಮಾರ್ಗ ಸಿಗದೇ ಬೇಸರವಾಗುವುದು. ಆದರೆ ಉನ್ನತ ಅಧಿಕಾರಿಗಳು ಸಾಮಾನ್ಯರಿಗೆ ಸ್ಪಂದಿಸುವ ಕರ್ತವ್ಯವನ್ನು ಮರೆಯಬಾರದು. ಮಡದಿ ಹಾಗೂ ಮಕ್ಕಳಿಂದ ಟೀಕೆ ಬರಲಿದೆ. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಪಾರದರ್ಶಕತೆ ಮಾತ್ರ ಇರಲಿ. ಮಕ್ಕಳ ವಿವಾಹದ ಬಗ್ಗೆ ಚಿಂತಿಸಿ ಭಾವುಕರಾಗುವಿರಿ. ಕುಟುಂಬಕ್ಕಾಗಿ ಮಾಡಿದ ಸಾಲವನ್ನು ನೆನೆಸಿಕೊಂಡು ಸಂಕಟಪಡುವಿರಿ. ಈ ವಾರ ಸ್ತ್ರೀಯರಿಗೆ ಉದ್ಯೋಗದಲ್ಲಿ ಹೆಚ್ಚಿನ ಆದ್ಯತೆ ಸಿಗಬಹುದು. ಇನ್ನೊಬ್ಬರ ನೋವಿಗಿ ಸ್ಪಂದಿಸುವ್ವಿರಿ. ದಾಂಪತ್ಯದಲ್ಲಿ ಸಾಮರಸ್ಯದ ಅಗತ್ಯವು ಬಹಳ ಇರಲಿದೆ. ನೀವು ಉದ್ಯೋಗವನ್ನು ಪಡೆಯಲು ಮಾಡಿದ ಪ್ರಯತ್ನಗಳು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತವೆ.
ಈ ವಾರದಲ್ಲಿ ನೀವು ಜವಾಬ್ದಾರಿಯ ಸ್ಥಾನದಲ್ಲಿ ಇದ್ದು ಮಾತನಾಡುವಿರಿ, ಹಾಗಾಗಿ ಎಚ್ಚರಿಕೆ ಇರಲಿ. ನಿಮ್ಮ ಕಣ್ಣು ಆಯಾಸವನ್ನು ಸ್ಪಷ್ಟವಾಗಿ ಹೇಳುವುದು. ಸಕಾರಾತ್ಮಕವಾಗಿ ಚಿಂತಿಸಿ ಕಾರ್ಯದಲ್ಲಿ ತೊಡಗಿಕೊಳ್ಳಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ ಇರಲಿದೆ. ಸ್ಥಿರಾಸ್ತಿಯನ್ನು ಖರೀದಿಸಲು ಉತ್ತಮ ಕಾಲವಿದು. ಗೃಹ ನಿರ್ಮಾಣದಂತಹ ಕಾರ್ಯಕ್ಕೆ ಕೈ ಹಾಕುವುದು ಬೇಡ. ವ್ಯವಹಾರದಲ್ಲಿ ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಅನಗತ್ಯ ವಾದ ವಿವಾದಗಳಿಂದ ದೂರವಿರಿ. ಮಕ್ಕಳು ನಿಮ್ಮ ವರ್ತನೆಯನ್ನು ವಿರೋಧಿಸಬಹುದು. ಅಂತರಂಗವನ್ನು ಆದಷ್ಟು ಗೌಪ್ಯವಾಗಿ ಇಡುವುದು ಬೇಕಾದೀತು. ಈ ವಾರ ನೀವು ಕೊಡುವ ಭರವಸೆಯ ನಿಮ್ಮ ಬಗ್ಗೆ ನಂಬಿಕೆಯು ಇರದಂತೆ ಮಾಡುವುದು. ವ್ಯಾಪಾರದ ಉದ್ದೇಶಕ್ಕೆ ಹೊರ ನಿಮ್ಮ ವಿದೇಶ ಪ್ರವಾಸವು ಶುಭವನ್ನು ತರಲಿದೆ.
ಈ ವಾರ ವಿದೇಶದಿಂದ ಬಂದ ಸ್ನೇಹಿತರ ಜೊತೆ ಕಾಲ ಕಳೆಯುವಿರಿ. ಸಹೋದ್ಯೋಗಿಗಳ ಜೊತೆ ಕಲಹವನ್ನು ಮಾಡಿಕೊಳ್ಳುವಿರಿ. ಹಿರಿಯರ ಮಧ್ಯಸ್ಥಿಕೆಯಿಂದ ಶಾಂತವಾಗುವುದು. ನಿಮ್ಮ ಸಮಸ್ಯೆಗಳಿಗೆ ಹಲವರು ಹಲವು ರೀತಿಯ ಸಲಹೆಗಳನ್ನು ನೀಡಬಹುದು. ಸಲಹೆಯನ್ನು ಏಕಚಿತ್ತದಿಂದ ಸ್ವೀಕರಿಸಿ, ನಿಮ್ಮ ವಿವೇಕದಿಂದ ಬಳಸಿಕೊಳ್ಳಿ. ಈ ವಾರ ಅನ್ಯರಿಂದ ಹಣಕಾಸಿನ ವಿಷಯದಲ್ಲಿ ಮೋಸ ಹೋಗುವ ಸನ್ನಿವೇಶವು ಬರಬಹುದು. ಎಲ್ಲವೂ ನಿಮ್ಮಿಂದಾದರೂ ಹೇಳಿಕೊಳ್ಳುವಾಗ ಗೌಣವಾಗಿರಲಿ. ದಾಂಪತ್ಯದಲ್ಲಿ ಸಲುಗೆಯು ಅತಿಯಾಗಲಿದೆ. ತಂದೆಯಿಂದ ಧನಾಗಮನವನ್ನು ನಿರೀಕ್ಷಿಸುವಿರಿ. ಬೇಸರವನ್ನು ಕಳೆಯಲು ಒಂಟಿಯಾಗಿ ದೂರ ಹೋಗಿ. ಪ್ರೇಯಸಿಯನ್ನು ದೂರಮಾಡಿಕೊಂಡು ದುಃಖಿಸುವಿರಿ.
ಹನ್ನೊಂದನೇ ರಾಶಿಯವರಿಗೆ ಈ ವಾರ ನಿಮ್ಮ ಪರಿಶ್ರಮದ ಆಧಾರದ ಮೇಲೆ ಫಲಾಫಲ ನಿರ್ಣಯವಾಗಲಿದೆ. ಸುಮ್ಮನೇ ಯಾರಿಗೂ ಉಪದೇಶ ನೀಡಲು ಹೋಗಬೇಡಿ. ನಿಮ್ಮಲ್ಲಿರುವ ಆತ್ಮಸ್ಥೈರ್ಯವು ಯಾವುದೇ ಕಾರಣಕ್ಕೂ ಕಡಿಮೆಯಾಗುವುದು ಬೇಡ. ಮಾನಸಿಕವಾಗಿ ಸದೃಢರಾಗುವಿರಿ. ನೀವು ಅಂದಿಕೊಂಡಂತೆ ಸಹೋದರಿಯರಿಂದ ಸಹಕಾರ ದೊರೆಯುವುದಿಲ್ಲ. ನಿಮ್ಮ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ತಾಯಿಯ ಕಡೆಯಿಂದ ನಿಮಗೆ ಆರ್ಥಿಕ ಸಹಾಯವು ಸಿಗಬಹುದು. ಕುಟುಂಬದಲ್ಲಿ ನಿಮ್ಮ ಬಗ್ಗೆ ಭಯವು ಇರಲಿದೆ. ಮಾತು ಎಷ್ಟೇ ಸಹೃದಯತೆಯಿಂದ ಇದ್ದರೂ ಕೇಳಿಸಿಕೊಳ್ಳುವ ಸಹೃದಯ ಹಾಗಿರುವುದಿಲ್ಲ. ಈ ವಾರ ಅತಿಯಾದ ಉದ್ವಿಗ್ನತೆಯಿಂದ ಏನನ್ನಾದರೂ ಮಾಡಿಕೊಳ್ಳುವಿರಿ.
ಈ ವಾರ ನಿಮ್ಮ ಬಗ್ಗೆ ಗೌರವ ಹೆಚ್ಚಿವುದು. ಅದನ್ನು ಬಹಿರಂಗವಾಗಿಯೂ ಪ್ರಕಟಗೊಳಿಸುವರು. ಮನೆ ಹಿರಿಯರ ಆರೋಗ್ಯದ ಕಡೆ ಗಮನ ನೀಡಿ. ನಿಮ್ಮ ಪರಿಶ್ರಮಕ್ಕೆ ತಕ್ಕಷ್ಟು ಹಣ ಬರದೆ ತೊಂದರೆ ಅನುಭವಿಸುವಿರಿ. ಮಂದಗತಿಯಲ್ಲಿ ಸಾಗುವ ಕೆಲಸಗಳಿಗೆ ವೇಗವನ್ನು ಕೊಡುವಿರಿ. ನಿಮಗೆ ಆತ್ಮತೃಪ್ತಿ ಉಂಟಾಗಲಿದೆ. ವಾಹನ ಚಲಾಯಿಸುವಾಗ ಎಚ್ಚರ ಇರಲಿ. ಏಕತಾನತೆಯ ಜೀವನವು ನಿಮಗೆ ಬೇಸರವನ್ನು ಕೊಟ್ಟಿದ್ದು, ಹೊಸತನ್ನು ನೀವು ಬಯಸುವಿರಿ. ನೀವು ಹೊಸ ಹೂಡಿಕೆಗೆ ಮನಸ್ಸು ಮಾಡಿ. ಈ ವಾರ ಅತಿಯಾದ ಆಸೆಯಿಂದ ನಿಮಗೆ ಕೆಲವು ತೊಂದರೆಗಳು ಬರಬಹುದು. ಆರ್ಥಿಕವಾಗಿ ಸಬಲತೆಗೆ ಕ್ರಮವನ್ನು ಕೈಗೊಳ್ಳುವಿರಿ.
– ಲೋಹಿತ ಹೆಬ್ಬಾರ್ – 8762924271 (what’s app only)