ಉದ್ಯೋಗ ಭವಿಷ್ಯ: ಈ ವಾರ ಬಾಸ್‌ನಿಂದ ಮೆಚ್ಚುಗೆಯೋ ಅಥವಾ ಕೆಲಸದಲ್ಲಿ ಕಿರಿಕಿರಿಯೋ?: ಕೆರಿಯರ್ ಗ್ರಹಗತಿಯಲ್ಲಿ ಮಹತ್ವದ ಬದಲಾವಣೆ

Weekly Job Horoscope: ಮೇ 24ರಿಂದ 30ರ ವಾರದ ಉದ್ಯೋಗ ಭವಿಷ್ಯವನ್ನು ಗ್ರಹಗಳ ಪ್ರಭಾವದ ಆಧಾರದ ಮೇಲೆ ತಿಳಿಸಲಾಗಿದೆ. ಪ್ರತಿ ರಾಶಿಯವರಿಗೆ ವೃತ್ತಿಜೀವನದಲ್ಲಿ ಉನ್ನತಿ, ಸವಾಲುಗಳು ಹಾಗೂ ಹೊಸ ಅವಕಾಶಗಳು ಇರಲಿವೆ. ಕಠಿಣ ಪರಿಶ್ರಮ, ತಾಳ್ಮೆಯಿಂದ ಯಶಸ್ಸು ಸಾಧಿಸಬಹುದು. ದೃಷ್ಟಿದೋಷಗಳನ್ನು ಗ್ರಹ ಸ್ತೋತ್ರಗಳ ಮೂಲಕ ನಿವಾರಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಲಹೆ ನೀಡಲಾಗಿದೆ. ನಿಮ್ಮ ರಾಶಿಗೆ ತಕ್ಕ ವೃತ್ತಿ ಸಲಹೆಗಳನ್ನು ಇಲ್ಲಿ ಪಡೆಯಿರಿ.

ಉದ್ಯೋಗ ಭವಿಷ್ಯ: ಈ ವಾರ ಬಾಸ್‌ನಿಂದ ಮೆಚ್ಚುಗೆಯೋ ಅಥವಾ ಕೆಲಸದಲ್ಲಿ ಕಿರಿಕಿರಿಯೋ?: ಕೆರಿಯರ್ ಗ್ರಹಗತಿಯಲ್ಲಿ ಮಹತ್ವದ ಬದಲಾವಣೆ
ಸಾಂದರ್ಭಿಕ ಚಿತ್ರ
Image Credit source: pinterest
Edited By:

Updated on: May 25, 2026 | 2:51 PM

ಮೇ 24ರಿಂದ ಮೇ 30ರವರೆಗಿನ ಕೊನೆಯ ವಾರವಾಗಿದ್ದು ಗ್ರಹರ ದೃಷ್ಟಿಯಿಂದ ಉದ್ಯೋಗದಲ್ಲಿ ಉನ್ನತಿ, ಅವನತಿಗಳು ಆಗಲಿವೆ. ದೃಷ್ಟಿದೋಷವನ್ನು ಗ್ರಹರ ಸ್ತೋತ್ರದ ಮೂಲಕ ಕಡಿಮೆ ಮಾಡಿಕೊಳ್ಳಬಹುದು.

​​ಮೇಷ ರಾಶಿ :

​ಸ್ವಕ್ಷೇತ್ರದ ಮಂಗಳನ ಪ್ರಭಾವದಿಂದ ಉದ್ಯೋಗದಲ್ಲಿ ಧೈರ್ಯ ಹಾಗೂ ನಾಯಕತ್ವ ಗುಣ ಹೆಚ್ಚಲಿದೆ. ಕಠಿಣ ಪರಿಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದ್ದು, ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಅಧಿಕಾರದಲ್ಲಿ ಪ್ರಗತಿ ಕಂಡುಬರಲಿದೆ.

​ವೃಷಭ ರಾಶಿ :

​ಸೂರ್ಯನ ಸ್ಥಿತಿಯಿಂದಾಗಿ ಉದ್ಯೋಗ ಬದಲಾವಣೆಗೆ ಯೋಚಿಸುವಿರಿ. ಮೇಲಾಧಿಕಾರಿಗಳೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಬರಬಹುದು, ತಾಳ್ಮೆ ಇರಲಿ. ನವಮ ಸ್ಥಾನದ ಗ್ರಹಬಲದಿಂದಾಗಿ ವಿದೇಶಿ ಮೂಲದ ಕೆಲಸಗಳು ಅಥವಾ ದೂರದ ಪ್ರಯಾಣದ ಉದ್ಯೋಗ ಲಾಭದಾಯಕ.

​ಮಿಥುನ ರಾಶಿ :

​ಬುಧ, ಶುಕ್ರ, ಗುರುಗಳ ಶುಭ ಸಂಯೋಜನೆಯಿಂದ ಉದ್ಯೋಗದಲ್ಲಿ ಅತ್ಯುತ್ತಮ ಪ್ರಗತಿ ಕಾಣುವಿರಿ. ಬೌದ್ಧಿಕ ಕ್ಷೇತ್ರ, ಶಿಕ್ಷಣ, ಮತ್ತು ಸೃಜನಶೀಲ ಕೆಲಸಗಳಲ್ಲಿರುವವರಿಗೆ ಹೆಚ್ಚಿನ ಗೌರವ, ಪದೋನ್ನತಿ ಹಾಗೂ ಆರ್ಥಿಕ ಲಾಭ ಖಚಿತವಾಗಿ ಸಿಗಲಿದೆ.

​ಕರ್ಕಾಟಕ ರಾಶಿ :

​ರಾಶ್ಯಾಧಿಪತಿ ಚಂದ್ರನು ನೀಚಸ್ಥಾನದಲ್ಲಿದ್ದರೂ, ಉದ್ಯೋಗ ಸ್ಥಾನದ ಮೇಲಿರುವ ಮಂಗಳನ ದೃಷ್ಟಿಯಿಂದಾಗಿ ವೃತ್ತಿಯಲ್ಲಿ ದಿಢೀರ್ ಬದಲಾವಣೆಗಳಾಗಬಹುದು. ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ. ಸಹೋದ್ಯೋಗಿಗಳನ್ನು ನಂಬುವಾಗ ಎಚ್ಚರಿಕೆ ವಹಿಸಿ.

ಸಿಂಹ ರಾಶಿ

​ನಿಮ್ಮ ರಾಶಿಯಲ್ಲಿ ಕೇತುವಿನ ಸ್ಥಿತಿಯಿದ್ದರೂ, ರಾಶ್ಯಾಧಿಪತಿ ಸೂರ್ಯನ ಬಲದಿಂದ ಉದ್ಯೋಗದಲ್ಲಿ ಸ್ಥಿರತೆ ಇರಲಿದೆ. ಸ್ವತಂತ್ರ ವೃತ್ತಿ ಅಥವಾ ವ್ಯಾಪಾರಸ್ಥರಿಗೆ ಉತ್ತಮ ಆದಾಯ ಬರಲಿದೆ. ಸರ್ಕಾರಿ ಕೆಲಸದ ಪ್ರಯತ್ನಗಳಿಗೆ ಸೂಕ್ತ ಫಲ ಸಿಗುವ ಸಾಧ್ಯತೆ ಇದೆ.

​ಕನ್ಯಾ ರಾಶಿ :

​ಉದ್ಯೋಗದಲ್ಲಿ ಕಠಿಣ ಸವಾಲುಗಳು ಎದುರಾಗಬಹುದು. ಆದರೆ ಶನಿಯ ಆರನೇ ರಾಶಿಯ ಪ್ರಭಾವದಿಂದಾಗಿ ಶತ್ರುಗಳು ಮತ್ತು ಸ್ಪರ್ಧಿಗಳ ಮೇಲೆ ಜಯ ಸಾಧಿಸುವಿರಿ. ಹಿರಿಯ ಅಧಿಕಾರಿಗಳ ಪ್ರೋತ್ಸಾಹದಿಂದ ಬಾಕಿ ಇರುವ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿವೆ.

​ತುಲಾ ರಾಶಿ :

​ಇದು ಲಗ್ನ ರಾಶಿಯಾಗಿದ್ದು, ನವಮದ ಶುಭ ಗ್ರಹಗಳ ದೃಷ್ಟಿ ಪೂರಕವಾಗಿದೆ. ಉದ್ಯೋಗದಲ್ಲಿ ಹೊಸ ಅವಕಾಶಗಳು ಹುಡುಕಿಕೊಂಡು ಬರಲಿವೆ. ಕಲಾತ್ಮಕ, ವ್ಯಾಪಾರ ಹಾಗೂ ಸಲಹಾತ್ಮಕ ವೃತ್ತಿಯಲ್ಲಿರುವವರಿಗೆ ಅಪಾರ ಯಶಸ್ಸು ಮತ್ತು ಕೀರ್ತಿ ದೊರೆಯಲಿದೆ.

​ವೃಶ್ಚಿಕ ರಾಶಿ :

​ಚಂದ್ರನ ಇರುವಿಕೆಯಿಂದ ಮನಸ್ಸಿನಲ್ಲಿ ಉದ್ಯೋಗದ ಬಗ್ಗೆ ಅಸ್ಥಿರತೆ ಮೂಡಬಹುದು. ಆದರೆ ರಾಶ್ಯಾಧಿಪತಿ ಮಂಗಳನು ಷಷ್ಠದಲ್ಲಿ ಸ್ವಕ್ಷೇತ್ರ ಸ್ಥಿತನಾಗಿರುವುದರಿಂದ, ಪಾಲುದಾರಿಕೆ ವ್ಯವಹಾರ ಅಥವಾ ಸಾರ್ವಜನಿಕ ಸಂಪರ್ಕದ ಉದ್ಯೋಗಗಳಲ್ಲಿ ಉತ್ತಮ ಆರ್ಥಿಕ ಪ್ರಗತಿ ಮತ್ತು ಯಶಸ್ಸು ಸಿಗಲಿದೆ.

​ಧನು ರಾಶಿ :

​ರಾಶ್ಯಾಧಿಪತಿ ಗುರುವಿನ ದೃಷ್ಟಿಯಿಂದ ಹಾಗೂ ಶುಭ ಗ್ರಹರು ಸಂಯೋಗ ಹೊಂದುವುದರಿಂದ ವೃತ್ತಿಜೀವನದಲ್ಲಿ ದೊಡ್ಡ ತಿರುವು ಸಿಗಲಿದೆ. ಬ್ಯಾಂಕಿಂಗ್, ಬೋಧನೆ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿರುವವರಿಗೆ ಸಂಬಳ ಹೆಚ್ಚಳ ಹಾಗೂ ಉನ್ನತ ಸ್ಥಾನಮಾನ ದೊರೆಯಲಿದೆ.

​ಮಕರ ರಾಶಿ :

​ವೃತ್ತಿ ರಾಶಿಯಾಗಿದ್ದು, ಶನಿಯು ತೃತೀಯ ಸ್ಥಾನದಲ್ಲಿದ್ದು ಶ್ರಮಕ್ಕೆ ತಕ್ಕ ಪ್ರತಿಫಲ ತಡವಾಗಿ ಸಿಗಬಹುದು. ಉದ್ಯೋಗದಲ್ಲಿ ಕಠಿಣ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ನಿರಂತರ ಪ್ರಯತ್ನದಿಂದಾಗಿ ಕೆಲಸದಲ್ಲಿ ಉನ್ನತ ಮಟ್ಟ ತಲುಪುವಿರಿ.

ಕುಂಭ ರಾಶಿ :

​ರಾಹು ನಿಮ್ಮ ರಾಶಿಯಲ್ಲಿ, ದ್ವಿತೀಯದಲ್ಲಿ ರಾಶಿಯ ಅಧಿಪತಿಯಾದ ಇದ್ದುದರಿಂದ ಶನಿಯು ಉದ್ಯೋಗದಲ್ಲಿ ರಕ್ಷಣೆಯನ್ನು ನೀಡುತ್ತಾನೆ. ತಾಂತ್ರಿಕ, ಸಂಶೋಧನೆ ಹಾಗೂ ಐಟಿ ಕ್ಷೇತ್ರದಲ್ಲಿರುವವರಿಗೆ ಹೊಸ ಆವಿಷ್ಕಾರಗಳಿಗೆ ಮನ್ನಣೆ ಸಿಗಲಿದೆ. ಶ್ರಮ ಹೆಚ್ಚಿದ್ದರೂ, ಆರ್ಥಿಕವಾಗಿ ಸ್ಥಿರತೆ ಮತ್ತು ಅಭಿವೃದ್ಧಿ ಕಂಡುಬರಲಿದೆ.

ಇದನ್ನೂ ಓದಿ: ಲಕ್ಷ್ಮಿ ನಾರಾಯಣ ಯೋಗ; ಮೇ 29 ರಿಂದ ಈ 4 ರಾಶಿಯವರು ಮುಟ್ಟಿದೆಲ್ಲಾ ಚಿನ್ನ!

ಮೀನ ರಾಶಿ :

​ಶನಿಯ ಪ್ರಭಾವದಿಂದಾಗಿ ಕೆಲಸದ ಒತ್ತಡ ಹೆಚ್ಚಿರಲಿದೆ. ಆದರೆ ಗುರು-ಬುಧ-ಶುಕ್ರರ ಶುಭ ದೃಷ್ಟಿಯಿಂದಾಗಿ ಹಿರಿಯರ ಮಾರ್ಗದರ್ಶನ ಸಿಗಲಿದ್ದು, ಕಷ್ಟದ ಪರಿಸ್ಥಿತಿಯನ್ನೂ ನಿಭಾಯಿಸುವಿರಿ. ಬರಹಗಾರರು, ಸಲಹೆಗಾರರು ಹಾಗೂ ಉಪನ್ಯಾಸಕರಿಗೆ ಇದು ಯಶಸ್ಸಿನ ಕಾಲ.

– ಲೋಹಿತ ಹೆಬ್ಬಾರ್

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Lohitha Hebbar

ವಿದ್ವಾನ್​ ಲೋಹಿತ ಶರ್ಮಾ. ಸಾಗರ ಮೂಲದ ಇಡುವಾಣಿ ಗ್ರಾಮ. ವೇದ ಹಾಗೂ ಸಂಸ್ಕೃತ ಅಧ್ಯಯನ, ಜ್ಯೋತಿಷ್ಯದಲ್ಲಿ ವಿದ್ವತ್ತನ್ನು ಸಂಪಾದಿಸಿರುತ್ತಾರೆ. ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೋಮಾ ಮಾಡಿರುತ್ತಾರೆ. ಜ್ಞಾನ-ವಿಜ್ಞಾನ ಅಧ್ಯಯನ ಕೇಂದ್ರ ಬೆಂಗಳೂರಿನಲ್ಲಿ ಸಂಶೋಧಕರಾಗಿ ಮೌಲ್ಯಶಿಕ್ಷಣ ಎನ್ನುವ ಪಠ್ಯವನ್ನು ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗೆ ರಚಿಸಿದ್ದಾರೆ. ಧರ್ಮಭಾರತೀ, ತ್ರಿವಿಕ್ರಮ ಮುಂತಾದ ಮಾಸಪತ್ರಿಕೆಯಲ್ಲಿ ಸಂಪಾದಕನಾಗಿ ಕಾರ್ಯ ಮಾಡಿರುತ್ತಾರೆ. ಹಿತೋಪದೇಶ, ಸಂತಗೋರಕ್ಷನಾಥ, ಮಹರ್ಷಿ ಶಂಖಲಿಖಿತ ಗ್ರಂಥಗಳನ್ನು ಬರೆದಿದ್ದಾರೆ. ಅನೇಕ ಲೇಖನಗಳು, ಕಥೆಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಆಸಕ್ತಿಯ ವಿಷಯ ಸಂಗೀತ, ನಾಟಕ, ಓದು, ಬರಹ, ಚಾರಣ, ಡಿಜಿಟಲ್ ವಿನ್ಯಾಸ. ಸದ್ಯ ಶಿಕ್ಷಕನಾಗಿ ಕಾರ್ಯ.

Read More
Follow Us